Wednesday, 26th February 2020

ಪತ್ರಕರ್ತ ಸಮಾಜದ ಸರಕಾರದ ಲೋಪದೋಷಗಳನ್ನುಎತ್ತಿಡಿಯಬೇಕು : ಮಹಾದೇವ್ ಪ್ರಕಾಶ್

ಪತ್ರಕರ್ತ ಸಮಾಜದಲ್ಲಿನ ಸಮಸ್ಯೆೆಗಳು ಹಾಗೂ ಸರಕಾರದ ಲೋಪದೋಷವನ್ನು ಎತ್ತಿಿ ತೋರಿಸುವಂತ ಕನ್ನಡಿಯಂತೆ ಕಾರ್ಯನಿರ್ವಹಿಸ ಬೇಕು ಎಂದು ಮುಖ್ಯಮಂತ್ರಿಿ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಾಲಯದ ವಿದ್ಯುನ್ಮಾಾನ ಮಾಧ್ಯಮ ವಿಭಾಗವು ಆಯೋಜಿಸಿದ ‘ವಿದ್ಯಾಾರ್ಥಿಗಳಿಗೆ ಮಾಧ್ಯಮ ಅರಿವು’ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಗುರಿಯನ್ನು ತಲುಪಲು ಮನುಷ್ಯನಿಗೆ ಅಗತ್ಯವಿರುವ ಅಂಶಗಳೆಂದರೆ ಪೂರ್ವಸಿದ್ಧತೆ, ಬದ್ಧತೆ, ಸಮರ್ಪಣೆ ಮತ್ತು ಪ್ರಾಾಮಾಣಿಕತೆಗಳ ಸಮಗ್ರತೆ ಇವುಗಳನ್ನು ನಮ್ಮ ಬದುಕಿನಲ್ಲಿ ನಾವು ಅಳವಡಿಸಿಕೊಂಡಾಗ ಮಾತ್ರ ಗುರಿಯಯನ್ನು ತಲುಪಲು ಸಾಧ್ಯ ಎಂದು ವಿದ್ಯಾಾರ್ಥಿಗಳಿಗೆ ತಿಳಿಸಿದರು.

ಪತ್ರಕರ್ತನ ಬರವಣಿಗೆ ಬಸವಣ್ಣನವರ ‘ನುಡಿದರೆ ಮುತ್ತಿಿನ ಹಾರದಂತಿರ ಬೇಕು’ ಎಂಬ ವಚನದ ಮಾಧರಿಯಲ್ಲಿ ಇರಬೇಕು ಮತ್ತು ವಿಷಯ ಗ್ರಹಿಕೆಯಲ್ಲಿ ನಾವು ಯಾವಾಗಲೂ ವಸ್ತುನಿಷ್ಠ ದೃಷ್ಠಿಿಕೋಷವನ್ನು ಅನುಸರಿಸ ಬೇಕು, ಬರೆದಂತೆ ನಡೆದುಕೊಂಡರೆ ಮಾತ್ರ ಮಾದರಿ ಪತ್ರಕರ್ತರಾಗಲು ಸಾಧ್ಯ ಎಂದು ಹೇಳಿದರು.

ಬೆವಿವಿ ಕುಲಸಚಿವ ಪ್ರೊೊ.ಬಿ.ಕೆ.ರವಿ ಮಾತನಾಡಿ ವಿದ್ಯುನ್ಮಾಾನ ಮಾಧ್ಯಮವು ಸಮಯದೊಂದಿಗೆ ಸೆಣೆಸುವ ಕಾರ್ಯಕ್ಷೇತ್ರವಾಗಿದ್ದು ವಿದ್ಯಾಾರ್ಥಿಗಳು ಸಮಯ ವ್ಯರ್ಥ ಮಾಡದೇ ಸಮಾಯದ ಸದುಪಯೋಗ ಮಾಡಿಕೊಳ್ಳುವುದನ್ನು ಅಭ್ಯಾಾಸ ಮಾಡಿಕೊಳ್ಳ ಬೇಕೆಂದು ಸಲಹೆ ನೀಡಿದರು. ಬೆವಿವಿ ಕುಲಪತಿ ವೇಣುಗೋಪಾಲ್ ಕೆ ಆರ್ ಮಾತನಾಡಿ, ಮಾಹಿತಿ ಎಂಬುವುದು ಕೈಬೆರಳಿನಲ್ಲಿದೆ ಗೂಗಲ್ ಮಾಡಿದರೆ ಸಿಗುತ್ತದೆ ಎನ್ನುವ ಈ ಕಾಲದಲ್ಲಿ ಅದನ್ನು ಹುಡುಕಲು ಎಷ್ಟು ಸಮಯ ವ್ಯರ್ಥವಾಗುತ್ತದೆ ಎಂದು ಅರ್ಥವಾಗುವುದಿಲ್ಲ. ಅದರ ಬದಲಿಗೆ ನಿಮ್ಮ ತಲೆಯಲ್ಲೆೆ ಎಲ್ಲಾಾ ಮಾಹಿತಿ ಇದ್ದರೆ ಕ್ಷಣಾರ್ಧದಲ್ಲಿ ವಿಷಯ ನಿಮ್ಮ ನಾಲಿಗೆ ಅಥವಾ ಬರವಣಿಗೆಯಾಗಿ ಸಿದ್ಧವಾಗುತ್ತದೆ ಎಂದು ತಿಳಿಸಿದರು.

ವರದಿಗಾರಿಕೆ ಸುಲಭ ಆದರೆ, ಕಾರ್ಯಕ್ಷೇತ್ರದಿಂದ ಮಾಹಿತಿ ಪಡೆದು ವರದಿ ಮಾಡುವುದು ಮುಖ್ಯ. ಹಾಗಾಗಿ ನೀವು ಇಂಟರ್ ನೆಟ್ ವರದಿಗಾರರಾಗದೆ ನೈಜ ವರದಿಗಾರರಾಗಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಜ್ಞಾಾನ ನಿಕಾಯದ ಮುಖ್ಯಸ್ಥ ಪ್ರೊೊ. ರಾಮಚಂದ್ರ ಮೋಹನ್ ಮತ್ತು ವಿದ್ಯುನ್ಮಾಾನ ಮಾಧ್ಯಮ ವಿಭಾಗದ ಮುಖ್ಯಸ್ಥೆೆ ಡಾ.ವಾಹಿನಿ, ಡಾ. ರಾಜೇಶ್ವರಿ, ಡಾ.ಶ್ರೀಪತಿ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *