Friday, 3rd April 2020

ಮಧುಮೇಹ ಜಾಗೃತಿಗೆ ಸೈಕ್ಲಿಂಗ್ ಜಾಥಾ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಮಧುಮೇಹ ಕುರಿತು ನಗರದ ಜನತೆಯಲ್ಲಿ ಜಾಗೃತಿ ಮೂಡಿಸಲು ಪ್ರಕ್ರಿಿಯಾ ಆಸ್ಪತ್ರೆೆ ವತಿಯಿಂದ ನಾಗಸಂದ್ರ ಮೆಟ್ರೋೋ ನಿಲ್ದಾಾಣದ ಬಳಿ ಸೈಕ್ಲಿಿಂಗ್ ಜಾಥಾ ಹಮ್ಮಿಿಕೊಳ್ಳಲಾಗಿತ್ತು.
ನೂರಕ್ಕೂ ಹೆಚ್ಚು ಜನರು ಬೆಳಗ್ಗೆೆಯೇ ಒಂದೆಡೆ ಸೇರಿ ಸೈಕಲ್ ಪೆಡಲ್ ತುಳಿಯುತ್ತಾಾ ‘ಸೈಕಲ್ ತುಳಿಯಿರಿ, ಆರೋಗ್ಯ ಕಾಪಾಡಿಕೊಳ್ಳಿಿ’ ಎಂದು ಘೋಷಣೆ ಕೂಗುತ್ತಾಾ ಸಾಗಿದರು. ವೈದ್ಯರು ಸೇರಿದಂತೆ 100ಕ್ಕೂ ಹೆಚ್ಚು ಸೈಕ್ಲಿಿಸ್‌ಟ್‌‌ಗಳು ಭಾಗಿಯಾಗಿದ್ದರು.
ಆರೋಗ್ಯಕರ ಜೀವನಶೈಲಿಯಿಂದ ಮಧುಮೇಹ ತಡೆಗಟ್ಟಬಹುದು ಎಂಬ ಸಂದೇಶವನ್ನು ಈ ಮೂಲಕ ರವಾನಿಸಿದರು. ನಾಗಸಂದ್ರ ಮೆಟ್ರೋೋ ನಿಲ್ದಾಾಣದ ಮೂಲಕ 8.5 ಕಿ.ಮೀ ಸಾಗಿದ ಬಳಿಕ ತುಮಕೂರು ರಸ್ತೆೆಯ ಪ್ರಕ್ರಿಿಯಾ ಆಸ್ಪತ್ರೆೆ ಬಳಿ ಸೈಕ್ಲಿಿಂಗ್ ಕೊನೆಗೊಂಡಿತು.
ಪ್ರಕ್ರಿಿಯಾ ಆಸ್ಪತ್ರೆೆಯ ಸಿಇಒ ಡಾ.ಸಿ.ಶ್ರೀನಿವಾಸ್ ಮಾತನಾಡಿ, ಭಾರತದಲ್ಲಿ ಮಧುಮೇಹಿಗಳ ಪ್ರಮಾಣ ಹೆಚ್ಚುತ್ತಿಿದೆ. ಮಧುಮೇಹಿಗಳ ಸಂಖ್ಯೆೆಯಲ್ಲಿ ಭಾರತ ಎರಡನೇ ಸ್ಥಾಾನದಲ್ಲಿದೆ. 2045ರ ಹೊತ್ತಿಿಗೆ ಭಾರತ ಮೊದಲನೇ ಸ್ಥಾಾನ ತಲುಪುವ ಸಾಧ್ಯತೆ ಇದೆ. ಚಿಕ್ಕ ವಯಸ್ಸಿಿನವರಿಗೂ ಮಧುಮೇಹ ಕಾಡುತ್ತಿಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಡಾ. ಛಾಯಾ ಮಾತನಾಡಿ, ವೇಗದ ಜೀವನಶೈಲಿಯಿಂದಾಗಿ ಮಧುಮೇಹ ಚಿಕ್ಕ ವಯಸ್ಸಿಿನಲ್ಲೇ ಬರುತ್ತಿಿದೆ. ಟೈಪ್-2 ಮಧುಮೇಹಿ ರೋಗಿಗಳು ಹೆಚ್ಚುತ್ತಿಿದ್ದಾರೆ. ಇನ್ಸುಲಿನ್ ಕೊಡುವ ಹಂತಕ್ಕೆೆ ಬೇಗ ತಲುಪುತ್ತಾಾರೆ. ಬೊಜ್ಜು, ವ್ಯಾಾಯಾಮ ಇಲ್ಲದಿರುವುದು, ಸರಿಯಾದ ಆಹಾರ ಕ್ರಮ ಅನುಸರಿಸದೇ ಇರುವುದು ಇದಕ್ಕೆೆ ಕಾರಣ ಎಂದು ಹೇಳಿದರು.

ಮಧುಮೇಹ ಕುರಿತು ಜಾಗೃತಿ ಮೂಡಿಸಲು ಪ್ರಕ್ರಿಿಯಾ ಆಸ್ಪತ್ರೆೆ ವತಿಯಿಂದ ನಾಗಸಂದ್ರ ಮೆಟ್ರೋೋ ನಿಲ್ದಾಾಣದ ಬಳಿ ಏರ್ಪಡಿಸಿದ್ದ ಸೈಕ್ಲಿಿಂಗ್ ಜಾಥಾದಲ್ಲಿ ಜಾಲಹಳ್ಳಿಿಯ ಪೊಲೀಸ್ ಅಧಿಕಾರಿ ಸುಧೀರ್, ಪೀಣ್ಯದ ಪೊಲೀಸ್ ಅಧಿಕಾರಿ ರವಿ ಹಾಗೂ ನೂರಾರು ಜನರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *