Monday, 20th January 2020

‘ಧೈರ್ಯಂ ಸರ್ವರ್ಥ ಸಾಧನಂ’

ಜೀವನದ ಜಂಜಾಟಗಳಿಂದ ಮುಕ್ತರಾಗಲು ಆತ್ಮಹತ್ಯೆೆಯೊಂದೇ ಮಾರ್ಗ ಎಂದು ಅಂದುಕೊಂಡವರು ಈ ಹಾದಿ ತುಳಿಯುತ್ತಾಾರೆ. ‘ಈಸಬೇಕು ಇದ್ದು ಜೈಸಬೇಕು’ ಎಂಬ ಧೈರ್ಯದ ಮಾತುಗಳು ಘಾಸಿಮಾಡಿಕೊಂಡವರ ಮನಸ್ಸಿಿಗೆ ನಾಟುವುದೇ ಇಲ್ಲ. ಆದ್ದರಿಂದಲೇ ಆತ್ಮಹತ್ಯೆೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆೆ ಏರುಮುಖವಾಗಿಯೇ ಮುಂದುವರಿಯುತ್ತಿಿವೆ. ಸೆಪ್ಟೆೆಂಬರ್ 10ನ್ನು ವಿಶ್ವ ಆತ್ಮಹತ್ಯೆೆ ತಡೆ ದಿನ (ವಿರೋಧಿ ದಿನ) ಎಂದು ಪ್ರಪಂಚಾದ್ಯಂತ ಆಚರಿಸಲಾಯಿತು. ಆದರೆ ಇದು ಮತ್ತೊೊಂದು ಆಚರಣೆಯಂತಾಗಬಾರದು ಹಲವರ ಅನಿಸಿಕೆ.

ಐದಾರು ದಶಗಳಷ್ಟು ಹಿಂದೆ ಹೋದರೆ ನಮ್ಮ ದೇಶದಲ್ಲಿ ಆತ್ಮಹತ್ಯೆೆ ಪ್ರಕರಣಗಳು ಹುಬ್ಬೇರಿಸುವ ಮಟ್ಟಿಿಗೆ ಇರಲಿಲ್ಲ. ಇದಕ್ಕೆೆ ಸಾಕಷ್ಟು ಕಾರಣಗಳು ಇವೆ. ವಿಜ್ಞಾಾನ, ತಂತ್ರಜ್ಞಾಾನ ಹೆಚ್ಚುತ್ತಿಿದ್ದಂತೆ, ಜೀವನ ಮಟ್ಟವು ಸುಧಾರಿಸುತ್ತಾಾ ಹೋದಂತೆ, ಆಸೆ ದುರಾಸೆಯತ್ತ ವಾಲುತ್ತಿಿದ್ದಂತೆ, ಸಾಲ ಮಾಡುವಾಗ ಇರುವ ಧೈರ್ಯ ಸಾಲ ತೀರಿಸಲಾಗದೆ ಹತಾಶ ಸ್ಥಿಿತಿಗೆ ಹೋಗುತ್ತಿಿದ್ದಂತೆ ನೊಂದ ಮನಸ್ಸು ಕಂಡ ಏಕೈಕ ದಾರಿಯೆಂದರೆ ಆತ್ಮಹತ್ಯೆೆ. ಮನಸ್ಸು ದುರ್ಬಲವಾದಾಗಲೇ ಆತ್ಮಹತ್ಯೆೆಯ ಯೋಚನೆ ಬರುತ್ತದೆ ಎಂಬುದನ್ನ ಅರಿತೇ, ಇತ್ತೀಚಿನ ವರ್ಷಗಳಲ್ಲಿ ಮನೋವಿಜ್ಞಾಾನ ಕ್ಷೇತ್ರ ಬೆಳೆಯುತ್ತಿಿದ್ದಂತೆ ಮನೋವಿಜ್ಞಾಾನಿಗಳ ಸಂಖ್ಯೆೆಯು ಹೆಚ್ಚುತ್ತಿಿದೆ.

ಆಪ್ತ ಸಮಾಲೋಚನೆ ಮೂಲಕ ಮನಸ್ಸನ್ನು ಸಕಾರಾತ್ಮಕವಾಗಿ ತಿರುಗಿಸುವ ಯತ್ನಗಳು ಸಾಗುತ್ತಿಿದ್ದರೂ ಪರಿಣಾಮ ನಿರೀಕ್ಷಿಿತ ಮಟ್ಟದ್ದಾಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿಿದೆ. ಇತ್ತೀಚೆಗೆ ಬಹುತೇಕರನ್ನು ತೀವ್ರವಾಗಿ ಕಾಡಿದ್ದು ಉದ್ಯಮಿ ಸಿದ್ಧಾಾರ್ಥ ಅವರ ಆತ್ಮಹತ್ಯೆೆ. ಕಾಫಿ ತೋಟಗಳ ಒಡೆಯನಿಗೆ ಸಣ್ಣವಯಸ್ಸಿಿನಿಂದಲೂ ಬೆನ್ನೆೆಲುಬಾಗಿದ್ದ ತಂದೆ( ಈಗ ಅವರು ತೀರಿಕೊಂಡಿದ್ದಾಾರೆ). ನಂತರ ಸಮಾಜದಲ್ಲಿ ಗಣ್ಯಾಾತಿಗಣ್ಯರಾಗಿರುವ ಮಾವ. ಕಣ್ಣಿಿಗೆ ಕಾಣುವ ಆಸ್ತಿಿ-ಅಂತಸ್ತು ಜತೆಗೆ ಮನಸ್ಸಿಿನ ಗೊಂದಲ ಪರಿಹರಿಸುವ ಶಕ್ತಿಿಯಿರುವವರೆನ್ನಲಾದ ವ್ಯಕ್ತಿಿಗಳು ಇದ್ದರೂ ಯಾವುದೂ ಪ್ರಯೋಜಕ್ಕೆೆ ಬರಲಿಲ್ಲ.

ಎಲ್ಲರೂ ಇದ್ದರೂ ಯಾರು ಇಲ್ಲವೇನೋ ಎಂಬ ವ್ಯಕ್ತಿಿಯಂತೆ ನದಿಗೆ ಹಾರಿ ಇಹಲೋಕವನ್ನು ತ್ಯಜಿಸಿದರು. ತಮ್ಮ ಉಪನ್ಯಾಾಸಗಳಲ್ಲಿ ಆತ್ಮಬಲ ಹೆಚ್ಚಿಿಸಿಕೊಳ್ಳಬೇಕೆಂದು ಹೇಳುತ್ತಿಿದ್ದ ಇವರ ಮನಸ್ಸೇ ದುರ್ಬಲವಾಗಿದ್ದಾಾದರೂ ಹೇಗೆ? ಆಪ್ತ ಸಮಾಲೋಚನೆಯೂ ಫಲ ನೀಡುವುದಿಲ್ಲ ಎಂದು ಭಾವಿಸಿಕೊಂಡೇ ತಮ್ಮ ‘ನಿರ್ಧಾರ’ಕ್ಕೆೆ ಅಂಟಿಕೊಂಡರೆ? ಮನೋವಿಜ್ಞಾಾನಿಗಳಿಗೆ ಇದು ಅಧ್ಯಯನಕ್ಕೆೆ, ಮನದಲ್ಲಿ ಯಾವುದೇ ಸಂಶಯ ಇಟ್ಟುಕೊಳ್ಳದೆ ಮನಬಿಚ್ಚಿಿ ಮಾತನಾಡಿ ಎಂದು ತಮ್ಮ ಬಳಿ ಬರುವವರಿಗೆ ಹೇಳುವುದಕ್ಕೆೆ ಉದಾಹರಣೆಯಾಗಬಹುದು.

ಗಟ್ಟಿಿ ಮನಸ್ಸು, ಧೈರ್ಯಂ ಸರ್ವರ್ಥ ಸಾಧನಂ’ ಎಂಬ ಧ್ಯೇಯವಾಕ್ಯ, ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು, ಆಸೆ ಇರಲಿ, ಅತಿ ಆಸೆ ಬೇಡ ಎಂಬುದನ್ನು ಅರಿತು ಸಾಗುವವರಿಗೆ ಆತ್ಮಹತ್ಯೆೆಯ ಚಿಂತೆ ಮೂಡದು. ಹಾಗೆಯೇ ಅಪಹಾಸ್ಯ, ವಿನಾಕಾರಣ ನಿಂದನೆ, ಕುಚೋದ್ಯದ ಮಾತುಗಳು ಕಡಿಮೆಯಾಗಬೇಕು.

ಏನೇ ಆಗಲಿ, ನಮ್ಮ ಸರಕಾರಗಳು ಹಾಗೂ ಸಮಾಜ ಆತ್ಮಹತ್ಯೆೆಯ ಈ ಪಿಡುಗನ್ನು ಗಂಭೀರವಾಗಿ ಪರಿಗಣಿಸಬೇಕು. ಎಲ್ಲ ಸಮಸ್ಯೆೆಗಳಿಗೂ ಆತ್ಮಹತ್ಯೆೆಯೇ ಪರಿಹಾರ ಎಂಬ ಮನೋಭಾವ ಸಾರ್ವತ್ರಿಿಕಗೊಳ್ಳುವಂಥ ಅಪಾಯದ ಸನ್ನಿಿವೇಶ ಎದುರಾಗುವ ಮುನ್ನ ನಾವೆಲ್ಲರೂ ಎಚ್ಚೆೆತ್ತುಕೊಳ್ಳಬೇಕು. ಇದಕ್ಕೊೊಂದು ಪರಿಹಾರ ಕಂಡುಹಿಡಿಯಬೇಕು.

Leave a Reply

Your email address will not be published. Required fields are marked *