Monday, 13th July 2020

ಭಿಕ್ಷುಕರ ತವರು ಕರ್ನಾಟಕ

ಬಾಲಕೃಷ್ಣ ಎನ್. ಬೆಂಗಳೂರು
ರಾಜ್ಯದಲ್ಲಿ ಭಿಕ್ಷಾಾಟನೆ ದಂಧೆ ಅವ್ಯಾಾಹತವಾಗಿದ್ದು, ಕಳೆದ ಏಳು ತಿಂಗಳಲ್ಲಿ 2,932 ಭಿಕ್ಷುಕರು ಪತ್ತೆೆಯಾಗಿದ್ದಾಾರೆ. ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ಭಿಕ್ಷುಕರ ತವರು ನಾಡಾಗಿ ಮಾರ್ಪಟ್ಟಿಿದೆ.
ಭಿಕ್ಷುಕರನ್ನು ಪತ್ತೆೆ ಮಾಡುವುದು ಸುಲಭವಲ್ಲ. ಗಣತಿಗೆ ಬಂದಿರುವುದನ್ನು ತಿಳಿದ ಕೂಡಲೇ ತಲೆಮರೆಸಿಕೊಳ್ಳುವುದುಂಟು. ಹಾಗಾಗಿ ಭಿಕ್ಷಾಟನೆಯಲ್ಲಿ ತೊಡಗಿರುವವರಿಗೆ ಗೊತ್ತಾಾಗದಂತೆ ಎಣಿಕೆ ನಡೆಸಲಾಗಿದೆ. ಮುಖ್ಯವಾಗಿ ರೈಲು, ಬಸ್ ನಿಲ್ದಾಾಣ, ಚಿತ್ರಮಂದಿರ, ಉದ್ಯಾಾನ, ದೇವಸ್ಥಾಾನ ಹಾಗೂ ಪ್ರಮುಖ ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುತ್ತಿಿರುವವರನ್ನು ಕ್ಯಾಾಮೆರಾಗಳ ಮೂಲಕ ಸೆರೆ ಹಿಡಿದು ಪತ್ತೆೆ ಮಾಡಲಾಗಿದೆ. ಕೆಲವೆಡೆ ಭಿಕ್ಷುಕರನ್ನು ಮಾತನಾಡಿಸಿ, ಅವರ ವಿಳಾಸ ಮತ್ತಿಿತರ ಮಾಹಿತಿಯನ್ನೂ ಕಲೆ ಹಾಕಲಾಗಿದೆ.

ಭಿಕ್ಷುಕರ ಸ್ವರ್ಗವಾಗಿ ಬೆಂಗಳೂರು ಮಾರ್ಪಟ್ಟಿಿದೆ. ಬೆಂಗಳೂರಿನಲ್ಲಿ ಅಕ್ಕಪಕ್ಕದ ರಾಜ್ಯಗಳ ಭಿಕ್ಷಾ ಗ್ಯಾಾಂಗ್‌ಗಳು ಹೇರಳವಾಗಿದ್ದು, ಇವರ ಜತೆಗೆ ಮಂಗಳಮುಖಿಯರ ಕಾಟವೂ ಹೆಚ್ಚಾಾಗಿದೆ. ತಮಿಳುನಾಡು, ಆಂಧ್ರದ ಕುಪ್ಪಂ ಮತ್ತು ರಾಜಸ್ಥಾಾನ ಹಾಗೂ ಬಿಹಾರದ ಬಡವರನ್ನು ಇಲ್ಲಿಗೆ ಕರೆದುಕೊಂಡು ಬಂದು ಭಿಕ್ಷಾಟನೆಗೆ ತೊಡಗಿಸುವ ಹಲವು ಗ್ಯಾಾಂಗ್‌ಗಳು ಬೆಂಗಳೂರಿನಲ್ಲಿರುವುದು ಆತಂಕಕಾರಿ ವಿಷಯ. ಇವರ ಬಂಧನಕ್ಕಾಾಗಿ ಹಲವಾರು ಬಾರಿ ದಾಳಿ ನಡೆಯುತ್ತವೆ. ನಡು ರಸ್ತೆೆಯಲ್ಲೇ ಅವರುಗಳು ಬೀಡು ಬಿಡುತ್ತಾಾರೆ. ಆದ್ದರಿಂದ ಭಿಕ್ಷಾಾಟನೆ ನಿರ್ಮೂಲನೆಗೆ ತೊಡಕಾಗಿದೆ.

ಭಿಕ್ಷಾಟನೆ ಮಾಫಿಯಾ ಹೆಚ್ಚಿಿರುವ ಮೂರು ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ. ಇದನ್ನೆೆ ಬಂಡವಾಳವನ್ನಾಾಗಿಸಿಕೊಂಡಿರುವ ಪಾತಕಿಗಳು ಕೋಟ್ಯಂತರ ರು. ಸಂಗ್ರಹಿಸುತ್ತಿಿದ್ದಾರೆ. ಮಕ್ಕಳು ಭಿಕ್ಷೆ ಬೇಡಿದ ಹಣ ನೀಡದಿದ್ದರೆ ಅಂತಹವರ ಮೇಲೆ ಆ್ಯಸಿಡ್ ದಾಳಿ ಇಲ್ಲವೆ, ಕೈಕಾಲು ಊನ ಮಾಡುವ ಕೃತ್ಯ ಮುಂದುವರಿಯುತ್ತಿಿದೆ. ಮಹಿಳೆಯರು ಎಳೆ ಮಕ್ಕಳನ್ನು ಕಂಕುಳಲ್ಲಿ ಇಟ್ಟುಕೊಂಡು ಭಿಕ್ಷಾಟನೆಯಲ್ಲಿ ತೊಡಗುತ್ತಿಿದ್ದಾಾರೆ. ಬೆಂಗಳೂರು ನಗರ ಮತ್ತು ಗ್ರಾಾಮಾಂತರ ಬಳ್ಳಾಾರಿ, ತುಮಕೂರು ಹಾಗೂ ಮೈಸೂರಿನಲ್ಲೂ ಈ ಮಾಫಿಯಾ ಸಕ್ರಿಿಯಯವಾಗಿರುವುದು ತಿಳಿದು ಬಂದಿದೆ.

ಕರ್ನಾಟಕದಲ್ಲಿ ಹೊರ ರಾಜ್ಯದ ಭಿಕ್ಷುಕರೇ ಹೆಚ್ಚು
ಕರ್ನಾಟಕದಲ್ಲಿ ಈಗಾಗಲೇ ಗುರುತಿಸಲಾಗಿರುವ ಭಿಕ್ಷುಕರಲ್ಲಿ 1288 ಹೊರ ರಾಜ್ಯದವರಾಗಿದ್ದಾಾರೆ. ಕಳೆದ ವರ್ಷಕ್ಕಿಿಂತ ಈ ಬಾರಿ ಶೇ.5 ರಷ್ಟು ಭಿಕ್ಷುರ ಸಂಖ್ಯೆೆ ಹೆಚ್ಚಾಾಗಿರುವುದು ನಿರಾಶ್ರಿಿತರ ಪರಿಹಾರ ಕೇಂದ್ರ ಮಾಹಿತಿ ನೀಡಿದೆ. ರಾಜ್ಯಕ್ಕೆೆ ವಲಸಿಗರ ಸಂಖ್ಯೆೆ ಹೆಚ್ಚಾಾಗಿದ್ದು, ನಿಯಂತ್ರಣಕ್ಕೆೆ ಬಾರದ ಸ್ಥಿಿತಿ ನಿರ್ಮಾಣವಾದ ಕಾರಣದಿಂದ ಭಿಕ್ಷುಕರ ತವರಾಗಿ ಮಾರ್ಪಡುತ್ತಿಿದೆ. 1,123 ಪುರುಷ ಹಾಗೂ 165 ಮಹಿಳಾ ಭಿಕ್ಷುಕರನ್ನು ಸೆರೆ ಹಿಡಿಯಲಾಗಿದೆ. ಹೊರ ರಾಜ್ಯಗಳಲ್ಲಿ ಕರ್ನಾಟಕ ಭಿಕ್ಷುಕರು ಕಡಿಮೆ ಇರುವುದು ಮಾಹಿತಿ ಬಹಿರಂಗಗೊಂಡಿದೆ.

ಪಟ್ಟಿಿಗೆ….
ಹೆಚ್ಚು ಭಿಕ್ಷುಕರು ಇರುವ ರಾಜ್ಯಗಳು
(ಏ.1 ರಿಂದ ಅ.31 ರವರೆಗೆ)
ರಾಜ್ಯ ಭಿಕ್ಷುಕರ ಸಂಖ್ಯೆೆ
ಕರ್ನಾಟಕ 2,932
ತಮಿಳುನಾಡು 206
ಆಂಧ್ರಪ್ರದೇಶ 115
ಮಹಾರಾಷ್ಟ್ರ 130
ಕೇರಳ 48
ಇತರ ರಾಜ್ಯಗಳು 700

ಪಟ್ಟಿಿಗೆ……
14 ಜಿಲ್ಲೆೆಗಳಲ್ಲಿ ಭಿಕ್ಷುಕರ ಸಂಖ್ಯೆೆ
ಜಿಲ್ಲೆೆ ಭಿಕ್ಷುಕರ ಸಂಖ್ಯೆೆ
ಬೆಂಗಳೂರು 750
ಬಳ್ಳಾಾರಿ 179
ಬೆಳಗಾವಿ 96
ಚಿತ್ರದುರ್ಗ 274
ದಾವಣಗೆರೆ 134
ಕಲಬುರಗಿ 83
ಧಾರವಾಡ 176
ಕೋಲಾರ 140
ಮೈಸೂರು 362
ದಕ್ಷಿಿಣ ಕನ್ನಡ 153
ರಾಯಚೂರು 90
ಶಿವಮೊಗ್ಗ 187
ತುಮಕೂರು 176
ವಿಜಯಪುರ 147

ಅಂಕಿ-ಅಂಶ
-1387 ಪುರುಷ, 257 ಮಹಿಳಾ ಭಿಕ್ಷುಕರು ರಾಜ್ಯದಲ್ಲಿ
-1288 ಹೊರ ರಾಜ್ಯದ ಭಿಕ್ಷುಕರು
-6,325 ಭಿಕ್ಷುಕರು ಸಮೀಕ್ಷೆೆಯಿಂದ ಪತ್ತೆೆ
-750 ಭಿಕ್ಷುಕರು ಬೆಂಗಳೂರಿನಲ್ಲಿ ವಾಸ್ತವ
-26 ಭಿಕ್ಷಕರು ನಾನಾ ಕಾರಣಗಳಿಂದ ಸಾವು

ರಾಜ್ಯದಲ್ಲಿ ಭಿಕ್ಷುಕರನ್ನು ಪತ್ತೆೆ ಹಚ್ಚಿಿ ಅವರಿಗೆ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿಿದೆ. ಭಿಕ್ಷಾಾಟನೆಯಲ್ಲಿ ತೊಡಗಿರುವವರನ್ನು ಮನಪರಿವರ್ತನೆ ಮಾಡಿ ಅವರ ಮನೆಗೆ ಕರೆದೊಯ್ಯಲಾಗುತ್ತಿಿದೆ. ಅವರಿಗೆ ಕೇಂದ್ರದಲ್ಲಿ ಕೆಲಸ ನೀಡುವ ಮೂಲಕ ಕೂಲಿ ಸಹ ನೀಡಲಾಗುತ್ತಿಿದೆ.
ಆರ್.ತುಕಾರಾಂ, ನಿರಾಶ್ರಿಿತರ ಪರಿಹಾರ ಕೇಂದ್ರದ ಪ್ರಭಾರ ಅಧೀಕ್ಷ

Leave a Reply

Your email address will not be published. Required fields are marked *