Monday, 20th January 2020

ಕರುಣೆ, ಅಧಿಕಾರ ಒಂದಾಗಿ ನೀಡಿತು ಸಂತ್ರಸ್ತರಿಗೆ ಸಾಂತ್ವನ!

ಮಿಡಿತ

ಸಂಗಮೇಶ ಆರ್. ನಿರಾಣಿ, 
‘ಒಬ್ಬ ಮನುಷ್ಯನಿಗೆ ಎಷ್ಟು ಭೂಮಿ ಬೇಕು?’-ಇದು ಟಾಲ್‌ಸ್ಟಾಾಯ್ ಅವರ ಜಗತ್‌ಪ್ರಸಿದ್ಧ ಕಥೆ. ಗಾಂಧೀಜಿ, ನೆಲ್ಸನ್ ಮಂಡೇಲಾ, ದಕ್ಷಿಣ ಆಫ್ರಿಿಕಾದ ನೊಬೆಲ್ ಪ್ರಶಸ್ತಿಿ ವಿಜೇತ ಲೇಖಕಿ ಟೋನಿ ಮೋರಿಸನ್ ಮುಂತಾದ ಗಣ್ಯರು ಬದುಕು ರೂಪಿಸಿಕೊಳ್ಳುವುದಕ್ಕೆೆ ಪ್ರೇರಣೆಯಾದ ಕಥೆ ಇದು. ‘ಸಾವಿರಾರು ಎಕರೆ ಆಸ್ತಿಿ ಇದೆ, ಮಣಗಟ್ಟಲೇ ಬಂಗಾರ ಇದೆ, ಎಣಿಕೆ ಇಲ್ಲದಷ್ಟು ದುಡ್ಡಿಿದೆ. ಇದೆಲ್ಲ ಸರಿ, ಆಯುಷ್ಯ ಎಲ್ಲಿದೆ? ಪುರುಸೊತ್ತು ಎಲ್ಲಿದೆ? ಇರುವುದು ಮತ್ತು ಇಲ್ಲದಿರುವುದರ ನಡುವೆ ಏನಾದರೂ ವ್ಯತ್ಯಾಾಸ ಇದೆಯೇ?’ ಎಂದು ಈ ಕತೆ ಕೇಳುತ್ತದೆ. ಕಳೆದ ಒಂದು ವಾರದಿಂದ ಟಾಲ್‌ಸ್ಟಾಾಯ್‌ರ ಈ ಕಥೆ ನನ್ನ ಮನಸ್ಸನ್ನೂ ಕೊರೆಯುತ್ತಿಿದೆ.

ಕಾರಣ ಏನೆಂದರೆ ಘಟಪ್ರಭಾ, ಕೃಷ್ಣಾಾ ಮತ್ತು ಮಲಪ್ರಭಾ ನದಿಗಳ ಅಬ್ಬರದಿಂದ ಸಾವಿರಾರು ಕುಟುಂಬದ ಬದುಕು ಅರೆಕ್ಷಣದಲ್ಲಿ ಕೊಚ್ಚಿಿ ಹೋಯಿತು. ನಿಂತ ನೆಲದ ಜನರ ಬದುಕನ್ನು ನೀರು ನುಂಗಿತು. ಜನರು ಎತ್ತರದ ಸ್ಥಳಗಳಿಗೆ ಓಡಿ ಹೋಗಿ ಕೈಯಲ್ಲಿ ಜೀವ ಹಿಡಿದುಕೊಂಡು ನಿಂತಿದ್ದಾಾರೆ. ಅವರ ಬಳಿ ಇರುವುದು ಜೀವ ಒಂದೇ.

ನಮ್ಮ ಉದ್ಯಮ ಸಮೂಹದಿಂದ ಎಂ.ಆರ್.ಎನ್ ನಿರಾಣಿ ಫೌಂಡೇಶನ್ ಪರವಾಗಿ ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆ ಮತ್ತು ಹಿಪ್ಪರಗಿಯ ಸಾಯಿ ಪ್ರಿಿಯಾ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಪ್ರವಾಹ ಸಂತ್ರಸ್ತರ ಕಾಳಜಿ ಕೇಂದ್ರಗಳನ್ನು ಆರಂಭಿಸಿದ್ದೇವೆ. ಮುಧೋಳ ಕೇಂದ್ರದಲ್ಲಿ ಘಟಪ್ರಭಾ ಪ್ರವಾಹಪಿಡಿತರು ಮತ್ತು ಹಿಪ್ಪರಗಿಯಲ್ಲಿ ಕೃಷ್ಣಾಾ ನದಿಯ ಪ್ರವಾಹಪಿಡಿತರು ದೊಡ್ಡ ಸಂಖ್ಯೆೆಯಲ್ಲಿ ಆಶ್ರಯ ಪಡೆದಿದ್ದಾಾರೆ. ನಮ್ಮ ಫೌಂಡೇಶನ್‌ದ ಕಾರ್ಯಕರ್ತರು ಈ ಸಂತ್ರಸ್ತರೆಲ್ಲ ತಮ್ಮ ಕುಟುಂಬದ ಸದಸ್ಯರು ಎಂಬ ಭಾವನೆಯಿಂದ ಸಹಾಯ ಮಾಡುತ್ತಿಿದ್ದಾಾರೆ.

ನಾಡಿನ ಜನರ ಆತ್ಮಸಾಕ್ಷಿಯಂತೆ ಬದುಕುತ್ತಿಿರುವ ನಡೆದಾಡುವ ದೇವರೆಂದೇ ಜನರ ಪ್ರೀತಿಗೆ ಪಾತ್ರರಾಗಿರುವ ಮಹಾನ್ ಸಂತ ವಿಜಯಪುರದ ಜ್ಞಾಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಹಿಪ್ಪರಗಿ ಕಾಳಜಿ ಕೇಂದ್ರಕ್ಕೆೆ ಭೇಟಿ ನೀಡಿದ್ದು ನಿಜಕ್ಕೂ ಒಂದು ಅಪರೂಪದ ಭಾಗ್ಯ. ಹಾಗೆಯೇ ರಾಜ್ಯದ ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪನವರು ಮುಧೋಳದ ಕಾಳಜಿ ಕೇಂದ್ರಕ್ಕೆೆ ಭೇಟಿ ನೀಡಿದರು. ಒಬ್ಬರು ಮಹಾನ್ ಸಂತ ಹಾಗೂ ಇನ್ನೊೊಬ್ಬರು ರಾಜ್ಯದ ಪ್ರಮುಖರಾದ ಮುಖ್ಯಮಂತ್ರಿಿ ನಮ್ಮ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿದಾಗ ಜನರ ಸ್ಪಂದನೆ, ಜನರೊಂದಿಗೆ ನಡೆಯುವ ಸಂವಾದ ಎಲ್ಲವನ್ನು ಸಮೀಪದಿಂದ ಕಾಣುವ ಅವಕಾಶ ನನಗೆ ಲಭಿಸಿತ್ತು. ಅದೊಂದು ಕಣ್ತೆೆರೆಸಿದ ಅನುಭವ, ಎಲ್ಲರೊಡನೆ ಹಂಚಿಕೊಳ್ಳಬೇಕಾದ್ದು.

ವಿಜಯಪುರ ಜ್ಞಾಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಬದುಕಿನ ಎಲ್ಲ ವೈಭವಗಳನ್ನು ನಿರಾಕರಿಸಿದ ಕಠೋರ ಸನ್ಯಾಾಸಿ. ಅವರದು ತುಂಬ ಸರಳವಾದ ಬದುಕು. ಒಂದು ಜೋಡು ಖಾದಿ ಅಂಗಿ ಮತ್ತು ಒಂದು ಜೋಡು ಖಾದಿ ಲುಂಗಿ, ಒಂದು ಕನ್ನಡಕ ಅವರ ಆಸ್ತಿಿ. ಉಳಿದದ್ದೆೆಲ್ಲ ನಾಸ್ತಿಿ ಎನ್ನುವ ಭಾವ ಅವರದು. ಅವರಿಗೆ ಕಳೆದ ವರ್ಷ ಕೇಂದ್ರ ಸರಕಾರ ಪದ್ಮಭೂಷಣ ಪ್ರಶಸ್ತಿಿ ಪ್ರಕಟಿಸಿತ್ತು. ವಿನಯದಿಂದ ನಿರಾಕರಿಸಿದರು. ಕೆಲವು ವರ್ಷಗಳ ಹಿಂದೆ ಧಾರವಾಡ ಕರ್ನಾಟಕ ವಿ.ವಿ ಗೌರವ ಡಾಕ್ಟರೇಟ್ ಪ್ರಕಟಿಸಿತ್ತು.

ಸ್ವಾಾಮೀಜಿ ನಮ್ರತೆಯಿಂದ ಬೇಡ ಎಂದರು. ಅವರ ಪ್ರವಚನ ಕೇಳಲು ಲಕ್ಷ ಲಕ್ಷ ಜನ ಸೇರುತ್ತಾಾರೆ. ಅವರು ಪ್ರವಚನ ನೀಡುವ ಕಾಲಕ್ಕೆೆ ಚಿತ್ರಮಂದಿರಗಳು ಬಾಗಿಲು ಮುಚ್ಚುತ್ತವೆ. ಇಂಗ್ಲಿಿಷ್ ಭಾಷೆಯ ಮೇಲೆ ಪ್ರಭುತ್ವ ಹೊಂದಿರುವ ಅವರು ವಿದೇಶಗಳಲ್ಲಿಯೂ ಪ್ರವಚನ ನೀಡುತ್ತಿಿದ್ದಾಾರೆ. ವಿದೇಶಿಯರೂ ದೊಡ್ಡ ಸಂಖ್ಯೆೆಯಲ್ಲಿ ಅವರ ಅನುಯಾಯಿಗಳಾಗಿದ್ದಾಾರೆ. ಸ್ವಾಾಮೀಜಿ ಬರೆದ (ಕನ್ನಡ ಅವತರಣಿಕೆ -ಮೌನ ಲೋಕದ ಹಾಡುಗಳು) ಇಂಗ್ಲಿಿಷ್ ಕವಿತೆಗಳನ್ನು ಮನತುಂಬಿ ವಿದೇಶೀಯರು ಹಾಡಿ ಕುಣಿಯುತ್ತಾಾರೆ.

ಇಂದು ಸ್ವಯಂ ಘೋಷಿತ ದೇವಮಾನವರು ಧರ್ಮದ ಹೆಸರಿನಲ್ಲಿ ಕಾರ್ಪೊರೇಟ್ ಮಾದರಿಯಲ್ಲಿ ದೊಡ್ಡ ವ್ಯವಹಾರ ನಡೆಸುತ್ತಿಿದ್ದಾಾರೆ. ಸಿದ್ದೇಶ್ವರ ಶ್ರೀಗಳು ತಮ್ಮ ಜನಪ್ರಿಿಯತೆಯನ್ನು ವ್ಯವಹಾರವಾಗಿಸಿಕೊಂಡಿದ್ದರೆ, ಇಂದು ಜಗತ್ತಿಿನ ದೊಡ್ಡ ಶ್ರೀಮಂತರಾಗಿ ಕಣ್ಣು ಕುಕ್ಕುವಷ್ಟು ಸಂಪತ್ತು ಮಾಡಬಹುದಾಗಿತ್ತು. ಪರಿವ್ರಾಾಜಕ ಅವಧೂತರಾದ ಅವರು ತಮ್ಮ ಅಂಗಿಗೆ ಕಿಸೆಯನ್ನೇ ಹೊಂದಿಲ್ಲ. ಅಸಂಗ್ರಹ ಅವರ ಬದುಕಿನ ತಪಸ್ಸು. ಹಣ, ಸಂಪತ್ತು, ಸಂಗ್ರಹದ ವ್ಯವಹಾರದಲ್ಲಿ ಸಂತರು, ಸ್ವಾಾಮಿಗಳು ತೊಡಗಿದರೆ ಜನ ಜಾಗೃತಿಗೆ ಸಮಯ ಸಿಗುವುದಿಲ್ಲ. ಜನರಲ್ಲಿ ವೈಜ್ಞಾಾನಿಕ ಚಿಂತನೆ ಬೆಳೆಸಬೇಕು. ಅವರಲ್ಲಿಯ ಕುರುಡು ಕಂದಾಚಾರಗಳನ್ನು ದೂರ ಮಾಡಬೇಕು ಎಂಬುದು ಸಿದ್ದೇಶ್ವರ ಶ್ರೀಗಳ ಸ್ಪಷ್ಟ ನಿಲುವು ಆಗಿದೆ.

ಸಿದ್ದೇಶ್ವರ ಶ್ರೀಗಳು ಹಿಪ್ಪರಗಿಯ ಸಂತ್ರಸ್ತರ ಕಾಳಜಿ ಕೇಂದ್ರಕ್ಕೆೆ ಆಗಮಿಸಿದಾಗ ಸಂಜೆಯಾಗಿತ್ತು. ಸೂರ್ಯ ಮರೆಯಾಗುವ ಸಿದ್ಧತೆ ಮಾಡಿಕೊಳ್ಳುತ್ತಿಿದ್ದ. ಸಂತ್ರಸ್ತರು ಕೂಡ ಇಂದಿನ ದಿನ ಕಳೆದದ್ದಾಾಯಿತು. ನಾಳಿನದ್ದು ಹೇಗೆ ಎಂಬ ಆತಂಕದಲ್ಲಿದ್ದರು. ಯಾರ ಮುಖದಲ್ಲಿಯೂ ಕಳೆ ಇರಲಿಲ್ಲ. ನಗೆ ಪೂರ್ಣ ಕಳೆದು ಹೋಗಿತ್ತು.ಯಾವುದೇ ಅಧಿಕಾರವಿಲ್ಲದ, ಹಣ ಇಲ್ಲದ ಬಡಕಲಾದ ಶರೀರದ ಸಿದ್ದೇಶ್ವರ ಶ್ರೀಗಳು ಬಂದಾಗ ಜನ ಹೇಗೆ ಸ್ಪಂದಿಸುತ್ತಾಾರೆ ಎಂದು ನೋಡುವ ಕುತೂಹಲ ನನ್ನದಾಗಿತ್ತು.

ಸ್ವಾಾಮೀಜಿ ಬಂದಿರುವುದು ತಿಳಿಯುತ್ತಿಿದ್ದಂತೆಯೇ ನೂರಾರು ಜನ ಓಡೋಡಿ ಬಂದು ನಮಸ್ಕರಿಸಿದರು. ಪರಿಚಯದ ಹಿರಿಯರನ್ನು ನೋಡಿ ಸ್ವಾಾಮೀಜಿ ಅವರ ತೊಂದರೆ ಕೇಳತೊಡಗಿದರು.
ಒಬ್ಬ ತರುಣ ಅವರ ಸಮೀಪವೇ ಬಂದು, ಕಣ್ಣಲ್ಲಿ ನೀರು ತುಂಬಿಕೊಂಡು ಹೇಳತೊಡಗಿದ, ‘ಎಲ್ಲವೂ ಕೃಷ್ಣಾಾ ನದಿಯ ನೀರಿನಲ್ಲಿ ಹರಿದು ಹೋಯಿತು. ಏನೂ ಉಳಿದೇ ಇಲ್ಲ. ನನ್ನ ಮೈಮೇಲಿನ ಈ ಬಟ್ಟೆೆ ಕೂಡ ನೀರಿನಿಂದ ತೊಯ್ದಿಿದೆ’ ಎಂದು ಬಿಕ್ಕಿಿ ಬಿಕ್ಕಿಿ ಅಳತೊಡಗಿದ.

ಕೆಲವು ಕ್ಷಣ ಮೌನವಾದ ಶ್ರೀಗಳು ನಂತರ ನಿಧಾನವಾಗಿ ಹೇಳಿದರು, ‘ಜೀವ ಉಳಿದಿದೆಯಲ್ಲ ಅಷ್ಟು ಸಾಕು! ಜೀವಕ್ಕಿಿಂತಲೂ ಯಾವುದೂ ದೊಡ್ಡದ್ದಲ್ಲ! ಜೀವ ಇರುವುದರಿಂದಲೇ ನಮ್ಮ ನಿಮ್ಮ ಚಲನೆ ಮತ್ತು ಮಿಲನ ನಡೆಯುತ್ತಿಿದೆ. ಹೊಸ ಬದುಕು ಕಟ್ಟಿಿಕೊಳ್ಳಲು ಜೀವ ಒಂದೇ ಸಾಕು. ಜೀವಕ್ಕೆೆ ಒಂದು ವಿಚಿತ್ರ ಶಕ್ತಿಿಯಿದೆ. ತೊಂದರೆಯಲ್ಲಿದ್ದಾಾಗ ಅದು ಛಲವನ್ನು, ಗಟ್ಟಿಿತನವನ್ನು, ಶೌರ್ಯವನ್ನು, ಹೋರಾಟದ ಮನೋಭಾವವನ್ನು ಗೆಳೆಯರನ್ನಾಾಗಿ ಕರೆದುಕೊಂಡು ಬರುತ್ತದೆ. ಈ ಗೆಳೆಯರು ಟೊಂಕ ಕಟ್ಟಿಿ ನಿಂತು ಹೊಸ ಬದುಕು ಕಟ್ಟಿಿಕೊಡುತ್ತಾಾರೆ. ನಾಳೆ ಖಂಡಿತ ಸೂರ್ಯೋದಯವಾಗುತ್ತದೆ. ಹೂಗಳು ಅರಳುತ್ತವೆ. ಹಾಗೇ ನಿಮ್ಮ ಬದುಕಿನಲ್ಲಿ ಹೊಸ ನಗೆ ಮೂಡಿಯೇ ಮೂಡುತ್ತದೆ’ ಎಂದು ತಮ್ಮ ಸಣ್ಣ ಆದರೆ ಸ್ಪಷ್ಟ ಧ್ವನಿಯಲ್ಲಿ ಹೇಳಿದರು. ಅಳುತ್ತಿಿದ್ದವರ ಮುಖಗಳು ಅರಳ ತೊಡಗಿದವು.

ಬರಿಗೈಯಲ್ಲಿ ಬಂದ ಈ ಬಡಕಲು ದೇಹದ ಸ್ವಾಾಮೀಜಿ ನನಗೆ ಥೇಟ್ ಗಾಂಧೀಜಿ ಹಾಗೆ ಕಂಡರು. ಗಾಂಧೀಜಿ ಬಳಿ ಯಾವ ಅಧಿಕಾರವೂ ಇರಲಿಲ್ಲ. ಅವರಲ್ಲಿದ್ದ ಸರಳತೆ ಛಲ, ಸತ್ಯ ಸಂಧತೆ, ಅಹಿಂಸೆ ಪ್ರೀತಿ ಅವರಿಗೆ ಸ್ವಾಾತಂತ್ರ್ಯದ ದೊಡ್ಡ ಗೆಲುವು ತಂದು ಕೊಟ್ಟವು. ಲೋಕಮಾನ್ಯ ತಿಲಕರು ಪ್ರತಿ ಸಲ ಜೈಲಿನಿಂದ ಬಿಡುಗಡೆಯಾಗಿ ಬಂದ ಮೇಲೆ ಮತ್ತೆೆ ಹರಿ ಓಂ ಎಂದು ಬರೆದು ಪುನಃ ಧೈರ್ಯದಿಂದ ಸ್ವಾಾತಂತ್ರ್ಯ ಚಳವಳಿಯಲ್ಲಿ ತೊಡಗುತ್ತಿಿದ್ದರು. ಸ್ವಾಾಮೀಜಿ ಮಾತು ಕೂಡ ಅಲ್ಲಿದ್ದವರಲ್ಲಿ ಮತ್ತೆೆ ಹರಿ ಓಂ ಎಂದು ಬದುಕು ಕಟ್ಟಿಿಕೊಳ್ಳುವ ಉತ್ಸಾಾಹವನ್ನು ತುಂಬಿದ್ದು ನೋಡಿ ನಾನು ನಿಜಕ್ಕೂ ಬೆರಗಾದೆ.

ಸ್ವಾಾಮೀಜಿ ಮುಂದುವರಿದು ಹೇಳಿದರು- ‘ಜೀವನದಲ್ಲಿ ವಿರಹ ಕೂಡ ಅನಿವಾರ್ಯ. ತುಂಬ ಪ್ರೀತಿಸಿದವರನ್ನು ಕಳೆದುಕೊಳ್ಳುತ್ತೇವೆ. ಪ್ರತಿಯೊಬ್ಬರು ಬದುಕಿನಲ್ಲಿ ಹಲವು ವಸ್ತುಗಳನ್ನು ಕಳೆದುಕೊಂಡಿರುತ್ತಾಾರೆ. ಕಳೆದುಕೊಳ್ಳುವುದು ಕೂಡ ಬದುಕಿನ ಒಂದು ಭಾಗ. ಕಳೆದುಕೊಂಡ ನೋವಿನಲ್ಲಿಯೇ ನಿತ್ಯದ ನೆಮ್ಮದಿಯನ್ನು ಕಳೆದುಕೊಳ್ಳಬಾರದು. ಹುಟ್ಟಲಿರುವ ಹೊಸದರ ನಿರೀಕ್ಷೆಯಲ್ಲಿ ಬದುಕನ್ನು ಅರಳಿಸಿಕೊಳ್ಳಬೇಕು.

ಮರದ ಉದಾಹರಣೆಯನ್ನೇ ನೋಡಿರಿ. ಮರ ತನ್ನಿಿಂದ ಉದುರಿದ ಎಲೆಗಳಿಗಾಗಿ ಎಂದೂ ಮರುಕ ಪಡುವುದಿಲ್ಲ. ಉದುರಿದ ಜಾಗದಲ್ಲಿ ಹೊಸದೊಂದು ಎಲೆ ಹುಟ್ಟುತ್ತದೆ ಎಂಬ ಖಚಿತತೆ ಮರಕ್ಕೆೆ ಇರುತ್ತದೆ. ಉದುರಿಹೋದ ಹಣ್ಣೆೆಲೆಗಾಗಿ ದುಃಖಿಸುವುದಕ್ಕಿಿಂತ ಹೊಸದಾಗಿ ಹುಟ್ಟುವ ಚಿಗುರೆಲೆಯ ನಿರೀಕ್ಷೆಯಲ್ಲಿ ಮರ ಹೊಸ ಹುರುಪು ಪಡೆಯುತ್ತದೆ. ಹಾಗಾಗಿ ಜೀವನದಲ್ಲೂ ಇದೇ ರೀತಿ ಕಳೆದುದರ ಬಗ್ಗೆೆ ಚಿಂತಿಸುವ ಬದಲು ಹುಟ್ಟಲಿರುವ ಹೊಸದರ ನಿರೀಕ್ಷೆಯಲ್ಲಿ ಬದುಕನ್ನು ಕಟ್ಟಿಿಕೊಳ್ಳಬೇಕು’ ಎಂದು ಹೇಳಿದರು.

ಕೊನೆಯದಾಗಿ, ಪ್ರಕೃತಿ ಎದುರು ಮನುಷ್ಯ ಎಷ್ಟು ಕುಬ್ಜ ಎನ್ನುವುದು ಈ ವಿಕೋಪ ಮತ್ತೆೆ ತೋರಿಸಿಕೊಟ್ಟಿಿದೆ. ಜತೆಗೆ ಮಾನವೀಯ ಅಂತಃಕರಣದ ಸ್ಪಂದನದ ಅಗತ್ಯವನ್ನೂ ಹೇಳಿಕೊಟ್ಟಿಿದೆ. ಜನರು ಸ್ವಯಂ ಪ್ರೇರಿತರಾಗಿ ನಿಮ್ಮ ಸಹಾಯಕ್ಕೆೆ ಬಂದಿದ್ದಾಾರೆ. ಕರುಣೆ ಎಂಬುದು ಕಿವುಡರು ಸಹ ಕೇಳಿಸಿಕೊಳ್ಳಬಹುದಾದ ಕುರುಡರು ಸಹ ನೋಡಬಹುದಾದ ಒಂದು ಭಾಷೆ. ನಾಡಿನ ಜನತೆ ತಾಯಿಯ ಕರುಣೆಯನ್ನು ನಿಮ್ಮ ಮೇಲೆ ಹರಸಿದ್ದಾಾರೆ. ಚಿಂತೆ ಮಾಡುವ ಅವಶ್ಯಕತೆ ಇಲ್ಲ ಎಂದು ಅವರು ಮಾತು ಮುಗಿಸಿದರು.

ಸಿದ್ದೇಶ್ವರ ಸ್ವಾಾಮೀಜಿಯವರ ಮಾತನಾಡುವ ಶೈಲಿ ಬಹಳ ಆಕರ್ಷಕ. ನಿಧಾನವಾಗಿ, ಯಾವ ಭಾವಾವೇಶಕ್ಕೂ ಒಳಗಾಗದೆ ಸರಳ ಪದಗಳನ್ನು ಬಳಸಿ ಮಾತನಾಡುತ್ತಾಾರೆ. ಅವರ ಬದುಕು ಭಾಷೆ ಒಂದೇ ಆಗಿದೆ. ಸ್ವಾಾಮೀಜಿ ಮಾತಿನ ಶಕ್ತಿಿ ಬಹು ದೊಡ್ಡದು. ಅಲ್ಲಿ ನೆರೆದವರ ಕಣ್ಣಲ್ಲಿ ಹೊಸ ಕನಸುಗಳು ಕಾಣತೊಡಗಿದವು.

ಈಗ, ಮುಖ್ಯಮಂತ್ರಿಿ ಬಿ.ಎಸ್. ಯಡಿಯೂರಪ್ಪ ಮುಧೋಳದಲ್ಲಿ ನಾವು ಆರಂಭಿಸಿದ ಇನ್ನೊೊಂದು ಕಾಳಜಿ ಕೇಂದ್ರಕ್ಕೆೆ ಭೇಟಿ ನೀಡಿದ ವಿಷಯಕ್ಕೆೆ ಬರೋಣ.

ನಾಡಿನ ಮುಖ್ಯಮಂತ್ರಿಿಯ ಬಳಿ ತುಂಬ ದೊಡ್ಡ ಅಧಿಕಾರ ಇದೆ. ಅವರ ಬಳಿ ರಾಜ್ಯದ ಸಂಪತ್ತು, ಪೊಲೀಸ್ ಪಡೆ, ಸೈನ್ಯ ಸಿಬ್ಬಂದಿ, ಪ್ರಶ್ನಾಾತೀತವಾದ ದೊಡ್ಡ ಅಧಿಕಾರ ಎಲ್ಲವೂ ಇದೆ. ಈ ಸಂದರ್ಭದಲ್ಲಿ ಜನರ ಸ್ಪಂದನೆ ಹೇಗಿರಬಹುದು ಎಂದು ನಾನು ಮುಖ್ಯಮಂತ್ರಿಿ ಜತೆಗೇ ನಿಂತುಕೊಂಡಿದ್ದೆೆ.

ಅನೇಕ ಸಂತ್ರಸ್ತರು ತಾವು ಕಳೆದುಕೊಂಡ ಆಸ್ತಿಿಯ ವಿವರ ಬರೆದುಕೊಂಡು ಬಂದಿದ್ದರು. ಇನ್ನು ಕೆಲವರು ಮನವಿ ಪತ್ರಗಳನ್ನು ಸಿದ್ಧಪಡಿಸಿಕೊಂಡು ಬಂದಿದ್ದರು. ಮಹಿಳೆಯರು ಕೂಡ ಗುಂಪುಗಳನ್ನು ಮಾಡಿಕೊಂಡು ಧೈರ್ಯದಿಂದ ತಮ್ಮ ಅಹವಾಲುಗಳನ್ನು ಹೇಳಲು ಸಜ್ಜಾಾಗಿದ್ದರು.

ಮುಖ್ಯಮಂತ್ರಿಿಗಳು ಹೇಳಿದರು-‘ನಾನೇ ಸ್ವತಃ ನಿಮ್ಮ ಸಮಸ್ಯೆೆಯನ್ನು ಕೇಳಲು ಬಂದಿದ್ದೇನೆ. ಸರಕಾರ ನಿಮ್ಮ ಜತೆಗೆ ಇದೆ. ನೀವು ಹೆದರಬೇಕಾಗಿಲ್ಲ. ಸರಕಾರ ಬಡವರಿಗೆ ಮನೆ ಕಟ್ಟಿಿಕೊಡಲಿದೆ. ಬೆಳೆ ಹಾನಿ ಸಮೀಕ್ಷೆ ಮಾಡಿ ಪರಿಹಾರ ಕೊಡಲಾಗುವುದು. ದನ-ಕರುಗಳಿಗೆ ಸರಿಯಾಗಿ ಮೇವು ಪೂರೈಸಲು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಹೇಳಿದರು. ಅಲ್ಲಿದ್ದ ಸುಮಾರು ಮೂರ್ನಾಾಲ್ಕು ನೂರು ಸಂತ್ರಸ್ತರು ತಮ್ಮ ಕಷ್ಟ ಮತ್ತು ಹಾನಿಯ ಬಗ್ಗೆೆ ವಿವರಿಸಿದರು. ಮುಖ್ಯಮಂತ್ರಿಿಗಳು ಕೂಡ ತುಂಬ ಸಮಾಧಾನ ಚಿತ್ತದಿಂದ ಜನರ ಸಮಸ್ಯೆೆಗಳನ್ನು ಆಲಿಸಿದರು.

ತಮಗೆ ಕೊಟ್ಟ ಮನವಿ ಪತ್ರಗಳನ್ನು ಅಧಿಕಾರಿಗಳ ಕೈಗೆ ನೀಡಿದರು. ಮಾಧ್ಯಮದ ಪ್ರತಿನಿಧಿಗಳು ಫೋಟೊಗಳನ್ನು ಕ್ಲಿಿಕ್ಕಿಿಸಿದರು. ಸುಮಾರು ಒಂದು ತಾಸು ಈ ಸಂವಾದ ನಡೆಯಿತು. ಸ್ವತಃ ಮುಖ್ಯಮಂತ್ರಿಿಗಳೇ ನಮ್ಮ ತೊಂದರೆಗಳನ್ನು ಕೇಳಲು ಬಂದಿದ್ದಾಾರೆ ಎಂಬ ಸಮಾಧಾನ ಜನರ ಮುಖದಲ್ಲಿ ಕಾಣುತ್ತಿಿತ್ತು. ಭರವಸೆಯ ಆಸೆಯೂ ಅವರಲ್ಲಿ ಮೂಡಿತ್ತು.

ಸಂತ್ರಸ್ತರ ಬದುಕಿನ ಬಂಡಿ ಮತ್ತೆೆ ಓಡಲು ಸಂತನ ಪ್ರೇರಣೆ ಮತ್ತು ಪ್ರಬಲ ರಾಜಕೀಯ ಇಚ್ಛಾಾಶಕ್ತಿಿ ಎರಡೂ ಅವಶ್ಯ ಅಲ್ಲವೇ? ಕಡಲು ನಿನ್ನದೇ, ಅಲೆಯೂ ನಿನ್ನದೇ ಎಂಬ ಕವನ ಮತ್ತೆೆ ಮತ್ತೆೆ ಸ್ಮತಿ ಪಟಲದಲ್ಲಿ ಮಾರ್ದನಿಸುತ್ತದೆ. ಪ್ರವಾಹದ ತೀವ್ರತೆಯಿಂದಾಗಿ 17 ಜಿಲ್ಲೆೆಗಳ ಜನಸಾಮಾನ್ಯರ ಜೀವನ ಅಯೋಮಯವಾಗಿದೆ. ಈ ವಿಷಮ ಸ್ಥಿಿತಿಯಲ್ಲಿ ಸಂತ್ರಸ್ತರಿಗೆ ಬೇಕಿರುವುದು ಆಡಳಿತದ ಅಸೀಮ ಆಸರೆ ಮತ್ತು ಮನುಷ್ಯತ್ವದ ಮಹಾಧಾರೆ! ಅವೆರಡೂ ಸಂಗಮಿಸಿದ ಅಪೂರ್ವ ಪ್ರಸಂಗ ಅದಾಗಿತ್ತು.

Leave a Reply

Your email address will not be published. Required fields are marked *