Tuesday, 15th October 2019

ಅಸ್ಪಶ್ಯತೆ ಮತ್ತು ಜಾತೀಯತೆ ಹೊರಹಾಕಿ

ಕೇವಲ ಭಾರತ ಮಾತಾ ಕಿ ಜೈ ಎನ್ನುವುದೇ ದೇಶಪ್ರೇಮವಲ್ಲ, ಅಸ್ಪಶ್ಯತೆ ಮತ್ತು ಜಾತೀಯತೆಯನ್ನು ನಮ್ಮ ಮನೆ ಮತ್ತು ಮನಸ್ಸಿಿನಿಂದ ಹೊರಹಾಕುವ ಸಂಕಲ್ಪ ಮಾಡುವುದು ನಿಜವಾದ ದೇಶಪ್ರೇಮ ಎಂದು ಸಚಿವ ಸಿ.ಟಿ.ರವಿ ಹೇಳಿದರು.

ಸೆಂಟ್ರಲ್ ಕಾಲೇಜಿನ ಜ್ಞಾಾನಜ್ಯೋೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಗಾಂಧಿ-150 ಸಂಭ್ರಮಾಚರಣೆ ಮತ್ತು ಅವಲೋಕನ’ ಸಮಾರಂಭದಲ್ಲಿ ಮಾತನಾಡಿ, ಅಸ್ಪಶ್ಯತೆ ಮತ್ತು ಜಾತೀಯತೆಯನ್ನು ಸಂಪೂರ್ಣವಾಗಿ ತೊಡೆದುಹಾಕಬೇಕೆನ್ನುವ ಗುರಿಯನ್ನು ಗಾಂಧೀಜಿ ಹೊಂದಿದ್ದರು. ಆದರೆ, ದೇಶಕ್ಕೆೆ ಸ್ವಾಾತಂತ್ರ ಬಂದು 70 ವರ್ಷಗಳಾದರೂ ಅವರ ತತ್ತ್ವಗಳನ್ನು ಅಳವಡಿಸಿಕೊಳ್ಳದೆ ನಾವು ಅವನತಿ ಕಡೆಗೆ ಹೆಜ್ಜೆೆ ಇಡುತ್ತಿಿದ್ದೇವೆ. ಈಗಲಾದರೂ ಸ್ವಚ್ಛತೆ ಕಾಪಾಡುವ ಮತ್ತು ಬೇರೊಬ್ಬರಿಗೆ ಹಾನಿಯಾಗದಂತಹ ಸುಳ್ಳುಗಳನ್ನು ಹೇಳದಿರುವ ಬಗ್ಗೆೆ ಗಮನ ಹರಿಸೋಣ ಎಂದು ತಿಳಿಸಿದರು.

ಮಹಾತ್ಮ ಗಾಂಧೀಜಿ ಅವರು ಅವತಾರ ಪುರುಷರಲ್ಲ, ಅವರು ಎಲ್ಲರಂತೆ ಹುಟ್ಟಿಿ, ಬೆಳೆದು ತಮ್ಮ ಬದುಕಿನ ರೀತಿಯಿಂದ ಮಹಾತ್ಮರಾದರು. ಭಾರತದ ಆತ್ಮವನ್ನು ಅರಿಯಲು ಗಾಂಧಿ ಅವರನ್ನು ಅಧ್ಯಯನ ಮಾಡಿ ಅರ್ಥೈಸಿಕೊಳ್ಳುವುದು ಬಹುಮುಖ್ಯ ಎಂದರು.

ಉಪ್ಪಿಿನ ಸತ್ಯಾಾಗ್ರಹ, ಅಸಹಕಾರ ಚಳವಳಿ, ಚಲೇಜಾವ್ ಚಳವಳಿ ಸೇರಿದಂತೆ ಸ್ವಾಾತಂತ್ರ್ಯ ಚಳವಳಿಯನ್ನು ಜನಸಾಮಾನ್ಯರ ಹಂತಕ್ಕೆೆ ಕೊಂಡೊಯ್ದು ಜನಾಂದೋಲನವನ್ನಾಾಗಿ ರೂಪಿಸಿದ ಕೀರ್ತಿ ಮಹಾತ್ಮ ಗಾಂಧಿ ಅವರಿಗೆ ಸಲ್ಲುತ್ತದೆ. ಈ ಹಿಂದೆ ನಾವೆಲ್ಲಾಾ ಬೇರೆಯವರನ್ನು ಲೇವಡಿ ಮಾಡಲು ಗಾಂಧಿ ಅವರ ಹೆಸರನ್ನು ಬಳಸಿಕೊಳ್ಳುತ್ತಿಿದ್ದೆೆವು. ಆದರೆ, ಒಮ್ಮೆೆ ಗಾಂಧೀಜಿ ಅವರ ಕೃತಿಗಳನ್ನು ಓದಿದ ನಂತರ, ಸಂಪೂರ್ಣ ಬದಲಾದೆ ಎಂದು ಹೇಳಿದರು.

ಕವಿ ಡಾ.ಸಿದ್ದಲಿಂಗಯ್ಯ ಮಾತನಾಡಿ, ಮಹಾತ್ಮ ಗಾಂಧಿ ಅವರು ಮೊದಲ ಬಾರಿಗೆ ಸ್ವಚ್ಛತಾ ಆಂದೋಲನ ಪ್ರಾಾರಂಭಿಸಿದರು. ಆದರೆ, ಈಗಲೂ ದೇಶದಲ್ಲಿ ಬಯಲು ಶೌಚ ಪದ್ಧತಿ, ಮಲಹೊರುವ ಪದ್ಧತಿ, ಸಫಾಯಿ ಕರ್ಮಚಾರಿ ಪದ್ಧತಿಗಳು ಜಾರಿಯಲ್ಲಿರುವುದು ವಿಷಾದದ ಸಂಗತಿಯಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಗಾಂಧಿ ಜಯಂತಿ ಆಚರಣೆ ಕುರಿತು ಗೊಂದಲ ಸೃಷ್ಟಿಿಸುವ ಯತ್ನಗಳು ಸರಿಯಲ್ಲ. ಮಹಾತ್ಮ ಗಾಂಧಿ, ಡಾ. ಬಿ.ಆರ್.ಅಂಬೇಡ್ಕರ್ ಅವರಂತಹ ಮಹಾನುಭಾವರ ಜಯಂತಿಗಳನ್ನು ವಿಶೇಷವಾಗಿ ಆಚರಿಸಬೇಕೆನ್ನುವ ಉದ್ದೇಶದಿಂದ ಅ.2ರ ಬದಲು ಅ.10ರಂದು ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿತ್ತು.
– ಪ್ರೊ.ಎಸ್.ಜಾಫೆಟ್, ಕುಲಪತಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಾಲಯ

Leave a Reply

Your email address will not be published. Required fields are marked *