Wednesday, 5th August 2020

ಮಾರುಕಟ್ಟೆಯಲ್ಲಿ ಮುಂಜಾಗೃತೆವಹಿಸಿ – ಪಾಟೀಲ

ವಿಶ್ವವಾಣಿ ಸುದ್ದಿಮನೆ
ವಿಜಯಪುರ : ಕರೋನಾ ವೈರಸ್ ರೋಗ ಹರಡದಂತೆ ಮುಂಜಾಗೃತಾ ಕ್ರಮವಾಗಿ, ನಗರದ ಜನತೆಗೆ ಅನಾನುಕೂಲವಾಗದಂತೆ ಮತ್ತು ನಿತ್ಯ ಉಪಯೋಗಕ್ಕಾಗಿ ಅಗತ್ಯವಿರುವ ಹಣ್ಣು-ತರಕಾರಿ ಸರಬರಾಜು ಮತ್ತು ಮಾರಾಟ ಮಾಡಲು ರೂಪುರೇಷೆಯಂತೆ ಕ್ರಮ ಕೈಗೊಳ್ಳಬೇಕು ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಆದೇಶ ನೀಡಿದ್ದಾರೆ.

ನಗರದಲ್ಲಿ ನಡೆದ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿ, ನಗರಕ್ಕೆ ಪ್ರತಿನಿತ್ಯ ಬಸವನ ಬಾಗೇವಾಡಿ ರಸ್ತೆ, ತಿಕೋಟಾ ರಸ್ತೆ, ಸೋಲಾಪೂರ ರಸ್ತೆ, ಬಬಲೇಶ್ವರ ರಸ್ತೆ, ಕೋಲ್ಹಾರ ರಸ್ತೆ ಹಾಗೂ ಸಿಂದಗಿ ರಸ್ತೆಗಳಿಂದ ಜನರು ಆಗಮಿಸುತ್ತಿದ್ದು, ನಗರದಲ್ಲಿ ಅಧಿಕ ಜನ ದಟ್ಟಣೆ ನಿಯಂತ್ರಣಕ್ಕೆಯ ತಾತ್ಕಾಲಿಕ ತರಕಾರಿ ಕೇಂದ್ರಗಳನ್ನುಯ ಸ್ಥಾಪಿಸಲು ಸೂಚಿಸಿದ್ದಾರೆ.

ಅದರಂತೆ ಬಸವನ ಬಾಗೇವಾಡಿ ರಸ್ತೆಯಿಂದ ಆಗಮಿಸುವರಿಗೆ ಚಿದಂಬರೇಶ್ವರ ದೇವಸ್ಥಾನದ ಆವರಣ ಬೈಪಾಸ್ ರೋಡ್ ನಲ್ಲಿಈ ಹಣ್ಣು ತರಕಾರಿ ಮಾರಾಟ ಮಾಡಲು ತಾತ್ಕಾಲಿಲ ಸೆಟ್‌ಲೈಟ್ ತರಕಾರಿ ಮಾರುಕಟ್ಟೆಯ ಸ್ಥಾಪಿಸಲಾಗಿದೆ.

ಮಾರುಕಟ್ಟೆಗಳಲ್ಲಿ ಬೆಳಿಗ್ಗೆ 6 ರಿಂದ 8 ಗಂಟೆಯೊಳಗಾಗಿ ಚಿಲ್ಲರೆ ವರ್ತಕರಿಗೆ ಮಾರಾಟ ಮಾಡಬೇಕು. ತಳ್ಳುಗಾಡಿಯ ಮಾರಾಟಗಾರರು ಇದನ್ನು ಯಖರೀದಿಸಿ ನಿಗದಿತ ಪ್ರದೇಶದಲ್ಲಿ ಗ್ರಾಹಕರಿಗೆ ಮಾರಾಟ ಮಾಡಬೇಕು. ಮಾರಾಟದ ಸಂದರ್ಬದಲ್ಲಿ ಗ್ರಾಹಕರ ಮಧ್ಯೆ ಅಂತರ ಕಾಯ್ದುಕೊಳ್ಳುವ ಮೂಲಕ ಒಬ್ಬೊಬ್ಬರಿಗೆ ಅವಕಾಶ ಯನೀಡಬೇಕು. ಈ ಕುರಿತು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರು ಹಾಗೂ ಯಎ.ಪಿ.ಎಮ್.ಸಿ ಸಹಾಯಕ ನಿರ್ದೇಶಕರು ಮೇಲ್ವಿಚಾರಣೆ ಮಾಡಬೇಕು. ಅದರಂತೆ ಆರಕ್ಷಕ ಪೊಲೀಸ್ ಉಪ ಅಧೀಕ್ಷಕರು ತಾತ್ಕಾಲಿಕ ಮಾರಾಟ ಕೇಂದ್ರಗಳಲ್ಲಿ ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಕೋ”ಡ್-19ಯ
ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.

 

photo:

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ‌ಅಗರವಾಲ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಂತೋಷ ಇನಾಮದಾರ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *