Wednesday, 21st October 2020

ಆಹಾರ ಸಾಮಗ್ರಿಗಳ ವಿತರಣೆಗೆ ಚಾಲನೆ

ದಾವಣಗೆರೆ:

ಕರ್ನಾಟಕ ರಾಜ್ಯ ಶಾಮನೂರು ಎಸ್. ಮಲ್ಲಿಕಾರ್ಜುನ್ ಅಭಿಮಾನಿಗಳ ಸೌಹಾರ್ದ ಸಂಘದ ವತಿಯಿಂದ 1 ಸಾವಿರ ಅವಶ್ಯಕವಿರುವ ನಾಗರೀಕರಿಗೆ ಅಕ್ಕಿ, ರವೆ, ಅವಲಕ್ಕಿ, ಬೇಳೆ, ಅಡುಗೆ ಎಣ್ಣೆಯ ಆಹಾರ ಸಾಮಾಗ್ರಿಗಳ ಕಿಟ್‍ನ್ನು ವಿತರಿಸಲು ಡಾ.ಶಾಮನೂರ ಶಿವಶಂಕರಪ್ಪ ಚಾಲನೆ ನೀಡಿದರು.

ಬಾಷಾನಗರದಲ್ಲಿ ಗುರುವಾರ ಕರ್ನಾಟಕ ರಾಜ್ಯ ಶಾಮನೂರು ಎಸ್. ಮಲ್ಲಿಕಾರ್ಜುನ್ ಅಭಿಮಾನಿಗಳ ಸೌಹಾರ್ದ ಸಂಘದ ಅಧ್ಯಕ್ಷ ಬುತ್ತಿ ಹುಸೇನ್‍ಪೀರ್ ಸಾಬ್ ಇವರ ನೇತೃತ್ವದಲ್ಲಿ ನಾಗರೀಕರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.

ಸೌಹಾರ್ದ ಸಂಘದ ಅಧ್ಯಕ್ಷ ಬುತ್ತಿ ಹುಸೇನ್‍ಪೀರ್ ಸಾಬ್ ಮತ್ತು ಪದಾಧಿಕಾರಿಗಳು ಬಡವರ ಸಂಕಷ್ಟಕ್ಕೆ ಸ್ಪಂದಿಸಿರುವುದು ಶ್ಲಾಘನೀಯವಾದುದು ಎಂದರು.

ಸರ್ಕಾರ ಕೋರೋನಾ ವಿರುದ್ಧ ಎಲ್ಲ ಪಕ್ಷಗಳ ಸಹಕಾರದೊಂದಿಗೆ ಹೋರಾಟ ನಡೆಸುತ್ತಿದ್ದು, ಎಲ್ಲಾ ಜಾತಿ-ಧರ್ಮದವರ ಸಹಕಾರದಿಂದ ರಾಜ್ಯ ದೇಶಕ್ಕೆ ಮಹಾಮಾರಿ ಅಷ್ಷು ತೊಂದರೆ ನೀಡಿಲ್ಲ. ದೇಶಾದ್ಯಂತ ಜನತೆ ಲಾಕ್‍ಡೌನ್‍ಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದು, ದಾವಣಗೆರೆಯಲ್ಲಿ ನಾಗರೀಕರ ಸಹಕಾರದಿಂದ ಲಾಕ್ ಡೌನ್ ತೆರವಾಗುವ ನಿರೀಕ್ಷೆಯಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಬುತ್ತಿ ಗಪೂರ್ ಸಾಬ್, ತಂಜೀಂ ಕಮಿಟಿ ಅಧ್ಯಕ್ಷ ಸಾಧಿಕ್ ಪೈಲ್ವಾನ್, ಡೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆ ಸದಸ್ಯ ದೇವರಮನಿ ಶಿವಕುಮಾರ್, ಮುಖಂಡರಾದ ಬುತ್ತಿ ಸಲೀಂ, ಬುತ್ತಿ ಗೌಸ್‍ಪೀರ್, ಬುತ್ತಿ ಮೈನುದ್ದೀನ್, ಹೋಟೆಲ್ ದಾದಾಪೀರ್ ಇದ್ದರು.ಇಲ್ಲಿ

Leave a Reply

Your email address will not be published. Required fields are marked *