Tuesday, 11th August 2020

ಭತ್ತ ಬೆಳೆಗಾರರ ನೆರವಿಗೆ ಮನವಿ ಕೇಂದ್ರ ಹಣಕಾಸು ಸಚಿವರಿಗೆ ಸಂಸದ ಸಂಗಣ್ಣ ಪತ್ರ

ಕೊಪ್ಪಳ:

ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ರೈತರು ವ್ಯಾಪಕ ಭತ್ತ ಬೆಳೆದಿದ್ದು, ಲಾಕ್ ಡೌನ್ ಮತ್ತು ಕೊರೊನಾ ಕಾರಣದಿಂದ ಬೆಲೆ ಕುಸಿತವಾಗಿದ್ದು, ಅವರ ನೆರವಿಗೆ ಬರಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಂಸದ ಸಂಗಣ್ಣ ಕರಡಿ ಪತ್ರ ಬರೆದು ಮನವಿ ಮಾಡಿದ್ದಾರೆ.
ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆ ವ್ಯಾಪ್ತಿಯಲ್ಲಿ ಲಕ್ಷಾಂತರ ರೈತರು ಹೆಕ್ಟೇರ್ ಭತ್ತ ಬೆಳೆದಿದ್ದಾರೆ.

ಕೇಂದ್ರದ 1815 ಬೆಂಬಲ ಬೆಲೆ ಇದ್ದು, ಮಾರುಕಟ್ಟೆಯಲ್ಲಿ 1600ಕ್ಕೆ ಖರೀದಿಸಲಾಗುತ್ತದೆ. ರೈತರು ಸಂಕಷ್ಟ ಕಾಲದಲ್ಲಿ ಅನಿವಾರ್ಯವಾಗಿ ಕಡಿಮೆ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ಲಾಕ್ಡೌನ್ ಪರಿಸ್ಥಿತಿ ತಿಳಿಯಾದ ನಂತರ ಅಲ್ಲಿವರೆಗೆ ಉಗ್ರಾಣದಲ್ಲಿ ಇರಿಸಿ ಅದರ ದಾಖಲೆ ಆಧಾರದ ಮೇಲೆ ಸಹಕಾರಿ ಮತ್ತು ರಾಷ್ಟ್ರೀಯಕೃತ ವಾಣಿಜ್ಯ ಬ್ಯಾಂಕ್ ಗಳು ಸಾಲ ನೀಡಲು ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಈ ಹಿಂದೆ ಶೇ1 ರಷ್ಟು ಅವ್ಯವಹಾರ ಆಗಿದ್ದನ್ನೇ ಮುಂದೆ ಮಾಡಿ ರೈತರಿಗೆ ಈ ವಿಧಾನದಲ್ಲಿ ಸಾಲ ನೀಡಲು ಹಿಂದೇಟು ಹಾಕುತ್ತವೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ರೈತರಿಗೆ ಸಹಾಯ ದೊರಕ ಬೇಕಿದೆ. ಆದ್ದರಿಂದ ತಾವು ಬ್ಯಾಂಕ್ ಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಸಚಿವರಿಗೆ ಮನವಿ ಮಾಡಿದ್ದಾರೆ.
ಆದ್ದರಿಂದ ಈ ಮೂರು ಜಿಲ್ಲೆಗಳ ರೈತರ ಸಂಕಷ್ಟ ಅರಿತು ಅಡಮಾನ ಸಾಲ ನೀಡಲು ಸೂಚನೆ ನೀಡಬೇಕು ಎಂದು ಅವರು ಮನವಿ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *