Monday, 20th January 2020

ಗುರುವರೇಣ್ಯರು ಸದ್ಬುದ್ಧಿ ನೀಡಲಿ!

ಆರ್ಥಿಕ ಮುಗ್ಗಟ್ಟು, ನೆರೆಹಾವಳಿ, ನಿರುದ್ಯೋೋಗ, ಬಡತನಗಳಿಂದ ಜನರು ಕಂಗೆಟ್ಟುಹೋಗಿರುವ ಈ ಸಂಕಷ್ಟದ ದಿನಗಳಲ್ಲಿ, ಮದ್ಯವನ್ನು ಜನರ ಮನೆಬಾಗಿಲಿಗೇ ತಲುಪಿಸುವ ಸರಕಾರದ ಇತ್ತೀಚಿನ ಯೋಜನೆಯನ್ನು ಪತ್ರಿಿಕೆಗಳಲ್ಲಿ ಓದಿ ತುಂಬಾ ದುಃಖವಾಯಿತು. ಮದ್ಯಪಾನ ಸಂಬಂಧಿತ ನಿತ್ಯನರಕದ ಸಂತ್ರಸ್ತರಾದ ಬಡಮಹಿಳೆಯರು ಚಿತ್ರದುರ್ಗದ ಹಳ್ಳಿಿಗಳಿಂದ ಬೆಂಗಳೂರಿಗೆ ಕಾಲ್ನಡಿಗೆಯಲ್ಲಿ ಜಾಥಾ ಬಂದು ಅಂದಿನ ಸಂವೇದನಾರಹಿತ, ಹೃದಯಹೀನ ಸರಕಾರದಿಂದ ಯಾವ ಮಾನವೀಯ ಪ್ರತಿಕ್ರಿಿಯೆಯೂ ಸಿಗದೆ ಬರಿಗೈಲಿ ವಾಪಸ್ಸಾಾದದ್ದು ಇನ್ನೂ ಮನದಲ್ಲಿ ಹಸುರಾಗಿದೆ.

ಹಾಗಿರುವಾಗ ‘ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಸೋದರಿ-ಮಾತೆಯರ ಪೂಜ್ಯಸ್ಥಾಾನ’ ಎಂದು ಹೇಳುವ ಹೊಸ ಸರಕಾರವು ಇನ್ನೂ ನೂರು ಹೆಜ್ಜೆೆ ಹಿಂದಿಟ್ಟು, ಮನೆಬಾಗಿಲಿಗೇ ಮದ್ಯ ಸರಬರಾಜು ಮಾಡುವ ಯೋಜನೆಯನ್ನು ಹಾಕಿಕೊಳ್ಳುವ ಮೂಲಕ ತನಗೆ ಬಡಜನರ ಬಗ್ಗೆೆ ಸಂವೇದನಾಶೀಲತೆ, ಹೃದಯವಂತಿಕೆ, ವಿವೇಕ, ನೈತಿಕತೆ, ಧರ್ಮಪ್ರಜ್ಞೆ ಯಾವುದೂ ಇಲ್ಲವೆಂಬುದನ್ನು ಜಾಹೀರುಮಾಡಿದೆ. ಕೆಲವೇ ವಾರಗಳ ಹಿಂದೆ ಪಾದಯಾತ್ರೆೆ ನಡೆಸಿ ಈ ಸಂಬಂಧ ಜಾಗೃತಿಗೆ ಶ್ರಮಿಸಿದ ಸಾಣೆಹಳ್ಳಿಿ ಶ್ರೀಗಳು ಹಾಗೂ ಕನ್ನಡ ಮಹಿಳೆಯರಿಗೆ ಇದೆಂಥಾ ಉಡುಗೊರೆ? ‘ಸ್ವಾಾಮೀಜಿಗಳು ಇರುವುದು ಉಪದೇಶ ಮಾಡುವುದಕ್ಕೆೆ, ಪಾನ ನಿಷೇಧ ಆಗುವ ಹೋಗುವ ಮಾತಲ್ಲ’ ಎಂಬುದೂ ಸರಕಾರದ ಉವಾಚ!

ಆದಾಯ ಮತ್ತು ಕಳ್ಳಭಟ್ಟಿಿಯ ದುರಂತಗಳಿಂದ ಬಡಜನರನ್ನು ‘ಪಾರುಮಾಡುವ’ ಮತ್ತು ಸರಕಾರದ ‘ಆದಾಯ’ವನ್ನು ಹೆಚ್ಚುಮಾಡಿಕೊಳ್ಳುವುದು ಈ ಯೋಜನೆಯ ಉದ್ದೇಶವಂತೆ! ಇದರ ಜೊತೆಗೆ, ಮದ್ಯಪಾನದ ವ್ಯಾಾಪಾರ ಶೇ.10ರಷ್ಟು ಹೆಚ್ಚಿಿದೆಯೆಂಬ ಹೆಗ್ಗಳಿಕೆ ಬೇರೆ! ಕಳ್ಳಭಟ್ಟಿಿಯ ಮೂಲದ್ದಿರಲಿ, ಅಧಿಕೃತ ಭಟ್ಟಿಿಯ ಮೂಲದ್ದಿರಲಿ ಮದ್ಯ ವಿಷ ಎಂಬುದನ್ನು ವೈದ್ಯರು, ವಿಜ್ಞಾನಿಗಳು ಖಡಾಖಂಡಿತವಾಗಿ ಹೇಳುತ್ತಲೇ ಬಂದಿದ್ದಾರೆ. ‘ಮದ್ಯವು ಆತ್ಮವನ್ನು ನಾಶಮಾಡುತ್ತದೆ’ ಎಂದು ಹೇಳುತ್ತಿಿದ್ದ ಗಾಂಧೀಜಿ ಈಗ ಬದುಕಿಲ್ಲ. ಆದರೇನು, ತಮ್ಮನ್ನು ನಂಬುವ, ತಮ್ಮ ಭಕ್ತರಿಗೆ ಸದ್ಬುದ್ಧಿಿ ಕೊಡಬಲ್ಲ ಗುರು, ಸದ್ಗುರು, ಜಗದ್ಗುರು, ಮಠಾಧೀಶ, ಧರ್ಮಾಧಿಕಾರಿ… ಯಾರೊಬ್ಬರರಾದರೂ ಇಂತಹ ಘಾತುಕ ಹೆಜ್ಜೆೆ ತಡೆಯಬಾರದೇ?
-ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು

Leave a Reply

Your email address will not be published. Required fields are marked *