Wednesday, 16th October 2019

ಪೊಲೀಸರಿಗೆ ತಲೆ ನೋವಾದ ವೃದ್ಧೆಯ ಕೊಲೆ ಪ್ರಕರಣ

ಬೆಂಗಳೂರು:ಕೆಲ ತಿಂಗಳ ಹಿಂದೆ ವೃದ್ಧೆೆಯನ್ನು ಸೀರೆಯಿಂದ ಉಸಿರುಗಟ್ಟಿಿಸಿ ಕೊಲೆ ಮಾಡಿರುವ ಪ್ರಕರಣಕ್ಕೆೆ ಸಂಬಂಧಿಸಿದಂತೆ ಸಿಸಿಟಿವಿ ಕ್ಯಾಾಮೆರಾದಲ್ಲಿ ಶಂಕಿತ ಹಂತಕನ ಚಲನವಲನ ಸೆರೆಯಾಗಿದ್ದರೂ ಆರೋಪಿ ಎಲ್ಲಿದ್ದಾನೆ ಎಂಬ ಮಾಹಿತಿ ಪತ್ತೆೆಯಾಗದಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಫೆ.5ರಂದು ದುಷ್ಕರ್ಮಿಗಳು ಒಂಟಿ ಮಹಿಳೆ ಸಂತೋಷಿ ದೇವಿ ಎಂಬುವರನ್ನು ಉಸಿರುಗಟ್ಟಿಿಸಿ ಬರ್ಬರವಾಗಿ ಹತ್ಯೆೆ ಮಾಡಿದ ಘಟನೆ ಸಂಪಗಿರಾಮನಗರ ಠಾಣಾ ವ್ಯಾಾಪ್ತಿಿಯಲ್ಲಿ ನಡೆದಿತ್ತು. ಅಪಾರ್ಟ್‌ಮೆಂಟ್‌ವೊಂದರಲ್ಲಿ ಸಂತೋಷಿ ದೇವಿ ಒಂಟಿಯಾಗಿ ವಾಸವಾಗಿದ್ದರು. ಇದನ್ನರಿತ ಹಂತಕರು ಆರು ತಿಂಗಳ ಹಿಂದೆ ಆಕೆಯನ್ನು ಕೊಲೆಗೈದು ಮನೆಯಲ್ಲಿದ್ದ ಚಿನ್ನಾಾಭರಣ ಎಗರಿಸಿ ಪರಾರಿಯಾಗಿದ್ದರು. ಈ ಕೃತ್ಯ ಪಕ್ಕದ ಮನೆಯ ಸಿಸಿ ಕ್ಯಾಾಮೆರಾದಲ್ಲಿ ಸೆರೆಯಾಗಿತ್ತು. ಇದನ್ನು ಆಧರಿಸಿ ಪೊಲೀಸರು ತನಿಖೆ ಕೂಡ ನಡೆಸಿದರು. ಮತ್ತೊೊಂದೆಡೆ ವೃದ್ಧೆೆಯ ಪತಿ ಪೊಲೀಸರ ರೀತಿ ಖುದ್ದು ತನಿಖೆ ನಡೆಸಿ ಸಿಸಿ ಕ್ಯಾಾಮೆರಾದಲ್ಲಿ ಪತ್ತೆೆಯಾದ ಆರೋಪಿಯ ಚಹರೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಈ ಆರೋಪಿಯ ಪತ್ತೆೆಗೆ ಸಹಕರಿಸಿ ಎಂದು ಮನವಿ ಮಾಡಿದ್ದರು. ನಂತರ ಆರೋಪಿ ಯಮಹ ಬೈಕ್‌ನಲ್ಲಿ ಬಂದಿರುವುದಾಗಿ ತಿಳಿದು ನಗರ ಯಮಹ ಬೈಕ್ ಷೋ ರೂಂಗಳಿಗೆ ಭೇಟಿ ವಿಚಾರಣೆ ನಡೆಸಿದ್ದಾಾರೆ. ನಂತರ ಈ ಎಲ್ಲ ಮಾಹಿತಿಯನ್ನು ಕಮೀಷನರ್ ಹಾಗೂ ಡಿಸಿಪಿ ನೀಡಿದ್ದಾಾರೆ. ಆದರೂ ಆ ಹಂತಕನ ಸುಳಿವು ಇನ್ನೂ ಸಿಕ್ಕಿಿಲ್ಲ. ಹೀಗಾಗಿ ಪೊಲೀಸರಿಗೆ ಈ ಪ್ರಕರಣ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Leave a Reply

Your email address will not be published. Required fields are marked *