Tuesday, 7th July 2020

ನಿಮ್ಮ ಮಗನಿಗೆ ನೀವು ಹೇಳದ 34 ಪಾಠಗಳು

ಅಮೆರಿಕದ ಗಂಡಸರ ಬಗ್ಗೆೆ ಒಂದು ಮಾತಿದೆ. ಹೆಂಡತಿ ತಾಯಿಯಾಗುತ್ತಾಾಳೆ ಎಂಬುದು ಗೊತ್ತಾಾಗುತ್ತಿಿದ್ದಂತೆ ಗಂಡ ಫಾದರ್ ಕ್ಲಾಾಸಿಗೆ ಹೋಗ್ತಾಾನಂತೆ. ಇಷ್ಟು ದಿನಗಳ ವರೆಗೆ ಆತ ಗಂಡನಾಗಿದ್ದ. ಆದರೆ, ಅವನಿಗೆ ತಂದೆಯಾಗಿ ಹೇಗೆ ವರ್ತಿಸಬೇಕು, ತಂದೆಯ ಕೆಲಸಗಳೇನು, ಕರ್ತವ್ಯಗಳೇನು, ಹೊಸ ಪಾತ್ರವನ್ನು ಹೇಗೆ ನಿಭಾಯಿಸಬೇಕು ಎಂಬುದು ಗೊತ್ತಿಿರುವುದಿಲ್ಲ. ನಿನ್ನೆೆಯ ತನಕ ಗಂಡನಾಗಿರುತ್ತಾಾನೆ, ಇಂದಿನಿಂದ ತಂದೆಯೂ ಹೌದು. ಏಕಕಾಲದಲ್ಲಿ ಎರಡೆರಡು ಜವಾಬ್ದಾಾರಿಗಳನ್ನು ನಿಭಾಯಿಸಬೇಕಾಗುತ್ತದೆ, ಅವನ ರೋಲು ಹಠಾತ್ ಬದಲಾಗಿರುತ್ತದೆ. ಈ ಬದಲಾದ ಸನ್ನಿಿವೇಶಕ್ಕೆೆ ಹೇಗೆ ತೆರೆದುಕೊಳ್ಳಬೇಕು, ಒಬ್ಬ ತಂದೆಯಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದು ಅತ್ಯಂತ ಗಹನ ವಿಚಾರ. ಈ ಸಂಗತಿಗಳನ್ನೆೆಲ್ಲ ಯಾರೂ ಹೇಳಿಕೊಡುವುದಿಲ್ಲ.

ಆದರೆ ಫಾದರ್ ಕ್ಲಾಾಸಿನಲ್ಲಿ ಇವೆಲ್ಲವನ್ನೂ ಹೇಳಿಕೊಡುತ್ತಾಾರೆ. ಹೆಂಗಸರು ಹಡೆದಾಗ ಅವರಿಗೆ ಮೆಟರ್ನಿಟಿ ರಜೆ ಕೊಡುವಂತೆ, ಗಂಡಸರಿಗೆ ಫೆಟರ್ನಿಟಿ ರಜೆ ಕೊಡುತ್ತಾಾರೆ. ಆ ಅವಧಿಯಲ್ಲಿ ಗಂಡಸರು ಫಾದರ್ ಕ್ಲಾಾಸಿಗೆ ಹೋಗುತ್ತಾಾರೆ. ಈ ವಿಷಯವನ್ನು ನಮ್ಮ ದೇಶದಲ್ಲಿ ಹೇಳಿದರೆ, ಗೊಳ್ಳೆೆಂದು ನಕ್ಕು ಲೇವಡಿ ಮಾಡುತ್ತಾಾರೆ. ನಮ್ಮಲ್ಲಿ ಈ * ್ಚಟ್ಞ್ಚಛಿಠಿ ಇಲ್ಲವೇ ಇಲ್ಲ. ತಂದೆಯಾಗುತ್ತಿಿದ್ದಂತೆ ಅವನ ಬದಲಾದ ಪಾತ್ರ ಅವನಿಗೆ ತಕ್ಷಣ ಗೊತ್ತಾಾಗಿಬಿಡುತ್ತದೆ, ಅದನ್ನೆೆಲ್ಲಾ ಕಲಿಯಬೇಕಾದ ಅಗತ್ಯವಿಲ್ಲ, ಅದು ಸಹಜವಾಗಿ ಒಲಿದು ಬರುವಂಥದ್ದು ಎಂದು ಭಾವಿಸಲಾಗುತ್ತದೆ.

ಹೀಗಾಗಿ ನಮ್ಮ ದೇಶದಲ್ಲಿ ಫಾದರ್ ಕ್ಲಾಾಸುಗಳಿಲ್ಲ ಮತ್ತು ಅಂಥ ಕ್ಲಾಾಸುಗಳಲ್ಲಿ ಪಾಠ ಮಾಡುವವರು ಸಿಗುವುದಿಲ್ಲ. ಆದರೆ, ವಿದೇಶಗಳಲ್ಲಿ ಇದು ತೀರಾ ಸಹಜ. ತಂದೆಯಾಗಿ ಹೇಗೆ ವರ್ತಿಸಬೇಕು ಎಂಬುದು ಗಂಡಸಿಗೆ ತನ್ನಷ್ಟಕ್ಕೆೆ ತಿಳಿಯುತ್ತದಾ ಅಥವಾ ಅದನ್ನು ಕ್ಲಾಾಸಿಗೆ ಹೋಗಿ ಕಲಿಯಬೇಕಾ, ಇಲ್ಲದಿದ್ದರೆ ತಿಳಿಯುವುದಿಲ್ಲವಾ ಎಂಬುದು ಚರ್ಚಾಸ್ಪದ ವಿಷಯ. ಅಂತೂ ಇಂಥ ಆಲೋಚನೆ, ಕ್ಲಾಾಸುಗಳು ಇರುವುದಂತೂ ನಿಜ. ನಮ್ಮಲ್ಲಿ ಇಂಥ ಸಂಗತಿಗಳ ಬಗ್ಗೆೆ ಮಹತ್ವ ಕೊಡುವುದಿಲ್ಲ. ಏಕಾಏಕಿ ತಂದೆಯಾದವನಿಗೆ ತನ್ನ ಹೊಸ ರೋಲಿನ ಬಗ್ಗೆೆ ಏಕಾಏಕಿ ತಿಳಿಯಲಿಕ್ಕಿಿಲ್ಲ. ಹೆಂಡತಿ ಮತ್ತು ಮಗುವಿನ ಜತೆ ಯಾವ ರೀತಿ ವರ್ತಿಸಬೇಕು, ಅವರ ಬೇಡಿಕೆಗಳೇನು ಎಂಬುದನ್ನೆೆಲ್ಲ ಫಾದರ್ ಕ್ಲಾಾಸಿನಲ್ಲಿ ಹೇಳಿಕೊಡುತ್ತಾಾರೆ.

ನಮ್ಮಲ್ಲಿ ಈ ಎಲ್ಲಾ ಸಂಗತಿಗಳು ತಂದೆಯಾಗುತ್ತಿಿದ್ದಂತೆ ತನ್ನಷ್ಟಕ್ಕೆೆ ಗೊತ್ತಾಾಗುತ್ತದೆ ಎಂದು ತಿಳಿದುಕೊಂಡಿದ್ದೇವೆ. ಹಾಗಾದರೆ ಫಾದರ್ ಕ್ಲಾಾಸ್ ಸರಿಯೋ, ತಪ್ಪೋೋ ಎಂದು ಹೇಳುವುದು ಕಷ್ಟ. ಆದರೆ, ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿ ತಪ್ಪೇನೂ ಇಲ್ಲವಲ್ಲ. ಆದರೆ, ಈ ಕ್ಲಾಾಸುಗಳು ನಮ್ಮ ದೇಶದಲ್ಲಿ ಮಾತ್ರ ನಡೆಯುವುದಿಲ್ಲ ಎಂಬುದು ಅಷ್ಟೇ ಸತ್ಯ. ಕಾರಣ ನಮ್ಮ ಜನರಿಗೆ ಹುಟ್ಟುತ್ತಲೇ (ಅವರು ಹುಟ್ಟುತ್ತಲೇ ಮತ್ತು ಅವರಿಗೆ ಮಗು ಹುಟ್ಟುತ್ತಲೇ) ಎಲ್ಲವೂ ಗೊತ್ತಾಾಗಿಬಿಡುತ್ತದೆ ಎಂದು ಭಾವಿಸುತ್ತಾಾರೆ.

ಅಮೆರಿಕದಲ್ಲಿ ಸುಮಾರು ಐವತ್ತು ವರ್ಷಗಳ ಹಿಂದೆಯೇ ಫಾದರ್ ಕ್ಲಾಾಸುಗಳು ಇದ್ದುವಂತೆ. ಫಾದರ್ ಕ್ಲಾಾಸಿನಲ್ಲಿ ಏನು ಕಲಿತೆ ಎಂಬ ಪ್ರಶ್ನೆೆಗೆ, ‘ಒಬ್ಬ ತಂದೆಯಾಗಿ ಮಾಡಬಹುದಾದ ಅತಿ ದೊಡ್ಡ ಕೆಲಸವೆಂದರೆ ಮಗುವಿನ ಮುಂದೆ ಹೆಂಡತಿಯನ್ನು ಪ್ರೀತಿಸುವುದು ಮತ್ತು ಅವಳನ್ನು ಎಂದೂ ನೋಯಿಸದಿರುವುದು ಎಂಬ ಸರಳ ಪಾಠವನ್ನು ಕಲಿತೆ’ ಎಂಬುದು ಅತ್ಯಂತ ಮಾರ್ಮಿಕ ನೀತಿ ಎಣಿಸಿಕೊಳ್ಳಬಹುದು. ಇಂಥ ಕ್ಲಾಾಸುಗಳು ಅಮೆರಿಕದಲ್ಲಿ ಮಾತ್ರ ಜನಪ್ರಿಿಯವಾಗುತ್ತವೆ, ಆದರೆ, ನಮ್ಮ ದೇಶದಲ್ಲಿ ಈ ಐಡಿಯಾಗಳು ವರ್ಕೌಟ್ ಆಗುವುದಿಲ್ಲ ಎಂಬುದು ಸಹ ಸೋಜಿಗವೇ. ವಿದೇಶಗಳಲ್ಲಿ ವ್ಯಕ್ತಿಿ-ವ್ಯಕ್ತಿಿಗಳ ಸಂಬಂಧ ನಮ್ಮಲ್ಲಿ ಇರುವಷ್ಟು ಗಾಢವಾಗಿಲ್ಲದಿರುವುದು ಇವಕ್ಕೆೆಲ್ಲ ಕಾರಣವಾಗಿರಬಹುದು. ನಮ್ಮ ದೇಶದಲ್ಲಿ ಅವಿಭಕ್ತ ಕುಟುಂಬಗಳಲ್ಲಿ ಮನೆಯೇ ಒಂದು ಶಾಲೆ ಮತ್ತು ಪ್ರಯೋಗಶಾಲೆ. ಅಲ್ಲಿಯೇ ಮಕ್ಕಳು ಎಲ್ಲವನ್ನೂ ಕಲಿಯುತ್ತಿಿದ್ದರು. ಹೀಗಾಗಿ ಇಂಥ ವಿಷಯಗಳನ್ನು ಕ್ಲಾಾಸಿಗೆ ಹೋಗಿ ಕಲಿಯಬೇಕಾದ ಅಗತ್ಯವಿರಲಿಲ್ಲ. ಆದರೆ, ನಮ್ಮ ದೇಶದಲ್ಲಿ , ವಿಶೇಷವಾಗಿ ನಗರಗಳಲ್ಲಿನ ಬದುಕು ಇತ್ತೀಚಿನ ದಿನಗಳಲ್ಲಿ ಅಮೆರಿಕದ ಜನಜೀವನವನ್ನೇ ಅನುಕರಿಸುತ್ತಿಿರುವುದರಿಂದ ಮುಂದೆ ಇಂಥ ಕ್ಲಾಾಸುಗಳ ಅಗತ್ಯ ಬೀಳಬಹುದು.

ಆದರೆ, ಒಂದು ಮಾತಂತೂ ನಿಜ, ನಮ್ಮಲ್ಲಿ ಬದುಕಿನ ಪಾಠಗಳನ್ನು ಕಲಿಸುವ ಇಂಥ ಕ್ಲಾಾಸುಗಳು, ಸಾಹಿತ್ಯಗಳು ಇಲ್ಲವೇ ಇಲ್ಲ. ಸ್ವಾಾಮಿ ಜಗದಾತ್ಮಾಾನಂದ ಅವರು ‘ಬದುಕಲು ಕಲಿಯಿರಿ’ ಎಂಬ ಪುಸ್ತಕವನ್ನು ಬರೆದಾಗ, ‘ಹೇಗೆ ಬದುಕಬೇಕು ಅನ್ನೋೋದನ್ನು ಹೇಳಲು ಇವರಾರು? ಸನ್ಯಾಾಸಿಗಳಿಗೆ ಏನು ಗೊತ್ತು ಬದುಕುವುದು ಹೇಗೆಂದು? ಅವರು ಮೊದಲು ಸಂಸಾರಿಗಳಾಗಿ ಬದುಕುವುದು ಹೇಗೆ ಎಂದು ಹೇಳಲಿ’ ಎಂದು ಲಂಕೇಶ್ ಈ ಕೃತಿಯ ಬಗ್ಗೆೆ ಲೇವಡಿ ಮಾಡಿದ್ದರು. ಅದಾದ ನಂತರ, ಇತ್ತೀಚಿನ ಹದಿನೈದು-ಇಪ್ಪತ್ತು ವರ್ಷಗಳಲ್ಲಿ ಬದುಕು, ವ್ಯಕ್ತಿಿತ್ವ ವಿಕಸನಕ್ಕೆೆ ಸಂಬಂಧಿಸಿದ ಪುಸ್ತಕಗಳು ಜನಪ್ರಿಿಯವಾಗಿದ್ದು. ಇದಕ್ಕೆೆ ಕಾರಣ ನಮ್ಮಲ್ಲಿ ಈ ಪ್ರಕಾರದ ಸಾಹಿತ್ಯಗಳೇ ಇರಲಿಲ್ಲ. ಬದುಕಿನ ಕುರಿತಾದ ರೂಲ್ ಬುಕ್ ಮಾದರಿಯ ಸಾಹಿತ್ಯಗಳೂ ನಮ್ಮಲ್ಲಿ ಇಲ್ಲವೇ ಇಲ್ಲ. ಕಾರಣ ನಮಗೆ ಎಲ್ಲವೂ ಗೊತ್ತು ಎಂಬ ಭಾವನೆ.

ನಾನು ಇತ್ತೀಚೆಗೆ ವಾಕರ್ ಲಮೊಂಡ್ ಎಂಬಾತ ಬರೆದ * ್ಕ್ಠ್ಝಛಿ ಊಟ್ಟ ಖ್ಞಿಿಚಿಟ್ಟ್ಞ ಖಟ್ಞ ಎಂಬ ಪುಸ್ತಕವನ್ನು ಓದುತ್ತಿಿದ್ದೆ. ಲಮೊಂಡ್ ಇದೇ ಮಾದರಿಯ ಅನೇಕ ಪುಸ್ತಕಗಳನ್ನು ಬರೆದಿದ್ದಾನೆ.* ್ಕ್ಠ್ಝಛಿ ್ಛಟ್ಟ ಘೆಛಿಡಿಚಿಟ್ಟ್ಞ ಈ್ಠಜಠಿಛ್ಟಿಿ ಎಂಬುದು ಅವರ ಜನಪ್ರಿಿಯ ಕೃತಿ. ನಮ್ಮ ತಲೆಮಾರಿನ ಜನ ನಾವು ನಮ್ಮ ತಂದೆ-ತಾಯಿಯ ಕೆಲಸ, ಮಾತು, ನಡೆ-ನುಡಿ, ಆಚಾರ, ವಿಚಾರ, ವ್ಯಕ್ತಿಿತ್ವಗಳಿಂದ ಪ್ರಭಾವಿತರಾದವರು. ನಮ್ಮ ಪಾಲಕರು ನಮಗೆ ರೂಲ್ ಬುಕ್ ಮಾದರಿಯಲ್ಲಿ ಬದುಕಿನ ಪಾಠಗಳನ್ನು ಮಾಡಿಲ್ಲ. ಅವರ ಬದುಕೇ ನಮಗೆ ಪಾಠ. ಅವರ ಮಾತೇ ನಮಗೆ ವೇದ. ಇಂದಿಗೂ ನಮ್ಮನ್ನು ಆಳುತ್ತಿಿರುವುದು ನಮ್ಮ ತಂಡ-ತಾಯಿ ಮಾತುಗಳೇ. ಅವರ ವ್ಯಕ್ತಿಿತ್ವವೇ ಹೆಜ್ಜೆೆ-ಹೆಜ್ಜೆೆಗೆ ದಾರಿದೀಪ. ಅವರು ನಮಗೆ ರೂಲ್ ನಂಬರ್ ಒಂದು, ರೂಲ್ ನಂಬರ್ ಎರಡು, ಮೂರು, ನಾಲ್ಕು… ಎಂದು ಹೇಳಿದವರಲ್ಲ.

ಆದರೆ, ಈಗಿನ ಮಕ್ಕಳು ಈ ರೂಲ್ ಬುಕ್ ಇಲ್ಲದೇ ಜೀವಿಸುವುದಿಲ್ಲ. ತಂದೆ-ತಾಯಿ ನೋಡಿ ಕಲಿಯುವುದಾಯಿತು. ಆದರೆ, ಮಕ್ಕಳಿಗೆ ಬದುಕಿನ ಪಾಠಗಳನ್ನು ಕಲಿಸದಿದ್ದರೆ ಅವರಿಗೆ ಅರ್ಥವಾಗುವುದಾದರೂ ಹೇಗೆ ಎಂಬುದು ಲಮೊಂಡ್ ತರ್ಕ. ಅವನ ಕೆಲವು ರೂಲುಗಳು ಬಹಳ ಸರಳವಾಗಿವೆ ಮತ್ತು ಅಷ್ಟೇ ತಮಾಷೆಯಾಗಿವೆ. ಈ ಪುಸ್ತಕವನ್ನು ಓದುತ್ತಾಾ ಹೋದಂತೆಲ್ಲ ನಾನು ನನ್ನ ಮಗನಿಗೆ ಈ ಸಣ್ಣ ಸಣ್ಣ ಸಂಗತಿಗಳನ್ನೆೆಲ್ಲಾ ಹೇಳಿ ಕೊಡಲೇ ಇಲ್ಲವಲ್ಲ ಎಂದೆನಿಸಿತು. ಆತ ಹೇಳಿದ ಕೆಲವು ಅಂಥ ಸಣ್ಣ ಸಣ್ಣ ಸಂಗತಿಗಳನ್ನು ಇಲ್ಲಿ ಓದುತ್ತಾಾ ಹೋಗೋಣ..

1. ಸಾಧ್ಯವಾದಾಗಲೆಲ್ಲ ಟೈ ಧರಿಸಿ. ಟೈ ಧರಿಸುವುದನ್ನು ರೂಢಿಸಿಕೊಂಡರೆ ತನ್ನಿಿಂದ ತಾನೇ ಚೆನ್ನಾಾಗಿ ಡ್ರೆೆಸ್ ಮಾಡುವುದು ಅಭ್ಯಾಾಸವಾಗುತ್ತದೆ. ಆಗ ಒಳ್ಳೆೆಯ ಅಂಗಿ ತೋಡುತ್ತೀರಿ, ಕೂದಲನ್ನು ನೀಟಾಗಿ ಬಾಚಿಕೊಳ್ಳುತ್ತೀರಿ, ಹವಾಯ್ ಚಪ್ಪಲಿ ಧರಿಸಿ ಹೊರಗೆ ಹೋಗುವುದಿಲ್ಲ. ಒಂದು ಟೈ ನಿಮ್ಮ ಚಹರೆಯ ಬಗೆಗಿನ ನಿಮ್ಮ ಧೋರಣೆಯನ್ನೇ ಬದಲಿಸುತ್ತದೆ.

2. ಸಿನಿಮಾಗಳನ್ನು ಸಾಧ್ಯವಾದಷ್ಟು ದೊಡ್ಡ ಪರದೆಯ ಮೇಲೆ ನೋಡಿ. ಜಲಪಾತವನ್ನು ಎಂದೂ ಚೊಂಬಿನಲ್ಲಿರುವ ನೀರಿನಿಂದ ಅಳೆಯಬಾರದು. ಟಿವಿ ಪರದೆ ಮೇಲೆ ಸಿನಿಮಾ ನೋಡುವುದಕ್ಕೂ, ದೊಡ್ಡ ಪರದೆಯಲ್ಲಿ ನೋಡುವುದಕ್ಕೂ ಬಹಳ ಅಂತರ.

3. ನೀವು ಈಜಲು ಕಲಿಯಲೇಬೇಕು. ಕಾರಣ ಕಪ್ಪೆೆಯೂ ಈಜುತ್ತದೆ. ಒಂದು ವೇಳೆ ಈಜಲು ಕಲಿತರೆ ಸಮುದ್ರದಲ್ಲಿ ಈಜುವುದನ್ನು ಮುಂದುವರಿಸಬೇಕು. ಕಾರಣ ನೀವು ತಿಮಿಂಗಲಕ್ಕಿಿಂತ ಕಡೆ ಆಗಬಾರದು.

4. ಸಾಧ್ಯವಾದರೆ ಒಂದು ವಾದ್ಯವನ್ನಾಾದರೂ ನುಡಿಸಲು ಕಲಿಯಬೇಕು. ಹಾಗೆಂದು ನೀವು ಸಂಗೀತ ಪ್ರೇಮಿಯೇ ಆಗಬೇಕೆಂದಿಲ್ಲ. ವಾದ್ಯ ನುಡಿಸುವುದೆಂದರೆ ನಿಮ್ಮ ದೇಹ-ಮನಸ್ಸನ್ನು ಹೊರಗಿನ ಒಂದು ಅಚ್ಚುಕಟ್ಟುತನಕ್ಕೆೆ ಹೊಂದಿಸಿಕೊಂಡಂತೆ.

5. ಯಾವತ್ತೂ ನಿಮಗಿಂತ ಸಣ್ಣವರ ಜತೆ ನಿಂತುಕೊಳ್ಳಿಿ, ಅವರ ಪರವಾಗಿ ಹೋರಾಡಿ. ಅವರು ಕೊನೆ ತನಕ ನಿಮ್ಮ ಕೈಬಿಡುವುದಿಲ್ಲ. ಹೊಟ್ಟೆೆ ತುಂಬಿದವರಿಗೆ ಎಂದೂ ನಿಮ್ಮ ಅಗತ್ಯ ಇರುವುದಿಲ್ಲ.

6. ಕಾಲಕಾಲಕ್ಕೆೆ ಬಿಡುವ ಹಣ್ಣುಗಳನ್ನು ಸೇವಿಸಿ. ಕಾರಣ ಹಣ್ಣುಗಳೆಂದರೆ ನಮ್ಮ ಪ್ರಕೃತಿ ನಮಗೆ ನೀಡುವ ಅತ್ಯಂತ ಸುಂದರ ಉಡುಗೊರೆ.

7. ನೀವು ವೇದಿಕೆ ಮೇಲಿದ್ದಾಗ ಮೊದಲು ಬಿಡಬೇಕಾಗಿದ್ದು ನಾಚಿಕೆ ಅಥವಾ ಸಂಕೋಚ. ದೈರ್ಯಶಾಲಿಯಾಗಿರುವುದು ರಣರಂಗದಲ್ಲಿ ಮಾತ್ರ ಅಲ್ಲ, ವೇದಿಕೆಯ ಮೇಲಿದ್ದಾಗಲೂ ಈ ಮಾತು ಅನ್ವಯವಾಗುತ್ತದೆ.

8. ಟೀ-ಶರ್ಟ್ ಮೇಲಿನ ಬರಹ ನಿಮ್ಮ ಫಿಲಾಸಫಿಯೂ ಅಲ್ಲ, ಜಾಹೀರಾತೂ ಅಲ್ಲ. ನೀವು ಬ್ರಾಾಂಡ್ ಅಂಬಾಸಿಡರ್ ಕೂಡ ಅಲ್ಲ. ಆದ್ದರಿಂದ ಸಾಧ್ಯವಾದ ಮಟ್ಟಿಿಗೆ ಪ್ಲೈನ್ ಟೀ-ಶರ್ಟ್ ಧರಿಸಿ.

9. ಅವಳ ಡ್ರೆೆಸ್ ಸೈಜ್ ಎಷ್ಟು ಎಂಬುದು ನಿಮಗೆ ಗೊತ್ತಿಿರಬೇಕು. ಆದರೆ, ಎಂದೂ ಕೇಳಬಾರದು.

10. ಒಂದು ಕವನ, ಆರ್ಟ್, ಸಂಗೀತ ನಿಮಗೆ ಅರ್ಥವಾಗದಿದ್ದರೆ, ಗೊತ್ತಿಿರದಿದ್ದರೆ ಅಣಕ, ವ್ಯಂಗ್ಯ, ಟೀಕೆ ಮಾಡಬಾರದು. ನಿಮಗೆ ಉರ್ದು, ಗ್ರೀಕ್ ಗೊತ್ತಿಿಲ್ಲವೆಂದ ಮಾತ್ರಕ್ಕೆೆ ಅವು ಕನಿಷ್ಠ ಎಂದಲ್ಲ.

11. ನಿಮ್ಮ ಎಂಜಲು ಬೇರೆಯವರಿಗೆ ಪ್ರಸಾದ ಅಲ್ಲ. ಎಂದೂ ಉಗುಳಬೇಡಿ. ನಿಮ್ಮ ಶರೀರಕ್ಕೆೆ ಬೇಡವಾದುದನ್ನು ದಾರಿಯಲ್ಲಿ ಹೊರಹಾಕಬಾರದು. ನಿಮ್ಮ ದೇಹಕ್ಕೆೆ ಬೇಡವಾದುದು ಬೇರೆಯವರಿಗೆ ಬೇಕಾಗುವುದಿಲ್ಲ.

12. ನಿಮ್ಮ ತಾಯಿ ಜತೆ ಹೆಚ್ಚಿಿನ ಸಮಯ ಕಳೆಯಿರಿ. ನೀವು ಎಷ್ಟೇ ಓದಿರಬಹುದು, ಅವಳಿಗೆ ನಿಮಗೆ ಗೊತ್ತಿಿಲ್ಲದ್ದು ಗೊತ್ತಿಿರುತ್ತದೆ. ನಿಮ್ಮ ದೌರ್ಬಲ್ಯಗಳೇನು ಎಂಬುದು ನಿಮಗಿಂತ ಚೆನ್ನಾಾಗಿ ಅರಿತವಳು ಅವಳೇ.

13. ಮನೆಗೆ ಬೇಕಾದ ಫರ್ನಿಚರ್‌ಗಳನ್ನು ಒಂದೇ ಸಲ ಖರೀದಿಸಬೇಡಿ. ನಿಮ್ಮ ಅಗತ್ಯಕ್ಕೆೆ ತಕ್ಕಂತೆ ಖರೀದಿಸುತ್ತಾಾ ಹೋಗಿ. ನಿಮ್ಮ ದೇಹ ಬೇರೆ ಅಲ್ಲ, ಫರ್ನಿಚರ್ ಬೇರೆ ಅಲ್ಲ. ನಿಮಗೆಂಥ ಫರ್ನಿಚರ್ ಬೇಕು ಎಂಬುದನ್ನು ನಿಮ್ಮ ದೇಹವೇ ಹೇಳುತ್ತದೆ.

14. ಪ್ರಯಾಣಕ್ಕೆೆ ಹೊರಟಾಗ ಅತಿ ಭಾರವಾದ ಲಗೇಜ್ ಯಾವುದು ಅಂದರೆ ಖಾಲಿ ಪರ್ಸ್. ಅಗತ್ಯಕ್ಕಿಿಂತ ಹೆಚ್ಚು ಹಣ ಇಟ್ಟುಕೊಳ್ಳಿಿ. ಅಷ್ಟಕ್ಕೂ ಹಣವೆಂದರೆ ಲಗೇಜ್ ಅಲ್ಲ.

15. ನೀವು ಹೊತ್ತುಕೊಳ್ಳಲು ಆಗದ್ದಕ್ಕಿಿಂತ ಹೆಚ್ಚಿಿನ ಬಟ್ಟೆೆಗಳನ್ನು ತುಂಬಿಕೊಂಡು ಹೊರಡಬೇಡಿ. ನಿಮ್ಮ ಬಳಿ ಲಗೇಜ್ ಇದೆ ಅಂದರೆ ಕೂಲಿ ಆಗಲು ಸಿದ್ಧರಿರಬೇಕು.

16. ಲಿಫ್‌ಟ್‌ ಇರಲಿ, ಆದರೆ ಮೆಟ್ಟಿಿಲನ್ನೇ ಬಳಸಿ.

17. ಊಟ ಮಾಡುವಾಗ ಅರ್ಧಕ್ಕೆೆ ಏಳಬೇಡಿ. ಪುಸ್ತಕ ಓದಲು ಆರಂಭಿಸಿದಾಗಲೂ ಈ ಮಾತು ಅನ್ವಯ.

18. ಚೆನ್ನಾಾಗಿ ಡ್ರೆೆಸ್ ಮಾಡಿ, ಆದರೆ ಆ ಮಾತು ಅಂತ್ಯಸಂಸ್ಕಾಾರದಲ್ಲಿ ಭಾಗವಹಿಸುವಾಗ ಅನ್ವಯವಾಗುವುದಿಲ್ಲ.

19. ಟಿವಿ ಲೈವ್ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ನಿಮ್ಮ ಮಾತಿನಷ್ಟೇ ಹಾವ-ಭಾವವೂ ಅಷ್ಟೇ ಮುಖ್ಯ. ಅವೆರಡರ ಮೇಲೆ ನಿಗಾ ಇರಲಿ.

20. ಬಾಸ್ ಜತೆ ಸುಳ್ಳು ಹೇಳಬೇಡಿ. ಅದು ಒಂದಲ ಒಂದು ದಿನ ಗೊತ್ತಾಾಗುತ್ತದೆ. ಈ ಮಾತು ಹೆಂಡತಿಗೆ ಸುಳ್ಳು ಹೇಳುವುದಕ್ಕೂ ಲಾಗೂ ಆಗುತ್ತದೆ.

21. ದುಬಾರಿಯಾದ ರೆಸ್ಟೋೋರೆಂಟ್‌ಗಳಲ್ಲಿ ಆಹಾರ ಚೆನ್ನಾಾಗಿರುತ್ತದೆ ಎಂಬ ಖಾತ್ರಿಿ ಇಲ್ಲ. ಆಹಾರದ ರುಚಿಗೂ, ಹಣಕ್ಕೂ ಸಂಬಂಧವಿರುವುದಿಲ್ಲ. ತರಕಾರಿ ಇಲ್ಲದೆ ರುಚಿಕಟ್ಟಾಾದ ಅಡುಗೆ ಮಾಡಬಹುದು.

22. ನಿಮ್ಮ ಜತೆಗಿರುವ ಹುಡುಗಿ ಯಾರದ್ದೋ ಅಕ್ಕನೋ, ತಂಗಿಯೋ ಆಗಿರಬಹುದು. ಆತನಿಗೆ ನಿಮ್ಮ ಕುಂಡೆಗೆ ಒದೆಯುವ ಅಧಿಕಾರ ಇದೆ ಎಂಬುದು ತಿಳಿದಿರಲಿ.

23. ವಿಮಾನದಲ್ಲಿ ಹೋಗುವಾಗ ಸ್ಪೋೋರ್ಟ್ ಕೋಟ್ ಧರಿಸಿ. ಕಾರಣ ಇಷ್ಟೇ ಅದಕ್ಕೆೆ ಹೆಚ್ಚು ಜೇಬುಗಳಿರುತ್ತವೆ.

24. ವಿಮಾನದಲ್ಲಿ ಕುಳಿತಾಗ ಎಂದೂ ಪೈಲಟ್, ಗಗನಸಖಿ ಜತೆಗೆ ಜಗಳವಾಡಬಾರದು. ಗೊರಕೆ ಹೊಡೆಯುವವರಾದರೆ ವಿಮಾನದಲ್ಲಿ ಮಲಗಬಾರದು. ಸಿನಿಮಾ ನೋಡಿ, ಪುಸ್ತಕ ಓದಿ.

25. ಫುಟ್ಬಾಾಲ್, ಹಾಕಿ, ಗಾಲ್‌ಫ್‌ ..ಹೀಗೆ ಯಾವುದೇ ಆಟವಿರಬಹುದು, ಆ ಆಟದ ನಿಯಮ ತಿಳಿದುಕೊಳ್ಳದೇ ಅವುಗಳನ್ನು ನೋಡಬಾರದು.

26. ನಿಮ್ಮ ಹೆಸರನ್ನು ನಿರ್ಧರಿಸುವ ಸ್ವಾಾತಂತ್ರ್ಯ ನಿಮಗಿಲ್ಲ. ಹಾಗೆಯೇ ನಿಮ್ಮ ನಿಕ್ ನೇಮ್ ಕೂಡ. ಬೇರೆಯವರಿಗೆ ಮಾತ್ರ ನೀವು ನಾಮಕರಣ ಮಾಡಬಹುದು, ನಿಮಗಲ್ಲ.

27. ಇಬ್ಬರಿಗಾಗಿ ಒಳ್ಳೆೆಯ ದೇಹವನ್ನು (ಬಾಡಿ ಬಿಲ್‌ಡ್‌ ) ರೂಪಿಸಿಕೊಳ್ಳಿಿ. ಒಂದು ನಿಮಗೆ, ಮತ್ತೊೊಂದು ಅವಳಿಗೆ.

28. ನೀವು ನಿಮ್ಮ ಅಕ್ಕ-ಪಕ್ಕದವರಿಗೆ ಸದಾ ಕೊಡಬಹುದಾದ ಆನಂದವೇನೆಂದರೆ ಚೆಂದವಾಗಿ ಇಟ್ಟುಕೊಂಡ ಗಾರ್ಡನ್.

29. ನಾಯಿ ಬಾಲ ಅಲ್ಲಾಡಿಸುತ್ತಿಿದ್ದರೆ ಮಾತ್ರ ಮುದ್ದು ಮಾಡಬಹುದು. ಬಾಲ ಅಲ್ಲಾಡಿಸುವ ನಾಯಿ ಕಚ್ಚುವುದಿಲ್ಲ. ಬಾಯಿ ಅಲ್ಲಾಡಿಸುವ (ಹಸಿದ) ನಾಯಿಯ ಬಾಲ ಅಲ್ಲಾಡಿಸಲು ಹೋಗಬಾರದು. ನಾಯಿ ಹಸಿದಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳುವುದು ಜಾಣ್ಮೆೆ. ಅದಾಗಿಯೇ ತಾನು ಹಸಿದಿದ್ದೇನೆಂದು ಹೇಳುವುದಿಲ್ಲವಲ್ಲ.

30. ‘ನೀನು ಬಸುರಿಯಾ?’ ಎಂದು ಯಾವ ಹೆಣ್ಣನ್ನೂ ಕೇಳಬಾರದು. ಕುತೂಹಲ ಹಿಡಿದಿಟ್ಟುಕೊಳ್ಳಲು ಆಗದಿದ್ದರೆ, ‘ಯಾವಾಗ ತಾಯಿ ಆಗುತ್ತೀರಿ? ಅಥವಾ ಸಿಹಿ ಸುದ್ದಿ ಯಾವಾಗ ಕೊಡ್ತೀರಿ?’ ಎಂದು ಕೇಳಬಹುದು.

31. ಸಂಸ್ಕೃತ ಮತ್ತು ಫ್ರೆೆಂಚ್ ಪದಗಳನ್ನು ಸರಿಯಾಗಿ ಉಚ್ಚರಿಸಲು ಕಲಿತುಕೊಳ್ಳಿಿ. ಇವೆರಡನ್ನೂ ಸರಿಯಾಗಿ ಉಚ್ಚರಿಸಿದರೆ ಯಾವ ಭಾಷೆಯನ್ನಾಾದರೂ ಕಲಿಯಬಹುದು.

32. ಸ್ವಿಿಮ್ಮಿಿಂಗ್ ಪೂಲಿನಿಂದ ಹೊರಡುವವರ ಪೈಕಿ ನೀವು ಎಂದೂ ಕೊನೆಯವರಾಗಬಾರದು.

33. ಟೈ ಧರಿಸಿದಾಗ ಅಂಗಿಯ ಮೇಲಿನ ಬಟನ್ ಹಾಕಿರಲೇಬೇಕು. ಒಂದು ವೇಳೆ ಮೇಲಿನ ಬಟನ್ ಕಿತ್ತು ಹೋಗಿದ್ದರೆ, ಟೈ ಧರಿಸಬಾರದು.

34. ಭಾಷಣ ಮಾಡುವಂತೆ ಅಚಾನಕ್ ವೇದಿಕೆಗೆ ಕರೆದರೆ ಎಂದೂ ಹೋಗದೇ ಇರಬೇಡಿ. ಇದು ನಿಮ್ಮೊೊಳಗಿನ ಸಾಮರ್ಥ್ಯವನ್ನು ನೀವೇ ಕಾಣುವ ಅವಕಾಶ.

35.ಇತಿಮಿತಿಯಲ್ಲಿ ಗುಂಡು ಹಾಕಿ, ತಪ್ಪಿಿಲ್ಲ. ಆದರೆ ಕೈಯಲ್ಲಿ ಗುಂಡಿನ ಗ್ಲಾಾಸ್ ಹಿಡಿದು ಫೋಟೋ ತೆಗೆಸಿಕೊಳ್ಳಬಾರದು. ಮಾಂಸ ಸೇವಿಸಿ, ತಪ್ಪಿಿಲ್ಲ. ಆದರೆ ಮೂಳೆಗಳನ್ನು ಮಾಲೆ ಮಾಡಿ ಧರಿಸಬಾರದು.

36. ಪಿಸ್ತೂಲು, ರಿವಾಲ್ವರ್ ಅಥವಾ ಬಂದೂಕು ಹಿಡಿದವನ ಜತೆ ವಾದ, ಜಗಳಕ್ಕೆೆ ಹೋಗಬಾರದು, ನೀವೇ ಸರಿಯಿದ್ದರೂ.

37. ನಿಮ್ಮ ಟೀಕಾಕಾರನಿಗೆ ರೈಟಿಂಗ್‌ನಲ್ಲಿ ಉತ್ತರಿಸಲು ಹೋಗಬಾರದು.

38. ನಿಮಗಿಂತ ದಡ್ಡರ ಜತೆ ಊಟ ಮಾಡಬೇಕು. ನಿಮಗಿಂತ ಬುದ್ಧಿಿವಂತರ ಜತೆ ಚರ್ಚೆ ಮಾಡಬೇಕು. ಇದೆಂದೂ ಉಲ್ಟಾಾ ಆಗಬಾರದು.

39. ನಿಮ್ಮ ಸಂದೇಹಗಳೇನೇ ಇದ್ದರೂ ಟೀಚರ್ ಬಳಿ ಕೇಳಿ ಪರಿಹರಿಸಿಕೊಳ್ಳಬೇಕು. ಒಂದು ವೇಳೆ ಟೀಚರ್ ಹೋಂ ವರ್ಕ್ ಕೊಡದಿದ್ದರೆ, ಸುಮ್ಮನಿರಬೇಕು.

40 ಎಲ್ಲ ಅಂಶಗಳೂ ಮುಗಿಯುತ್ತಿಿದ್ದಂತೆ ಅಲ್ಲಿಗೇ ಭಾಷಣ ನಿಲ್ಲಿಸಬೇಕು. ಪ್ರೇಕ್ಷಕರಿಗಾಗಿ ಮಾತಾಡಬಾರದು.

41. ಮನೆಯಲ್ಲಿ ನಿತ್ಯ ಧರಿಸುವ ಪೈಜಾಮವೇ ಇರಬಹುದು, ಇಸ್ತ್ರಿಿ ಮಾಡಿಯೇ ಧರಿಸಬೇಕು. ನೀವು ಅತಿ ಹೆಚ್ಚು ಹೊತ್ತು ಕಳೆಯುವುದು ಹಾಸಿಗೆ ಮೇಲೆ. ಸಾಧ್ಯವಾದರೆ ಹೊಸ ಬೆಡ್ ಶೀಟ್ ಮೇಲೆ ಮಲಗಬೇಕು. ಉಂಡ ಬಾಳೆಯಂತೆ ಮಲಗಿದ ಬೆಡ್ ಶೀಟನ್ನು ಮರುಬಳಕೆ ಮಾಡಬಾರದು.

42. ಕಾರು ವಾಹನವೇ ಹೊರತು, ನಿಮ್ಮ ವಂಶ ವೃಕ್ಷ *
(ಊಞಜ್ಝಿಿ ್ಟಛಿಛಿ) ಅಲ್ಲ. ಕಾರಿನ ಮೇಲೆ ನಿಮ್ಮ ಮನೆ-ಮಂದಿ ಹೆಸರುಗಳನ್ನೆೆಲ್ಲ ಬರೆಯಿಸಬಾರದು.

43. ತಡ ರಾತ್ರಿಿ ಪಾರ್ಟಿಯಲ್ಲಿ ಭಾಗವಹಿಸಿದಾಗ ಅಲ್ಲಿಂದ ಯಾರಿಗೂ ಗೊತ್ತಾಾಗದಂತೆ ಹೊರಟು ಹೋಗುವ ಬಾಗಿಲು ಎಲ್ಲಿದೆ ಎಂಬುದನ್ನು ಮೊದಲೇ ತಿಳಿದುಕೊಳ್ಳಬೇಕು.

44. ಬೇರೆಯವರ ಹಣ ಅಥವಾ ಕಾರನ್ನು ಕದ್ದು ಸಿಕ್ಕಿಿ ಬಿದ್ದಾಗ, ಕಾರಣ ಹೇಳಿದರೆ ಯಾರೂ ನಂಬುವುದಿಲ್ಲ. ಹೊಡೆದರೆ ಹೊಡೆಸಿಕೊಳ್ಳಬೇಕು. ಹುಡುಗಿಯನ್ನು ಚುಡಾಯಿಸಿದಾಗ, ಪರಸ್ತ್ರೀ ಜತೆ ಅಸಭ್ಯ ವರ್ತನೆ ಮಾಡಿ ಸಿಕ್ಕಿಿ ಬಿದ್ದಾಗಲೂ ಈ ಮಾತು ಅನ್ವಯ.
45. ಬೇರೆಯವರನ್ನು ಅಭಿನಂದಿಸುವಾಗ, ಪ್ರಶಂಸಿಸುವಾಗ ಅವರ ಕಣ್ಣಲ್ಲಿ ಕಣ್ಣಿಿಟ್ಟು ನೋಡಿ. ಹೋಟೆಲ್ ಮಾಣಿಗೆ ಥಾಂಕ್ಯೂ ಎನ್ನುವಾಗಲೂ ಈ ಮಾತು ಅನ್ವಯ.

46. ನನಗೆ ಗೊತ್ತು ಈ ಯಾವ ಸಂಗತಿಗಳನ್ನೂ ನೀವು ನಿಮ್ಮ ಮಗನಿಗೆ ಹೇಳಿರುವುದಿಲ್ಲ. ಅವನೊಂದಿಗೆ ಈ ವಿಷಯಗಳನ್ನು ಚರ್ಚಿಸಿರುವುದಿಲ್ಲ.

Leave a Reply

Your email address will not be published. Required fields are marked *