Tuesday, 7th July 2020

ಎಲ್ಲೆಡೆ ಅಬ್ಬರದ ಪ್ರಚಾರ; ಪರಸ್ಪರ ಟೀಕಾಪ್ರಹಾರ

ಸಿದ್ದು, ಎಚ್‌ಡಿಕೆ, ದೇವೇಗೌಡರಿಂದ ಜಾತಿ ರಾಜಕಾರಣ: ಜಗದೀಶ್ ಶೆಟ್ಟರ್
ಹಣ, ವಾಮಮಾರ್ಗದಿಂದ ಚುನಾವಣೆ ಗೆಲ್ಲುವುದೇ ಬಿಜೆಪಿ ತಂತ್ರ: ಚಲುವರಾಯ ಸ್ವಾಾಮಿ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಉಪ ಕದನದಲ್ಲಿ ಪ್ರಚಾರದ ಭರಾಟೆ ಜೋರಾಗಿದ್ದು, ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ನಾಯಕರು ರಣತಂತ್ರ ಪಕ್ಷಗಳ ನಡುವೆ ವಾಕ್ ಸಮರ, ಟೀಕೆ ಟಿಪ್ಪಣಿಗಳ ಸದ್ದು ಮಾಡಿದೆ.


‘ಕೆಲ ರಾಜಕೀಯ ನಾಯಕರು ದಿನ ಬೆಳಗಾದರೆ ಜಾತಿ ರಾಜಕಾರಣ ಮಾಡುತ್ತಲೇ ಕಾಲ ಕಳೆಯುತ್ತಾಾರೆ’ ಎಂದು ಸಚಿವ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ. ಯಶವಂತಪುರ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಪರ ಪ್ರಚಾರ ವೇಳೆ ಮಾತನಾಡಿದ ಅವರು, ‘ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಾಮಿ ಹೇಗೆ ರಾಜಕೀಯ ಮಾಡುತ್ತಾಾರೆ ಎಂದು ಗೊತ್ತಿಿದೆ. ದಿನವೂ ಬೆಳಗ್ಗೆೆಯಿಂದ ಸಂಜೆವರೆಗೆ ಜಾತಿ ರಾಜಕಾರಣ ಮಾಡಿಯೇ ಇವರು ಮುಂದೆ ಬಂದಿರುವುದು’ ಎಂದು ನಡೆಸಿದರು.
‘ಕುಮಾರಸ್ವಾಾಮಿ ಹೇಳಿಕೆಯು ಇವತ್ತು ಒಂದು ರೀತಿ ಇದ್ದರೆ, ನಾಳೆ ಇನ್ನೊೊಂದು ರೀತಿ ಇರುತ್ತದೆ. ಇವರ ಸರಿಯಾದ ಹೇಳಿಕೆ ಯಾವುದು ಅಂತ ಅವರೇ ಜನರಿಗೆ ಹೇಳಬೇಕು. ಸಮುದಾಯದ ಹೆಸರು ಹೇಳಿಕೊಂಡು ಯಡಿಯೂರಪ್ಪ ಅವರು ಮತಯಾಚಿಸಿಲ್ಲ. ಇವರು ಕೇವಲ ಒಂದು ಸಮುದಾಯದ ನಾಯಕರಲ್ಲ. ಎಲ್ಲಾ ಸಮುದಾಯದ ನಾಯಕರು’ ಎಂದರು.

ಜೆಡಿಎಸ್ ಭದ್ರಕೋಟೆಯಾಗಿದ್ದ ಮಹಾಲಕ್ಷ್ಮಿಿ ಲೇಔಟ್‌ನಲ್ಲಿ ಕಾಂಗ್ರೆೆಸ್ ಅಭ್ಯರ್ಥಿ ಪರ ಭರ್ಜರಿ ಪ್ರಚಾರಕ್ಕೆೆ ಚಲುವರಾಯಸ್ವಾಾಮಿ ಅಖಾಡಕ್ಕೆೆ ಇಳಿದಿದ್ದರು. ಮಹಾಲಕ್ಷ್ಮಿಿ ಲೇಔಟ್ ಅಭ್ಯರ್ಥಿ ಪರ ಮನೆ ಮನೆಗೂ ತೆರಳಿ ಮತಯಾಚನೆ ಮಾಡಿದರು.

ಚಲುವರಾಯ ಸ್ವಾಾಮಿ ಮಾತನಾಡಿ, ‘2ನೇ ಅವಧಿಗೆ ಅಧಿಕಾರ ಹಿಡಿದಿರುವ ಕೇಂದ್ರ ಸರಕಾರ ಮತ್ತು ರಾಜ್ಯ ಬಿಜೆಪಿ ಸರಕಾರದ ಸಾಧನೆ ಶೂನ್ಯ. ವಾಮಮಾರ್ಗದಿಂದ ಅಧಿಕಾರ ಹಿಡಿಯುವುದು, ಜಾತಿ-ಜಾತಿಗಳು ನಡುವೆ ಕೋಮು ಸಾಮರಸ್ಯ ಹಾಳು ಮಾಡಿ ಹಣದಿಂದ ಚುನಾವಣೆ ಗೆಲ್ಲುವುದು ಬಿಜೆಪಿಯ ತತ್ತ್ವ, ಸಿದ್ಧಾಾಂತವಾಗಿದೆ. ದೇಶ ಆರ್ಥಿಕ ಕುಸಿತ ಕಂಡಿದೆ. ವಾಣಿಜ್ಯ ವಹಿವಾಟು ಅಧೋಗತಿಗೆ ಇಳಿದಿದೆ. ಕೈಗಾರಿಕೆಗಳು ಮುಚ್ಚುವ ಹಂತಕ್ಕೆೆ ತಲುಪಿವೆ. 17 ಶಾಸಕರ ರಾಜೀನಾಮೆ ಹಿಂದೆ ಭಾರಿ ಹಣ ಮತ್ತು ಅಧಿಕಾರದ ಲಾಲಸೆ ಇದೆ. ಮತದಾರರು ಎಲ್ಲವನ್ನು ಗಮನಿಸುತ್ತಿಿದ್ದಾಾರೆ. ಜನಶಕ್ತಿಿ ಮುಂದೆ, ಹಣದ ಶಕ್ತಿಿ ನಡೆಯುವುದಿಲ್ಲ. 15 ಅನರ್ಹ ಶಾಸಕರು ಸೋಲುವುದು ಖಚಿತ. ಪ್ರಜಾಪ್ರಭುತ್ವದಲ್ಲಿ ಮತದಾರನೇ ಅಂತಿಮ ಜನತಾ ನ್ಯಾಾಯಲಯವಾಗಿದ್ದು, ಡಿಸೆಂಬರ್ 5ರಂದು ತೀರ್ಮಾನವಾಗಲಿದೆ’ ಎಂದು ಹೇಳಿದರು.

ಶಿವಾಜಿನಗರ, ಕೆ.ಆರ್.ಪುರ, ಹೊಸಕೋಟೆಯಲ್ಲಿ ಬಿರುಸಿನ ಪ್ರಚಾರ ನಡೆಸುವ ಮೂಲಕ ಆಯಾ ಪಕ್ಷದ ನಾಯಕರು ಅಭ್ಯರ್ಥಿಗಳ ಪರ ಮತಯಾಚಿಸಿದರು.

ಗುಂಡೂರಾವ್‌ಗೆ ಎಸ್‌ಟಿಎಸ್
‘ದಿನೇಶ್ ಗುಂಡೂರಾವ್ ಅವರು ರಾಜ್ಯದ ಮಹಾನ್ ಸಿಎಂ ಗುಂಡೂರಾಯರ ಮಗ. ನಾನೊಬ್ಬ ಸಾಮಾನ್ಯ ಇನ್‌ಸ್‌‌ಪೆಕ್ಟರ್ ಮಗ. ಅವರ ರೀತಿ ನನಗೆ ಯಾವುದೇ ರಾಜಕೀಯ ಹಿನ್ನೆೆಲೆ ಇಲ್ಲ. ಅವರು ರಾಜ್ಯಮಟ್ಟದ ನಾಯಕರಾಗಿದ್ದಾಾರೆ. ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಕಾಂಗ್ರೆೆಸ್ ತುಂಬಾ ಬೆಳೆದಿದೆ. ಅವರ ಎತ್ತರಕ್ಕೆೆ ನಾನಿನ್ನೂ ಬೆಳೆದಿಲ್ಲ. ದಿನೇಶ್ ಹೇಳಿಕೆಗೂ ನಾನು ಪ್ರತಿಕ್ರಿಿಯೆ ನೀಡುವುದಿಲ್ಲ. ನನ್ನ ಕ್ಷೇತ್ರದ ಜನರಿಗೆ ಮಾತ್ರ ಉತ್ತರ ಕೊಡುತ್ತೇನೆ. ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ಅವರು 15 ಕ್ಷೇತ್ರಗಳಲ್ಲಿ ಪ್ರಚಾರ ನನ್ನ ಕ್ಷೇತ್ರದಲ್ಲಿಯೂ ಪ್ರಚಾರ ಮಾಡುತ್ತಿಿದ್ದಾರೆ. ನ.30ರಂದು ಮತ್ತೊೊಮ್ಮೆೆ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ. ನನ್ನ ಕ್ಷೇತ್ರಕ್ಕೆೆ ಕೊಟ್ಟ ಅನುದಾನದ ಬಗ್ಗೆೆ ಅವರೇ ಮಾತನಾಡಲಿದ್ದಾರೆ’ ಎಂದು ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ನುಡಿದಿದ್ದಾಾರೆ.

Leave a Reply

Your email address will not be published. Required fields are marked *