Monday, 8th March 2021

ಜ.29ರಂದು ಜೆಡಿಯು ಸರ್ವ ಸದಸ್ಯರ ಸಭೆ

ತುಮಕೂರು: ರಾಜ್ಯ ಜೆ.ಡಿ.ಯು ಘಟಕವು ಜ.29ರಂದು ಸರ್ವ ಸದಸ್ಯರ ಸಭೆಯು ಕೆ.ಎಲ್.ಪಾರ್ಟಿಹಾಲ್, ಡಾ|| ಮೋದಿ ಆಸ್ಪತ್ರೆ ರಸ್ತೆ, ಅರುಣ ಸಿಲ್ಕ್ ಎದುರು, ರಾಜಾಜಿನಗರ, ಬೆಂಗಳೂರು ಇಲ್ಲಿ ರಾಜ್ಯಾಧ್ಯಕ್ಷರಾದ ಮಹಿಮ ಜೆ. ಪಟೇಲ್‌ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಆರ್.ಸಿ.ಪಿ.ಸಿಂಗ್ ಅವರ ಆದೇಶದ ಮೇರೆಗೆ ರಾಜ್ಯದಲ್ಲಿ ಜೆ.ಡಿ.(ಯು) ಪಕ್ಷವನ್ನು ಪುನರ್ ಸಂಘಟಿ ಸಲು ಈ ಸಭೆ ಕರೆಯಲಾಗಿದೆ. ಈ ಸಭೆಗೆ ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರುಗಳು, ತಾಲ್ಲೂಕು ಅಧ್ಯಕ್ಷರುಗಳು, ರಾಜ್ಯ ಮುಖಂಡರು ಗಳು ಭಾಗವಹಿಸಲಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ನೂತನ ಅಧ್ಯಕ್ಷರು, ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಇದರ ಸಂಬಂಧ ತಮ್ಮಗಳ ಅಭಿಪ್ರಾಯ ಮುಖ್ಯವಾಗಿದೆ. ಜಿಲ್ಲೆಯ ಎಲ್ಲಾ ಜೆ.ಡಿ.(ಯು) ಮುಖಂಡರು, ತಾಲ್ಲೂಕು ಮುಖಂಡರು ಈ ಮಹತ್ವದ ಸಭೆಗೆ ಹಾಜರಾಗಲು ಜೆ.ಡಿ.(ಯು) ಮುಖಂಡ ಕೆ.ಜಿ.ಎಲ್. ರವಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *