Sunday, 31st May 2020

ಪ್ರಮುಖರ ಬಂಧನ ಎಬ್ಬಿಿಸುವ ‘ಸೇಡಿನ ರಾಜಕೀಯದ’ ಅಲೆ!

ಹೊಸ ಧಾಟಿ

ರಾಂ, ಎಲ್ಲಂಗಳ
ಮೊನ್ನೆೆ ಮೊನ್ನೆೆ ಕಾಂಗ್ರೆೆಸಿನ ಹಿರಿಯ ಮುಖಂಡ ಪಿ.ಚಿದಂಬರಂ ಬಂಧನದ ಬೆನ್ನಲ್ಲೇ ನಿನ್ನೆೆ ಮೊನ್ನೆೆ ಕಾಂಗ್ರೆೆಸಿನ ಇನ್ನೋೋರ್ವ ನಾಯಕ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಬಂಧನಕ್ಕೊೊಳಗಾದರು. ರಾಜ್ಯಾಾದ್ಯಂತ ಆಕ್ರೋೋಶ ವ್ಯಕ್ತವಾಯಿತು. ಅಭಿಮಾನವಲ್ಲ ಅದು ದುರಭಿಮಾನವೆನ್ನುವ ಮಟ್ಟಿಿಗೆ ಡಿಕೆಶಿ ಅಭಿಮಾನಿಗಳಿಂದ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ವೇಳೆ ಹತ್ತಾಾರು ಬಸ್ಸುಗಳು ಹೊತ್ತಿಿ ಉರಿದವು. ಈ ಕೃತ್ಯವೆಸಗಿದವರು ಕಾಂಗ್ರೆೆಸ್ ಕಾರ್ಯಕರ್ತರಲ್ಲ ಅಂತ ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿಿ ಸಿದ್ದರಾಮಯ್ಯನವರೇನೋ ತೇಪೆ ಹಚ್ಚಲು ನೋಡಿದರು. ಆದರೆ ಡಿಕೆಶಿ ಬಳಿಕ ಯಾರ ಸರದಿ ಎಂಬ ಕುತೂಹಲ ಜನಮನದಲ್ಲಿ ಮೂಡಿರುವಂತೆ ಮುಂದೇನು ಎಂಬ ಆತಂಕ ಕಾಂಗ್ರೆೆಸ್ ನಾಯಕರಲ್ಲಿಯೂ ಮನೆಮಾಡಿದೆ.

ನಮ್ಮ ಬಹುತೇಕ ರಾಜಕಾರಣಿಗಳ ಹಿಂದೆಯೂ ಒಂದಲ್ಲ ಒಂದು ಹಗರಣದ ಕರಿನೆರಳು ಇರುವುದುಂಟು. ಇಂದಲ್ಲ ನಾಳೆ ಅದು ಬೆಳಕಿಗೆ ಬರುವ ಭಯ ಇದ್ದೇ ಇರುತ್ತದೆ. ಹಾಗಾಗಿ ಕವಿ ರನ್ನನ ‘ಸಾಹಸ ಭೀಮ ವಿಜಯ’ದಲ್ಲಿ ಭೀಷ್ಮನಂದಂತೆ ‘ಸೂಳ್ ಪಡೆಯಲಪ್ಪುುದು ಕಾಣಾ..’ ಆದರೆ ‘ಮಹಾಜಿರಂಗದೊಳ್ ಹೊಕ್ಕು ಹೋರಾಡಿ ಸಾಯಲು’ ಅಲ್ಲ; ಬಂಧನ ಭಾಗ್ಯವ ಹೊಂದಲು! ಸಿದ್ದರಾಮಯ್ಯನವರಿಗೆ ಮೈಸೂರು ನಗರಾಭಿವೃದ್ಧಿಿ ಪ್ರಾಾಧಿಕಾರದ ಜಮೀನು ಡಿ-ನೋಟಿಫಿಕೇಶನ್ ಹಗರಣ ಬೆನ್ನುಬಿದ್ದಿದೆ.

ರಾಜಕೀಯದಲ್ಲಿ ಹಗರಣಗಳಿಗೇನೂ ಕೊರತೆಯಿಲ್ಲ. ಬಂಧನ ಪ್ರಕರಣಗಳಿಗೂ ಕೊರತೆಯಿಲ್ಲ. ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರೂ ಗುಜರಾತ್ ರಾಜ್ಯದ ಗೃಹ ಸಚಿವರಾಗಿದ್ದ ವೇಳೆ, 2010ರಲ್ಲಿ ಸೊಹ್ರಾಾಬುದ್ದಿನ್ ಹತ್ಯಾಾ ಪ್ರಕರಣದಲ್ಲಿ ಬಂಧನಕ್ಕೊೊಳಗಾಗಿದ್ದರು. ಮುಖ್ಯಮಂತ್ರಿಿ ಬಿ.ಎಸ್. ಯಡಿಯೂರಪ್ಪ 2011ರಲ್ಲಿ ಜಮೀನು ನೋಟಿಫಿಕೇಶನ್ ಪ್ರಕರಣ ಸಂಬಂಧ ಬಂಧನಕ್ಕೊೊಳಗಾಗಿದ್ದರು. ಅಂದಿನ ಗಣಿ ಸಚಿವ ಗಾಲಿ ಜನಾರ್ದನ ರೆಡ್ಡಿಿಯವರನ್ನುಅಕ್ರಮ ಗಣಿಗಾರಿಕೆಗಾಗಿ 2011ರಲ್ಲಿ ಸಿಬಿಐ ಬಂಧಿಸಿತ್ತು. ಆದರೆ ಆಗೆಲ್ಲ ಅವು ಅಷ್ಟೊೊಂದು ಸದ್ದು ಮಾಡಲಿಲ್ಲ. ಪ್ರತಿಭಟನೆಗಳೂ ನಡೆದಿರಲಿಲ್ಲ. ಆದರಿಂದು ಚಿದಂಬರಂ, ಡಿಕೆಶಿ ಹೀಗೆ ಒಬ್ಬೊೊಬ್ಬರೇ ತನಿಖಾ ಸಂಸ್ಥೆೆಗಳ ಸೆರೆಯಾಗುತ್ತಿಿದ್ದರೆ, ಕಾಂಗ್ರೆೆಸ್ ಇದು ಸೇಡಿನ ರಾಜಕೀಯವೆಂದು ಕೂಗಾಡುತ್ತ ಡಿಕೆಶಿ ಬೆನ್ನಿಿಗೆ ನಿಂತಿರುವುದು ವಿಶೇಷ.

ಜಯಪ್ರಕಾಶ್ ನಾರಾಯಣ್, ಅಟಲ್ ಬಿಹಾರಿ ವಾಜಪೇಯಿಯಂಥವರೆಲ್ಲ ಶುದ್ಧಹಸ್ತ ರಾಜಕಾರಣಿಗಳಿಗೆ ಸಾರ್ವಕಾಲಿಕ ಉದಾಹರಣೆ. ಈಗಲೂ ಪ್ರಧಾನಿ ಮೋದಿಯವರಂತಹ ನಿಸ್ಪಹರು ಇದ್ದಾಾರೆ. ಆದರೆ ಬಹುತೇಕರ ಹಿಂದೆ ಒಂದಿಲ್ಲೊೊಂದು ಆರೋಪ ಇರುತ್ತದೆ. ಅವರದು ಹೇಗೋ ಹುಲಿಯ ಬೆನ್ನೇರಿ ಸವಾರಿ ಹೊರಟವರ ಪಾಡು. ಅಧಿಕಾರ ಬಿಟ್ಟಿಿಳಿಯುತ್ತಲೇ ಅದಾವ ಆರೋಪ ಅವರನ್ನು ಆಪೋಶನ ತೆಗೆದುಕೊಳ್ಳುವುದೋ ತಿಳಿಯದು. ಹಾಗಾಗಿಯೇ ಅವರು ಆದಷ್ಟು ಅಧಿಕಾರಕ್ಕಂಟಿ ಕೂರಲು ನೋಡುತ್ತಾಾರೆ. ಹೊಸ ಸರಕಾರ ಬಂದರೆ ತಮ್ಮ ಬುಡಕ್ಕೇ ಕೈಹಾಕುವ ಭೀತಿ ಇದ್ದೇ ಇರುತ್ತದೆ.

ಅನೇಕ ಸಂದರ್ಭಗಳಲ್ಲಿ ಹಾಗೆಯೇ ಆಗುತ್ತದೆ. ಅಧಿಕಾರಕ್ಕೆೆ ಬಂದ ಸರಕಾರ ಮೊದಲು ಮಾಡುವ ಕೆಲಸವೆಂದರೆ ತನ್ನ ಭದ್ರತೆಗೆ ಧಕ್ಕೆೆಯಾಗಬಲ್ಲವರ ಮೇಲೆ ಏನಾದರೊಂದು ಕೇಸು ದಾಖಲಿಸಿ ಹಿಡಿದು ಒಳಹಾಕುವುದು. ಅಗತ್ಯಬಿದ್ದರೆ ಹಳೆಯ ಪ್ರಕರಣವನ್ನು ಹುಡುಕಿ ಹೊರಗೆಳೆದು ಮರುಜೀವ ತುಂಬುವುದೂ ಇದೆ. ಯಾವ ಪಕ್ಷದ ಸರಕಾರವೂ ಇದಕ್ಕೆೆ ಹೊರತೆನಿಸುವುದಿಲ್ಲ. ಪ್ರಸ್ತುತ ರಾಜ್ಯ ಬಿಜೆಪಿ ಸರಕಾರವೂ ಮೈತ್ರಿಿ ಸರಕಾರ ಮತ್ತು ಅದರ ಹಿಂದಿನ ಕಾಂಗ್ರೆೆಸ್ ಅಧಿಕಾರಾವಧಿಯ ತೀರ್ಮಾನಗಳನ್ನು ತಡೆದು ವಿಚಾರಣೆಗೊಳಪಡಿಸುವುದಾಗಿ ಹೇಳಿದೆ. 921 ಕೋಟಿ ರು. ಮೊತ್ತದ ಕೃಷಿ ಭಾಗ್ಯ ಯೋಜನೆ, 1067 ಕೋಟಿ ರು. ಮೊತ್ತದ ತ್ಯಾಾಜ್ಯ ವಿಲೇವಾರಿ ಯೋಜನೆ…ಹೀಗೆ ಒಂದೊಂದೇ ಯೋಜನೆ ಶೋಧನೆಗೊಳಪಡುವ ಸಾಧ್ಯತೆಯಿದೆ. ಇದು ಕೆಲವರಲ್ಲಿ ನಡುಕ ಹುಟ್ಟಿಿಸಿದೆ ಎನ್ನಲಾಗುತ್ತಿಿದೆ.

ಪಕ್ಷ ಪ್ರಮುಖನೊಬ್ಬ ಬಂಧನಕ್ಕೊೊಳಗಾದಾಗ ಪ್ರಕರಣಕ್ಕೆೆ ದ್ವೇಷದ ರಾಜಕೀಯದ ಹಣೆಪಟ್ಟಿಿ ಕಟ್ಟುವುದು ಸರ್ವೇ ಸಾಮಾನ್ಯ. ಡಿಕೆಶಿ ಬಂಧನ ಪ್ರಜಾಪ್ರಭುತ್ವದ ಕಗ್ಗೊೊಲೆಯೆಂದರು ಕುಮಾರಸ್ವಾಾಮಿ. ಇದು ದ್ವೇಷದ ರಾಜಕೀಯವೆಂದಿತು ಕಾಂಗ್ರೆೆಸ್. ಕಾರಣವಿಲ್ಲದೆ ಇಲ್ಲ. ಒಂದು ಪಕ್ಷದ ಅಧಿಕಾರಾವಧಿಯಲ್ಲಿ ಇನ್ನೊೊಂದು ಪಕ್ಷದವರ ಬಂಧನವಾಗುವುದು ರೂಢಿ. ಕಾಕತಾಳೀಯವೋ ಏನೋ ಪಿ. ಚಿದಂಬರಂ ಕೇಂದ್ರ ಗೃಹ ಸಚಿವರಾಗಿದ್ದಾಾಗ ಅಮಿತ್ ಷಾ ಬಂಧನವಾಯಿತು. ಇದೀಗ ಅದೇ ಅಮಿತ್ ಷಾ ಕೇಂದ್ರ ಗೃಹ ಸಚಿವರಾಗಿರುವಾಗಲೇ ಚಿದಂಬರಂ ಬಂಧನವಾದುದು! ಯಡಿಯೂರಪ್ಪ ಬಂಧನಕ್ಕೊೊಳಗಾದಾಗ ಕಾಂಗ್ರೆೆಸ್ ಸರಕಾರ ಅಸ್ತಿಿತ್ವದಲ್ಲಿತ್ತು.

ಇದೀಗ ಡಿಕೆಶಿ ಬಂಧನ ಸಂದರ್ಭ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಸೇಡಿನ ರಾಜಕೀಯ ಮಾಡಲಾಗುತ್ತಿಿದೆ ಎಂದು ಕೂಗಾಡಲು ಇಷ್ಟು ಸಾಲದೆ? ಮಾನ್ಯ ಯಡಿಯೂರಪ್ಪನವರೇನೋ ಡಿಕೆಶಿ ಬಂಧನದಿಂದ ಸಂಭ್ರಮಿಸಿಲ್ಲ. ಡಿಕೆಶಿ ಆದಷ್ಟು ಬೇಗ ಬಿಡುಗಡೆಯಾದಲ್ಲಿ ನನ್ನಷ್ಟು ಖುಷಿಪಡುವವರು ಮತ್ತೊೊಬ್ಬರಿಲ್ಲವೆಂದು ಹೇಳುವ ಮೂಲಕ ಇದು ಸೇಡಿನ ಕ್ರಮವಲ್ಲವೆಂಬುದಾಗಿ ಸ್ಪಷ್ಟಪಡಿಸಿದ್ದಾಾರೆ. ಆದರೆ ಕಾಂಗ್ರೆೆಸಿಗದು ಸಮಾಧಾನವಾಗಬೇಕಲ್ಲಾಾ?

ಪಕ್ಷವೊಂದು ಅಧಿಕಾರದಿಂದ ಕೆಳಗಿಳಿದಾಗ ಅದೇಕೋ ಏನೋ, ಅಧಿಕಾರಕ್ಕೆೆ ಬಂದ ಹೊಸ ಸರಕಾರವನ್ನು ದೂಷಿಸುವುದೇ ಅದರ ಜನ್ಮಸಿದ್ಧ ಹಕ್ಕೆೆನಿಸಿಬಿಡುತ್ತದೆ. ಯಡಿಯೂರಪ್ಪ ಸರಕಾರ ಅಧಿಕಾರಕ್ಕೆೆ ಬಂದು ಇನ್ನೂ ಎರಡು ತಿಂಗಳಾಗಿಲ್ಲ. ಅಷ್ಟರಲ್ಲೇ ಯಡಿಯೂರಪ್ಪ ಓರ್ವ ದುರ್ಬಲ ಮುಖ್ಯಮಂತ್ರಿಿ ಅನ್ನುತ್ತಾಾರೆ ಮಾಜಿ ಮುಖ್ಯಮಂತ್ರಿಿ ಕುಮಾರಸ್ವಾಾಮಿ. ಪಾಪ! ಹೋದಬಂದಲ್ಲೆೆಲ್ಲಾಾ ತಾವು ಕಣ್ಣೀರು ಹಾಕಿದ್ದನ್ನು ಮರೆತುಬಿಟ್ಟರೋ ಏನೋ! ಏನು ಮಾಡುವುದು? ಅಧಿಕಾರದಿಂದ ಕೆಳಗಿಳಿದಿದ್ದಾಾರೆ.

ಇದೀಗ ಅಧಿಕಾರೂಢ ಸರಕಾರವನ್ನು ದೂರುವ ಸರದಿ ಅವರದ್ದು. ಪೂರ್ವಗ್ರಹ ಬದಿಗೊತ್ತಿಿ ನೋಡಿದರೆ ಎಲ್ಲ ಪಕ್ಷಗಳೂ ಅಷ್ಟೆೆ. ಅಧಿಕಾರ ಕಳಕೊಂಡು ಪ್ರತಿಪಕ್ಷ ಸ್ಥಾಾನದಲ್ಲಿ ಕೂತಾಗಲೇ ಪ್ರಶ್ನಿಿಸುವ ಮೂಡು ಬರುವುದು ಅವಕ್ಕೆೆ. ಎರಡೇ ಎರಡು ಪಕ್ಷಗಳಿಗೆ ನೆರೆಯ ಕೇರಳದಲ್ಲಿರುವಂತೆ, ‘ನಾನೊಮ್ಮೆೆ ನೀನೊಮ್ಮೆೆ’ ಎಂದು ಅಧಿಕಾರ- ಆಡಳಿತಾವಕಾಶ ಸಿಕ್ಕರಂತೂ ಮುಗಿದೇ ಹೋಯಿತು. . ಏನು ಕ್ರಮ ಕೈಗೊಂಡರೂ ದ್ವೇಷದ ರಾಜಕೀಯವೆನಿಸುವುದೇ ಹೆಚ್ಚು.

ಸೇಡಿನ ರಾಜಕೀಯವೋ ಮತ್ತೊೊಂದೋ. 2001ರ ಜೂನ್ 30ರಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿಿಯಾಗಿದ್ದ ಡಿಎಂಕೆ ನಾಯಕ ಕರುಣಾನಿಧಿಯವರನ್ನು ಬಂಧಿಸಿ ಹಿಡಿದೆಳೆದ ಘಟನೆ ಇನ್ನೂ ಕಣ್ಣಿಿಗೆ ಕಟ್ಟಿಿದಂತಿದೆ. ಮಧ್ಯರಾತ್ರಿಿ ಮಲಗಿದಲ್ಲಿಂದ ಎಬ್ಬಿಿಸಿ ಅವರನ್ನು ಬಂಧಿಸಲಾಯಿತು. 12 ಕೋಟಿ ರು. ಫ್ಲೈಓವರ್ ಅವ್ಯವಹಾರ ಬಂಧನಕ್ಕೆೆ ಕಾರಣವಾಗಿತ್ತು. ಆಗ ಅಲ್ಲಿ ಅಧಿಕಾರದಲ್ಲಿದ್ದುದು ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರಕಾರ.

ಪ್ರಕ್ಷ ಪ್ರಮುಖನೊಬ್ಬನ ಬಂಧನವಾದಾಗ ಸರಕಾರದ ಮೇಲೆ ಸೇಡಿನ ರಾಜಕೀಯದ ಆರೋಪವಷ್ಟೇ ಅಲ್ಲ. ಸುಪ್ರೀಂ ಕೋರ್ಟು, ಸಿಬಿಐಯಂತಹ ಉನ್ನತ ಸಂಸ್ಥೆೆಗಳ ಮೇಲೆ ಅಪನಂಬಿಕೆ ಮೂಡುವುದೂ ಇದೆ. ಸರಕಾರದ ಮೇಲೆ ಅಧಿಕಾರದ ದುರುಪಯೋಗದ ಆರೋಪ ಹೊರಿಸುವುದೂ ಇದೆ.

ಪ್ರಸ್ತುತ ಡಿಕೆಶಿ ಬಂಧನ ವಿಚಾರದಲ್ಲೂ ಅಷ್ಟೇ. ಚಿದಂಬರಂ ಬಂಧನ ವಿಚಾರದಲ್ಲೂ ಅಷ್ಟೇ. ಹಿಂದೆ ಅಮಿತ್ ಷಾ ಬಂಧನಕ್ಕೊೊಳಗಾದಾಗ ಕಾಂಗ್ರೆೆಸ್ ಸಿಬಿಐಯನ್ನು ತನಗೆ ಬೇಕಾದಂತೆ ಬಳಸಿಕೊಂಡಿರುವುದಾಗಿ ಬಿಜೆಪಿ ಆರೋಪಿಸಿತ್ತು. ಈಗ ಹಾಗೆಂದು ಕೂಗಾಡುವ ಸರದಿ ಕಾಂಗ್ರೆೆಸಿನದ್ದು

One thought on “ಪ್ರಮುಖರ ಬಂಧನ ಎಬ್ಬಿಿಸುವ ‘ಸೇಡಿನ ರಾಜಕೀಯದ’ ಅಲೆ!

Leave a Reply

Your email address will not be published. Required fields are marked *