Tuesday, 11th August 2020

ಭದ್ರತಾ ಸಿಬ್ಬಂದಿಗೆ ಗುದ್ದಿದ ವಾಹನ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಕರ್ತವ್ಯ ನಿರತ ಭದ್ರತಾ ಸಿಬ್ಬಂದಿಗೆ ವಾಹನವೊಂದು ಗುದ್ದಿ  ಗಾಯಗೊಳಿಸಿರುವ ಘಟನೆ ಸಿಲಿಕಾನ್ ಸಿಟಿ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಗುರುವಾರ  ಬೆಳಗ್ಗೆೆ ನಡೆದಿದೆ.

ಹೈಕೋರ್ಟ್  ಎದುರಿನ ವಿಧಾನಸೌಧದ ಗೇಟ್ ಬಳಿ ವಿಧಾನಸೌಧಕ್ಕೆ ಪ್ರವೇಶಿಸುತ್ತಿದ್ದ ಕೃಷಿ ಇಲಾಖೆಗೆ  ಸೇರಿದ್ದ ಟಾಟಾ ಸುಮೋ ವಾಹನದ ಸ್ಟೀರಿಂಗ್ ಲಾಕ್ ಆಗಿದ್ದು, ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಕಡೆಗೆ ನುಗ್ಗಿ ಅವರನ್ನು ಗುದ್ದಿದೆ. ಬಳಿಕ ಗೇಟ್ ಪಕ್ಕದ ಕಲ್ಲಿನ ಕಾಂಪೌಂಡ್‌ಗೆ ಗುದ್ದಿ ಆ ಸ್ಥಳದಲ್ಲಿ ನಿಂತಿದೆ ಎನ್ನಲಾಗಿದೆ.

ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ, ಸ್ಥಳದಲ್ಲಿ ಕರ್ತವ್ಯ ನಿರತರಾಗಿದ್ದ ಎಎಸ್ ಐ ರಾಮು ಅವರ ಕಾಲು ಮುರಿದಿದ್ದು, ಮತ್ತೋರ್ವ ಮಹಿಳಾ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ತಕ್ಷಣವೇ ಗಾಯಾಳುಗಳನ್ನು  ಅಂಬ್ಯುಲ್ಸ್‌ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ.

Leave a Reply

Your email address will not be published. Required fields are marked *