Wednesday, 5th August 2020

ಕಾಮೇಗೌಡರ ಸಾಧನೆ ಅನಂತ, ಅವಿಸ್ಮರಣೀಯ ಮತ್ತು ವಿಶೇಷ: ಜಿಲ್ಲಾಧಿಕಾರಿ

ಮಂಡ್ಯ

ಮಂಡ್ಯ ಜಿಲ್ಲೆಗೆ ಸುವರ್ಣಾಕ್ಷರಗಳಲ್ಲಿ ಬರೆದಿರುವಂತ ಸಾಧನೆಯನ್ನು ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿಯ ಕಾಮೇಗೌಡ ಅವರು ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮಳವಳ್ಳಿಯ, ಕೆರೆ ಕಾಮೇಗೌಡರಿಗೆ ಜಿಲ್ಲಾಡಳಿತ ವತಿಯಿಂದ ಅಭಿನಂದನಾ ಸಮಾರಂಭದಲ್ಲಿ ಅರಣ್ಯ ಸಂರಕ್ಷಣಾ ಹಾಗೂ ವನ್ಯಜೀವಿಗಳ ಸಂರಕ್ಷಣೆ ಕಾರ್ಯ ಮುಂದುವರಿಸುವಂತೆ ಅರಣ್ಯ ಇಲಾಖೆಯಿಂದ ಪ್ರಸಂಶಾ ಪ್ರಮಾಣ ಪತ್ರ ನೀಡಿ ಸನ್ಮಾನಿಸಿ ಮಾತನಾಡಿದ ಅವರು 73ವರ್ಷದ ವಯಸ್ಸಿನ ಕಾಮೇಗೌಡರು ಸ್ವಂತ ದುಡಿಮೆಯಿಂದ ಬಂದ ಹಣದಲ್ಲಿ ಸಮಾಜದ ಪರವಾಗಿ ಪ್ರಕೃತಿ ಸಂರಕ್ಷಣೆ ಮಾಡಿದ್ದಾರೆ.ಹಲವಾರು ವರ್ಷಗಳಿಂದ ಕುಂದುರು ಬೆಟ್ಟದಲ್ಲಿ 16 ಕೆರೆ ನಿರ್ಮಾಣ ಮಾಡಿ, ಜಲ ಮೂಲಗಳನ್ನ ಪುನರುಚೇತನ ಮಾಡಿದ್ದಾರೆ.

ಇವರ ಸಾಧನೆ ಅನಂತ, ಅವಿಸ್ಮರಣೀಯ ಮತ್ತು ವಿಶೇಷವಾಗಿದೆ. ಲೋಕದ ಉದ್ಧಾರಕ್ಕಾಗಿ, ಸಮಾಜದ ಉದ್ಧಾರಕ್ಕಾಗಿ, ಯಾರು ಕೆರೆಗಳನ್ನು ಬಾವಿಗಳನ್ನು ನಿರ್ಮಿಸಿ, ಅವುಗಳನ್ನು ಪುನಶ್ಚಿಕರಣಗೊಳಿಸುತ್ತಾರೋ ಆ ವ್ಯಕ್ತಿಯೇ ಅತ್ಯುತ್ತಮರು ಎಂದು ಹಂಪಿಯ ಶಾಸನದಲ್ಲಿ ಹೇಳಿರುವಂತೆ ಪ್ರಸ್ತುತ ಕಾಮೇಗೌಡರು ಆ ಸಾಲಿನಲ್ಲಿ ನಿಂತು ಮಾದರಿಯಾಗಿದ್ದಾರೆ ಎಂದರು.

ಇವರಿಗೆ ಬಂದ ಹಲವಾರು ಪ್ರಶಸ್ತಿಗಳ ಹಣದಲ್ಲಿ ಕೆರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.ಬ್ರಾಡ್ ಕಾಸ್ಟಿಂಗ್ ಡಿಪಾಟ್ಮೆರ್ಂಟ್ ಗೆ ವಿಶೇಷ ವರದಿ ಕಳಿಸಿಕೊಟ್ಟಿದ್ದೆ.ಇ ವರು ದೇಶಕ್ಕೆ ಮಾದರಿಯಾಗುವ ವ್ಯಕ್ತಿ ಎಂದು ಪ್ರಧಾನಮಂತ್ರಿ ಯವರ ಮನ್ ಕೀ ಬಾತ್ ನಲ್ಲಿ ಶ್ಲಾಘಿಸಿದರು ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಫೋನಿನ ಮೂಲಕ ಮಾತನಾಡಿದ್ದಾರೆ ಎಂದು ತಿಳಿಸಿ, ಜಿಲ್ಲಾಡಳಿತವು ಕೆರೆಗಳ ಅಭಿವೃದ್ಧಿಗೆ 50 ಲಕ್ಷ ಬಿಡುಗಡೆ ಮಾಡಿ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದೆ, ಜೊತೆಗೆ ಮನೆ ನಿರ್ಮಾಣಕ್ಕೆ 10 ಲಕ್ಷ ಅನುದಾನಕ್ಕೆ ಮನವಿ ಮಾಡಿ 1 ಲಕ್ಷ ಅನುಗ್ರಹ ನೀಡಲು ಕೊರಿಕೆ ನೀಡಿದೆ.

ಜಿಲ್ಲಾಡಳಿತ ದಿಂದ ಕೆ.ಎಸ್.ಅರ್.ಟಿ.ಸಿ ಉಚಿತ ಪಾಸ್, ಮಾಸಿಕ 4 ಸಾವಿರ ವೇತನ ಪಿಂಚಣಿ ವ್ಯವಸ್ಥೆಯನ್ನು ಮಾಡಿದೆ ಹಾಗೂ ಪದ್ಮಶ್ರೀ ಪ್ರಶಸ್ತಿಗೆ ಮುಖ್ಯಮಂತ್ರಿಗಳಿಗೆ ಕೋರಿಕೆಯನ್ನು ಸಲ್ಲಿಸಿದೆ ಎಂದು ತಿಳಿಸಿದರು.

ಅಭಿನಂದನಾ ಕಾರ್ಯಕ್ರಮದಲ್ಲಿ ತೋಟಗಾರಿಕೆ ಉಪನಿರ್ದೇಕರಾದ ರಾಜು, ಜಿಲ್ಲಾ ವಾರ್ತಾಧಿಕಾರಿಗಳಾದ ಟಿ.ಕೆ.ಹರೀಶ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *