Monday, 19th August 2019

ಮಹಿಳೆಯರ ಅಶ್ಲೀಲ ದೃಶ್ಯ ಸೆರೆ: ಸಿಎ ಬಂಧನ

ಬೆಂಗಳೂರು: ಖಾಸಗಿ ಕಂಪನಿಯಲ್ಲಿ ಕೆಲಸ ಮಹಿಳೆಯರು ಕುಳಿತುಕೊಳ್ಳುವ ಕಂಪ್ಯೂೂಟರ್ ಸಿಸ್ಟಮ್‌ಗಳ ಕೆಳಗೆ ಮೊಬೈಲ್ ಇಟ್ಟು ಅಶ್ಲೀಲ ವಿಡಿಯೋ ಸೆರೆ ಹಿಡಿಯುತ್ತಿಿದ್ದ ಕಾಮುಕನನ್ನು ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ಆಕಾಶ್ ಶುಕ್ಲಾಾ ಬಂಧಿತ ಆರೋಪಿ. ಆರೋಪಿಯು ಖಾಸಗಿ ಕಂಪನಿಯಲ್ಲಿ ಚಾರ್ಟೆಡ್ ಅಕೌಂಟೆಂಟ್(ಸಿಎ) ಆಗಿ ಕೆಲಸ ಮಾಡುತ್ತಿಿದ್ದನು. ತನ್ನ ಮೊಬೈಲ್‌ನಲ್ಲಿ ಹಿಡನ್ ಕ್ಯಾಾಮೆರಾ ಅಪ್ಲಿಿಕೇಷನ್ ಡೌನ್‌ಲೋಡ್ ಮಾಡಿಕೊಂಡಿದ್ದನು. ನಂತರ ಆರೋಪಿ ಮಹಿಳೆಯರು ಕೂರುವ ಕಂಪ್ಯೂೂಟರ್ ಸಿಸ್ಟಮ್, ಚೇರ್‌ಗಳ ಕೆಳಗೆ, ಡ್ರೆೆಸ್ಸಿಿಂಗ್ ರೂಂನಲ್ಲಿ ಹಾಗೂ ರೂಂಗಳಲ್ಲಿ ಮೊಬೈಲ್‌ನಲ್ಲಿ ಹಿಡನ್ ಕ್ಯಾಾಮೆರಾ ಆನ್ ಮಾಡಿ ಮಹಿಳೆಯರ ವಿಡಿಯೋ ರೆಕಾರ್ಡ್ ಮಾಡುತ್ತಿಿದ್ದನು.
ಆರೋಪಿ ಮೊಬೈಲ್‌ನಲ್ಲಿ ಮಹಿಳೆಯರ ವಿಡಿಯೋ ಸೆರೆಹಿಡಿದ ನಂತರ ಅದನ್ನು ಲ್ಯಾಾಪ್ ಟಾಪ್‌ನಲ್ಲಿ ಸೇವ್ ಮಾಡಿಕೊಳ್ಳುತ್ತಿಿದ್ದನು. ಬಳಿಕ ವೀಕೆಂಡ್‌ಗಳಲ್ಲಿ ಗೆಳೆಯರ ಜತೆ ಪಾರ್ಟಿಗೆ ತೆರಳುತ್ತಿಿದ್ದ ಆರೋಪಿ, ಮಹಿಳೆಯರ ಅಶ್ಲೀಲ ಫೋಟೊ ವಿಡಿಯೋಗಳನ್ನು ಗೆಳೆಯರ ಜತೆ ನೋಡಿ ಖುಷಿ ಪಡುತ್ತಿಿದ್ದನು. ಇತ್ತೀಚೆಗೆ ಕಂಪನಿ ಉಪಾಹಾರ ಗೃಹದಲ್ಲಿ ಇದೇ ರೀತಿ ಮೊಬೈಲ್‌ನಲ್ಲಿ ವಿಡಿಯೋ ಮಾಡಲು ಹೋಗಿ ರೆಡ್ ಹ್ಯಾಾಂಡ್ ಸಿಕ್ಕಿಿಬಿದ್ದಿದ್ದಾನೆ. ಕಂಪನಿ ಮಹಿಳಾ ಸಿಬ್ಬಂದಿ ದೂರು ನೀಡಿದ್ದಾರೆ ಎಂದು ಡಿಸಿಪಿ ರಾಹುಲ್ ಕುಮಾರ್ ತಿಳಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿಿದ್ದ ಆಕಾಶ್ ಶುಕ್ಲಾಾ ಎಂಬಾತ ತನ್ನ ಸಹೋದ್ಯೋೋಗಿಗಳ ಅಶ್ಲೀಲ ವಿಡಿಯೊ ರೆಕಾರ್ಡ್ ಮಾಡಿದ್ದಾನೆ ಎಂದು ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಹಿನ್ನೆೆಲೆಯಲ್ಲಿ ಆರೋಪಿಯನ್ನು ಐಪಿಸಿ 354 (ಲೈಂಗಿಕ ಕಿರಕುಳ) ದ ಅಡಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಾಯಾಂಗ ಇರಿಸಲಾಗಿದೆ.

Leave a Reply

Your email address will not be published. Required fields are marked *