Saturday, 4th April 2020

ಉಪಚುನಾವಣೆಯಲ್ಲಿ ಹಣಾಹಣಿ

ಗೆಲ್ಲಲೇಬೇಕಾದ ಒತ್ತಡ ಹಿಂದಿನ ಚುನಾವಣೆಗಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಖರ್ಚು !

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ರಾಜ್ಯದಲ್ಲಿ ಮೂರು ಪಕ್ಷಗಳ ಪ್ರತಿಷ್ಠೆೆಯ ಪ್ರಶ್ನೆೆಯಾಗಿರುವ ಉಪಚುನಾವಣೆಯಿಂದ ಯಾರಿಗೆ ಎಷ್ಟು ಉಪಯೋಗವಾಗಿದೆಯೋ ಗೊತ್ತಿಿಲ್ಲ. ಆದರೆ ಪಕ್ಷದ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರಿಗೆ ಮಾತ್ರ ಹಣದ ಹೊಳೆ ಹರಿದಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿಬಂದಿವೆ.

ಡಿ.5ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿರುವ 15 ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು ಸೇರಿದಂತೆ ಕಾಂಗ್ರೆೆಸ್, ಜೆಡಿಎಸ್ ಅಭ್ಯರ್ಥಿಗಳು ಭಾರಿ ‘ಫಂಡಿಂಗ್’ ಮಾಡುತ್ತಿಿದ್ದಾಾರೆ. ಈ ಹಿಂದಿನ ಚುನಾವಣೆಯಲ್ಲಿ ನಡೆಯುತ್ತಿಿರುವ ಖರ್ಚಿಗಿಂತ ಈ ಬಾರಿ ಕನಿಷ್ಟ ಮೂರರಿಂದ ನಾಲ್ಕು ಪಟ್ಟು ಹೆಚ್ಚಾಾಗಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದೆ.

ಸರಕಾರ ಉಳಿಸಿಕೊಳ್ಳುವ ಧಾವಂತದಲ್ಲಿ ಬಿಜೆಪಿಯಿದ್ದರೆ, ಬಿಜೆಪಿಗೆ ಮಣ್ಣು ಮುಕ್ಕಿಿಸುವ ಹಾಗೂ ತಮ್ಮ ಕ್ಷೇತ್ರಗಳನ್ನು ಮರಳಿ ಪಡೆಯುವ ಉತ್ಸಾಾಹದಲ್ಲಿ ಕಾಂಗ್ರೆೆಸ್-ಜೆಡಿಎಸ್ ನಾಯಕರಿದ್ದಾಾರೆ. ಆದ್ದರಿಂದ ಎಲ್ಲ ಕ್ಷೇತ್ರಗಳಲ್ಲಿಯೂ ಕೋಟಿ ಕೋಟಿ ಲೆಕ್ಕದಲ್ಲಿ ಖರ್ಚು ಮಾಡುತ್ತಿಿದ್ದಾಾರೆ. ಮತದಾನ ಸಮೀಪಿಸುತ್ತಿಿದ್ದಂತೆ ಬಹುತೇಕ ಅಭ್ಯರ್ಥಿಗಳು, ‘ತಲುಪಿಸಬೇಕಾದದ್ದನ್ನು’ ವಿವಿಧ ತಲುಪಿಸಬೇಕಾದವರಿಗೆ ತಲುಪಿಸಿದ್ದಾಾರೆ. ಪ್ರಮುಖವಾಗಿ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರಿಗೆ ನೀಡಲಾಗಿದೆಯೇ ಹೊರತು, ಜನರ ಕೈಗೆ ಸಿಕ್ಕಿಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ.

ಅನರ್ಹರಿಂದಲೇ ಹೆಚ್ಚು ಖರ್ಚು
ಈ ಕತ್ತಲೆ ವ್ಯವಹಾರದಲ್ಲಿ ಪ್ರಮುಖವಾಗಿ ಕಾಂಗ್ರೆೆಸ್-ಜೆಡಿಎಸ್ ಅಭ್ಯರ್ಥಿಗಳಿಗಿಂತ ಹೆಚ್ಚಾಾಗಿ ಹಣ ಹೂಡಿಕೆ ಮಾಡುತ್ತಿಿರುವುದು ಅನರ್ಹ ಶಾಸಕರಂತೆ. ಸ್ಥಳೀಯ ಭಾಗದಲ್ಲಿ ಪಕ್ಷಾಾಂತರ ಮಾಡಿರುವ ಆರೋಪ ಹಾಗೂ ಬಿಜೆಪಿಯೊಂದಿಗೆ ಹೊಂದಾಣಿಕೆಯಾಗಲು ಸೂಕ್ತ ಸಮಯ ಸಿಗದೇ ಇರುವುದೇ ಈ ರೀತಿ ಹಣದ ಹೊಳೆ ಹರಿಸಲು ಕಾರಣ ಎನ್ನಲಾಗುತ್ತಿಿದೆ. ಈ ಬಾರಿ ಗೆದ್ದರೆ ಸಚಿವ ಸ್ಥಾಾನ ಖಚಿತ ಎನ್ನುವ ವಿಶ್ವಾಾಸವಿರುವುದರಿಂದ, ಇತರರಿಗಿಂತ ಹೆಚ್ಚು ಹಣ ಖರ್ಚು ಮಾಡಲಾಗುತ್ತಿಿದೆ.

ಲಕ್ಷ ಲೆಕ್ಕದಲ್ಲಿ ಮುಖಂಡರು ಡೀಲ್
ಈ ಬಾರಿ ಹರಿಯುತ್ತಿಿರುವ ಬಹುತೇಕ ಹಣ ಸ್ಥಳೀಯ ನಾಯಕರು ಹಾಗೂ ಮುಖಂಡರ ಮನೆಗೆ ಹೋಗುತ್ತಿಿದೆ ಎನ್ನುವ ಆರೋಪವಿದೆ. ಬೂತ್‌ಗಳಲ್ಲಿ ಪ್ರಭಾವ ಹೊಂದಿರುವ ಬಹುತೇಕ ನಾಯಕರನ್ನು ಸಂತೈಸಲು ಅಭ್ಯರ್ಥಿಗಳು ಲಕ್ಷಾಾಂತರ ರುಪಾಯಿ ವ್ಯಯಿಸುತ್ತಿಿದ್ದಾಾರೆ. ಒಂದು ವೇಳೆ ಈ ಹಣ ನೀಡದಿದ್ದರೆ, ತಮ್ಮ ವಿರುದ್ಧ ತಟಸ್ಥರಾಗುವ ಆತಂಕವಿರುವುದರಿಂದ ಈ ರೀತಿ ಹಣ ನೀಡಿ ಸಮಾಧಾನಪಡಿಸುವ ಕೆಲಸಕ್ಕೆೆ ಬಹುತೇಕ ಅಭ್ಯರ್ಥಿಗಳು ಮುಂದಾಗಿದ್ದಾಾರೆ. ಸ್ಥಳೀಯ ನಾಯಕರಿಗೆ ಮೂರು ಪಕ್ಷದ ಅಭ್ಯರ್ಥಿಗಳು, ಬಂಡಾಯ ಏಳಬಾರದು ಎನ್ನುವ ಕಾರಣಕ್ಕೆೆ ಹಣ ನೀಡಿದರೆ, ಕಾಂಗ್ರೆೆಸ್ ಹಾಗೂ ಜೆಡಿಎಸ್ ನಾಯಕರಿಗೆ ತಮ್ಮೊೊಂದಿಗೆ ಇರಲು ಹಾಗೂ ಇತರೆ ಪಕ್ಷದ ಅಭ್ಯರ್ಥಿಗೆ ಸಹಾಯ ಮಾಡಬಾರದು ಎನ್ನುವ ಕಾರಣಕ್ಕೆೆ ಹಣ ನೀಡುತ್ತಿಿದ್ದಾಾರೆ. ಆದರೆ ಈ ವ್ಯವಹಾರದಲ್ಲಾಾಗುತ್ತಿಿರುವ ಡೀಲ್ ಮೊತ್ತವನ್ನು ಮಾತ್ರ ಖಚಿತವಾಗಿ ಹೇಳಲು ಸಾಧ್ಯವಾಗುತ್ತಿಿಲ್ಲ ಎನ್ನಲಾಗುತ್ತಿಿದೆ.

Leave a Reply

Your email address will not be published. Required fields are marked *