Tuesday, 26th May 2020

ಜಿಲ್ಲೆಯಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ದೃಢ

 

ವಿಶ್ವವಾಣಿ ಸುದ್ದಿಮನೆ,

ಮೈಸೂರು:

ಜಿಲ್ಲೆಯಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ದೃಢವಾಗಿದ್ದು,ಇದೀಗ ಕೋವಿಡ್ ಆಸ್ಪತ್ರೆಯಲ್ಲಿ ಇಬ್ಬರು ಸೋಂಕಿತರು ಚಿಕಿತ್ಸೆಪಡೆಯುತ್ತಿದ್ದಾರೆ. ಕಳೆದ ೧೮ರಂದು ಮುಂಬೈನಿಂದ ಆಗಮಿಸಿದ್ದ ವ್ಯಕ್ತಿಗೆ ಪತ್ತೆಯಾದ ಬೆನ್ನಲ್ಲೇ ಬುಧವಾರ ಆಗಮಿಸಿದ್ದ ಮತ್ತೊಬ್ಬನಿಗೆ ಸೋಂಕು ದೃಢವಾಗಿದೆ. ಹೀಗಾಗಿ,ಜಿಲ್ಲಾಡಳಿತ ಅವರನ್ನ ಕೋವಿಡ್ ಆಸ್ಪತ್ರೆಗೆ ಸೇರಿಸುವ ಜತೆಗೆ ಸಂಪರ್ಕಿತರನ್ನ ಕ್ವಾರಂಟೈನ್ ಮಾಡಿಸಲಾಗಿದೆ. ಮಹಾರಾಷ್ಟ್ರದ ಮುಂಬೈಯಿಂದ ಆಗಮಿಸಿರುವ ೧೮ವರ್ಷದ ಯುವಕನಾಗಿದ್ದು, ಈತನ ಟ್ರಾವೆಲ್ ಹಿಸ್ಟರಿ ಗಮನಿಸಿ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದ್ದಾರೆ.

ಬೋಗಸ್ ಪ್ರತಿಪಕ್ಷದ ನಾಯಕರಿಂದ ಸರ್ಟಿಫಿಕೇಟ್ ಪಡೆಯುವ ಅಗತ್ಯವಿಲ್ಲಕೆ.ಎಸ್. ಈಶ್ವರಪ್ಪ
ವಿಶ್ವವಾಣಿ ಸುದ್ದಿಮನೆ ಮೈಸೂರು
ಬೋಗಸ್ ವಿರೋಧ ಪಕ್ಷದ ನಾಯಕರಿಂದ ಸರಕಾರಕ್ಕೆ ಯಾವುದೇ ಸರ್ಟಿಫಿಕೇಟ್ ಬೇಕಿಲ್ಲ. ಅವರು (sಸಿದ್ದರಾಮಯ್ಯ)ಪ್ರತಿಪಕ್ಷದ ನಾಯಕರಾಗಿರುವುದಕ್ಕೆ ಅಯೋಗ್ಯರು. ಸಂವಿಧಾನದ ಬಗ್ಗೆ ಮಾತನಾಡೋ ನಾಯಕರು ನಿಯಮ ಮೀರಿ ಪ್ರತಿಭಟಿಸಿದ್ದು ಯಾಕೇ ಎಂದು ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.

ನಗರದ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯಿಂದ ಆಶೀರ್ವಾದ ಪಡೆದ ಬಳಿಕ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರದ ಘೋಷಣೆ ಮತ್ತು ರಾಜ್ಯ ಸರಕಾರದ ಆಡಳಿತ ಕುರಿತು ಟೀಕಿಸುತ್ತಿದ್ದಾರೆ. ನಮ್ಮ ಜಿಲ್ಲೆಗಳಲ್ಲಿ ಏನೇನು ಕೆಲಸವಾಗಿದೆ ಎಂಬುದನ್ನು ಬಂದು ನೋಡಲಿ ಎಂದು ಸವಾಲು ಹಾಕಿದರು.  ಪ್ರತಿಯೊಂದರಲ್ಲೂ ಟೀಕೆ ಮಾಡುವುದಕ್ಕೆ ವಿರೋಧ ಪಕ್ಷ ಎಂದುಕೊಂಡಿದ್ದಾರೆ.

ನಿನ್ನೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಧರಣಿ ನಡೆಯಿತು. ಯಾವುದೇ ಅನುಮತಿ ಪಡೆಯದೆ ಒಬ್ಬ ಮುಖ್ಯಮಂತ್ರಿಯಾಗಿದ್ದವರು ಮತ್ತು ಕೆಪಿಸಿಸಿ ಅಧ್ಯಕ್ಷರು ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟಿಸಿದರು. ಇವರು ಬೆಳಗ್ಗೆಯಿಂದ ಸಂಜೆ ವರೆಗೆ ಸಂವಿಧಾನದ ಬಗ್ಗೆ ಪಾಠ ಮಾಡುತ್ತಾರೆ. ಇಂತಹವರಿಂದ ನಮಗೆ ಪಾಠ ಕಲಿಯುವುದು ಅಗತ್ಯವಿಲ್ಲ ಎಂದು ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಯಾರನ್ನೂ ಕೇಳದೆ ೨೦ ಲಕ್ಷ ಕೋಟಿ ಬಿಡುಗಡೆಗೊಳಿಸಿದ್ದಾರೆ ಎನ್ನುತ್ತಾರೆ. ಇನ್ನು ಮುಂದೆ ಯಾವುದೇ ಯೋಜನೆ ಘೋಷಿಸಬೇಕಿದ್ದರೂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ಕೇಳಿ ಘೋಷಿಸಿ ಎಂದು ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡುತ್ತೇನೆ ಎಂದು ವ್ಯಂಗವಾಡಿದರು.

ಕರೋನಾ ಸೇರಿದಂತೆ ಮತ್ತಿತರ ಸಮಸ್ಯೆ ನಿವಾರಿಸುವಲ್ಲಿ ಕರ್ನಾಟಕ ಕೈಗೊಂಡ ಕ್ರಮಗಳು ಇಡೀ ಭಾರತವನ್ನೇ ಮೆಚ್ಚಿಸಿದೆ. ಇನ್ನು ಭಾರತದ ಬಗ್ಗೆ ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಆದ್ದರಿಂದ ರಾಜ್ಯ ಸರಕಾರಕ್ಕಾಗಲಿ, ಕೇಂದ್ರ ಸರಕಾರಕ್ಕಾಗಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಸರ್ಟಿಫಿಕೇಟ್ ಬೇಕಿಲ್ಲ ಎಂದು ತಿಳಿಸಿದರು.

Leave a Reply

Your email address will not be published. Required fields are marked *