Friday, 3rd April 2020

ಬಿಜೆಪಿ ಕಚೇರಿ ಜಗನ್ನಾಥ್ ಭವನಕ್ಕೆ ಪ್ರವೇಶ ನಿರ್ಬಂಧ: ಕಟೀಲ್

ಬೆಂಗಳೂರು:

ತೀವ್ರ ಭೀತಿಯುಂಟು ಮಾಡಿರುವ ಕರೋನಾ ವೈರಸ್ ಹಿನ್ನೆಲೆಯಲ್ಲಿ ಈ ಮಾಸಾಂತ್ಯದವರೆಗೆ ನಗರದ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ್ ಭವನಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ರಾಜ್ಯದೆಲ್ಲೆಡೆ ಕರೋನಾ ವೈರಸ್ ವ್ಯಾಾಪಕವಾಗಿ ಹರಡುತ್ತಿರುವ ಕಾರಣ ಹಾಗೂ ರಾಜ್ಯ ಸರಕಾರ ಲಾಕ್‌ಡೌನ್‌ಗೆ ಆದೇಶ ನೀಡಿರುವ ಹಿನ್ನೆೆಲೆಯಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ಮಾರ್ಚ್ 31ರ ವರೆಗೆ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಾಥ್ ಭವನಕ್ಕೆ ಪ್ರವೇಶ ನಿರ್ಭಂಧಿಸಲಾಗಿದೆ ಎಂದಿದ್ದಾರೆ.

ಅಲ್ಲಿಯವರೆಗೆ ರಾಜ್ಯದಲ್ಲಿ ಪಕ್ಷದ ಯಾವುದೇ ಸಭೆ, ಸಮಾರಂಭಗಳನ್ನು ನಡೆಸಬಾರದು, ಅತೀ ತುರ್ತು ವಿಷಯಗಳಿದ್ದರೆ ದೂರವಾಣಿ ಮುಖಾಂತರ ರಾಜ್ಯ ಕಚೇರಿಯನ್ನು ಸಂಪರ್ಕಿಸಬಹುದೆಂದು ಬಿಜೆಪಿ ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಕರೋನಾದಂತಹ ಮಾರಕ ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ರಾಜ್ಯ ಸರಕಾರ ಕೈಗೊಂಡ ಕ್ರಮಗಳನ್ನು ರಾಜ್ಯ ಬಿಜೆಪಿ ಘಟಕವು ಸ್ವಾಗತಿಸುತ್ತದೆ ಮತ್ತು ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತದೆ ಎಂದಿದ್ದಾರೆ.

Leave a Reply

Your email address will not be published. Required fields are marked *