Sunday, 31st May 2020

ಕಾರ್ತಿಕ ಮಾಸದ ಆಚರಣೆ ಗೌರಿ ಹುಣ್ಣಿಮೆ

* ಪ್ರಹ್ಲಾದ್ ವಾ ಪತ್ತಾರ

 ಸಕ್ಕರೆ ಗೊಂಬೆಗಳಿಂದ ಆರತಿ ಬೆಳಗುವುದು ಗೌರಿ ಹುಣ್ಣಿಮೆಯ ವಿಶೇಷ. ಕಾರ್ತಿಕ ಮಾಸದ ಹದಿನೈದು ದಿನ ಪೂಜಿಸಿ, ಹುಣ್ಣಿಮೆಯ ದಿನ ಸಂಪನ್ನಗೊಳಿಸುವ ಗೌರಿ ಹುಣ್ಣಿಮೆ ಹಬ್ಬವು ಉತ್ತರ ಕರ್ನಾಟಕದ ರೈತಾಪಿ ಜನರ ಪ್ರಮುಖ ಹಬ್ಬ.

ಗೌರಿ ಗೌರಿ, ಗಾಣ ಗೌರಿ, ಕುಸುಬಿ ಗೌರಿ, ಅವರಿ ಅಂತ ಅಣ್ಣಗೊಳು, ತವರಿ ಅಂತ ತಮ್ಮಗೊಳು, ಹೊನ್ನಾಾದ ಹೊಸಕಪ್ಪ ಬಾಳ ಬೆಳದಿಂಗಳ ಗೌವರಮ್ಮ …ಎಂಬ ಜಾನಪದ ಹಾಡಿನ ಮೂಲಕ ಗೌರಿ ಹುಣ್ಣಿಿಮೆ ಸೊಗಸಾಗಿ ಆಚರಣೆ ಮಾಡುವ ಸಂಪ್ರದಾಯ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಾಣುತ್ತೇವೆ. ಕಾರ್ತಿಕ ಮಾಸದ ಗೌರಿ ಹುಣ್ಣಿಿಮೆ ಹಳ್ಳಿಿಯ ರೈತಾಪಿ ಮಹಿಳೆಯರ ವಿಶಿಷ್ಠ ಆಚರಣೆ. ಸೀಗಿ ಹುಣ್ಣಿಿಮೆ ಮುಗಿದ ಮೇಲೆ ಗೌರಮ್ಮನನ್ನು ಮನೆಯಲ್ಲಿ ಕುಡಿಸುವದು ವಾಡಿಕೆ. ಮನೆಯಲ್ಲಿ ಇರುವ ಹೆಣ್ಣುಮಕ್ಕಳು ನಿತ್ಯವು ಗೌರಮ್ಮಗೆ ಆರತಿ ಎತ್ತಿಿ ಜಾನಪದ ಹಾಡುಗಳು ಹೇಳುವ ಪರಿ ಕಂಡರೆ ಅದೇನೊ ಸಂತಸ ಸಂಭ್ರಮ.
ಸಂಭ್ರಮ – ಸಂಪದಾಯದ ಆಚರಣೆ

ಹಳ್ಳಿಿಯ ಮನೆಗಳಲ್ಲಿ ಪಡಸಾಲೆ ಇದ್ದು ಆ ಪಡಸಾಲೆಯಲ್ಲಿ ಗಣಪತಿಮಾಡ (ಗೊಡೆಯಲ್ಲಿ ರಚಿಸಿರುವ ಚಿಕ್ಕ ಕಪಾಟು) ಎಂದು ಮಾಡಿರುತ್ತಾಾರೆ. ಈ ಮಾಡಿನಲ್ಲಿ ಗಣಪತಿ, ಸೀಗಮ್ಮ, ಗೌರಮ್ಮನ ಮೂರ್ತಿಗಳು ಕೂಡಿಸುವದು ವಾಡಿಕೆ. ಗೌರಿ ಹುಣ್ಣಿಿಮೆಯಲ್ಲಿ ಮಣ್ಣು, ಮರದಿಂದ ತಯಾರಿಸಿದ ಗೌರಮ್ಮನನ್ನು ಕುಡಿಸುತ್ತಾಾರೆ. ಪ್ರತಿ ದಿನವು ಸಂಜೆಯ ಇಳಿ ಹೊತ್ತಿಿನಲ್ಲಿ ಅವರಿ ಹೂ, ಚಂಡು ಹೂ, ಸೂರ್ಯಕಾಂತಿ ಹೂಗಳಿಂದ ಮೂರ್ತಿಯನ್ನು ಅಲಂಕರಿಸುತ್ತಾಾರೆ. ಮೂರ್ತಿಯ ಬಹುತೇಕ ಭಾಗ ಶಿವನದಾಗಿದ್ದು ತೊಡೆಯ ಮೇಲೆ ಗೌರಿ ಕುಳಿತಿರುತ್ತಾಾಳೆ. ಗೌರಮ್ಮನ ನೆನೆಯುವ ಅವಳ ಸಂಕಷ್ಟ ಕುರಿತಾದ ಜಾನಪದ ಹಾಡುಗಳು ಹೇಳುತ್ತಾಾರೆ. ಕೊನೆಗೆ ಮಂಗಳಾರತಿ ಮಾಡಲಾಗುತ್ತದೆ. ನಿತ್ಯವೂ ಒಂದೊಂದು ಬಗೆಯ ಪ್ರಸಾದ ಮಾಡಲಾಗುತ್ತದೆ. ಗೋಧಿಹಿಟ್ಟಿಿನ ಕಣಕದಲ್ಲಿ ತಯಾರಿಸಿದ ಕಣಕದಾರತಿ ವಿಶೇಷವಾಗಿ ಮಾಡುತ್ತಾಾರೆ.

ಹುಣ್ಣಿಮೆ ದಿನ ಗೌರಿ ಕಳುಹಿಸುವದು
ಕಾರ್ತಿಕ ಮಾಸದಲ್ಲಿ ಹದಿನೈದು ಕಾಲ ಗೌರಿಯನ್ನು ಶೃದ್ಧೆೆ ಭಕ್ತಿಿಯಿಂದ ಪೂಜೆ ಮಾಡಿದ ಬಳಿಕ ವಿಶೇಷ ಅಲಂಕಾರ , ಕಣಕದ ಆರತಿ ಮಾಡಿ ಓಣಿಯ ಜನರಿಗೆಲ್ಲ ಆಹ್ವಾಾನ ನೀಡಲಾಗುವದು. ಗೌರಮ್ಮನ ಹಾಡು ಹೇಳುವ ವಿಶೇಷ ಅಜ್ಜಿಿಯರಿಗೆ ಮನೆಗೆ ಆಹ್ವಾಾನ ನೀಡಲಾಗುವದು. ಸುಮಾರು ಎರಡು ಮೂರು ತಾಸುಗಳ ಕಾಲ ಗೌರಿಯ ಕುರಿತಾಗಿ ಹಾಡುಗಳು ಹೇಳಲಾಗುವದು. ಕೊನೆಗೆ ಗೌರಿ ಕಳುಹಿಸುವ ಹಾಡು ಹೇಳುತ್ತಾಾರೆ. ಮನೆತನದ ಎಲ್ಲ ಮಕ್ಕಳನ್ನು ಈ ಹಾಡಿನ ಮೂಲಕ ಹಾಡಿ ಹೊಗಳಲಾಗುವದು. ಗೌರಿ ಈ ಕುಟುಂಬಕ್ಕೆೆ ಸುಖಃ ಶಾಂತಿ ನೆಮ್ಮದಿ ನೀಡಲಿ, ಮಳೆ ಬೆಳೆ ಬಂದು ದವಸಧಾನ್ಯ ಮನೆತುಂಬ ತುಂಬಲಿ ಎನ್ನುವ ಆಶಯ ಈ ಹಾಡುಗಳಲ್ಲಿ ಇರುತ್ತದೆ. ಇದರಿಂದಾಗಿ ಇದು ಕೃಷಿಕರ ಹಬ್ಬ ಎಂದೆನ್ನಬಹುದು. ಕೆಲವು ಕಡೆ ಗೌರಿಯನ್ನು ಕೊನೆಗೆ ಎತ್ತಿಿಕೊಂಡು ತಲಬಾಗಿಲ ಮೂಲಕ ಹೊರತರಲಾಗುವದು. ಓಣಿಯ ಎಲ್ಲ ಮನೆಗಳ ಗೌರಿಗಳನ್ನು ತಂದು ಗೌರಿ ಕಳುಹಿಸುವ ಹಾಡು ಸಾಮೂಹಿಕವಾಗಿ ಹೇಳುತ್ತಾಾರೆ.

ಸಕ್ಕರೆ ಗೊಂಬೆಗಳ ಸಂಭ್ರಮ

ಉತ್ತರ ಕರ್ನಾಟಕದ ಗದಗ, ಕೊಪ್ಪಳ, ಬಾಗಲಕೋಟೆಯ ಜಿಲ್ಲೆಯಾದ್ಯಂತ ಗೌರಿ ಆಚರಣೆಯಲ್ಲಿ ಸಕ್ಕರೆ ಗೊಂಬೆಗಳಿಂದ ಆರತಿ ಬೆಳಗುವರು. ಇದು ಈ ಹುಣ್ಣಿಿಮೆಯ ವಿಶೇಷ. ಗೌರಿ ಹುಣ್ಣಿಿಮೆಯ ರಾತ್ರಿಿಯಂದು ಊರಿನ ಓಣಿಯಲ್ಲಿ ಗೌರಿಮೂರ್ತಿಯನ್ನು ಪ್ರತಿಷ್ಠಾಾಪಿಸುತ್ತಾಾರೆ. ಹೊಸ ಸೀರೆ, ಉಡುಪು ಧರಿಸಿದ ಹೆಣ್ಣುಮಕ್ಕಳು ಗೌರಮ್ಮನ ಮೂರ್ತಿಗೆ ಸಕ್ಕರೆ ಆರತಿ ಬೆಳಗುತ್ತಾಾರೆ. ಎಲ್ಲಾ ವಯೋಮಾನದ ಹೆಣ್ಣುಮಕ್ಕಳು ಸೇರಿರುತ್ತಾಾರೆ. ಒಂದು ತಟ್ಟೆೆಯಲ್ಲಿ ಸಕ್ಕರೆ ಬೊಂಬೆಗಳು ಇಟ್ಟುಕೊಂಡು ದೀಪ ಹಚ್ಚಿಿ ಗೌರಮ್ಮ ಮೂರ್ತಿಗೆ ಆರತಿ ಮಾಡುವರು. ನಂತರ ಕೇರಿಯ ನೆರೆ ಹೊರೆಯವರ ಮನೆಗೆ ಹೋಗಿ ಅಲ್ಲಿಯ ಗೌರಿಗೆ ಆರತಿ ಬೆಳಗಿ ಸಕ್ಕರೆ ಗೊಂಬೆ ಇಡುವ ವಾಡಿಕೆ ಇದೆ.

ಸಕ್ಕರೆ ಬೊಂಬೆಗಳನ್ನು ಕೆಲವರು ಮನೆಯಲ್ಲಿಯೇ ತಯಾರು ಮಾಡುವ ಪರಿಪಾಠ. ಆದರೆ ಈಚೆಗೆ, ಹಲವರು ಅಗಂಡಿಗಳಲ್ಲಿ, ಸಕ್ಕರೆ ಬೊಂಬೆ ತಯಾರಿಕರಿಂದ ಕೊಂಡುಕೊಳ್ಳುತ್ತಾಾರೆ. ಗೌರಿ ಹುಣ್ಣಿಿಮೆಗೆ ಸಕ್ಕರೆ ಬೊಂಬೆ ವಂಶಪಾರಂಪರ್ಯವಾಗಿ ತಯಾರುಮಾಡುವ ಹತ್ತಾಾರು ಕುಟುಂಬಗಳೂ ಈ ಭಾಗದಲ್ಲಿವೆ. ಅಚ್ಚು ಹಾಕಿ ಸಿದ್ಧಪಡಿಸಿದ ಒಂದೊಂದು ಗೊಂಬೆಯು ಒಂದೊಂದು ದೇವತೆಯನ್ನು, ಅವರ ಹಿಂದಿನ ಕತೆಯನ್ನು ಸಂಕೇತಿಸುತ್ತವೆ. ಪಾರ್ವತಿ, ಒಂಟೆ, ಆನೆ, ರಥ, ಅರ್ಜುನನ ಬಿಲ್ಲು, ಮಂಟಪ, ಆಂಜನೇಯ, ಬಸವಣ್ಣ, ರಥ ಹೀಗೆ ವಿವಿಧ ರೀತಿಯ ಪಶುಪಕ್ಷಿಗಳು ವಿವಿಧ ಬಣ್ಣಗಳಲ್ಲಿ ಸೃಷ್ಟಿಿಸುತ್ತಾಾರೆ.

ಮದುವೆ ನಿಶ್ಚಿಿತಾರ್ಥವಾದ ಹುಡುಗಿಗೆ ವರನ ಕಡೆಯವರು ಸಕ್ಕರೆ ಗೊಂಬೆ, ಮಲ್ಲಿಗೆ ಹೂವಿನ ದಂಡೆ, ಶಕ್ತಿಿ ಅನುಸಾರ ಸಕ್ಕರೆ , ಸೀರೆ ಕೊಟ್ಟು ಬರುವ ವಾಡಿಕೆಯಿದೆ. ಮಗಳು ಪರ ಊರಿನಲ್ಲಿ ಇದ್ದರೂ ಹೀಗೆ ಮಾಡಲಾಗುವದು. ಮಹಿಳೆಯರು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಸಕ್ಕರೆ ಗೊಂಬೆ ವಿತರಿಸಿ, ಹೆಣ್ಣು ಮಕ್ಕಳಿಗೆ ಆರತಿ ಬೆಳಗುವರು.

ಉತ್ತರ ಕರ್ನಾಟಕದ ಹಳ್ಳಿಿಗಳ ಸಂಪ್ರದಾಯಸ್ಥ ಕೃಷಿ ಕುಟುಂಬಗಳು ಇಂದಿಗೂ ಭಯ ಭಕ್ತಿಿ ಶೃದ್ಧಾಾಪೂರ್ವಕವಾಗಿ ಗೌರಿಹುಣ್ಣಿಿಮೆಯ ಶಿಷ್ಟಾಾಚಾರ ಪಾಲನೆ ಮಾಡಿಕೊಂಡು ಬರುತ್ತಿಿದ್ದಾರೆ. ಭಾಂಧವ್ಯ ವೃದ್ಧಿಿ, ಸಾಮರಸ್ಯದ ಬೆಸುಗೆಯ ಸಂಕೇತವಾಗಿದ್ದ ಈ ಆಚರಣೆಯನ್ನು ನಗರದ ಆಧುನಿಕ ಮಹಿಳೆಯರು ಮಾಡುವದು ಅಪರೂಪವಾಗಿದೆ. ಟಿವಿಗಳ ಭರಾಟೆಯಲ್ಲಿ ಎಲ್ಲವೂ ಕಮರಿಹೋಗುತ್ತಿಿದೆ.ಗೌರಿ ಹುಣ್ಣಿಿಮೆಯ ಅವಿಭಾಜ್ಯ ಎನಿಸಿರುವ ಗೌರಮ್ಮನ ಹಾಡು ಕಲಿತು ಹೇಳಲು ಈಗಿನ ತಲೆಮಾರಿನವರು ಹಿಂಜರಿಯುವಂತೆ ಕಾಣುತ್ತಿಿದೆ. ಸಂಪ್ರದಾಯಿಕ ಗ್ರಾಾಮೀಣ ಸೊಗಡಿನ ಅಪ್ಪಟ ಜಾನಪದ ಶೈಲಿಯ ಗೌರಿಹುಣ್ಣಿಿಮೆಯು ಆಧುನಿಕತೆ ಕಾಲದಲ್ಲೂ, ತನ್ನ ಮೂಲರೂಪವನ್ನು ತುಸು ಬದಲಿಸಿಕೊಂಡು ಆಚರಣೆಯಲ್ಲಿ ಉಳಿದಿದೆ.

ಕಾರ್ತಿಕ ಮಾಸದ ವಿಶೇಷವೇ ಗೌರಿ ಹುಣ್ಣಿಿಮೆ. ಕೆಲವು ಕುಟುಂಬಗಳು ದೀಪಾವಳಿಯನ್ನು ಗೌರಿ ಹುಣ್ಣಿಿಮೆಯ ದಿನ ಆಚರಿಸುವ ಸಂಪ್ರದಾಯವೂ ಇದೆ. ಕೃಷಿ ಸಂಪ್ರದಾಯ ಕುಟುಂಬಗಳು, ತಮ್ಮ ಬೆಳೆ ಹೆಚ್ಚಲಿ ಮತ್ತು ಬಂಧು ಬಾಂಧವರ ನಡುವೆ ಸ್ನೇಹ ಹೆಚ್ಚಲಿ ಎಂದು ಹದಿನೈದು ಆಚರಿಸುವ ಗೌರಿ ಹುಣ್ಣಿಿವೆ ನಿಜಕ್ಕೂ ಅರ್ಥಪೂರ್ಣ.

Leave a Reply

Your email address will not be published. Required fields are marked *