Tuesday, 29th September 2020

ಒಂದು ವಾರ್ಡ್‌ನಲ್ಲಿ ಪ್ರತಿ ದಿನ 150 ಸ್ವಾಬ್ ಟೆಸ್ಟ್‌‌ ಕಡ್ಡಾಯ: ಸಚಿವ ಬಸವರಾಜ್

ವಿಶ್ವವಾಣಿ ಸುದ್ದಿಮನೆ

ಬೆಂಗಳೂರು

ದೊಡ್ಡನಕ್ಕುಂದಿ, ರಾಮಮೂರ್ತಿ ನಗರ, ಬೆಳ್ಳಂದೂರು, ಸೇರಿದಂತೆ ಹಲವೆಡೆ ವೈದ್ಯರು ಸ್ಥಳೀಯ ಪಾಲಿಕೆ ಸದಸ್ಯರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಪಾಲಿಕೆ ಸದಸ್ಯರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಕರೋನಾ ನಿಯಂತ್ರಣದಲ್ಲಿ  ಸ್ಥಳೀಯ ಜನಪ್ರತಿನಿಧಿಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ  ಕ್ರಮ ಕೈಗೊಳ್ಳುವುದಾಗಿ  ಸಚಿವ ಬಸವರಾಜ್ ಅವರು ತಿಳಿಸಿದ್ದಾರೆ.

ಕರೋನಾ ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ಶನಿವಾರದಂದು ಮಹದೇವಪುರ ವಲಯದ ಪ್ರಗತಿ ಪರಿಶೀಲನಾ ಸಭೆಯನ್ನು ಸಚಿವ ಬಸವರಾಜ್ ಅವರು ಆಯೋಜಿಸಿದ್ದರು. ಈ ಸಂದರ್ಭದಲ್ಲಿ  ಮಾತನಾಡಿದ ಅವರು, ಕರೋನಾ ಕೆಲಸದಲ್ಲಿ ಯಾವುದೇ ಅಧಿಕಾರಿಗಳು  ಅಥವಾ ವೈದ್ಯರಾಗಲಿ ನಿರ್ಲಕ್ಷ ತೋರಿದರೆ ಕೂಡಲೆ ಅಮಾನತ್ತುಗೊಳಿಸುವಂತೆ ಉಸ್ತುವಾರಿ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು. ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಮುಂದಿನ ಸಭೆಯಲ್ಲಿ ಸೋಂಕು ಪ್ರಮಾಣ ಕಡಿಮೆ ಮಾಡಲೇಬೇಕೆಂದು ಸೂಚನೆ ನೀಡಿದರು.
ಕರೋನಾ ಸೊಂಕಿತರಾಗಲಿ ಹಾಗೂ ಪ್ರಾಥಮಿಕ ಸಂಪರ್ಕಿತರು ರಸ್ತೆಗಿಳಿದರೆ ಅವರ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚನೆ ನೀಡಿದರು. ಕರೋನಾ ನಿರ್ವಹಣೆಯಲ್ಲಿ ಕಳಪೆ ಪ್ರದರ್ಶನ ಮಾಡಿದ ಅಧಿಕಾರಿಗಳನ್ನು ಕೂಡಲೆ ಅಮಾನತ್ತು ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಾರ್ಡ್ ಒಂದರಲ್ಲಿ ಪ್ರತಿ ದಿನ 150 ಸ್ವಾಬ್ ಟೇಸ್‌ಟ್‌ ಮಾಡಲೇಬೇಕು ಎಂದು ತಿಳಿಸಿದರು.

ಮಾರತ್ ಹಳ್ಳಿ ವಾರ್ಡ್‌ನ ಪಾಲಿಕೆ ಸದಸ್ಯ ರಮೇಶ್ ಅವರು ಮಾತನಾಡಿ, ನಮ್ಮ ವಾರ್ಡ್ ನಲ್ಲಿ ಅತಿ ಹೆಚ್ಚು ಬಡವರಿದ್ದು, ಸರಕಾರದಿಂದ ಸಿಗುತ್ತಿರುವ ಪಡಿತರ ದಾನ್ಯ ಸಾಕಾಗುತ್ತಿಲ್ಲ ಹಾಗಾಗಿ ಇನ್ನು ಹೆಚ್ಚು ಪಡಿತರ ವಿತರಣೆ ಮಾಡುವಂತೆ ಮನವಿ ಮಾಡಿದರು. ಬೆಳ್ಳಂದೂರು ಮತ್ತು ಹೊರಮಾವು ವಾರ್ಡ್‌ನಲ್ಲಿ  ಅತಿ ಹೆಚ್ಚು ಪ್ರಕರಣಗಳಿವೆ ಕೂಡಲೆ ಕಡಿಮೆ ಆಗಲು ಶ್ರಮಿಸಬೇಕು ಎಂದು ಅವರು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ  ಐಎಎಸ್ ಅಧಿಕಾರಿ ಡಾ. ಮಂಜುಳಾ, ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್, ಡಿಸಿಪಿ ದೇವರಾಜ್, ಜಂಟಿ ಆಯುಕ್ತ ವೆಂಕಟಾಚಲಪತಿ, ಪಾಲಿಕೆ ಸದಸ್ಯರಾದ ಜಯಪ್ರಕಾಶ್, ಶ್ರೀಕಾಂತ್, ಸುರೇಶ್, ರಾಧಮ್ಮ ವೆಂಕಟೇಶ್, ಪದ್ಮಾವತಿ ಶ್ರೀ ನಿವಾಸ್ , ಬಂಡೆರಾಜು, ಮಂಜುನಾಥ್, ಶ್ವೇತಾ, ಟಿಹೆಚ್‌ಒ ಚಂದ್ರಶೇಖರ್ ಇದ್ದರು.

Leave a Reply

Your email address will not be published. Required fields are marked *