Monday, 21st September 2020

ಶಿವಾಜಿನಗರ ಟಿಕೆಟ್ ಕೊಡುವಂತೆ ಮನವಿ

ಮೇಲ್ಮನೆ ಕಾಂಗ್ರೆೆಸ್ ಸದಸ್ಯ ರಿಜ್ವಾಾನ್ ಅರ್ಷದ್ ಅವರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಬಿ.ಫಾರಂ ನೀಡುವಂತೆ ಕ್ಷೇತ್ರದ ಕೆಲ ಮುಖಂಡರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಮಾಡಿದರು.

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾದ ರಿಜ್ವಾಾನ್ ಪರ ಸ್ಥಳೀಯ ಮುಸ್ಲಿಿಂ ಸಮುದಾಯದ ಕಾಂಗ್ರೆೆಸ್ ನಾಯಕರು, ಪಾಲಿಕೆ ಸದಸ್ಯರು, ರೋಷನ್ ಬೇಗ್ ಅವರು ಕ್ಷೇತ್ರದಲ್ಲಿ ಪ್ರಭಾವಿಯಾಗಿದ್ದು, ಅವರ ವಿರುದ್ಧ ಪ್ರಬಲ ಅಭ್ಯರ್ಥಿಯೇ ಆಗಬೇಕು. ರಿಜ್ವಾಾನ್ ಅರ್ಷದ್ ಅವರು ರೋಷನ್ ಬೇಗ್ ಎದುರಾಳಿ ಅಷ್ಟೇ ಅಲ್ಲದೇ ಸ್ಥಳೀಯರಾಗಿರುವ ಕಾರಣ ಕ್ಷೇತ್ರದಲ್ಲಿ ಹಿಡಿತ ಹಾಗೂ ಪ್ರಭಾವ ಹೊಂದಿದ್ದಾರೆ. ಹೀಗಾಗಿ ರಿಜ್ವಾಾನ್ ಅರ್ಷದ್‌ಗೆ ಟಿಕೆಟ್ ನೀಡಿದರೆ, ಸಂಪೂರ್ಣ ಬೆಂಬಲ ನೀಡಿ ಗೆಲುವಿಗೆ ದುಡಿಯುವುದಾಗಿ ಮನವಿ ಮಾಡಿದರು.

ಶಿವಾಜಿನಗರದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆೆ ಹೆಚ್ಚಾಾಗಿದ್ದು, ರಿಜ್ವಾಾನ್ ಅರ್ಷದ್, ಹುಸೇನ್, ಬಿ.ಆರ್.ನಾಯ್ಡು ಸೇರಿ ಪ್ರಮುಖರು ಟಿಕೆಟ್‌ಗಾಗಿ ಪೈಪೋಟಿ ಮಾಡುತ್ತಿಿದ್ದಾರೆ. ಹೀಗಾಗಿ ಶಿವಾಜಿನಗರ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆೆ ಗೊಂದಲವಾಗಿದ್ದು, ಸಂಭವನೀಯರ ಪಟ್ಟಿಿ ಹೈಕಮಾಂಡ್ ಅಂಗಳದಲ್ಲಿದೆ.

ರಿಜ್ವಾಾನ್ ಹೆಸರು ಪ್ರಬಲವಾಗಿ ಕೇಳಿಬಂದಿದ್ದರೂ ಸಹ ರಿಜ್ವಾಾನ್‌ಗೆ ಟಿಕೆಟ್ ನೀಡಿದರೆ ಸ್ಥಳೀಯ ಮುಖಂಡರು ಯಾರೂ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ ಎಂಬ ಎಚ್ಚರಿಕೆಯನ್ನೂ ಕೆಲವರು ನೀಡಿದ್ದಾರೆ. ಮೇಲ್ಮನೆ ಸದಸ್ಯರಾಗಿರುವ ರಿಜ್ವಾಾನ್, ಕಳೆದ ಲೋಕಸಭೆ ಚುನಾವಣೆಗೆ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಸ್ಪರ್ಧಿಸಿದ್ದರೂ, ರೋಷನ್ ಬೇಗ್ ಪಕ್ಷ ವಿರೋಧಿ ಚಟುವಟಿಕೆಯಿಂದಾಗಿ ಕಾಂಗ್ರೆೆಸ್ ಸೋಲು ಅನುಭವಿಸಿತ್ತು. ಹೀಗಾಗಿ ರೋಷನ್ ಬೇಗ್ ಮೇಲೆ ಸೇಡು ತೀರಿಸಿಕೊಳ್ಳಲು ರಿಜ್ವಾಾನ್ ಕಾರ್ಯೋನ್ಮುಖರಾಗಿದ್ದಾರೆ.

Leave a Reply

Your email address will not be published. Required fields are marked *