Tuesday, 7th July 2020

ರಫ ಯುಎಸ್ ಓಪನ್ ಚಾಂಪಿಯನ್

18ನೇ ಗ್ರ್ಯಾಾನ್ ಸ್ಲ್ಯಾಾಮ್ ಗೆದ್ದ ರಫೆಲ್ ನಡಾಲ್ ಫೈನಲ್‌ನಲ್ಲಿ ಮೆಡ್ವೆೆಡೆವ್‌ಗೆ ಭಾರಿ ನಿರಾಸೆ

ವಿಶ್ವ ಶ್ರೇಷ್ಠ ಟೆನಿಸ್ ಆಟಗಾರ ರಫೆಲ್ ನಡಾಲ್ ಅವರು ಪುರುಷರ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ ರಷ್ಯಾಾದ ಡೆನಿಲ್ ಮೆಡ್ವೆೆಡೆವ್ ಅವರನ್ನು ಮಣಿಸಿ ವೃತ್ತಿಿ ಜೀವನದ ನಾಲ್ಕನೇ ಯುಎಸ್ ಓಪನ್ ಮುಡಿಗೇರಿಸಿಕೊಂಡರು. ಆದರೆ, ಚೊಚ್ಚಲ ಗ್ರಾಾ ್ಯನ್ ಸ್ಲ್ಯಾಾಮ್ ಕನಸು ಕಂಡಿದ್ದ ಮೆಡ್ವೆೆಡೆವ್‌ಗೆ ಭಾರಿ ನಿರಾಸೆಯಾಯಿತು.

ಭಾನುವಾರ ತಡರಾತ್ರಿಿ (ಭಾರತೀಯ ಕಾಲಮಾನ) ಸತತ ನಾಲ್ಕು ಗಂಟೆ 49 ನಿಮಿಷಗಳ ಕಾಲ ನಡೆದ ಸುದೀರ್ಘ ಹೋರಾಟದಲ್ಲಿ ಪಾರಮ್ಯ ಮೆರೆದ ಸ್ಪೇನ್ ಆಟಗಾರ ರಫೆಲ್ ನಡಾಲ್ 7-5, 6-3, 5-7, 4-6, 6-4 ಅಂತರದಲ್ಲಿ ಡೆನಿಲ್ ಮೆಡ್ವಡೆವ್ ಅವರ ವಿರುದ್ಧ ಗೆದ್ದು ವೃತ್ತಿಿ ಜೀವನದ 19ನೇ ಗ್ರ್ಯಾಾನ್ ಸ್ಲ್ಯಾಾನ್ ಸಾಧನೆ ಮಾಡಿದರು. ಆ ಮೂಲಕ ಅತಿ ಹೆಚ್ಚು ಗ್ರಾಾ ್ಯನ್ ಸ್ಲ್ಯಾಾಮ್ ಗೆದ್ದಿರುವ ಸ್ವಿಿಜರ್‌ಲೆಂಡ್‌ನ ರೋಜರ್ ಫೆಡರರ್(20 ) ಅವರನ್ನು ದಾಖಲೆ ಸರಿದೂಗಿಸಲು ನಡಾಲ್‌ಗೆ ಇನ್ನೂ ಕೇವಲ ಒಂದೇ ಒಂದು ಗೆಲುವಿನ ಅಗತ್ಯವಿದೆ.

ರಫೆಲ್ ನಡಾಲ್ ಹಾಗೂ ಡೆನಿಲ್ ಮೆಡ್ವೆೆಡೆವ್ ಅವರ ಯುಎಸ್ ಓಪನ್ ಫೈನಲ್ ಹಣಾಹಣಿಯನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆೆಯ ಟೆನಿಸ್ ಅಭಿಮಾನಿಗಳು ಅರ್ಥರ್ ಆ್ಯಶ್ ಅಂಗಳಕ್ಕೆೆ ಸೇರಿದ್ದರು. ಇದರ ನಡುವೆ ನಡೆದ ಪ್ರಶಸ್ತಿಿ ಸುತ್ತಿಿನ ಪಂದ್ಯದಲ್ಲಿ ಇಬ್ಬರೂ ಆಟಗಾರರ ನಡುವೆ ಐದು ಸೆಟ್‌ಗಳಲ್ಲಿ ಭಾರಿ ಕಾದಾಟ ಏರ್ಪಟ್ಟಿಿತು. ನಂತರ ವಿಶ್ವದ ಎರಡನೇ ಶ್ರೇಯಾಂಕದ ಆಟಗಾರನ ಪರ ಫಲಿತಾಂಶ ಮೂಡಿಬಂತು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆೆ ಮೊರೆ ಹೋದ ರಫೆಲ್ ನಡಾಲ್ ಅವರು ಮೊದಲು ಮತ್ತು ಎರಡನೇ ಸೆಟ್‌ಗಳನ್ನು ಬಹುಬೇಗ ತನ್ನ ಖಾತೆಗೆ ಸೇರಿಸಿಕೊಂಡರು. ಆದರೆ, ಮೂರನೇ ಸೆಟ್‌ನಲ್ಲಿ ಪುಟಿದೆದ್ದ ರಷ್ಯಾಾ ಆಟಗಾರ ನಡಾಲ್‌ಗೆ ತೀವ್ರ ಪೈಪೋಟಿ ನೀಡಿದರು. ಇದರ ಫಲವಾಗಿ 7-5, 6-4 ಅಂತರದಲ್ಲಿ ಮೂರು ಮತ್ತು ನಾಲ್ಕನೇ ಸೆಟ್‌ಗಳನ್ನು ಗೆದ್ದು ಸಮಬಲ ಸಾಧಿಸಿದರು.

ಅಂತಿಮವಾಗಿ ತೀವ್ರ ಕುತೂಹಲ ಕೆರಳಿಸಿದ ಐದನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಇಬ್ಬರ ನಡುವೆ ಭಾರಿ ಕಾದಾಟ ನಡೆಯಿತು. ಆದರೆ, ಪ್ರತಿಯೊಂದು ಪಾಯಿಂಟ್ ಗಳಿಸಲು ಇಬ್ಬರ ನಡುವೆ ಸಾಕಷ್ಟು ಹೋರಾಟ ನಡೆಯಿತು. ಆದರೆ, ಎಂದಿನಂತೆ ತನ್ನ ಸ್ವಾಾಭಾವಿಕ ಆಟ ಪ್ರದರ್ಶನ ತೋರಿದ ರಫೆಲ್ ನಡಾಲ್ 6-4 ಅಂತರದಲ್ಲಿ ನಿರ್ಣಾಯಕ ಸೆಟ್ ಗೆದ್ದು ಪಂದ್ಯವನ್ನು ತನ್ನದಾಗಿಸಿಕೊಂಡರು.

ಪಂದ್ಯದಲ್ಲಿ ನಡಾಲ್ ಗೆಲುವು ಸಾಧಿಸುತ್ತಿಿದ್ದಂತೆ ನೆರೆದಿದ್ದ ಅಪಾರ ಅಭಿಮಾನಿಗಳ ಪ್ರೀತಿಗೆ ಭಾಜನರಾದರು. ಕಳೆದ ಐದು ಟೂರ್ನಿಗಳಲ್ಲಿ ರಫೆಲ್ ನಡಾಲ್ ಅವರು 26-1 ಮುನ್ನಡೆ ಕಾಯ್ದುಕೊಂಡಿದ್ದಾರೆ. ಆ ಮೂಲಕ ತಮ್ಮ ಗೆಲುವಿನ ಲಯವನ್ನು ಹಾಗೆಯೇ ಮುಂದುವರಿಸಿದ್ದಾರೆ.

ಮರ್ಟೆನ್‌ಸ್‌-ಸಬಲೆಂಕಾ ಜೋಡಿಗೆ ಡಬಲ್ಸ್ ಕಿರೀಟ
ವಿಶ್ವದ ನಾಲ್ಕನೇ ಶ್ರೇಯಾಂಕದ ಬೆಲ್ಜಿಿಯಂನ ಎಲಿಸ್ ಮರ್ಟೆನ್‌ಸ್‌ ಹಾಗೂ ಬೆಲಾರಸ್‌ನ ಆರ್ಯನಾ ಸಬಲೆಂಕಾ ಜೋಡಿಯು ಯುಎಸ್ ಓಪನ್ ಮಹಿಳೆಯರ ಡಬಲ್ಸ್ ಪ್ರಶಸ್ತಿಿ ಮುಡಿಗೇರಿಸಿಕೊಂಡಿತು. ಭಾನುವಾರ ತಡರಾತ್ರಿಿ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಫೈನಲ್ ಹಣಾಹಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಮರ್ಟೆನ್‌ಸ್‌ ಹಾಗೂ ಸಬಲೆಂಕಾ ಜೋಡಿಯು 7-5, 7-5 ಅಂತರದಲ್ಲಿ ವಿಕ್ಟೋೋರಿಯಾ ಅಜರೆಂಕಾ ಹಾಗೂ ಆ್ಯಶ್ಲೆೆ ಬಾರ್ಟಿ ಜೋಡಿಯ ವಿರುದ್ಧ ಗೆದ್ದು ಯುಎಸ್ ಓಪನ್ ಪ್ರಶಸ್ತಿಿ ತನ್ನದಾಗಿಸಿಕೊಂಡಿತು.
ವಿಶ್ವದ ನಾಲ್ಕನೇ ಕ್ರಮಾಂಕದ ಈ ಜೋಡಿಯು ಪ್ರಸಕ್ತ ಆವೃತ್ತಿಿಯ ಆರಂಭದಲ್ಲಿ ಇಂಡಿಯನ್ ವೇಲ್ಸ್ ಹಾಗೂ ಮಿಯಾಮಿ ಟೂರ್ನಿಗಳಲ್ಲಿ ಪ್ರಶಸ್ತಿಿ ಗೆದ್ದಿತ್ತು. ಇದೀಗ ಈ ಜೋಡಿಯು ವೃತ್ತಿಿ ಜೀವನದ ಮೊದಲ ಗ್ರಾಾ ್ಯನ್ ಸ್ಲ್ಯಾಾಮ್ ಗೆದ್ದು ಬೀಗಿತು.

ಪಟ್ಟಿಿ:
ರೋಜರ್ ಫೆಡರರ್: 20
ರಫೆಲ್ ನಡಾಲ್: 18
ನೊವಾಕ್ ಜೊಕೊವಿಚ್: 16

Leave a Reply

Your email address will not be published. Required fields are marked *