Wednesday, 30th September 2020

ಕಾಂಗ್ರೆಸ್ ಪ್ರತಿಭಟನೆ ಮರ್ಮ ಜನತೆಗೆ ತಿಳಿದಿದೆ: ಬಿ.ಸೋಮಶೇಖರ

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿರುವ ಮರ್ಮವೇನೆಂದು ರಾಜ್ಯದ ಜನತೆಗೆ ತಿಳಿದಿದೆ ಎಂದು ಮಾಜಿ ಸಚಿವ ಬಿ. ಸೋಮಶೇಖರ ಅವರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ರಾಜಕೀಯ ಮಾಡುತ್ತಿಿದ್ದಾಾರೆಂದು ಸುಳ್ಳು ಆರೋಪ ಮಾಡುತ್ತಿಿರುವ ಕಾಂಗ್ರೆೆಸ್‌ನವರದ್ದು, ಕೋತಿ ಮೊಸರನ್ನ ತಿಂದು ಮೇಕೆ ಬಾಯಿಗೆ ಒರೆಸಿದ ಎಂಬ ಗಾದೆಮಾತಿಗೆ ಸಮ. ಕೇಂದ್ರೀಯ ತನಿಖಾ ಸಂಸ್ಥೆೆಗಳು ಶಾಸನಬದ್ಧವಾಗಿದ್ದು, ಇದರಿಂದ ತಪ್ಪುು ಮಾಡಿದವರು ತಪ್ಪಿಿಸಿಕೊಳ್ಳಲು ಸಾಧ್ಯವಿಲ್ಲ. ಐಟಿ ಮತ್ತು ಇಡಿ ಸಂಸ್ಥೆೆ ನೀತಿ ನಿಯಮಗಳಿಗೆ ಅನುಗುಣವಾಗಿ ಎಲ್ಲಿಯೂ ದಾರಿತಪ್ಪದೆ ಕಾನೂನು ಬದ್ಧವಾಗಿ ತನಿಖೆ ನಡೆಸುತ್ತಿಿದೆ. ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ವಶಕ್ಕೆೆ ಕೊಡಲಾಗಿದೆ. ಸಂಪೂರ್ಣ ಪ್ರಕ್ರಿಿಯೆ ಪ್ರಜಾಸತ್ತಾಾತ್ಮಕವಾಗಿ ಪಾರದರ್ಶಕವಾಗಿ ಕೇಂದ್ರ ಸರಕಾರ ತನಗೆ ವಹಿಸಿರುವ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿಿದೆ.

ಇದರಲ್ಲಿ ರಾಜಕೀಯ ಗಂಧ ಗಾಳಿಯೂ ಇಲ್ಲ. ಸೇಡಿನ ರಾಜಕೀಯದ ಆರೋಪಗಳನ್ನು ಬಿಜೆಪಿ ಮತ್ತು ಕೇಂದ್ರ ಸರಕಾರದ ವಿರುದ್ಧ ಮಾಡಿ ಶಿವಕುಮಾರ್ ಅವರನ್ನು ರಕ್ಷಿಿಸಿಕೊಳ್ಳಬಹುದು. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವರ್ಚಸ್ಸನ್ನು ಕೆಡಿಸಬಹುದು ಎಂದು ರಾಜಕೀಯದ ಆಟವಾಡುತ್ತಿಿರುವುದು ಕಾಂಗ್ರೆೆಸ್. ಇದರಿಂದ ಅವರಿಗೆ ನಷ್ಟವೇ ಹೆಚ್ಚು. ಏಕೆಂದರೆ ಜನರಿಗೆ ಯಾವುದು ಅನ್ಯಾಾಯ, ನ್ಯಾಾಯ ಎಂಬುದರ ಬಗ್ಗೆೆ ಅರಿವು ಚೆನ್ನಾಾಗಿದೆ. ತಮ್ಮ ಬೆಂಬಲಿಗರನ್ನು ಪಕ್ಷದ ಕಾರ್ಯಕರ್ತರನ್ನು ಎತ್ತಿಿಕಟ್ಟಿಿ ಹಿಂಸಾತ್ಮಕ ಪ್ರತಿಭಟನೆ ಮಾಡಿಸುತ್ತಿಿದ್ದಾಾರೆ. ಸಾರ್ವಜನಿಕ ಶಾಂತಿಗೆ ಭಂಗ ತರುವ ಕೆಲಸ ಮಾಡುತ್ತಿಿದ್ದಾಾರೆ. ಕಾಂಗ್ರೆೆಸ್ ಮುಖಂಡರಿಗೆ ಸಂವಿಧಾನ ಮತ್ತು ಸ್ವಾಾರ್ಥ ರಾಜಕೀಯಕ್ಕಾಾಗಿ ಜೆಡಿಎಸ್ ಮುಖಂಡರು ಶಿವಕುಮಾರ್ ಮತ್ತು ಕಾಂಗ್ರೆೆಸ್ ಜತೆ ಸೇರಿ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿಿದೆ ಎಂದು ದೂರಿದ್ದಾಾರೆ.

ಕಾಂಗ್ರೆೆಸ್ ಮುಖಂಡರಿಗೆ ಸಂವಿಧಾನ ಮತ್ತು ಕಾನೂನು ಬದ್ಧ ಆಡಳಿತ, ಕಾನೂನಿನ ಪರಿಪಾಲನೆ ವಿಷಯಗಳಲ್ಲಿ ಗೌರವ ಮತ್ತು ವಿಶ್ವಾಾಸವಿದ್ದರೆ ಪಕ್ಷದಲ್ಲಿ ಅವರು ಸುಳ್ಳು ಆರೋಪಗಳನ್ನು ಮಾಡುವುದನ್ನು ಬಿಟ್ಟು ತನಿಖಾ ಸಂಸ್ಥೆೆಗಳು ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳಲು ಅಡ್ಡಿಿಪಡಿಸಬಾರದು. ಮೌಲ್ಯಗಳು ಮತ್ತು ಕಾನೂನಿಗೆ ಧಕ್ಕೆೆ ತರಬಾರದು. ಕಾಂಗ್ರೆೆಸ್ ಮುಖಂಡರು ನಡೆಸುತ್ತಿಿರುವ ಪ್ರತಿಭಟನೆಯನ್ನು ಜನತೆಯ ದನಿಯಾಗಿ ಬಲವಾಗಿ ಖಂಡಿಸುತ್ತೇನೆ ಎಂದು ಕಿಡಿಕಾರಿದ್ದಾಾರೆ.

Leave a Reply

Your email address will not be published. Required fields are marked *