Tuesday, 7th July 2020

ಗಣೇಶ ಹೋದ ಜೋಕುಮಾರ ಬಂದ

* ಪ್ರಶಾಂತ ಜಿ ಹೂಗಾರ ಶಿರೂರ

ಗ್ರಾಮೀಣ ಜನಪದ ಹಬ್ಬಗಳಲ್ಲೊಂದಾದ ಜೋಕುಮಾರನ ಹಬ್ಬವು ಒಂದು ಉತ್ತರಕರ್ನಾಟಕದಲ್ಲಿ ಈ ಜನಪದೀಯ ಹಬ್ಬ. ಊರಿನಲ್ಲಿ ಒಳ್ಳೆೆಯ ಮಳೆ, ಬೆಳೆಯಾದ ನಂತರ, ತುಂಬಾ ಸುತ್ತುವ ಜೋಕುಮಾರನು, ಒಂದು ರೀತಿಯಲ್ಲಿ ಸಮೃದ್ಧತೆಯ ಹಬ್ಬ. ಸಮಾಜದಲ್ಲಿ ಕಾಣಿಸುವ ದುಗುಡ ದುಮ್ಮಾಾನಗಳನ್ನು ದೂರ ಮಾಡುವಂತಹ ದೇವತೆಗಳಿಗೆ ಸಂಬಂಧಿಸಿದ ಹಬ್ಬಗಳಲ್ಲಿ ಇದೂ ಒಂದು. ಜೋಕುಮಾರನನ್ನು ಶ್ರದ್ಧಾಾಭಕ್ತಿಿಯಿಂದ ಪೂಜಿಸಿದರೆ, ಮಳೆ, ಬೆಳೆ ಚೆನ್ನಾಾಗಿ ಆಗುತ್ತದೆ ಎಂಬ ನಂಬಿಕೆ ಇದೆ.

ಕೃಷಿ ಪರಂಪರೆಯಲ್ಲಿ ಇನ್ನೊೊಂದು ನಂಬಿಕೆ ಇದೆ. ಗಣೇಶ ಶಿಷ್ಟ ಸಂಸ್ಕೃತಿಯ ವಾರಸುದಾರನಾದರೆ, ಜೋಕುಮಾರಸ್ವಾಾಮಿ ಜಾನಪದ ಸಂಸ್ಕೃತಿಯ ಪ್ರತೀಕ. ಒಂದು ವಾರದ ಕಾಲ, ಕಾಯಿ ಕಡುಬಿನ ಸಿಹಿ ಸವಿದ ಗಣೇಶ, ಎಲ್ಲವೂ ಚೆನ್ನಾಾಗಿದೆ ಎಂದು ತನ್ನ ತಂದೆ-ತಾಯಿಯರಾದ ಶಿವ-ಪಾರ್ವತಿಗೆ ವರದಿ ಒಪ್ಪಿಿಸಿದರೆ, ಜೋಕುಮಾರನ ವರದಿ ವಿಬಿನ್ನ! ಜಾನಪದೀಯ ಮತ್ತು ರೈತ ಸಂಸ್ಕೃತಿಯ ವಾರಸುದಾರನಾದ ಜೋಕುಮಾರ ಸ್ವಾಾಮಿಯು ‘ಭೂಲೋಕದಲ್ಲಿ ಸರಿಯಾದ ಪ್ರಮಾಣದ ಮಳೆ ಇಲ್ಲದೆ, ರೈತ ಸಮುದಾಯ ಸಂಕಷ್ಟದಲ್ಲಿದೆ.

ಪ್ರಾಾಣಿ-ಪಕ್ಷಿಗಳು ಪರಿತಪಿಸುತ್ತಿಿವೆ. ಕೆರೆ ಬಾವಿಗಳಲ್ಲಿ ನೀರಿಲ್ಲದೇ, ಕುಡಿಯುವ ನೀರಿಗೇ ತತ್ವಾಾರವಾಗಿದೆ. ಕಾಲದಿಂದ ಕಾಲಕ್ಕೆೆ ಸುರಿಯುವ ಮಳೆ ಈಗ ಸುರಿಯದೇ ಹೋದರೆ ಭೂಲೋಕ ನರಕವಾಗುತ್ತದೆ’ ಎಂದು ಜನರ ಕಷ್ಟಕಾರ್ಪಣ್ಯಗಳ ವರದಿ ಒಪ್ಪಿಿಸಿ ಮಳೆಗಾಗಿ ಎಂಬ ನಂಬಿಕೆ ಇದೆ. ಜೋಕುಮಾರನು ತನ್ನ ತಂದೆ ತಾಯಂದಿರಿಗೆ ಮಳೆಯ ಕುರಿತು ವರದಿ ಒಪ್ಪಿಿಸಿದ ನಂತರವಷ್ಟೇ, ಉತ್ತಮ ಮಳೆಯಾಗುತ್ತದೆ ಎಂಬ ಈ ನಂಬಿಕೆಯು, ಕೃಷಿಕರ, ರೈತರ, ಕಷ್ಟ ಜೀವಿಗಳ ಮನೋಗತ. ಸಿಹಿ ತಿನಿಸನ್ನು ತಿಂದು, ಒಳ್ಳೆೆಯ ಮೆರವಣಿಗೆ ಮಾಡಿಸಿಕೊಂಡು, ಕೆರೆಯಲ್ಲಿ ಮುಳುಗುವ ಗಣಪನ ಸುಖಲೋಲುಪತೆಗೆ ಪ್ರತಿಸ್ಪರ್ಧಿಯಾಗಿ ಜೋಕುಮಾರನ ಕಲ್ಪನೆ ಹುಟ್ಟಿಿತು ಎಂದೂ ಹೇಳಲಾಗಿದೆ.

ಗಣೇಶ ಮೂರ್ತಿ ವಿಸರ್ಜನೆಯಾದ ಮರುದಿನವೆ , ಭಾದ್ರಪದ ಮಾಸದ ಅಷ್ಟಮಿಯ ದಿನ ಈ ಜೋಕುಮಾರ ಊರಿನ ಕುಂಬಾರನ ಮನೆಯಲ್ಲಿ ಹುಟ್ಟುತ್ತಾಾನೆ. ಆವೆ ಮಣ್ಣಿಿನಿಂದ ಜೋಕುಮಾರನ ಮೂರ್ತಿಯನ್ನು ತಯಾರಿಸುತ್ತಾಾರೆ. ನಂತರ ಜೋಕುಮಾರ ಸ್ವಾಾಮಿಯು ಅಂಬಿಗರ ಮನೆಯಲ್ಲಿ ಬೆಳೆಯುತ್ತಾಾನೆ, ಅಂದರೆ ಅಂಬಿಗರ ಮನೆಯಲ್ಲಿ ಆತನ ವಾಸ. ಆಗ ಬೇವಿನ ಎಲೆ ಉಡುಗೆಯೊಂದಿಗೆ ಅಲಂಕಾರಮಾಡುತ್ತಾಾರೆ. ಬಾಯಿಗೆ ಬೆಣ್ಣೆೆ ವರೆಸಿ, ಕಪ್ಪುು ಕಾಡಿಗೆಯಿಂದ ಮುಖವನ್ನು ಅಲಂಕರಿಸುತ್ತಗಾರೆ.

ಪುಟ್ಟಿಿಯಲ್ಲಿ ಇಟ್ಟ ಬೇವಿನ ಸೊಪ್ಪಿಿನ ನಡುವೆ, ಜೋಕುಮಾರನ ಮೆರವಣಿಗೆ ಆರಂಭ. ಗಣಪತಿಯ ಮೆರವಣಿಗೆಯಂತಲ್ಲ, ಈ ತಿರುಗಾಟ. ಅಗಲವಾದ ಬಾಯಿ ತೆರೆದುಕೊಂಡಿರುವ ಜೋಕುಮಾರನ ಮಣ್ಣಿಿನ ಮಹಿಳೆಯರು, ‘ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರೆಗಳೆಲ್ಲ ತುಂಬಿ ಒಡ್ಡುಗಳೆಲ್ಲ ಒಡೆದಾವು….’ ಎಂದು ಹಾಡು ಹಾಡುತ್ತ ಅಲಂಕೃತಗೊಂಡ ಜೋಕುಮಾರಸ್ವಾಾಮಿಯನ್ನ ಹೊತ್ತು, ಊರಿನ ಗೌಡರರ ಮನೆಗೆ ಹೋಗಿ ಮೊದಲ ಪೂಜೆ ಮಾಡುವರು.

ನಂತರ ಅಲಂಕೃತ ಮೂರ್ತಿಯನ್ನ ನಾಲ್ಕೈದು ಜನ ಮಹಿಳೆಯರು ಬುಟ್ಟಿಿಯಲ್ಲಿಟ್ಟುಕೊಂಡು ಆತನಿಗೆ ಸಂಬಂಧಿಸಿದ ಹಾಡುಗಳನ್ನ ಹಾಡುತ್ತ ಊರು ತುಂಬ ಸಂಚರಿಸುತ್ತಾಾರೆ. 7 ದಿನಗಳ ಕಾಲ 7 ಊರುಗಳನ್ನು ಕಾಲ್ನಡಿಗೆಯಲ್ಲಿಯೆ ಸಂಚರಿಸಬೇಕೆಂಬುದು ಮತ್ತೊೊಂದು ನಂಬಿಕೆ. ಗಲ್ಲಿ ಗಲ್ಲಿಗೆ ತೆರಳಿದಾಗ ಬುಟ್ಟಿಿಯನ್ನಿಿಟ್ಟು ಎಲ್ಲರನ್ನು ಕರೆದು ಪೂಜೆ ಮಾಡಿ ಸುತ್ತಲೂ ಕುಂತು ಜೋಕುಮಾರನ ಹಾಡು ಹಾಡುತ್ತಾಾರೆ. ಭಕ್ತರು ಮೊರದಲ್ಲಿ ದವಸ, ಧಾನ್ಯ ಮತ್ತು ಕೈಲಾದಷ್ಟು ಹಣವನ್ನು ಕೊಡುತ್ತಾಾರೆ. ಕೊಟ್ಟ ಧಾನ್ಯಕ್ಕೆೆ ಪ್ರತಿಯಾಗಿ ಮಹಿಳೆಯರು ಕರಿಮಸಿ ಬೆರೆತ ಬೇವಿನ ಸೊಪ್ಪುು, ಜೋಳ, ನುಚ್ಚು, ಮೆಣಸಿನಕಾಯಿ, ಇತ್ಯಾಾದಿಗಳನ್ನು ಕೊಡುತ್ತಾಾರೆ. ಅದನ್ನು ಹೊಲದ ತುಂಬೆಲ್ಲಾ ಚಲ್ಲಿದರೆ ಉತ್ತಮ ಬೆಳೆ ಬರುವುದಾಗಿ ನಂಬಿಕೆಗ್ರಾಾಮೀಣರದು.

ಏಳು ದಿನಗಳ ಕಾಲ, ಏಳು ಊರುಗಳಲ್ಲಿ ಜೋಕುಮಾರನ ತಿರುಗಾಟದ ಆಚರಣೆ ಮುಕ್ತಾಾಯದ ನಂತರ, ದಲಿತರ ಕೈಗೆ ಸಿಗುತ್ತಾಾನೆ. ಅವರು ಜೋಕುಮಾರನನ್ನು ಹೊತ್ತುಕೊಂಡು ಊರಾಚೆಗೆ ಹೋಗಿ, ಕಲ್ಲಿನಿಂದ ಹೊಡೆದು ಅಥವಾ ಚೂರಿ ಹಾಕಿ ಜೋಕುಮಾರನನ್ನು ಸಾಯಿಸುತ್ತಾಾರೆ. ನಂತರ ಬಟ್ಟೆೆ ತೊಳೆಯುವ ಅಗಸನ ಕಲ್ಲು ಬಂಡೆಯ ಕೆಳಗೆ ಆತನ ಶವ ಹೂತು ಬರುತ್ತಾಾರೆ. ಇದನ್ನು ಕಂಡ ಅಗಸರು ಅವನ ಬಟ್ಟೆೆ ತೆಗೆದುಕೊಂಡು ಮೂರು ದಿನಗಳ ಕಾಲ ಕಾರ್ಯಮಾಡುತ್ತಾಾರೆ. ಅಂಬಿಗರು ಸಂಗ್ರಹಿಸಿದ ದವಸ ಧಾನ್ಯವನ್ನು ಅಡುಗೆ ಮಾಡಿ ಸಮೂಹಿಕವಾಗಿ ಪ್ರಸಾದ ರೂಪದಲ್ಲಿ ತಿನ್ನುತ್ತಾಾರೆ. ಉತ್ತಮ ಬೆಳೆ, ಮಳೆ ಸಮೃದ್ಧಿಿಯ ಆಶಯವನ್ನು ಹೊತ್ತ ಜೋಕುಮಾರನ ಆಚರಣೆಯು, ಬಹುಪಾಲು ತಳಸಮುದಾಯವು ನಾಡಿನ ಆಚರಣೆಗಳಿಗೆ ಸ್ಪಂದಿಸಿದ ಪರಿ ಎನ್ನಬಹುದು.

ಬುಟ್ಟಿಿಯಲ್ಲಿ ಮೆರವಣಿಗೆ
ಜೋಕುಮಾರನು ಒಬ್ಬ ದೇವತೆಯ ಮಗನೆಂದೂ, ಅಂದರೆ ಮಾರಿಯ ಮಗನೆಂದೂ, ಆತ ಅಲ್ಪಾಾಯುಷಿಯಾಗಿ ಏಳು ದಿನಗಳಲ್ಲಿ ಬೆಳೆದು, ಮೆರೆದು, ಪುಂಡಾಟಿಕೆಮಾಡಿ ತೀರಿ ಹೋದನೆಂದೂ ಹೇಳಲಾಗಿದ್ದು, ನಂತರ ಸ್ಥಳೀಯ ಜನರ ಜನಪದ ದೇವತೆಯಾಗಿದ್ದಾನೆ. ಅವನ ತಾಯಿಯು ದೇವತಾ ಸ್ತ್ರೀಯಾಗಿದ್ದರೂ, ಅವನನ್ನು ಕಾಪಾಡದೆ ಹೋದಳಂತೆ. ಉಳ್ಳವರು ಆಚರಿಸುವ ಗಣೇಶನ ವೈಭವೋಪೇತ ಮತ್ತು ತಿನಿಸು ಭರಿತ ಹಬ್ಬಕ್ಕೆೆ ಪ್ರತಿಯಾಗಿ, ಸಾಮಾನ್ಯ ಜನರು ಜೋಕುಮಾರನನ್ನು ಬುಟ್ಟಿಿಯಲ್ಲಿ ಕುಳ್ಳಿಿರಿಸಿ, ಊರೂರು ತಿರುಗಾಡಿಸುತ್ತಾಾ, ಮನೆ ಮನೆಯಲ್ಲಿ ಪ್ರದರ್ಶಿಸುವುದು ಅರ್ಥಪೂರ್ಣ ಮತ್ತು ಕುತೂಹಲಕಾರಿ.

ಜೋಕುಮಾರನ ಹಾಡು
‘ಅಡ್ಡಡ್ಡ ಮಳಿ ಬಂದ, ದೊಡ್ಡದೊಡ್ಡ ಕೆರಿ ತುಂಬಿ,
ಗೊಡ್ಡುಗಳೆಲ್ಲ ಹೈನಾಗಿ ಜೋಕುಮಾರ, ಜೋಕುಮಾರ,
ಮಡಿವಾಳರ ಕೇರಿ ಹೊಕ್ಕಾಾನೆ ಜೋಕುಮಾರ,
ಮುಡಿ ತುಂಬಾ ಹೂ ಮುಡಿದಂತ ಚಲುವಿ
ತನ್ನ ಮಡದಿಯಾಗೆಂದ ಸುಕುಮಾರ……..’
ಬುಟ್ಟಿಿಯಲ್ಲಿ ಜೋಕುಮಾರನ ಮಣ್ಣಿಿನ ವಿಗ್ರಹವನ್ನು ಕೂರಿಸಿ, ತಲೆಯ ಮೇಲೆ ಈ ರೀತಿಯ ಹಾಡು ಹೇಳುತ್ತಾಾ ಹೆಂಗೆಳೆಯರ ಗುಂಪು ಮನೆಯಿಂದ ಮನೆಗೆ ಸಾಗುತ್ತದೆ.

Leave a Reply

Your email address will not be published. Required fields are marked *