Saturday, 4th July 2020

ಜಿಲ್ಲೆಯ 91 ಸ್ಯಾಂಪಲಗಳ ವರದಿ ನೆಗಟಿವ್

ಬಾಗಲಕೋಟೆ:
ಜಿಲ್ಲೆಯಿಂದ ಕಳುಹಿಸಲಾಗಿದ್ದ 313 ಸ್ಯಾಂಪಲ್‍ಗಳ ಪೈಕಿ 91 ಸ್ಯಾಂಪಲಗಳ ವರದಿ ನೆಗಟಿವ್ ಬಂದಿದ್ದು, ಇನ್ನು 222 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಿಂದ ಹೊಸದಾಗಿ ಮತ್ತೆ 365 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ರವಾನಿಸಲಾಗಿದ್ದು, ಬಾಕಿ 222 ಮತ್ತು ಹೊಸ 365 ಸೇರಿ ಒಟ್ಟು 587 ಸ್ಯಾಂಪಲಗಳ ವರದಿಯನ್ನು ನಿರೀಕ್ಷಿಸಲಾಗುತ್ತಿz.É ಇನ್‍ಸ್ಟಿಟ್ಯೂಟ್ ಕ್ವಾಂರಂಟೈನ್‍ನಲ್ಲಿ ಒಟ್ಟು 2465 ಜನರನ್ನು ಇರಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 6029 ಜನರ ಸ್ಯಾಂಪಲ್‍ಗಳನ್ನು ಕಳುಹಿಸಲಾಗಿದ್ದು, ಈ ಪೈಕಿ 5335 ನೆಗಟಿವ್ ಪ್ರಕರಣ, 77 ಪಾಜಿಟಿವ್ ಪ್ರಕರಣ ಹಾಗೂ ಒಂದು ಮೃತ ಪ್ರಕರಣ ವರದಿಯಾಗಿರುತ್ತದೆ.
       ಇಲ್ಲಿಯವರೆಗೆ ಕೋವಿಡ್-19 ದಿಂದ ಒಟ್ಟು 42 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 34 ಜನ ಕೋವಿಡ್ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇನ್ನು 7 ಕಂಟೈನ್‍ಮೆಂಟ್ ಝೋನ್‍ಗಳಿವೆ. ಇಲ್ಲಿವರೆಗೆ ಒಟ್ಟು 13 ಸ್ಯಾಂಪಲ್‍ಗಳು ಮಾತ್ರ ರಿಜೆಕ್ಟ ಆಗಿರುತ್ತವೆ. 14 ದಿನಗಳ ಕಾಲ ಇನ್‍ಸ್ಟಿಟ್ಯೂಶನ್ ಕ್ವಾಂರಂಟೈನ್‍ನಲ್ಲಿದ್ದ 305 ಜನ ಬಿಡುಗಡೆ ಮಾಡಲಾಗಿದೆ.
       ಜಿಲ್ಲೆಯಲ್ಲಿ ಸ್ಥಾಪಿಸಲಾದ 9 ಚೆಕ್‍ಪೋಸ್ಟಗಳ ಪೈಕಿ 4 ಚೆಕ್ ಪೋಸ್ಟಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿವರೆಗೆ ಚೆಕ್‍ಪೋಸ್ಟಗಳ ಮೂಲಕ 53461 ವಾಹನಗಳ ತಪಾಸಣೆ ಹಾಗೂ 2,06,722 ಜನರನ್ನು ಥರ್ಮಲ್ ಸ್ಕ್ರೀನಿಂಗ್ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *