Monday, 13th July 2020

ವಿಜಯಪುರದ ಸಿದ್ದೇಶ್ವರ…

* ಎಸ್. ರುದ್ರಮ್ಮಾಾ

ವಿಜಯಪುರ ಪಟ್ಟಣದ ಹೃದಯಭಾಗದಲ್ಲಿರುವ ಶ್ರೀ ಸಿದ್ಧೇಶ್ವರ ದೇವಸ್ಥಾಾನವು ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಈಗ 100 ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ದೇಗುಲವು ಬೃಹತ್ ಕಲ್ಲಿನ ಕಟ್ಟಡವನ್ನು ಹೊಂದಿದ್ದು, ಅರಮನೆಯ ವಿನ್ಯಾಾಸವನ್ನು ಹೊಂದಿದೆ.

ದೇಗುಲದ ಕಟ್ಟಡದ ಬಲಮೂಲೆಯಲ್ಲಿ ಒಂದು ಶಿಲಾಲೇಖವಿದೆ. ಅದರಲ್ಲಿ ಮೂರು ಸಾಲು ಬರಹವಿದ್ದು, ವಿಜಯಪುರ, ಪಂಚಮಂಡಳ, ಕಿರ್ತನದ, ಆಕರಗಳು ದೇವನಾಗರಿ ಲಿಪಿಯಲ್ಲಿವೆ. ಇದರಿಂದ ತಿಳಿದು ಬರುವ ಸಂಗತಿ ಎಂದರೆ ಅಂದಿನ ಕೆಲವು ಹಿರಿಯರು ಪಂಚ ಕಮೀಟಿ ಹೆಸರಿನಲ್ಲಿ ಈ ಸಂಸ್ಥೆೆಯನ್ನು 1898ರಲ್ಲಿ ಪ್ರಾಾರಂಭಿಸಿದರು. ಇವರೆಲ್ಲರೂ ಸೋಲ್ಲಾಪುರದಿಂದ ಬಂದ ವೀರಶೈವ ಸಮಾಜದ ವ್ಯಾಾಪಾರಸ್ಥರು ಸೋಲಾಪುರದ ಅವಧಿಯಲ್ಲಿ ಸಿದ್ಧೆೀಶ್ವರನ ಭಕ್ತರು, ಸೊಲ್ಲಾಪುರದಲ್ಲಿರುವ ಶ್ರೀ ಸಿದ್ಧರಾಮನ ಭಕ್ತರಾದ ವರ್ತಕರು ಪ್ರತಿದಿನ ಬೆಳಗ್ಗೆೆ ಶ್ರೀ ಸಿದ್ಧೇಶ್ವರ ದೇಗುಲಕ್ಕೆೆ ಹೋಗಿ ದರ್ಶನ ಮಾಡಿಕೊಂಡು ಬಂದನಂತರವೇ ತಮ್ಮ ದಿನನಿತ್ಯದ ಕಾಯಕವನ್ನು ಪ್ರಾಾರಂಭಿಸುವದು ಇಂದಿಗೂ ನಡೆದು ಬಂದ ರೂಢಿ. ಇಂತಹ ಕೆಲವು ವರ್ತಕರಾದ ಬಂಟಗಿಯ ಶಂಕರರಾವ ದೇಸಾಯಿ, ದುಂಡಪ್ಪ ಸಾಲಕನವರ, ಡುಂಗಲ್ಲಿ ಗುರುಗದ ಕಾರಮಠ ವಿಜಾಪುರಕ್ಕೆೆ ಬಂದು ವ್ಯಾಾಪಾರ ವೃತ್ತಿಿ ಕೈಕೊಂಡಾಗ, ಇಲ್ಲಿಯೂ ಒಂದು ಶ್ರೀ ಸಿದ್ದೇಶ್ವರನ ದೇವಾಲಯವನ್ನು ನಿರ್ಮಿಸಿದರೆ ಪ್ರತಿದಿನ ಪಡೆಯಲು ಅನುಕೂಲವಾಗಬಹುದು ಎಂದು ದೇವಾಲಯ ನಿರ್ಮಾಣಕ್ಕೆೆ ಅವರ ಶ್ರಮವೇ ಈ ಸಂಸ್ಥೆೆಯ ಹುಟ್ಟಿಿಗೆ ಕಾರಣ.

ವಿಜಯಪುರದ ಸಿದ್ದೇಶ್ವರ ದೇಗುಲ ನಿರ್ಮಾಣಕ್ಕೆೆ, ಸೋಲಾಪುರದ ಸಿದ್ದರಾಮೇಶ್ವರ ದೇಗುಲವು ಪ್ರೇರಣೆ ಎನ್ನುತ್ತಾಾರೆ ಇಲ್ಲಿನ ಹಿರಿಯರು. ಈ ಜಾಗದಲ್ಲಿ ಕೈಗಾರಿಕಾ ಉದ್ದೇಶಕ್ಕೆೆ ಒಂದು ದೊಡ್ಡ ಕಟ್ಟಡವನ್ನು ನಿರ್ಮಿಸಬೇಕೆಂದು ಸ್ಥಳೀಯರು ನಿಶ್ಚಯಿಸುತ್ತಾಾರೆ. ಆದರೆ, ಆ ಜಾಗದಲ್ಲಿ ಕಂಡು ಬಂದ ಈಶ್ವರ ಲಿಂಗವನ್ನು ಗಮನಿಸಿದ ಸ್ಥಳೀಯರು, ಇಲ್ಲಿ ದೇಗುಲ ನಿರ್ಮಿಸುವುದೇ ಸೂಕ್ತ ಎಂದು, ವಂತಿಗೆಯ ಮೂಲಕ ಹಣ ಸಿದ್ದೇಶ್ವರ ದೇಗುಲವನ್ನು ನಿರ್ಮಿಸಿದರು. ಈ ದೇಗುಲದ ಆವರಣದಲ್ಲಿ ಕಪಿಲೇಶ್ವರ ಮೂರ್ತಿಯ ಪುಟ್ಟ ದೇಗುಲ ಇದೆ. ಇದು ಇತ್ತೀಚೆಗೆ ನವೀಕರಣಗೊಂಡು ಭಕ್ತರ ಹೃನ್ಮನಗಳನ್ನು ತಣಿಸುವಂತಾಗಿದೆ. ಕಪಿಲೇಶ್ವರ ಗುಡಿಯ ಹಿಂದೆ ಶೆಲ್‌ರ್ಕ ಹಾಲ್ ಇದೆ. ಇದೊಂದು ಅಪರೂಪದ ಕಟ್ಟಡವಾಗಿದ್ದು, ಇಲ್ಲಿಗೆ ಸುಮಾರು1918ರ ಸಮಯದಲ್ಲಿ ಬ್ರಿಿಟಿಷ್ ವೈಸ್‌ರಾಯ್, ಮಹಾತ್ಮಾಾ ಗಾಂಧೀಜಿ, ಸುಭಾಷಚಂದ್ರ ಬೋಸ್ ಮೊದಲಾದವರು ಭೇಟ್ಟಿಿಯಿತ್ತುದಾಗಿ ಸ್ಥಳೀಯರು ಹೇಳುತ್ತಾಾರೆ. ಈಗಿರುವ ಶಿವಾನುಭವ ಮಂಟಪದ ಸ್ಥಳದಲ್ಲಿ ಬಹು ಹಿಂದೆ ಟೆನಿಸ್ ಕೋರ್ಟ್ ಇದ್ದು, ಅಲ್ಲಿ ಹಿರಿಯ ಅಧಿಕಾರಿಗಳು ಟೆನಿಸ್ ಆಡಲು ಬರುತ್ತಿಿದ್ದರು.

ಜಾತ್ರೆೆ
ಸಿದ್ಧೇಶ್ವರ ಜಾತ್ರೆೆಯು ಪ್ರತಿ ವರ್ಷ ಜನವರಿ 14ರಿಂದ 15ರ ಸಮಯದಲ್ಲಿ ಸಂಕ್ರಾಾಂತಿಯ ಸಮಯದಲ್ಲಿ ನಡೆಯುತ್ತದೆ. ಸುಮಾರು 15ದಿನಗಳ ವರೆಗೆ ವಿಜೃಂಭಣೆಯಿಂದ ನೆರವೇರುವ ಈ ಜಾತ್ರೆೆಗೆ ರಾಜ್ಯದ ನಾನಾ ಜಿಲ್ಲೆೆಗಳಿಂದ ಸಾವಿರಾರು ಭಕ್ತರು ಬರುತ್ತಾಾರೆ. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರ, ಆಂಧ್ರದಿಂದ ರಾಸುಗಳನ್ನು ಖರೀದಿಸುವುದಕ್ಕೆೆ ಬರುತ್ತಾಾರೆ. ಕರ್ನಾಟಕದ ಅನೇಕ ಭಾಗಗಳಿಂದ ಜಾನುವಾರುಗಳು ಮಾರಾಟಕ್ಕೆೆ ಬರುವುದರಿಂದಾಗಿ, ಇದು ರಾಸುಗಳ ಜಾತ್ರೆೆ ಎಂದು ಸಹ ಹೆಸರುವಾಸಿಯಾಗಿದೆ. 15ದಿನಗಳವರೆಗೆ ನಡೆಯುವ ಜಾತ್ರೆೆ ಸಂದರ್ಭದಲ್ಲಿ ಪ್ರವಚನ ಪಠನ ಮಾಡಲಾಗ್ತುತದೆ. ಮತ್ತು ದೇವಸ್ಥಾಾನದಲ್ಲಿ ಕಾರ್ಯಕ್ರಮಗಳು, ವಿದ್ಯಾಾರ್ಥಿಗಳಿಗೆ ಪಾಠ-ಪ್ರವಚನ ಮಾಡುತ್ತಾಾರೆ. ದೇವಾಲಯದ ವತಿಯಿಂದ ಸುಮಾರು 300 ಆಕಳುಗಳನ್ನು ಸಾಗಿದ್ದಾಾರೆ. ಇದರಿಂದ ವಿಭೂತಿ ತಯಾರಿಕೆ ಮಾಡಿ ಜನರಿಗೆ ವಿತರಣೆ ಮಾಡುತ್ತಾಾರೆ. ಜಾತ್ರೆೆಯಲ್ಲಿ ಜನಪದ ನಾಟಕ, ಸಂಗೀತ, ನೃತ್ಯ, ಗ್ರಾಾಮೀಣ ಕ್ರೀಡೆಗಳನ್ನು ಹಮ್ಮಿಿಕೊಂಡು ಅದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ. ಜಾತ್ರೆೆ ಎರಡನೆ ದಿನಕ್ಕೆೆ ಸಂಜೆಯ ಸಮಯದಲ್ಲಿ ನಾನಾ ಕಲರ್‌ಗಳ ಮದ್ದನ್ನು ಹಾರಿಸುವ ಕಾರ್ಯಕ್ರಮವಿದ್ದು, ಸಮಯದಲ್ಲಿ ಸುಮಾರು ಒಂದು ಲಕ್ಷ ಜನರು ಭಾಗಿಯಾಗುತ್ತಾಾರೆ.

Leave a Reply

Your email address will not be published. Required fields are marked *