Monday, 20th January 2020

ಡಿಕೆಶಿ ಬಂಧನ ಖಂಡಿಸಿ ಇಂದು ಪ್ರತಿಭಟನೆ: ಸಂಚಾರ ಮಾರ್ಗ ಬದಲು

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಬಂಧನ ಖಂಡಿಸಿ ಬುಧವಾರ ಒಕ್ಕಲಿಗರ ಸಂಘಗಳ ಒಕ್ಕೂಟ ಸೇರಿದಂತೆ ಹಲವು ಸಂಘಟನೆಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಿವೆ.

ಪ್ರತಿಭಟನಾ ಮೆರವಣಿಗೆ ಹಿನ್ನೆೆಲೆಯಲ್ಲಿ ನಗರದಲ್ಲಿ ಸೂಕ್ತ ಪೊಲೀಸ್ ಬಂದೋಬಸ್‌ತ್‌ ಒದಗಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.

ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ನಗರದ ನ್ಯಾಾಷನಲ್ ಕಾಲೇಜು ಮೈದಾನದಲ್ಲಿ ಬೆಳಗ್ಗೆೆ 11.30ಕ್ಕೆೆ ರಾಜ್ಯ ಒಕ್ಕಲಿಗರ ಸಂಘ ಸಂಸ್ಥೆೆಗಳ ಒಕ್ಕೂಟ, ಡಿಕೆಶಿ ಅಭಿಮಾನಿಗಳ ಸಂಘ ಹಾಗೂ ಕಾಂಗ್ರೆೆಸ್, ಜೆಡಿಎಸ್ ಪಕ್ಷ ಸೇರಿ ಪ್ರತಿಭಟನಾ ರ್ಯಾಾಲಿ ನಡೆಸಲು ನಿರ್ಧಾರ ಕೈಗೊಂಡಿದ್ದಾಾರೆ ಎಂದರು.

ಈ ಹಿನ್ನೆೆಲೆಯಲ್ಲಿ ಸುಮಾರು 5 ಕಿ.ಮೀ. ರ್ಯಾಾಲಿ ನಡೆಯಲಿದ್ದು,ಈ ವೇಳೆ ಯಾವುದೇ ಗಲಾಟೆ ನಡೆಯದಂತೆ ನೋಡಿಕೊಳ್ಳಲು 12 ಜನ ಡಿಸಿಪಿ, 50 ಕೆಎಸ್‌ಆರ್‌ಪಿ, 40 ಸಿಎಆರ್ ತುಕಡಿಗಳು, 40 ಎಸಿಪಿ, 106 ಇನ್‌ಸ್‌‌ಪೆಕ್ಟರ್‌ಗಳು ಸೇರಿದಂತೆ 2000 ಪೊಲೀಸ್ ಪೇದೆಗಳನ್ನು ನಿಯೋಜನೆ ಮಾಡಲಾಗಿದೆ. ಸುತ್ತಮುತ್ತಲಿನ ಜಿಲ್ಲೆೆಗಳಿಂದ ಸಿಬ್ಬಂದಿ ಕರೆಸಿಕೊಳ್ಳಲಾಗಿದ್ದು, ಮಫ್ತಿಿಯಲ್ಲಿ ಕೂಡ ಪೊಲೀಸರ ಇರಲಿದ್ದಾಾರೆ ಎಂದು ಹೇಳಿದರು.

ಆಯೋಜಕರಿಂದ ಬಾಂಡ್
ಬರೆಸಿಕೊಂಡ ಆಯುಕ್ತರು
ಪ್ರತಿಭಟನೆ ನಡೆಸುತ್ತಿಿರುವ 10 ಜನ ಆಯೋಜಕರಿಂದ ಬಾಂಡ್ ಬರೆಸಿಕೊಳ್ಳಲಾಗಿದೆ. ಇದರಲ್ಲಿ ಕರವೇ ಅಧ್ಯಕ್ಷ ಟಿ. ನಾರಾಯಣ ಗೌಡ, ರವಿಶಂಕರ್ ವೈ.ಡಿ. ಬಸವರಾಜ ಪಡಕೋಟಿ, ನಾಗರಾಜ್ ಜೆ. ಭಾರತಿ ಶಂಕರ್, ರಾಧಾ ವೆಂಕಟೇಶ್, ಕುಮಾರ್, ಅನಿಲ್ ಗೌಡ, ಜಗದೀಶ್ ಗೌಡ, ಕೃಷ್ಣಮೂರ್ತಿ.ಕೆ ಸೇರಿದಂತೆ ಒಟ್ಟು 10 ಜನರಿಂದ ಬಾಂಡ್ ಬರೆಸಿಕೊಳ್ಳಲಾಗಿದೆ. ಏನಾದರೂ ಅಹಿತಕರ ಘಟನೆಗಳು ನಡೆದರೆ ಆಯೋಜಕರು ಸೇರಿದಂತೆ 10 ಜನರನ್ನು ಬಂಧಿಸಲಾಗುವುದು. ನಂತರ ಇತರರನ್ನು ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮೆರವಣಿಗೆ ತೆರಳುವ ಮಾರ್ಗ
ನಗರದ ನ್ಯಾಾಷನಲ್ ಕಾಲೇಜು ಮೈದಾನದಿಂದ ಆರಂಭವಾಗುವ ಮೆರವಣಿಗೆಯು ಸಜ್ಜನ್ ರಾವ್ ವೃತ್ತ, ಮಿನರ್ವ ವೃತ್ತ, ಜೆ.ಸಿ.ರಸ್ತೆೆ, ಕಾರ್ಪೊರೇಷನ್ ವೃತ್ತ, ಮೈಸೂರು ಬ್ಯಾಾಂಕ್ ವೃತ್ತದ ಮೂಲಕ ಸ್ವಾಾತಂತ್ರ್ಯಉದ್ಯಾಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.

ಸಂಚಾರ ಮಾರ್ಗ ಬದಲಾವಣೆ
ನಗರದ ಪ್ಯಾಾಲೇಸ್ ರಸ್ತೆೆಯಲ್ಲಿ ಸಂಚರಿಸುವಾಗ, ಕೆ.ಜಿ. ರಸ್ತೆೆಯಲ್ಲಿ ಬರುವ ವಾಹನ ಸವಾರರು ಕೆ.ಜಿ. ರಸ್ತೆೆ,ಟ್ಯಾಾಂಕ್ ಬಂಡ್ ರಸ್ತೆೆ ಮೂಲಕ ಹೋಗಬಹುದು. ಚಾಲುಕ್ಯ ಸರ್ಕಲ್‌ಗೆ ಬರುವ ವಾಹನ ಸವಾರರು ಮಹಾರಾಣಿ ಬ್ರಿಿಡ್‌ಜ್‌ ಹತ್ತಿಿರ ಎಡ ತಿರುವು ಪಡೆದು ಕೆ.ಆರ್. ಸರ್ಕಲ್ ಮುಖಾಂತರ ಹೋಗಬಹುದು. ಶೇಷಾದ್ರಿಿ ರಸ್ತೆೆಯಲ್ಲಿ ಬರುವ ವಾಹನ ಸವಾರರು ಆನಂದ್ ರಾವ್ ಅಪ್ ರ್ಯಾಾಂಪ್, ರೇಸ್ ಕೋರ್ಸ್ ರಸ್ತೆೆಯ ಮೂಲಕ ಸಂಚರಿಸಿ, ಚಾಲುಕ್ಯ ಸರ್ಕಲ್, ಕೆ.ಆರ್.ಸರ್ಕಲ್ ಮೂಲಕ ಹೋಗಬಹುದು.

ಮೆಜೆಸ್ಟಿಿಕ್‌ನಿಂದ ಮಾರ್ಕೆಟ್ ಕಡೆಗೆ ಹೋಗುವ ವಾಹನಗಳು: ಎನ್.ಆರ್.ಜಂಕ್ಷನ್, ದೇವಾಂಗ ಜಂಕ್ಷನ್,ಸುಬ್ಬಯ್ಯ ವೃತ್ತ, ಪೂರ್ಣಿಮ ಜಂಕ್ಷನ್, ಊರ್ವಶಿ, ಲಾಲ್‌ಭಾಗ ಮುಖ್ಯದ್ವಾಾರ, ಲಾಲ್‌ಭಾಗ್ ಪಶ್ಚಿಿಮದ್ವಾಾರ, ಜೆ.ಸಿ.ರಸ್ತೆೆ ಟೌನ್‌ಹಾಲ್ ಮುಖಾಂತರ ಮುಂದೆ ಸಾಗಬಹುದು. ರಿಚ್‌ಮಂಡ್ ವೃತ್ತದಿಂದ ಬರುವ ವಾಹನಗಳೂ ಹಡ್ಸನ್ ವೃತ್ತ ಮೂಲಕ, ರಿಚ್‌ಮಂಡ್ ವೃತ್ತದ ಕಡೆಯಿಂದ ಬಂದು ಮೆಜೆಸ್ಟಿಿಕ್ ಕಡೆಗೆ ಹೋಗುವ ವಾಹನಗಳು ಹಡ್ಸನ್ ವೃತ್ತ, ಪಿ.ಎಸ್. ಜಂಕ್ಷನ್, ಪೊಲೀಸ್ ಕಾರ್ನರ್, ಕಬ್ಬನ್ ಉದ್ಯಾಾನವನ ಒಳಭಾಗ, ಕೆ.ಆರ್.ವೃತ್ತ ಹಳೇ ಅಂಚೆ ಕಚೇರಿ ರಸ್ತೆೆ ಮೂಲಕ ಮುಂದೆ ಸಾಗಬಹುದು. ಕ್ವೀನ್‌ಸ್‌ ರಸ್ತೆೆ ಕಡೆಯಿಂದ ಬರುವ ವಾಹನಗಳು ಹಳೇ ಅಂಚೆ ಕಚೇರಿ ರಸ್ತೆೆ ಮೂಲಕ ಮುಂದೆ ಸಾಗಬಹುದು. ಕ್ವೀನ್‌ಸ್‌ ರಸ್ತೆೆ ಕಡೆಯಿಂದ ಬರುವ ವಾಹನಗಳು ಸಿ.ಟಿ.ಓ. ವೃತ್ತ ಮೂಲಕ ಮೈಸೂರು ಬ್ಯಾಾಂಕ್ ವೃತ್ತದ ಮೂಲಕ ಮುಂದೆ ಸಾಗಬಹುದು. ಮೆಜೆಸ್ಟಿಿಕ್‌ನಿಂದ ಶಾಂತಿನಗರಕ್ಕೆೆ ಹೋಗುವ ವಾಹನಗಳು ಮಹಾರಾಣಿ ಮೇಲು ಸೇತುವೆ ಕೆ.ಆರ್.ವೃತ್ತದ ಮೂಲಕ ಮುಂದೆ ಸಾಗಬಹುದು. ಮೆಜೆಸ್ಟಿಿಕ್‌ನಿಂದ ಎಚ್‌ಎಎಲ್ ಕೆ.ಆರ್.ಪುರ ಕಡೆಗೆ ಹೋಗುವ ವಾಹನಗಳು ಸಂಗೊಳ್ಳಿಿ ರಾಯಣ್ಣ ವೃತ್ತದಿಂದ ರಾಜಭವನ ಜಂಕ್ಷನ್, ಅಲಿ ಆಸ್ಕರ್ ರಸ್ತೆೆ, ಇನ್‌ಫ್ಯಾಾಂಟ್ರಿಿ ರಸ್ತೆೆ ಮೂಲಕ ಮುಂದೆ ಸಾಗಬಹುದು.

Leave a Reply

Your email address will not be published. Required fields are marked *