Friday, 17th January 2020

ದಸರೆ ವೀಕ್ಷಣೆಯಲ್ಲಿ ಜನರ ಗಲಿಬಿಲಿ

ಮೈಸೂರಿನ ಕೆ.ಆರ್.ವೃತ್ತದಲ್ಲಿರುವ ಹಳೆಯ ಪಾರಂಪರಿಕ ಕಟ್ಟಡವಾದ ಲ್ಯಾಾನ್‌ಸ್‌‌ಡೌನ್ ಕಟ್ಟಡ ಅಪಾಯದಲ್ಲಿದ್ದರೂ ಲೆಕ್ಕಿಿಸದ ಜನ ಕುಳಿತು ಜಂಬೂಸವಾರಿ ವೀಕ್ಷಿಸಿದರು.

ಕುರುಕುಲು ತಿಂಡಿಗೆ ಭಾರಿ ಡಿಮ್ಯಾಾಂಡ್ ಹಸಿವಿನ ಕಾರಣಕ್ಕೆೆ ದುಪ್ಪಟ್ಟು ದರವಾದರೂ ಖರೀದಿ

ಹರಿದು ಬಂದ ಜನಸ್ತೋಮ.. ಎತ್ತ ನೋಡಿದರೂ ಸಾಲು ಸಾಲು ಆಗಮನ… ಜಾಗ ಹಿಡಿಯಲು ಪೈಪೋಟಿ.. ತಂಪು ಪಾನೀಯ, ಕುರುಕುಲು ತಿಂಡಿ ವ್ಯಾಪಾರ ಬಲು ಜೋರು.. ಮೂಟೆಗಟ್ಟಲೆ ಸೌತೆಕಾಯಿ ವ್ಯಾಪಾರ.. ಪೊಲೀಸರ ಸೂಚನೆ ಧಿಕ್ಕರಿಸಿ ನೂಕಾಟಕ್ಕೆ ಮುಂದಾದ ಪಡ್ಡೆ ಹುಡುಗರು! ಇದು ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಜಂಬೂಸವಾರಿ ಮೆರವಣಿಗೆ ಸಂದರ್ಭದಲ್ಲಿ ಕಂಡು ಬಂದ ವಿಶೇಷತೆಗಳು.

ದೇಶ-ವಿದೇಶದಲ್ಲಿ ಅಪಾರ ಜನಮನ್ನಣೆ ಗಳಿಸಿರುವ ಜಂಬೂಸವಾರಿ ಮೆರವಣಿಗೆ ವೀಕ್ಷಿಸಲು ಮಂಗಳವಾರ ಬೆಳಗ್ಗೆೆಯಿಂದಲೂ ಅರಮನೆ ನಗರಿಯತ್ತ ಜನ ಹರಿದು ಬರತೊಡಗಿದರು. ರೈಲು ನಿಲ್ದಾಾಣಕ್ಕೆೆ ಹೊರ ಜಿಲ್ಲೆೆ, ರಾಜ್ಯದವರು ಬಂದಿಳಿಯ ತೊಡಗಿದರೆ, ಸ್ಕೌೌಟ್‌ಸ್‌ ಅಂಡ್ ಗೈಡ್‌ಸ್‌ ಮೈದಾನ, ಗುಂಡೂರಾವ್ ನಗರ, ಲಲಿತಮಹಲ್ ಹೆಲಿಪ್ಯಾಾಡ್ ಮೈದಾನ, ಇಟ್ಟಿಗೆಗೂಡಿನಲ್ಲಿ ತಾತ್ಕಾಾಲಿಕವಾಗಿ ನಿರ್ಮಿಸಿದ ನಿಲ್ದಾಾಣದಲ್ಲಿ ಬಂದಿಳಿಯುತ್ತಿಿದ್ದರು. ಬಸ್, ಲಾರಿ, ಮ್ಯಾಾಕ್ಸಿಿಕ್ಯಾಾಬ್, ಗೂಡ್‌ಸ್‌ ಆಟೋ ಇತರ ವಾಹನಗಳಲ್ಲಿ ಆಗಮಿಸುತ್ತಲೇ ಇದ್ದರು. ಸರಸರನೆ ಹೆಜ್ಜೆೆ ಹಾಕಿ ಬರುತ್ತಿಿದ್ದ ಕೆಲವರು ಚಾಮರಾಜೇಂದ್ರ ವೃತ್ತ, ಕೆ.ಆರ್.ವೃತ್ತ, ಚಿಕ್ಕಗಡಿಯಾರ, ಕೆ.ಆರ್.ಆಸ್ಪತ್ರೆೆ ವೃತ್ತ, ಸಯ್ಯಾಾಜಿರಾವ್ ರಸ್ತೆೆಯ ಇಕ್ಕೆೆಲಗಳಲ್ಲಿ ಕುಳಿತುಕೊಳ್ಳಲು ಪೈಪೋಟಿ ನಡೆಸುತ್ತಿಿದ್ದರು. ಮಧ್ಯಾಾಹ್ನ ಒಂದು ಗಂಟೆಯ ಹೊತ್ತಿಿಗೆ ಚಾಮರಾಜೇಂದ್ರ ವೃತ್ತದಿಂದ ಬನ್ನಿಿಮಂಟಪದ ಹೈವೇ ವೃತ್ತದ ತನಕ ರಸ್ತೆೆಯ ಇಕ್ಕೆೆಲಗಳಲ್ಲಿ ಸುಡು ಬಿಸಿಲು, ಬೆವರನ್ನು ಲೆಕ್ಕಿಿಸದೆ ಕಾಲಿಡಲು ಸಾಧ್ಯವಾಗದಂತೆ ಕಾದು ಕುಳಿತಿದ್ದರು. ಬೆಳಗ್ಗೆೆ ತಿಂಡಿ ಮುಗಿಸಿ ನೇರವಾಗಿ ಜಂಬೂಸವಾರಿಗೆ ಬಂದಿದ್ದರಿಂದ ಹೊಟ್ಟೆೆ ಹಸಿವು ತಾಳಲಾರದೆ ಕುರುಕುಲು ತಿಂಡಿಯ ಮೊರೆ ಹೋಗಿದ್ದರು.

ಎಳೆ ಮೊಗರು ಸೌತೆಕಾಯಿ, ಗರಂ ಗರಂ ಕಡ್ಲೆೆಕಾಯಿ, ಚಿಪ್‌ಸ್‌, ಪಾಪ್‌ಕಾರ್ನ್ ಮೇಯುತ್ತಾಾ ಕಾಲಹರಣ ಮಾಡಿದರೆ, ಬಿಸ್ಲರಿ, ಜ್ಯೂಸ್‌ಗಳು ಭರ್ಜರಿ ವ್ಯಾಾಪಾರವಾಯ್ತು. ಹಸಿವು ತಾಳದೆ, ಬಾಯಾರಿಕೆ ತಡೆಯದೆ ಜ್ಯೂಸ್, ನೀರಿಗೆ ಮುಗಿಬಿದ್ದಿದ್ದರಿಂದ ಐದು ರುಪಾಯಿ ದರ ಹೆಚ್ಚಿಿಗೆ ಇಟ್ಟುಕೊಂಡು ವ್ಯಾಾಪಾರ ಮಾಡುತ್ತಿದ್ದು ಕಂಡುಬಂದಿತು. ನೂಕುನುಗ್ಗಲು ತಡೆಯಲು ಪೊಲೀಸರು ಆಗಿಂದಾಗ್ಗೆೆ ಸೂಚನೆ ಕೊಟ್ಟರೂ ಪಡ್ಡೆೆ ಹುಡುಗರು ಲೆಕ್ಕಿಿಸದೆ ಕಿರಿಕಿರಿಯನ್ನುಂಟು ಮಾಡುತ್ತಿದ್ದು ನಡೆಯುತ್ತಲೇ ಇತ್ತು. ಕೆಲವರು ಶಿಳ್ಳೆೆ ಹಾಕಿದರೆ, ಕೆಲವರು ಕರ್ಕಶ ಶಬ್ಧದ ಪೀಪಿಯನ್ನು ಊದಿ ಕೆಲವರಿಗೆ ಮುಜುಗರವನ್ನುಂಟು ಮಾಡುತ್ತಿದ್ದರು.
ಹೀಗಿದ್ದರೂ, ಚಿನ್ನದ ಅಂಬಾರಿ ಬರುವ ತನಕ ಇಂತಹ ಕೀಟಲೆ, ಕೋಟಲೆಗಳು ನಡೆಯುತ್ತಿದ್ದರೆ, ಕೆಳಗೆ ಕುಳಿತಿದ್ದವರು ಗೋಳು ಹೇಳ ತೀರದ್ದಾಾಗಿತ್ತು. ಮಧ್ಯಾಾಹ್ನದ ಬಳಿಕ ಸುಡುಬಿಸಿಲು ಕಾವು ಏರುತ್ತಿಿದ್ದಂತೆ ರಸ್ತೆೆಯ ಇಕ್ಕಲಗಳಲ್ಲಿ ಕುಳಿತಿದ್ದವರ ಮುಖ ಬಾಡಿ ಹೋಗಿದ್ದರೆ, ಕೆಲವರು ಅಯ್ಯೋ ಬಿಸಿಲು ಎನ್ನುತ್ತಾಾ ಛತ್ರಿ ಹಿಡಿದರೆ, ಮಹಿಳೆಯರು, ಹೆಣ್ಣು ಮಕ್ಕಳು ತಮ್ಮ ವೇಲ್, ಸೆರಗನ್ನು ತಲೆಯಲ್ಲಿ ಮುಚ್ಚಿಿಕೊಂಡು ಕುಳಿತಿದ್ದು ಕಂಡುಬಂದಿತು.

Leave a Reply

Your email address will not be published. Required fields are marked *