Tuesday, 15th October 2019

ಅಕ್ಷಯ ಪಾತ್ರಾ ಯೋಜನೆಗೆ ಕೈಜೋಡಿಸಿದ ಅಮೇಜಾನ್

ಹೆಣ್ಣು ಮಕ್ಕಳ ಕಲ್ಯಾಣಕ್ಕಾಾಗಿ ಅಮೇಜಾನ್ ಇಂಡಿಯಾ ಲಿ. ಅಕ್ಷಯಪಾತ್ರಾ ಫೌಂಡೇಷನ್ ಜತೆಗೆ ಕೈಜೋಡಿಸಿದ್ದ, ಹಬ್ಬದ ಮಾರಾಟ ಮೇಳದ ಆಯ್ದ ಭಾಗವನ್ನು ನೀಡುವ ಒಪ್ಪಂದಕ್ಕೆ ಸಹಿ ಹಾಕಿತು.

ದೇಶವ್ಯಾಾಪಿ ನಡೆದ 25 ದಿನಗಳ ಅಮೇಜಾನ್ ಹಬ್ಬದ ಯಾತ್ರೆೆಯಲ್ಲಿ ಭಾರತೀಯ ಅತ್ಯುತ್ತಮ ವಸ್ತುಗಳನ್ನು ಬೆಂಗಳೂರಿನಲ್ಲಿ ಪ್ರದರ್ಶಿಸಿತು. ಈ ವಸ್ತುಗಳನ್ನು ಅಕ್ಷಯಪಾತ್ರಾಾ ಫೌಂಡೇಷನ್‌ಗೆ ದಾನ ಮಾಡಲಾಯಿತು. ಇದರಲ್ಲಿ ಸುಮಾರು 10 ಲಕ್ಷ ರು. ಮೌಲ್ಯದ ಸಣ್ಣ, ಮಧ್ಯಮ ಮತ್ತು ಅತಿಸಣ್ಣ ಉದ್ಯಮಿಗಳು ತಯಾರಿಸಿದ 600 ಉತ್ಪನ್ನಗಳು ಒಳಗೊಂಡಿವೆ. ಇದರಲ್ಲಿ ದೇಶಿಯವಾಗಿ ಸ್ಟಾಾರ್ಟಪ್, ಮಹಿಳಾ ಉದ್ಯಮಿಗಳು, ಕುಶಲ ಕರ್ಮಿಗಳು, ನೇಕಾರರು ಮತ್ತು ಬುಡಕಟ್ಟು ಸಮುದಾಯದ ಸಾಂಪ್ರದಾಯಿಕ ಕರಕುಶಲ ಕಲೆ ಮತ್ತು ಕೈ ಮಗ್ಗದ ವಸ್ತುಗಳು ಹೆಚ್ಚಾಾಗಿವೆ.

ಸಂಸ್ಥೆೆಯ ಉಪಾಧ್ಯಕ್ಷ ಮನೀಶ್ ತಿವಾರಿ ಮಾತನಾಡಿ, ನಾವು ದೇಶದ ಲಕ್ಷಾಂತರ ಸಣ್ಣ ಉದ್ಯಮಗಳೊಂದಿಗೆ ಕೆಲಸ ಮಾಡುತ್ತಿಿದ್ದೇವೆ. ಸಾಂಪ್ರದಾಯಿಕ ಕುಶಲ ಕರ್ಮಿಗಳು, ಮಹಿಳಾ ಉದ್ಯಮಿಗಳು ಮತ್ತು ಸ್ಟಾಾರ್ಟಪ್‌ಗಳಿವೆ. 25 ದಿನಗಳಲ್ಲಿ 9 ರಾಜ್ಯ ಮತ್ತು 13 ನಗರದ 6 ಸಾವಿರ ಕಿ.ಮೀ ಸುತ್ತಿಿದ್ದು, ಹಬ್ಬದ ಸಂಭ್ರಮ ಹಿಮ್ಮಡಿಗಳಿಸಲಾಗಿದೆ. ಮಹಿಳಾ ಕಲ್ಯಾಾಣಕ್ಕೆೆ ಬೆಂಬಲ ನೀಡಲು ನಿರ್ಧರಿಸಿದ್ದು, ಇದರಲ್ಲಿ ಉದ್ಯೋೋಗಿಗಳ ಧನಸಂಗ್ರಹ ಮತ್ತು ಅಕ್ಟೋೋಬರ್‌ನಲ್ಲಿ ಸ್ವಯಂಸೇವಾ ಕಾರ್ಯಕ್ರಮವೂ ಸೇರಿದೆ.

ಫೌಂಡೇಷನ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಧರ ವೆಂಕಟ್ ಮಾತನಾಡಿ, ನಮ್ಮ ಕೆಲಸ ಹಿತೈಷಿಗಳ ಮತ್ತು ದಾನಿಗಳ ಬೆಂಬಲದಿಂದ ಸುಲಭವಾಗಿದೆ. ಆಮೇಜಾನ್ ಒಂದು ವಿಶಾಲ ಹೃದಯದ ಮತ್ತು ವಿಚಾರವಂತ ಪಾಲುದಾರನಾಗಿದೆ. ಅರ್ಥಪೂರ್ಣ ಮತ್ತು ಪರಿಣಾಮಕಾರಿ ಕೊಡುಗೆ ನೀಡಲು ಪ್ರಯತ್ನಿಿಸುತ್ತಿಿದೆ. ನಮಗೆ ಈ ಹಬ್ಬದ ಋತು ಸಂಭ್ರಮದಂತೆ ದೇಶಾದ್ಯಂತ ಜನರಿಂದ ಕೊಡುಗೆಗಳನ್ನು ಸಂಗ್ರಹಿಸುವುದು ಮತ್ತು ಪ್ರತಿ ಮಗುವಿಗೂ ಆಹಾರ ಒದಗಿಸುವುದೂ ಹೊಣೆಯಾಗಿದೆ. ಹೆಣ್ಣು ಮಗುವಿನ ಕಲ್ಯಾಾಣಕ್ಕೆೆ ಬೆಂಬಲ ನೀಡುವ ಅಮೇಜಾನ್ ಜತೆಗಿನ ಸಹಯೋಗಕ್ಕೆೆ ನಾವು ಕೃತಜ್ಞರಾಗಿದ್ದೇವೆ ಎಂದರು.

Leave a Reply

Your email address will not be published. Required fields are marked *