Wednesday, 26th February 2020

ಅಶ್ಲೀಲ ಫೋಟೊ ಹರಿಬಿಡುವುದಾಗಿ ಬೆದರಿಕೆ: ದೂರು ದಾಖಲು

ಸಹಪಾಠಿಯೊಬ್ಬ ತನ್ನ ಜತೆ ಸಹಕರಿಸದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಫೋಟೊಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಾರೆ.
ಹೈದ್ರಾಬಾದ್‌ನ ಎಂಜಿನಿಯರ್ ರವಿತೇಜಾ ಯಾದವ್ ಬತುಲಾ ಎಂಬಾತನ ವಿರುದ್ಧ ಹೈದ್ರಾಾಬಾದ್ ಮೂಲದ ವಿವಾಹಿತ ಮಹಿಳೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾಾರೆ. ಎಂಜಿನಿಯರಿಂಗ್ ವಿದ್ಯಾಾಭ್ಯಾಾಸದ ವೇಳೆ ಸಹಪಾಠಿ ರವಿತೇಜಾನ ಪರಿಚಯವಾಗಿತ್ತು. ವಿವಾಹಿತಳಾಗಿದ್ದ ವಿಚಾರ ಗೊತ್ತಿಿದ್ದರೂ ಹಿಂದೆ ಬಿದ್ದಿದ್ದ. ಇದಾದ ಬಳಿಕ ಅಶ್ಲೀಲ ಫೋಟೊಗಳನ್ನು ತೆಗೆದಿಟ್ಟುಕೊಂಡಿದ್ದ ಆತ, ಈಗ ಕಿರುಕುಳ ನೀಡುತ್ತಿಿದ್ದಾಾನೆ. ‘ನನ್ನ ಜತೆ ಸಹಕರಿಸದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಫೋಟೊಗಳನ್ನು ಹರಿಬಿಡುತ್ತೇನೆ. ಕೊಲೆ ಮಾಡುತ್ತೇನೆ’ ಎಂದು ಬೆದರಿಕೆಯೊಡ್ಡುತ್ತಿಿದ್ದಾಾನೆ. ಈ ಬಗ್ಗೆೆ ಆತನ ಪೋಷಕರಿಗೆ ಮಾಹಿತಿ ನೀಡಿದರೂ ಬೆದರಿಕೆ ಮುಂದುವರಿಸಿದ್ದಾಾನೆ ಎಂದು ದೂರುದಾರೆ ಆರೋಪಿಸಿದ್ದಾಾರೆ. ಈ ಪ್ರಕರಣ ಸೈಬರ್ ಕ್ರೈಂ ವ್ಯಾಾಪ್ತಿಿಯಲ್ಲಿ ಬರಲಿದೆ. ಹೀಗಾಗಿ ಸೈಬರ್ ಕ್ರೈಂ ಪೊಲೀಸರಿಗೆ ಪ್ರಕರಣ ಹಸ್ತಾಾಂತರಿಸಲಾಗುವುದು ಎಂದು ಕೋರಮಂಗಲ ಪೊಲೀಸರು ತಿಳಿಸಿದ್ದಾಾರೆ.

Leave a Reply

Your email address will not be published. Required fields are marked *