Tuesday, 7th July 2020

ವಿದ್ಯುತ್ ಕಾರುಗಳು ನಿಜಕ್ಕೂ ಪರಿಸರ ಸ್ನೇಹಿಯೇ ?

 ವಸಂತ ಗ ಭಟ್

gazeteer@vishwavani.news

ವಿದ್ಯುತ್ ಚಾಲಿತ ವಾಹನಗಳಿಗೆ ಸುಮಾರು 2 ಶತಮಾನದಷ್ಟೂ ಇತಿಹಾಸವಿದ್ದರೂ, ಈ ಶತಮಾನದಲ್ಲಿ ಅವು ಹೆಚ್ಚು ಮುನ್ನಲೆಗೆ, ಪ್ರಚಾರಕ್ಕೆ ಬಂದಿದ್ದು ಇಲಾನ್ ಮಸ್ಕ್ ನಿರ್ಮಿತ ಟೆಸ್ಲಾ ಕಾರಿನ ಮುಖಾಂತರ. 2008 ರಲ್ಲಿ ಬಿಡುಗಡೆಯಾದ ರೋಡ್ ಸ್ಟಾರ್ ಎಂಬ ಕಾರಿನ ಮೂಲಕ ಮಾರುಕಟ್ಟೆ ಪ್ರವೇಶಿಸಿದ ಟೆಸ್ಲಾ ಮತ್ತೆಂದೂ ಹಿಂತಿರುಗಿ ನೋಡಲೆ ಇಲ್ಲ. ವಿದ್ಯುತ್ ಚಾಲಿತ ವಾಹನಗಳನ್ನು ಜನರು ಈ ಪರಿ ಇಷ್ಟಪಡುತ್ತಾರೆ ಎಂದು ತಿಳಿದ ತP್ಷÀಣವೇ ಜಗತ್ತಿನ ಎಲ್ಲ ಪ್ರಖ್ಯಾತ ಕಾರು ಕಂಪನಿಗಳು ವಿದ್ಯುತ್ ಕಾರನ್ನು ಅಭಿವೃದ್ಧಿ ಪಡಿಸಿ ಮಾರುಕಟ್ಟೆಗೆ ಬಿಡಲಾರಂಭಿಸಿದವು. ಭಾರತದಲ್ಲಿ ಇನ್ನೂ ಈ ರೀತಿಯ ವಾಹನಗಳು ಅಷ್ಟಾಗಿ ಕಾಣಿಸದಿದ್ದರು ಮುಂದುವರಿದ ದೇಶಗಳಲ್ಲಿ ಈ ವಾಹನಗಳ ಭರಾಟೆ ಶರ ವೇಗದಲ್ಲಿ ಸಾಗುತ್ತಿದೆ. ವಿದ್ಯುತ್ ಚಾಲಿತ ಕಾರುಗಳು ಈ ರೀತಿ ಮಾರಾಟವಾಗಲು ಆಕರ್ಷಕ ಒಳ ವಿನ್ಯಾಸ, ಸ್ಪೋರ್ಟಿ ಲುಕ್ ಮತ್ತಿತರ ಕಾರಣಗಳಿದ್ದರು ಅತಿ ಮುಖ್ಯ ಕಾರಣ ಅವು ಪರಿಸರ ಸ್ನೇಹಿ ಎಂಬುದು. ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್ ಅಥವಾ ಡೀಸೆಲ್ ಗಳನ್ನು ಈ ಕಾರುಗಳು ಚಾಲನೆಗಾಗಿ ಬಳಸದೆ ಇರುವ ಕಾರಣ ವಾತಾವರಣಕ್ಕೆ ಹಾನಿಕಾರಕವಾಗುವಂತಹ ಇಂಗಾಲ ಮತ್ತಿತರ ವಿಷಾನಿಲಗಳು ಈ ವಾಹನದಿಂದ ಹೊರಸೂಸಲ್ಪಡುವುದಿಲ್ಲ. ನೀವು ಟೆಸ್ಲಾ ಕಂಪನಿ ಯ ಜಾಹಿರಾತುಗಳನ್ನು ನೋಡಿದ್ದರೆ ಈ ಅಂಶವನ್ನು ಗಮನಿಸಿರುತ್ತಿರಿ. ಅವರ ಜಾಹಿರಾತುಗಳು ಕಾರಿಗಿಂತ ಹೆಚ್ಚಾಗಿ ವಿದ್ಯುತ್ ರಹಿತವಾದ ಕಾರನ್ನು ಬಳಸುವ ಮುಖಾಂತರ ಹೇಗೆ ಪರಿಸರವನ್ನು ತಾವು ರಕ್ಷಿಸುತ್ತಿz್ದÉೀವೆ ಎಂಬುದರ ಬಗ್ಗೆ ಹೆಚ್ಚು ಮಹತ್ವ ಕೊಡುತ್ತವೆ. ಈ ಪರಿಸರ ಸ್ನೇಹಿ ಎಂಬ ಅಂಶದ ಮುಖಾಂತರ ಎಲ್ಲ ಕಾರು ಕಂಪನಿಗಳು ವರ್ಷದಿಂದ ವರ್ಷಕ್ಕೆ ತಮ್ಮ ಲಾಭವನ್ನು ಹೆಚ್ಚಿಸಿ ಕೊಳ್ಳುತ್ತಲೆ ಇವೆ. ಅಷ್ಟಕ್ಕೂ ವಿದ್ಯುತ್ ಚಾಲಿತ ಕಾರುಗಳು ವಾಸ್ತವದಲ್ಲಿ ನಿಜವಾಗಿಯೂ ಸಂಪೂರ್ಣ ಪರಿಸರ ಸ್ನೇಹಿಯೇ ? ಅವು ಯಾವುದೇ ರೀತಿಯ ವಿಷಾನಿಲಗಳನ್ನು ವಾತಾವರಣಕ್ಕೆ ಬಿಡುವುದೇ ಇಲ್ಲವೇ ಎಂದು ನೀವು ಪ್ರಶ್ನಿಸಿದರೆ ?


ಉತ್ತರ ಸರಳ, ಖಂಡಿತ ವಾಗಿಯೂ ಇಲ್ಲ. ಯಾವುದೇ ವಾಹನ ಹೊರ ಹಾಕುವ ಒಟ್ಟು ಇಂಗಾಲ ಹಲವಾರು ಭಾಗಗಳನ್ನು ಹೊಂದಿರುತ್ತದೆ. ಮೊದಲನೆಯದಾಗಿ ಕಾರಿನ ಉತ್ಪಾದನೆಯಿಂದಾಗಿ ವಾತಾವರಣ ಸೇರಬಹುದಾದ ಇಂಗಾಲ . ಪೆಟ್ರೋಲಿಯಂ ಮೂಲದ ಇಂಧನಗಳನ್ನು ಬಳಸುವ ಕಾರಿನ ಉತ್ಪಾದನೆಗಿಂತ ಹೆಚ್ಚು ಇಂಗಾಲ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಯಲ್ಲಿ ವಾತಾವರಣವನ್ನು ಸೇರುತ್ತದೆ. ಇನ್ನೂ ನಿಖರವಾಗಿ ಹೇಳಬೇಕು ಎಂದಾದರೆ ವಿದ್ಯುತ್ ಚಾಲಿತ ವಾಹನ ತನ್ನ ಸಂಪೂರ್ಣ ಜೀವಮಾನದಲ್ಲಿ ಹೊರಸೂಸುವ ಇಂಗಾಲದ ಮೂರನೆಯ ಒಂದರಷ್ಟು ಭಾಗವನ್ನು ತಯಾರಿಕೆಯಲ್ಲಿಯೇ ವಾತಾವರಣಕ್ಕೆ ಬಿಟ್ಟಿರುತ್ತದೆ. ವಿದ್ಯುತ್ ಬ್ಯಾಟರಿಯನ್ನು ಉತ್ಪಾದಿಸಲು ಅವಶ್ಯ ವಿರುವ ಹೆಚ್ಚಿನ ಶಕ್ತಿಯೇ ಇದಕ್ಕೆ ಮುಖ್ಯ ಕಾರಣ.

ಒಮ್ಮೆ ವಿದ್ಯುತ್ ಚಾಲಿತ ವಾಹನಗಳು ರಸ್ತೆ ಸೇರಿದ ನಂತರ ವಿದ್ಯುತ್ ಶಕ್ತಿಯ ಬಲದಿಂದ ಕಾರ್ಯ ನಿರ್ವಹಿಸುವುದರಿಂದ ಅವು ವಾತಾವರಣಕ್ಕೆ ಯಾವುದೇ ರೀತಿಯ ಇಂಗಾಲವನ್ನು ಬಿಡುಗಡೆ ಮಾಡುವುದಿಲ್ಲ. ಆದರೆ ಅವು ಉಪಯೋಗಿಸುವ ವಿದ್ಯುತ್ ಬರುವುದು ಯಾವ ಮೂಲದಿಂದ ? ಭಾರತವನ್ನು ಸೇರಿದಂತೆ ಜಗತ್ತಿನ ಹೆಚ್ಚಿನ ರಾಷ್ಟ್ರಗಳ ಬಹುಪಾಲು ವಿದ್ಯುತ್ ಉತ್ಪಾದನೆಯಾಗುವುದು ಕಲ್ಲಿದ್ದಲ ಮೂಲದಿಂದ. ಭಾರತದಲ್ಲಂತೂ ಒಟ್ಟು ವಿದ್ಯುತ್ ಉತ್ಪಾದನೆಯ ಸುಮಾರು 65% ಪಾಲು ಕಲ್ಲಿದ್ದಲ ಮೂಲದಿಂದಲೇ ಉತ್ಪಾದನೆಯಾಗುವಂತಹುದು. ಕಲ್ಲಿದ್ದಲನ್ನು ಸುಟ್ಟು ಅದರಿಂದ ಉತ್ಪಾದಿಸುವ ವಿದ್ಯುತ್ ಪ್ರಕ್ರಿಯೆ ವಾತಾವರಣಕ್ಕೆ ಅತ್ಯಂತ ಮಾರಕ. ಇಂಗಾಲ ಅಷ್ಟೇ ಅಲ್ಲದೆ ಇನ್ನೂ ಹಲವಾರು ವಿಷಾನಿಲಗಳನ್ನು ಈ ವಿದ್ಯುತ್ ಸ್ಥಾವರಗಳು ನಿತ್ಯವೂ ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ. ಸಾಮಾನ್ಯವಾಗಿ ಈ ಸ್ಥಾವರಗಳು ನಗರ ಪ್ರದೇಶದ ಸುತ್ತಮುತ್ತ ಇರುವುದರಿಂದ ಒಂದು ಸುಂದರ ಪರಿಸರವನ್ನು ಸಹ ವ್ಯವಸ್ಥಿತ ವಾಗಿ ಹಾಳುಮಾಡುತ್ತವೆ. ದೂರ ಪ್ರದೇಶದಲ್ಲಿದ್ದರೂ, ಅವು ಸೂಸುವ ಹೊಗೆ, ದೂಳು, ಇಂಗಾಲದ ಡೈಆಕ್ಸೈಡ್ ಆಗಸದ ವಿವಿಧ ಪದರಗಳನ್ನು ಹೊಕ್ಕು ಆಮ್ಲ ಮಳೆಯೇ ಮೊದಲಾದ ಸಮಸ್ಯೆಗಳನ್ನು ಹುಟ್ಟುಹಾಕಬಲ್ಲವು. ಇವೆಲ್ಲವುಗಳಿಗೂ ವಿದ್ಯುತ್ ಚಾಲಿತ ವಾಹನಗಳು ಪರೋP್ಷÀ ಹೊಣೆಯಾಗುತ್ತವೆ. ಇನ್ನೂ ಈ ಕಾರುಗಳಲ್ಲಿ ಬಳಕೆ ಯಾಗುವ ಬ್ಯಾಟರಿಗಳಲ್ಲಿ ಅತಿ ಹೆಚ್ಚು ಬಳಕೆಯಾಗುವುದು ಲಿಥೀಯುಮ್ ಎಂಬ ಮೂಲವಸ್ತು. ಇದು ಭೂಮಿಯಲ್ಲಿ ಸುಲಭವಾಗಿ ಸಿಗುವ ಲೋಹವಲ್ಲ. ಇದಕ್ಕಾಗಿ ಜಗತ್ತಿನ ವಿವಿಧೆಡೆ ತೀವ್ರ ಗಣಿಗಾರಿಕೆ ನಡೆಯುತ್ತಿದೆ. ಈ ಗಣಿಗಾರಿಕೆಯಿಂದಾಗಿ ಉಂಟಾಗುವ ವಾಯು ಮಾಲಿನ್ಯ ಪೆಟ್ರೋಲಿಯಂ ಉತ್ಪಾದನೆಯಲ್ಲಿ ಆಗುವ ಮಾಲಿನ್ಯಕ್ಕಿಂತ ಎಷ್ಟೋ ಪಾಲು ಅಧಿಕ. ಇನ್ನೂ ಈ ಗಣಿಗಾರಿಕೆಯ ಕೆಲಸದಲ್ಲಿ ಬಳಕೆಯಾಗುವ ಬಾಲಕಾರ್ಮಿಕರು ಮತ್ತು ಅದು ಹಾಳುಮಾಡುತ್ತಿರುವ ಪರಿಸರದ ಬಗ್ಗೆ ಹೇಳ ಹೊರಟರೆ ಅದೇ ಮತ್ತೊಂದು ಧೀರ್ಘ ಲೇಖನವಾದಿತು.

ಕೆಲವೊಂದು ಉದಾಹರಣೆಗಳನ್ನು ಗಮನಿಸುವುದಾದರೆ, ಅಮೇರಿಕಾದಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ನಿಸಾನ್ ಈಸೀ ವಿದ್ಯುತ್ ಚಾಲಿತ ಕಾರು ತನ್ನ 90000 ಮೈಲಿ ಜೀವಿತಾವಧಿಯಲ್ಲಿ (ತಯಾರಿಕೆ + ಬಳಕೆ + ವಿಲೇವಾರಿ) ಒಟ್ಟು 31 ಮೆಟ್ರಿಕ್ ಟನ್ ಇಂಗಾಲವನ್ನು ವಾತಾವರಣಕ್ಕೆ ಬಿಡುಗಡೆ ಮಾಡಿದರೆ ಅದೇ ಸಾಮಥ್ರ್ಯದ ಬೆಂಜ್ ಸಿಡಿಐಎ 160 ಕಾರು 34 ಮೆಟ್ರಿಕ್ ಟನ್ ನಷ್ಟು ಇಂಗಾಲವನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ. ಇವೆರಡೂ ಕಾರುಗಳು ಹೊರಸೂಸುವ ಇಂಗಾಲದ ವ್ಯತ್ಯಾಸ ಕೇವಲ್ 3 ಟನ್ ಗಳು. ಯೂರೋಪ್ ವ್ಯವಹಾರ ಸಂಸ್ಥೆ ನಡೆಸಿರುವ ಸಂಶೋದನೆಯ ಪ್ರಕಾರ ಒಂದು ಟನ್ ಇಂಗಾಲವನ್ನು ವಾತಾವರಣದಿಂದ ಹೊರತೆಗೆಯಲು ಸುಮಾರು ಏಳು ಡಾರ್ಲ ಖರ್ಚಾಗುತ್ತದೆ. ಆದರೆ ಈ ಕಾರು ತಯಾರಾಕ ಕಂಪನಿಗಳು ಪರಿಸರ ಸ್ನೇಹಿ ಎಂದು ಬಿಂಬಿಸಿ ಬೇರೆ ಬೇರೆ ಸರ್ಕಾರಗಳಿಂದ ಪಡೆಯುತ್ತಿರುವ ಸಬ್ಸಿಡಿ ಮಾತ್ರ ಅಪಾರವಾದುದು. ಈ ಸಂಖ್ಯೆ ಬೇರೆ ಬೇರೆ ಕಾರುಗಳನ್ನು ಹೊಲಿಸಿದಾಗ ಸ್ವಲ್ಪ ವ್ಯತ್ಯಾಸವಾದರು ವಿದ್ಯುತ್ ಚಾಲಿತ ವಾಹನಗಳು ಪೆಟ್ರೋಲಿಯಂ ಇಂಧನಗಳನ್ನು ಬಳಕೆ ಮಾಡುವ ವಾಹನಗಳಿಗಿಂತ ಅತೀ ಹೆಚ್ಚು ಪರಿಸರ ಸ್ನೇಹಿ ಎಂಬ ನಿರ್ಣಯಕ್ಕಂತೂ ಖಂಡಿತವಾಗಿಯೂ ಬರಲಾಗುವುದಿಲ್ಲ.
ಹಾಗಾದರೆ ವಿದ್ಯುತ್ ಚಾಲಿತ ವಾಹನಗಳನ್ನು ಬಳಸಬೇಡಿ ಎಂದು ಹೇಳುವುದು ಈ ಲೇಖನದ ಉz್ದÉೀಶವಲ್ಲ. ವಿದ್ಯುತ್ ಅನ್ನು ಸಂಪೂರ್ಣವಾಗಿ ನವಿಕಾರಿಸಬಹುದಾದಂತಹ ಇಂಧನ ಮೂಲಗಳಾದ ಸೌರ ಶಕ್ತಿ, ಪವನ ಶಕ್ತಿ ಇತ್ಯಾದಿ ಮೂಲಗಳಿಂದ ತಯಾರಿಸಿದರೆ ವಿದ್ಯುತ್ ಕಾರುಗಳು ಹೊರಸೂಸುವ ಒಟ್ಟು ಇಂಗಾಲದ ಅಂಶ ಗಣನೀಯವಾಗಿ ಕಡಿಮೆಯಾಗುತ್ತದೆ. ನ್ಯೂ ಜಿಲಂಡï, ನಾರ್ವೆ ಮತ್ತಿತರ ದೇಶಗಳಲ್ಲಿ ಕಲ್ಲಿದ್ದಲನ್ನು ಅಥವಾ ಮತ್ಯಾವುದೇ ಪೆಟ್ರೋಲಿಯಂ ಉತ್ಪನ್ನಗಳನ್ನು ಸುಟ್ಟು ವಿದ್ಯುತ್ ಉತ್ಪಾದಿಸುವಂತಿಲ್ಲ. ಇದೆ ನಿಯಮವನ್ನು ಎಲ್ಲ ದೇಶಗಳು ಅನುಸರಿಸಿದರೆ ವಿದ್ಯುತ್ ಕಾರುಗಳು ಮಾನವ ಕುಲಕ್ಕೆ ವರವಾಗಿ ಪರಿಣಮಿಸುವುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *