Wednesday, 27th January 2021

ಲವ್ ಸ್ಕೋಪ್‌” ಚಿತ್ರದಲ್ಲಿ ಪ್ರೊಫೆಸರ್ ಪಾತ್ರದಲ್ಲಿ ಶಕ್ತಿ ಕಪೂರ್   

“ಲವ್ ಸ್ಕೋಪ್‌” ಚಿತ್ರದಲ್ಲಿ ಪ್ರೊಫೆಸರ್ ಪಾತ್ರದಲ್ಲಿ ಶಕ್ತಿ ಕಪೂರ್

ಮುಂಬೈ,  ಬಾಲಿವುಡ್‌ನ ಖ್ಯಾತ ನಟ ಶಕ್ತಿ ಕಪೂರ್ ಮುಂಬರುವ “ಲವ್ ಸ್ಕೋಪ್‌” ಚಿತ್ರದಲ್ಲಿ ಪ್ರೊಫೆಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪಿಎಂ ಫೀಲ್ಮ್ ಪ್ರೋಡಕ್ಷನ್ ಅಡಿಯಲ್ಲಿ, ಪ್ರಣವಿ ಪಟೇಲ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಸನ್ನಿ ಕುಮಾರ್ ಆಕ್ಷನ್ ಕಟ್ ಹೇಳಲಿದ್ದಾರೆ. ಲವ್ ಸ್ಕೋಪ್‌ ಚಿತ್ರದ ಬಗ್ಗೆ ಈ ದಿನಗಳಲ್ಲಿ ಹೆಚ್ಚಿನ ಚರ್ಚೆ ನಡೆಯುತ್ತಿವೆ. ಪ್ರೊಫೆಸರ್ ಪಾತ್ರದಲ್ಲಿ ಶಕ್ತಿ ಕಪೂರ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಜ್ಯೋತಿಷ್ಯದ ಮೇಲೆ ಚಿತ್ರಿಕರಣ ಗೊಂಡಿದ್ದು, ಹಣೆಯಲ್ಲಿ ಏನು ಬರೆದಿದೆ ಅದು ಆಗುತ್ತದೆ ಎಂದು ಅಭಿಮಾನಿಗಳಿಗೆ ತಿಳಿಸುವ ಪ್ರಯತ್ನ ಇದಾಗಿದೆ. “ನಾವು ಈ ಚಿತ್ರವನ್ನು ಪ್ರತಿ ವರ್ಗದ ವೀಕ್ಷಕರನ್ನು ಮನದಲ್ಲಿಟ್ಟುಕೊಂಡು ಮಾಡಿದ್ದೇವೆ. ಅದು ಮನರಂಜನೆಯ ಪ್ರತಿಯೊಂದು ಬಣ್ಣವನ್ನು ಹೊಂದಿರುತ್ತದೆ ಮತ್ತು ಅದು ಪ್ರೇಕ್ಷಕರಿಗೆ ಆನಂದವನ್ನು ನೀಡುತ್ತದೆ” ಎಂದು ನಿರ್ಮಾಪಕರು ಹೇಳಿದ್ದಾರೆ.

ಈ ಚಿತ್ರ ಸಂಪೂರ್ಣ ಮನರಂಜನೆವುಳ್ಳದ್ದಾಗಿದೆ ಎಂದು ನಿರ್ದೇಶಕ ಸನ್ನಿ ಕುಮಾರ್ ಹೇಳಿದರು. ಲವ್ ಸ್ಕೋಪ್‌ನ ಪ್ರತಿಯೊಂದು ದೃಶ್ಯವೂ ವೀಕ್ಷಕರನ್ನು ಅದರತ್ತ ಆಕರ್ಷಿಸುತ್ತದೆ. ಇವರೆಗೆ, ಬಾಲಿವುಡ್ ಅಥವಾ ಇತರ ಪ್ರಾದೇಶಿಕ ಭಾಷಾ ಚಿತ್ರಗಳಲ್ಲಿ ಯಾರೂ ಈ ಪ್ರಯತ್ನಕ್ಕೆ ಕೈ ಹಾಕಿಲ್ಲ. ಜ್ಯೋತಿಷ್ಯದ ಆಧುನಿಕ ಪವಾಡಗಳನ್ನು ಸಹ ಚಿತ್ರದಲ್ಲಿ ಚೆನ್ನಾಗಿ ತೋರಿಸಲಾಗಿದೆ” ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *