Tuesday, 7th July 2020

ತೆರೆಗೆ ಸಿದ್ಧನಾದ ರಾಂಧವ !

ಮೂರು ಕಾಲಘಟ್ಟದಲ್ಲಿ ಕತೆ ಹೇಳುವ ‘ರಾಂಧವ’ ಚಿತ್ರ ಇದೇ 15ರಂದು ತೆರೆಗೆ ಬರಲಿದೆ. ಬಿಗ್‌ಬಾಸ್ ಖ್ಯಾಾತಿಯ ಭುವನ್ ಪೊನ್ನಣ್ಣ ನಾಯಕನಾಗಿ ಅಭಿನಯಿಸಿದ್ದಾಾರೆ. ಮೊದಲನೆ ಶೇಡ್‌ದಲ್ಲಿ ರಾಬರ್ಟ್ ಹೆಸರಿನಲ್ಲಿ ಮಿತಭಾಷಿಯಾಗಿ ಪಕ್ಷಿತಜ್ಞ. ಎರಡನೆಯದರಲ್ಲಿ ಎಲ್ಲರೊಂದಿಗೆ ಬಾಂಧವ್ಯ ಬೆಳಸಿಕೊಂಡಿರುವ ‘ರಾಂಧವ’ದ ಯುವರಾಜ. ಕೊನೆಯದರಲ್ಲಿ ಮನುಷ್ಯನಾಗಿ ಲವರ್‌ಬಾಯ್ನಾಯಕಿಯರಾಗಿ ಅಪೂರ್ವ ಶ್ರೀನಿವಾಸನ್ ಮತ್ತು ರಾಶಿ ನಟನೆ ಇದೆ. ಚಿತ್ರವೀಕ್ಷಣೆಯನ್ನೇ ಹವ್ಯಾಾಸವಾಗಿಸಿಕೊಡು, ಅಲ್ಲಿರುವ ದೃಶ್ಯಗಳನ್ನು    ನೋಡುತ್ತಾಾ, ಅದರಂತೆ ಚಿತ್ರಕ್ಕೆೆ ಕತೆ ಬರೆದುನಿರ್ದೇಶನ ಮಾಡಿರುವುದು ಸುನಿಲ್‌ಆಚಾರ್ಯ. ರಿಯಲ್ಮತ್ತು ರೀಲ್‌ದಲ್ಲಿ ಭರತನಾಟ್ಯ ಡ್ಯಾಾನ್ಸರ್ ಆಗಿ ಕಾಣಿಸಿಕೊಂಡಿರುವುದು ಯಮುನಾಮೂರ್ತಿ. ಖಳನಾಗಿ ‘ರಂಗಿತರಂಗ’ ಅರವಿಂದ್ ಬಣ್ಣಹಚ್ಚಿಿದ್ದಾಾರೆ. ಜಹಾಂಗೀರ್, ಮಂಜುನಾಥ್‌ಹೆಗ್ಗಡೆ, ವಾಣಿಶ್ರೀ, ಲಕ್ಷೀಹೆಗಡೆ ಮುಂತಾದವರು ಅಭಿನಯಿಸಿದ್ದಾಾರೆ.
ಬಾಲೂರು, ಮೂಡಿಗೆರೆ, ಶಿವಕೋಟೆ, ಬೆಂಗಳೂರು ಮತ್ತುಒಂದು ಗೀತೆಯನ್ನು 28 ಜಿಲ್ಲೆೆಗಳಲ್ಲಿ ಹದಿನಾಲ್ಕು ವರ್ಷಗಳ ಕಾಲ ಗಾಯಕನಾಗಿ ಗುರುತಿಸಿಕೊಂಡು ಹಲವು ಸ್ಟಾಾರ್ ಚಿತ್ರಗಳಿಗೆ ಹಾಡಿರುವ ಶಶಾಂಕ್‌ಶೇಷಗಿರಿ ಇಲ್ಲಿಯವರೆಗೂ 480 ಗೀತೆಗಳಿಗೆ ಕಂಠದಾನ ಮಾಡಿದ್ದಾಾರೆ. ಬಡ್ತಿಿ ಎನ್ನುವಂತೆ ಮೊದಲಬಾರಿ ಸಂಗೀತ ನಿರ್ದೇಶಕರಾಗಿ ಎರಡು ಗೀತೆ ಹಾಡುವ ಜೊತೆಗೆ ಒಟ್ಟು ಆರು ವಿಧ ವಿಧವಾದ ಹಾಡುಗಳಿಗೆ ಸಂಗೀತ ಸಂಯೋಜಿಸಿರುವುದು ವಿಶೇಷ. ಈ ಪೈಕಿ ಕರ್ನಾಟಕ ರಾಜ್ಯದ ಪ್ರಸಿದ್ದ ತಾಣಗಳು, ಅಮ್ಮನ ಕುರಿತಂತೆ, ಪುರಾತನ-ಪ್ರಸಕ್ತ ಕಾಲದ ಕ್ಲಾಾಸಿಕಲ್ ಗೀತೆ ಇರಲಿದೆ. ರೈತರೊಂದಿಗೆ ಚಿತ್ರದ ಧ್ವನಿಸುರುಳಿ ಬಿಡುಗಡೆ ವಿಶೇಷ.

Leave a Reply

Your email address will not be published. Required fields are marked *