Monday, 3rd October 2022

ತಾಲೂಕಾ ಮಟ್ಟದ ರಾಷ್ಟ್ರೀಯ ಜಂತು ಹುಳ ನಿವಾರಣ ಕಾರ್ಯಕ್ರಮ

ಬಸವನಬಾಗೇವಾಡಿ: ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕಾ ಮಟ್ಟದ ರಾಷ್ಟ್ರೀಯ ಜಂತು ಹುಳ ನಿವಾರಣ ಕಾರ್ಯಕ್ರಮವನ್ನು ತಾಲೂಕಾ ವೈಧ್ಯಾಧಿಕಾರಿ ಶಶಿಧರ ಓತಗೇರಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ವಿಶ್ವಸಂಸ್ಥೆಯ ವರದಿ ಪ್ರಕಾರ ಪ್ರಪಂಚದ ಪ್ರತಿಶತ ೨೪ ಜನರಲ್ಲಿ ಜಂತುಹುಳು ಭಾದೆ ಇರುವ ಸಾಧ್ಯತೆ ಇರುತ್ತದೆ, ಮನುಷ್ಯ ಹಾಗೂ ಮಕ್ಕಳ ಕರುಳಿನಲ್ಲಿರುವ ಜಂತುಹುಳಗಳು ಮನಷ್ಯನ ಅಹಾರ ರಕ್ತ ಹಂಚಿ ಕೊಳ್ಳುವು ದರಿ೦ದ ಆ ವ್ಯಕ್ತಿಯಲ್ಲಿ ಅಪೌಷ್ಟಿಕತೆ ರಕ್ತ ಹೀನತೆ ನಿತ್ರಾಣ ಉಂಟಾಗಿ ಅವರ ಬೌದ್ಧಿಕ ಬೆಳವಣಿಗೆ ಬುದ್ದಿಶಕ್ತಿ ಕಡಿಮೆಯಾಗ ಬಹುದು, ಹಾಗೂ ಕಲಿಕೆಯಲ್ಲಿ ಹಿಂದೆ ಬಿಳಬಹುದು, ಶಾಲಾ ಹಾಜರಾತಿ ಕಡಿಮೆಯಾಗಿ ಕ್ರಮೇಣ ಶಾಲೆಯಿಮದ ಮಕ್ಕಳು ಹೊರಬೀಳುವ ಸಾಧ್ಯತೆ ಇರುತ್ತದೆ, ದೇಶದಲ್ಲಿ ಸುಮಾರು ನಾಲ್ಕು ನಮೆನೆಯ ಜಂತು ಹುಳಬಾದೆಗಳು ಮಕ್ಕಳನ್ನು ಭಾದಿಸುತ್ತವೆ ನಾಲ್ಕು ನಮೊನೆಯ ಬಾದೆಗೆ ಅಲ್ಪೆಂಡಜೋಲ್ ಮಾತ್ರೆ ಪರಿಣಾಮಕಾರಿ ಯಾಗಿದೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಪ್ರತಿವರ್ಷ ಎರಡು ಬಾಋಇ ಜಂತು ಹುಳ ನಿವಾರಣಾ ದಿನವನ್ನು ಆಚರಿಸುತ್ತದೆ ಎಂದು ಹೇಳಿದರು.

ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಎಸ್ ಮೇಟಿ, ಜಂತು ಹುಳ ನಿವಾರಣೆಗೆ ವರ್ಷದಲ್ಲಿ ಎರಡು ಬಾರಿ ಔಷಧ ಸೇವನೆ ಜೊತೆಗೆ ಶೌಚಾಲಯಗಳ ಉಪಯೋಗ ಹಾಗೂ ವೈಜ್ಞಾನಿಕ ವಿಧಾನದ ಮೂಲಕ ಕೈ ತೊಳೆಯುವ ವಿಧಾನವನ್ನು ಪ್ರಾತ್ಯಕ್ಷಿಕ ಮೂಲಕ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಆರ್,ಎಂ, ಚಿಂಚೊಳಿ, ಸೈಯದ್ ಭಾಗವಾನ, ಪ್ರಚಾರ್ಯ ಉಷಾಕಿರಣ, ಉಪನ್ಯಾಸಕರಾದ ಸುರೇಶ ಗುಣಕಿ, ಎಂ,ಕೆ, ಯಾದವ್, ಬಾಲನಗೌಡ ಮ್ಯಾಗೇರಿ, ತ್ರೀವೆಣಿ ಮಾಮೂಲಿ, ಶ್ರುತಿ ಮನಗೂಳಿ, ಸೇರಿದಂತೆ ಮುಂತಾದವರು ಇದ್ದರು.