Wednesday, 26th February 2020

ಕನ್ನಡ ನಾಮಫಲಕ ಇಲ್ಲದಿದ್ದರೆ ವ್ಯಾಾಪಾರ ಪರವಾನಗಿ ಇಲ್ಲ

ನವೆಂಬರ್ 1ರಿಂದ ನಗರದಲ್ಲಿ ಕನ್ನಡ ನಾಮಫಲಕ ಕಡ್ಡಾಾಯಗೊಳಿಸಲು ಮೇಯರ್ ಗೌತಮ್ ಕುಮಾರ್ ಸೂಚಿಸಿದ್ದಾರೆ. ಕನ್ನಡ ನಾಮಫಲಕ ಹಾಕಲು ನಿರಾಕರಿಸುವ ಮಳಿಗೆಗಳಿಗೆ ಉದ್ಯಮ ಪರವಾನಗಿ ನೀಡದಿರುವ ನಿರ್ಧಾರಕ್ಕೆೆ ಮೇಯರ್ ಬಂದಿದ್ದಾರೆ.

ಈ ನಿಟ್ಟಿಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಡೆಸಿರುವ ಮೇಯರ್ ಗೌತಮ್ ಕುಮಾರ್, ನವೆಂಬರ್ ತಿಂಗಳಿನಾದ್ಯಂತ ನಗರದ ಎಲ್ಲ ಮಳಿಗೆಗಳ ಮೇಲೆ ಕನ್ನಡ ನಾಮಫಲಕ ಹಾಕಿಸುವ ಕಾರ್ಯಕ್ರಮ ಹಮ್ಮಿಿಕೊಂಡಿದ್ದಾರೆ. ಬರುವ ನವೆಂಬರ್ 1ರಿಂದ ಕನ್ನಡ ನಾಮಫಲಕ ಕಡ್ಡಾಾಯಗೊಳಿಸಲು ತೀರ್ಮಾನಿಸಲಾಗಿದೆ. ಮಳಿಗೆಯವರು ತಮ್ಮ ಅಂಗಡಿಗಳ ಮೇಲೆ ದೊಡ್ಡ ಅಕ್ಷರಗಳಲ್ಲಿ ಕನ್ನಡ ನಾಮಫಲಕ ಹಾಕಿಸಬೇಕು. ಒಂದು ವೇಳೆ ಕನ್ನಡ ನಾಮಫಲಕ ಇಲ್ಲದಿದ್ದರೆ ಅಂತಹ ಮಳಿಗೆಗಳಿಗೆ ಟ್ರೇಡ್ ಲೈಸ್ಸ್‌ೆ ನೀಡಬಾರದು. ಕನ್ನಡ ನಾಮಫಲಕವಿದ್ದ ಮಳಿಗೆಗಳನ್ನು ಖಚಿತ ಪಡಿಸಿದ ನಂತರವಷ್ಟೆೆ ಉದ್ಯಮ ಪರವಾನಗಿ ಅಧಿಕಾರಿಗಳಿಗೆ ಕಟ್ಟಪ್ಪಣೆ ಹೊರಡಿಸಿದ್ದಾರೆ.

ಕನ್ನಡಪರ ಸಂಘಟನೆಗಳು ಹಲವಾರು ಬಾರಿ ಕನ್ನಡ ನಾಮಫಲಕ ಚಳವಳಿ ಹಮ್ಮಿಿಕೊಂಡಿದ್ದವು. ಈ ಹಿಂದಿನ ಮೇಯರ್‌ಗಳನ್ನು ಭೇಟಿಯಾಗಿ ಕನ್ನಡ ನಾಮಫಲಕ ಕಡ್ಡಾಾಯಕ್ಕೆೆ ಒತ್ತಾಾಯಿಸಿದ್ದವು. ಇದೀಗ ಮೇಯರ್ ಆಗಿ ಅಧಿಕಾರ ವಹಿಸಿಕೊಂಡಿರುವ ಗೌತಮ್ ಕುಮಾರ್ ಅವರು ಒಂದೇ ವಾರದಲ್ಲಿ ಕನ್ನಡ ನಾಮಫಲಕ ಕಡ್ಡಾಾಯಗೊಳಿಸಲು ಮುಂದಾಗಿರುವುದು ಸ್ವಾಾಗತಾರ್ಹ ಬೆಳವಣಿಗೆಯಾಗಿದೆ.

ಬೂಟಾಟಿಕೆಯಾಗದಿರಲಿ:
ಕನ್ನಡೇತರ ಮೇಯರ್‌ಗಳು ಆಯ್ಕೆೆಯಾದಾಗಲೆಲ್ಲ ಕನ್ನಡ ಕಡ್ಡಾಾಯಗೊಳಿಸುವ ಮಾತುಗಳನ್ನಾಾಡುವುದು ಸಾಮಾನ್ಯ ಸಂಗತಿ. ಹೀಗಾಗಿ, ಮೇಯರ್ ಗೌತಮ್ ಕುಮಾರ್ ಅವರ ಪ್ರೇಮ ಅವರ ಆಯ್ಕೆೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಮುಂದಾದ ಕನ್ನಡಪರ ಸಂಘಟನೆಗಳನ್ನು ಓಲೈಸುವ ತಂತ್ರಗಾರಿಕೆಯಾಗದಿರಲಿ. ಅವರ ಕನ್ನಡ ಕಾಳಜಿ ಕನ್ನಡ ನಾಮಫಲಕಗಳನ್ನು ಅಳವಡಿಸುವ ನಿಟ್ಟಿಿನಲ್ಲಿ ಕಟ್ಟುನಿಟ್ಟಿಿನ ಕ್ರಮ ತೆಗೆದುಕೊಳ್ಳುವವರೆಗೆ ಮುಂದುವರಿಯಲಿ ಎಂದು ಕನ್ನಡ ಹೋರಾಟಗಾರರು ಅಭಿಪ್ರಾಾಯಪಟ್ಟಿಿದ್ದಾಾರೆ.

Leave a Reply

Your email address will not be published. Required fields are marked *