Tuesday, 7th July 2020

ಇರುವುದರಲ್ಲಿಯೇ ಖುಷಿ ಪಡೋಣ

*ನಾಗೇಶ್ ಜೆ. ನಾಯಕ, ಉಡಿಕೇರಿ
ಪ್ರತಿ ದಿನವೂಖಿನ್ನತೆಯಿಂದ ನರಳುತ್ತಿಿದ್ದ ರಾಮುವಿನ ಮೊಗದಲ್ಲಿ ಅಂದು ಕೂಡ ಬೇಸರ, ಹತಾಶೆ ಮಡುಗಟ್ಟಿಿತ್ತು. ಕಾರಣ, ಕಾಲಿಗೆ ಹಾಕಿಕೊಳ್ಳಲು ಒಂದು ಜೊತೆ ಚಪ್ಪಲಿ ಇರಲಿಲ್ಲ. ಒಂದು ಬದುಕೇ ಎಂದುಕೊಂಡವನು, ಬದುಕನ್ನು ಕೊನೆಗೊಳಿಸಿಕೊಳ್ಳುವ ನಿರ್ಧಾರಕ್ಕೆೆ ಬಂದ. ಹೇಗಿದ್ದರೂ ಸಾಯುತ್ತಿಿದ್ದೆೆನಲ್ಲ, ದೇವರಿಗೆ ಕೊನೆಯ ನಮಸ್ಕಾಾರ ಸಲ್ಲಿಸಿ ಸಾಯಬೇಕು ಎಂದುಕೊಂಡ. ಅಲ್ಲಿಯೇ ಹತ್ತಿಿರವಿದ್ದ ದೇವಸ್ಥಾಾನಕ್ಕೆೆ ನಡೆದ. ಏನಾಶ್ಚರ್ಯ! ದೇವಸ್ಥಾಾನದ ಇದಿರು ಎರಡೂ ಕಾಲಿಲ್ಲದ ವೃದ್ಧನೊಬ್ಬ ತಳ್ಳುಗಾಡಿಯ ಮೇಲೆ ಕುಳಿತು ಹಾಡು ಹೇಳುತ್ತಾಾ ಭಿಕ್ಷೆ ಬೇಡುತ್ತಿಿದ್ದ. ಅದನ್ನು ಕಂಡ ರಾಮು ‘ಕಾಲಿಲ್ಲದ ಈತನೇ ಇಷ್ಟು ಖುಷಿಯಾಗಿ ಬದುಕು ನಡೆಸುತ್ತಿಿರಬೇಕಾದರೆ, ಎಲ್ಲ ಇದ್ದೂ ಬರೀ ಒಂದು ಜೊತೆ ಚಪ್ಪಲಿ ಇಲ್ಲದ್ದಕ್ಕೆೆ ಸಾಯುವ ಮಾಡುತ್ತಿಿದ್ದೆೆನಲ್ಲ’ ಎಂದುಕೊಂಡು ದೇವರಿಗೆ ನಮಸ್ಕರಿಸಿ ಹೊಸ ಬದುಕಿನತ್ತ ಹೆಜ್ಜೆೆ ಇರಿಸಿದ.

ಈ ಕತೆ, ನನಗೆ ಅದು ಇಲ್ಲ, ಇದು ಇಲ್ಲ, ಅವರು ಕೈ ಕೊಟ್ಟರು, ಇವರು ಮೋಸ ಮಾಡಿದರು ಎಂದುಕೊಂಡು ಬಾಳಿನುದ್ದಕ್ಕೂ ಹಳಹಳಿಸುತ್ತ ಕಾಲ ಕಳೆಯುವವರಿಗೆ ಒಂದು ಪಾಠವಿದ್ದ ಹಾಗೆ. ನಮ್ಮ ಎಲ್ಲ ಇಲ್ಲಗಳ ನಡುವೆ ನಾವು ಕೊರಗುತ್ತಾಾ ಬದುಕು ಸವೆಸುವುದಕ್ಕಿಿಂತ ನಮ್ಮಲ್ಲಿ ಇರುವುದರ ಕಡೆಗೆ ಗಮನ ಹರಿಸುತ್ತ ಸಂತೋಷದಿಂದ ಬದುಕನ್ನು ನಡೆಸಬಹುದು. ಕವಿ ಎನ್. ಎಸ್. ಲಕ್ಷ್ಮಿಿನಾರಾಯಣ ತಮ್ಮ ಒಂದು ಕವಿತೆಯಲ್ಲಿ ಹೇಳುವಂತೆ,

ಕಳೆದು ಹೋದುದಕೆ ಕೊರಗ ಬಿಡು
ಉಳಿದಿವೆ ಎಷ್ಟೋೋ ಹರುಷಪಡು
ಕಳೆಯುವ ಕೂಡುವ ಲೆಕ್ಕವನಳಿಸಿ
ಮನಸಿನ ಸ್ಲೇಟನು ಖಾಲಿ ಇಡು

ನೆಲದ ಮೇಲೆ ನಡೆಯುವವನು ಸೈಕಲ್‌ಗೆ ಆಸೆಪಟ್ಟಂತೆ, ಸೈಕಲ್ ಮೇಲೆ ಹೋಗುವವನು ಬೈಕ್ ಹತ್ತಬೇಕೆಂದು ಬಯಸಿದಂತೆ, ಬೈಕ್ ಮೇಲಿನವನು ನಾಲ್ಕು ಚಕ್ರದ ವಾಹನಕ್ಕೆೆ ಹಾತೊರೆಯುವಂತೆ ಇಂದು ಎಷ್ಟೋೋ ಜನ ತಮ್ಮಲ್ಲಿ ಇಲ್ಲದ ವಸ್ತುಗಳ ಬಗ್ಗೆೆಯೇ ಸದಾ ಧೇನಿಸಿ ಇರುವ ಖುಷಿಯನ್ನು ಕಳೆದುಕೊಳ್ಳುತ್ತಿಿದ್ದಾಾರೆ. ನಮಗಿಂತ ಕೆಳಗಿನವರನ್ನು ಬದುಕು ನಡೆಸಬೇಕೇ ವಿನಹ, ನಮಗಿಂತ ಮೇಲಿನವರನ್ನು ನೋಡಿ ಅಲ್ಲ. ‘ಯೋಗಿ ಪಡೆದದ್ದು ಯೋಗಿಗೆ, ಭೋಗಿ ಪಡೆದದ್ದು ಭೋಗಿಗೆ’ ಎಂಬ ಗಾದೆ ಮಾತೇ ಇಲ್ಲವೇ? ಇಷ್ಟು ನಮ್ಮಲ್ಲಿ ಇದೆಯಲ್ಲ, ಇಷ್ಟನ್ನು ದೇವರು ನಮಗೆ ಕರುಣಿಸಿದ್ದಾಾನಲ್ಲ ಅದಕ್ಕೆೆ ಕೃತಜ್ಞರಾಗಿರೋಣ. ಬೇರೆಯವರ ಬಳಿಯಲ್ಲಿರುವುದು ನಮ್ಮ ಬಳಿ ಇಲ್ಲವಲ್ಲ ಎಂದು ವ್ಯಥೆ ಪಡುತ್ತ, ಅವರ ಖುಷಿಗೆ ಮರುಗುತ್ತಾಾ, ಅವರ ಮೇಲೆ ಹೊಟ್ಟೆೆಕಿಚ್ಚು ಪಡುವುದು ಬೇಡ.

ಗೋಪಾಲಕೃಷ್ಣ ಅಡಿಗರು ಹೇಳಿದ ಹಾಗೆ ಇರುವುದೆಲ್ಲವನು ಬಿಟ್ಟು ಇರದುದರೆಡೆಗೆ ಜೀವನ, ನಿಜ. ಆದರೆ ಅದಕ್ಕೋೋಸ್ಕರ ಇರುವ ಸಂತಸದ ಗೋಣು ಮುರಿದು ಇಲ್ಲಗಳ ಬೆನ್ನು ಬೀಳುವುದು ಉಚಿತವಲ್ಲ. ವಾಮಮಾರ್ಗದ ಮೂಲಕ ಅವುಗಳನ್ನು ಪಡೆಯಬೇಕೆನ್ನುವುದು ದುರಾಸೆಯ ಪರಮಾವಧಿ. ನಮ್ಮೆೆಲ್ಲ ಇಲ್ಲಗಳ ನಡುವೆ ನಾವಿರುವುದಕ್ಕಿಿಂತ ಇರುವಿಕೆಗಳ ಮಧ್ಯೆೆಯೇ ಬದುಕು ಸಾಗಿಸುವುದು ಒಳ್ಳೆೆಯದಲ್ಲವೇ?

Leave a Reply

Your email address will not be published. Required fields are marked *