Monday, 20th January 2020

ಶ್ರೀ ಕೃಷ್ಣನ ಜನ್ಮ ವೃತ್ತಾಂತ

*ಲೇಖನ : ಡಾ. ಎ.ಚಂದ್ರಶೇಖರ
ಮಹಾವಿಷ್ಣುವು ಕೃಷ್ಣÀನ ಅವತಾರದಲ್ಲಿ ಕಂಡು ಬರಬೇಕಾದರೆ ಆ ಮೊದಲು ಸೃಷ್ಟಿಯ ನಿಯಮದಂತೆ ವಿಕಾಸವನ್ನು ಪಾಲಿಸಬೇಕಾಯಿತು. ಶಾಸ್ತ್ರದ ಹೇಳಿಕೆಯಂತೆ ಕೃಷ್ಣಾವತಾರದಲ್ಲಿ ರಕ್ತ ಮಾಂಸದ ದೇಹ ಹೊತ್ತು ಪ್ರಕೃತಿಯೆನ್ನುವ ಮಾಯೆಯ ನಿಯಮದಡಿಯಲ್ಲಿ ವಿಶ್ವಶಕ್ತಿಯೊಂದು ತಳೆಯಬಹುದಾದ ಪರಿಪೂರ್ಣ ರೂಪವದು. ಆತನಲ್ಲಿ ಜಗತ್ ನಿಯಮಕನ ಅಚಲತೆ, ನರಮಾನವನ ವಿಚಲತೆ ಎರಡೂ ಸಮನಾಗಿತ್ತು ಆತ ವಿಶ್ವರೂಪ ದರ್ಶನವನ್ನೂ ಮಾಡುತ್ತಾನೆ. ಜಲಕ್ರೀಡೆಯನ್ನೂ ಆಡುತ್ತಾನೆ. ಬೆಣ್ಣೆಯನ್ನು ಕದ್ದು ಮೆಲ್ಲುವ ತುಂಟತನದ ಜೊತೆಗೆ ಕಾಳಿಂಗ ಮರ್ದನವನ್ನೂ ಮಾಡುತ್ತಾನೆ. ಆತ್ಮಜ್ಞಾನದ ಅಮೃತಧಾರೆ ಎರೆಯುತ್ತಲೇ ರಣರಂಗದ ಚುಕ್ಕಾಣಿ ಹಿಡಿಯುತ್ತಾನೆ. ಮಥುರೆಯಲ್ಲಿ ಆತ ಉತ್ತಮ ರಾಜಕಾರಣಿ. ಸಮುದ್ರ ತಳದಲ್ಲಿ ದ್ವಾರಕೆ ಕಟ್ಟುವಾಗ ಆತ ಶ್ರೇಷ್ಠ ವಿಜ್ಞಾನಿ, ಕೃಷ್ಣ ಎಲ್ಲವೂ ಹೌದು. ಆದರೆ ಎಲ್ಲೂ ಸಿಕ್ಕಿ ಹಾಕಿಕೊಳ್ಳುವುದಿಲ್ಲ. ಯುದ್ಧದಲ್ಲಿ ಅರ್ಜುನನಿಗೆ ಗುರುವಾಗಿದ್ದರೂ ಸಾರಥ್ಯದಂತಹ ಸಣ್ಣ ಕೆಲಸವನ್ನು ನಿಭಾಯಿಸುತ್ತಾನೆ ದ್ವಾರಕಾ ನಗರದ ಒಡೆಯನಾಗಿದ್ದರೂ ರಾಜ ಪಟ್ಟವನ್ನು ವಹಿಸಿಕೊಳ್ಳದೇ ಅನಿಕೇತನನಾಗುತ್ತಾನೆ. ಗೋಪಿಯರಿಗೆ ಆತ ಗೊಲ್ಲನೂ ಹೌದು, ರಾಜನೂ ಹೌದು. ಪ್ರಿಯತಮನೂ ಪರಮಾತ್ಮನೂ ಹೌದು, ಕೃಷ್ಣ ಪರಿಪೂರ್ಣನಾಗಿದ್ದ. ಮನುಷ್ಯರಲ್ಲಿ ಇರಬಹುದಾದ ಪ್ರತಿಯೊಂದು ಗುಣಗಳ ಮೂಲ ಪರಮಾತ್ಮನೇ ಆದ್ದರಿಂದ ಕೃಷ್ಣನಲ್ಲಿ ಆ ಎಲ್ಲಾ ಗುಣಗಳ ಸಾರ ಪ್ರತಿಬಿಂಬಿಸುತ್ತಿತ್ತು.

ಕೃಷ್ಣನ ಬೋಧನೆಯೂ ಅಷ್ಟೇ ಪರಿಪೂರ್ಣ. ಆತ್ಮ ಸಾಕ್ಷಾತ್ಕಾರಕ್ಕೆ ಅವರವರ ಅನುಕೂಲಕ್ಕೆ ಹೊಂದಿಕೊಳ್ಳುವಂತಹ ಜ್ಞಾನ, ಭಕ್ತಿ, ಕರ್ಮ ಇತ್ಯಾದಿ ವಿಭಿನ್ನ ಮಾರ್ಗಗಳನ್ನು ತಪ್ಪದೇ ಮಾಡಿ, ಪ್ರತಿಫಲದ ನಿರೀಕ್ಷೆ ಬೇಡ, ಅದನ್ನು ಪ್ರಕೃತಿಯಿಂದ ಖಂಡಿತ ಪಡೆಯುವಿರಿ ಎಂದು ಭರವಸೆ ಕೊಡುತ್ತಾನೆ.

ನಹುಷ ಮಹಾರಾಜನ ಮಗ ಯಯಾತಿ. ಯಯಾತಿ ಚಕ್ರವರ್ತಿಗಳಿಂದ ಯದುವಂಶ ಪ್ರಾರಂಭಗೊಳ್ಳುತ್ತದೆ. ಯಯಾತಿ ಮಹಾರಾಜರ ಮೊದಲನೆಯ ಪತ್ನಿ ದೇವಯಾನಿ. ದೇವಯಾನಿಯು ಶುಕ್ರಾಚಾರ್ಯರÀ ಮಗಳು. ಶುಕ್ರಾಚಾರ್ಯರು ಮಹಾ ಕೋಪಿಷ್ಠರು ಹಾಗೂ ಅಸುರರ ಗುರುಗಳಾಗಿದ್ದರು. ದೇವಯಾನಿಯು ತನ್ನ ಗಂಡ ಯಯಾತಿ ಮೇಲೆ ಯಾವಾಗಲೂ ಅನುಮಾನಪಡುತ್ತಿದ್ದಳು. ಈಕೆ ಬ್ರಾಹ್ಮಣ ಕನ್ಯೆಯಾಗಿದ್ದರಿಂದ ತನ್ನ ಗಂಡನ ಮೇಲೆ ಹೆಚ್ಚು ಹೆಚ್ಚು ಕಟ್ಟುಪಾಡುಗಳನ್ನು ವಿಧಿಸುತ್ತಿದ್ದಳು. ದೇವಯಾನಿಯು ತನ್ನ ತಂದೆಯಂತೆ ಬಹಳ ಮುಂಗೋಪಿಯಾಗಿದ್ದಳು. ಈಕೆ ಚಂಡಿಯಂತೆ ಹಟ ಮಾಡುತ್ತಿದ್ದುದರಿಂದ ಆಗಾಗ, ಯಯಾತಿ ಮಹಾರಾಜರಿಗೂ ದೇವಯಾನಿಗೂ ಬಹಳ ವಿರಸ ಹಾಗೂ ತಿಕ್ಕಾಟ ಜರಗುತ್ತಿದ್ದವು.

ಇದರಿಂದ ಬಹಳ ಬೇಸರಗೊಂಡಿದ್ದ ಯಯಾತಿಯು ದೇವಯಾನಿ ಜೊತೆಗಿದ್ದ ಸೇವಕಿ ಶರ್ಮಿಷ್ಠೆಯ ಸ್ನೇಹ ಬೆಳೆಸಿ ಅವಳೊಂದಿಗೆ ಸಮಯ ಕಳೆಯುತ್ತ ಕ್ರಮೇಣ ಅವಳನ್ನು ಗುಟ್ಟಾಗಿ ಮದುವೆಯಾಗಿ ಬಿಡುತ್ತಾನೆ. ಶರ್ಮಿಷ್ಠೆಯು ದಾನವರ ಅಧಿಪತಿ ವೃಷಪರ್ವ ಮಹರಾಜನ ಮಗಳು. ಕೆಲವು ಕಾರಣಗಳಿಗಾಗಿ ಈಕೆ ದೇವಯಾನಿಯ ಸೇವಕಿಯಾಗಿ ಇರುತ್ತಾಳೆ. ಕಾಲ ಕಳೆದಂತೆ ದೇವಯಾನಿಗೆ ಇಬ್ಬರು ಗಂಡು ಮಕ್ಕಳು ಜನಿಸುತ್ತಾರೆ. ದೊಡ್ಡಮಗನ ಹೆಸರು ಯದು ಎರಡನೆಯವನ ಹೆಸರು ತುರುವಾಸು. ಶರ್ಮಿಷ್ಠೆಗೂ ಮೂರು ಜನ ಗಂಡು ಮಕ್ಕಳು ಜನಿಸುತ್ತಾರೆ. ಅವರೇ ತನು, ದುೃಹ್ಯ ಹಾಗು ಪುರು ಎಂಬುವವರು.

ಇಬ್ಬರ ಹೆಂಡತಿಯರ ಮಕ್ಕಳು ಬೆಳೆದು ದೊಡ್ಡವರಾಗುತ್ತಿರುತ್ತಾರೆ. ಯಯಾತಿಯನ್ನು ಗುಟ್ಟಾಗಿ ಮದುವೆಯಾಗಿ ಅರಮನೆಯಿಂದ ದೂರ ವಾಸಿಸುತ್ತಿದ್ದ ಶರ್ಮಿಷ್ಠೆಯನ್ನು ಬೇಟಿ ಮಾಡಲು ಅವಳ ಮನೆಗೆ ಅಚಾನಕ್ಕಾಗಿ ದೇವಯಾನಿ ತನ್ನ ಗಂಡನೊಂದಿಗೆ ಬರುತ್ತಾಳೆ. ಆಗ ಅಲ್ಲಿದ್ದ ಶರ್ಮಿಷ್ಠೆಯ ಮಕ್ಕಳು ಯಾಯತಿ ಮಹಾರಾಜನನ್ನು ಕಂಡು ಅಪ್ಪ ಎಂದು ಕರೆದು ಅವನ ಬಳಿ ಓಡಿ ಬರುತ್ತಾರೆ. ಇದರಿಂದ ದೇವಯಾನಿ ದಿಗ್‍ಭ್ರಮೆಯಾಗುತ್ತಾಳೆ.

ಆ ಮಕ್ಕಳಿಗೆ ತನ್ನ ಗಂಡನೇ ಅಪ್ಪನೆಂದು ಶರ್ಮಿಷ್ಠೆಯಿಂದ ಖಚಿತಪಡಿಸಿಕೊಂಡು ಕುಪಿತಗೊಂಡ ದೇವಯಾನಿ ತನ್ನ ತಂದೆ ಶುಕ್ರಾಚಾರ್ಯರ ಬಳಿ ಬಂದು ಅಳುತ್ತಾ ದೂರು ನೀಡುತ್ತಾಳೆ. ತನ್ನ ಮಗಳು ಅಳುತ್ತಾ ನೀಡಿದ ದೂರನ್ನು ಉಗ್ರವಾಗಿ ಪರಿಗಣಿಸಿ ಹಿಂದುಮುಂದು ಯೋಚಿಸದೆ ಶುಕ್ರಾಚಾರ್ಯರು ಯಯಾತಿ ಮಹಾರಾಜರಿಗೆ ಮುಪ್ಪು ಬರಲೆಂದು ಶಾಪ ನೀಡುತ್ತಾರೆ. ಇದರಿಂದ ವಿಚಲಿತನಾದ ಯಯಾತಿಯು ತನ್ನ ತಪ್ಪು ಮನ್ನಿಸಬೇಕೆಂದು ಹಾಗೂ ತನಗೆ ನೀಡಿದ ಶಾಪಕ್ಕೆ ವಿಮೋಚನೆಯ ಪರಿಹಾರ ನೀಡಬೇಕೆಂದು ಬೇಡಿಕೊಳ್ಳುತ್ತಾನೆ. ಆಗ ಶುಕ್ರಾಚಾರ್ಯರು ಶಾಂತರಾಗಿ ಯಯಾತಿಯ ವಂಶಾವಳಿಯ ಮಕ್ಕಳಲ್ಲಿ ಯಾರು ತನ್ನ ಯೌವನವನ್ನು ತಂದೆಗೆ ನೀಡಿ ಧಾರೆ ಎರೆದು ಮುಪ್ಪನ್ನು ಪಡೆಯುತ್ತಾರೋ ಆಗ ತನ್ನ ಶಾಪ ವಿಮೋಚನೆ ಆಗುವುದೆಂದು ಪರಿಹಾರ ಹೇಳುತ್ತಾರೆ ಹಾಗು ಯಾಯತಿಗೆ ತನ್ನ ಯೌವನ ಬೇಡವಾದಾಗ ತನ್ನ ಯೌವನವನ್ನು ವಾಪಾಸು ನೀಡಿ ತನ್ನ ಮುಪ್ಪನ್ನು ವಾಪಾಸು ಪಡೆಯಬಹುದೆಂದು ತಿಳಿಸುತ್ತಾರೆ.

ಗುರು ಶುಕ್ರಾಚಾರ್ಯರ ಶಾಪದಂತೆ ಯಾಯತಿಗೆ ಮುಪ್ಪು ಆವರಿಸಿಕೊಳ್ಳುತ್ತದೆ. ತನ್ನ ಮಕ್ಕಳೆಲ್ಲರೂ ಇನ್ನೂ ಸಣ್ಣ ವಯಸ್ಸಿನ ಬಾಲಕರಾಗಿರುವುದರಿಂದ ತನ್ನ ಮುಪ್ಪನ್ನು ಅವರಿಗೆ ವರ್ಗಾಯಿಸುಲು ಆಗುವುದಿಲ್ಲವಾದುದರಿಂದ ಮುಂದೆ ಮಕ್ಕಳು ಬೆಳೆದು ದೊಡ್ಡವರಾಗುವವರೆಗೂ ಯಾಯತಿಯು ತನ್ನ ಮುಪ್ಪಿನಲ್ಲಿಯೇ ಕಾಲಕಳೆಯಬೇಕಾಯಿತು. ಇದರಿಂದ ದೇವಯಾನಿಗೆ ಹಾಗು ಗುರು ಶುಕ್ರಾಚಾರ್ಯರಿಗೆ ತಮ್ಮ ಆತುರದ ತಪ್ಪು ಅರಿವಾಗಿ ಅವರು ಚಿಂತೆಗೀಡಾಗುತ್ತಾರೆ. ಮುಂದೆ ಯಾಯತಿಯ ಮಕ್ಕಳೆಲ್ಲರೂ ಬೆಳೆದು ದೊಡ್ಡವರಾದಾಗ ಯಾಯತಿಯು ತನ್ನ ಕೋರಿಕೆಯನ್ನು ತನ್ನ ಎಲ್ಲಾ ಮಕ್ಕಳಿಗೂ ತಿಳಿಸುತ್ತಾನೆ. ಆದರೆ ತಂದೆ ಯಯಾತಿಯ ಮುಪ್ಪನ್ನು ಪಡೆದು ಯೌವನವನ್ನು ಧಾರೆ ಎರೆಯಲು ತನ್ನ ಐದೂ ಮಕ್ಕಳು ಯಾರೂ ಮುಂದೆ ಬರುವುದಿಲ್ಲ. ಆಗ ಯಯಾತಿಯು ತನಗೆ ಯಾರು ಯೌವನವನ್ನು ಧಾರೆ ಎರೆಯುತ್ತಾರೋ ಅವರಿಗೆ ತನ್ನ ಸಮಗ್ರ ರಾಜ್ಯವನ್ನು ನೀಡುವುದಾಗಿ ಘೋಷಣೆ ಮಾಡುತ್ತಾನೆ.

ಮೊದಮೊದಲು ಇದಕ್ಕೆ ಯರೂ ಒಪ್ಪದಿದ್ದರೂ ಕೊನೆಗೆ ತನ್ನ ತಂದೆಯ ಕೋರಿಕೆಯನ್ನು ಈಡೇರಿಸಲು ಯಯಾತಿಯ ಎರಡನೇ ಪತ್ನಿ ಶರ್ಮಿಷ್ಠೆಯ ಮಗ ಪುರು ತನ್ನ ಯೌವನವನ್ನು ತಂದೆಗಾಗಿ ಧಾರೆ ಎರೆಯಲು ಒಪ್ಪಿಕೊಳ್ಳುತ್ತಾನೆ. ಇದರಿಂದ ಸಂತೋಷಗೊಂಡ ಯಯಾತಿ ಮಹಾರಾಜನು ತನ್ನ ಎಲ್ಲಾ ರಾಜ್ಯಬಾರವನ್ನು ಪುರುವಿಗೆ ನೀಡುತ್ತಾನೆ. ಇದರಿಂದ ಕುಪಿತಗೊಂಡ ದೇವಯಾನಿಯ ಮಗನಾದ ಯದು ಯುವರಾಜನು ತಾನು ಜೇಷ್ಠಪುತ್ರನಾದುದರಿಂದ ತನಗೆ ಪಟ್ಟಾಭಿಷೇಕ ನಡೆಸಬೇಕಾಗಿತ್ತು. ಆದರೆ ನನ್ನ ತಂದೆ ನನಗೆ ವಂಚನೆ ಮಾಡಿದ್ದಾರೆ ಎಂದು ಕೋಪದಿಂದ ತನ್ನ ತಂದೆಯ ಅರಮನೆ ಸಾಮ್ರಾಜ್ಯದಿಂದ ಹೊರಬಂದು ಬೇರೆಯಾಗಿ ಬೇರೆ ಪ್ರದೇಶದಲ್ಲಿ ತನ್ನದೇ ಸಾಮ್ರಾಜ್ಯವನ್ನು ಸ್ಥಾಪಿಸಿ ಚಕ್ರವರ್ತಿಯಾಗಿ ರಾಜ್ಯಬಾರ ಮಾಡುತ್ತಾನೆ.

ಯದು ಮಹಾರಾಜನು ಮುಂದೆ ತನ್ನ ತಂದೆ ಯಯಾತಿ ಮಹಾರಾಜನ ವಂಶಾವಳಿಯನ್ನು ಧಿಕ್ಕರಿಸಿ ತನ್ನ ಹೆಸರಿನಲ್ಲಿ ಪ್ರತ್ಯೇಕವಾಗಿ ತನ್ನ ಮುಂದಿನ ವಂಶಕ್ಕೆ ಯದುವಂಶವೆಂದು ಘೋಷಿಸಿಕೊಂಡು ಮುಂದಿನ ಯದುವಂಶದ ಆರಂಭಕ್ಕೆ ಕಾರಣಕರ್ತನಾಗುತ್ತಾನೆ. ಇಲ್ಲಿಂದ ಯದು ಮಹಾರಾಜನ ಯದುವಂಶಾವಳಿ ಪ್ರಾರಂಭಗೊಂಡು ಬೃಹದಾಕಾರವಾಗಿ ಬೆಳೆದು ಯದುವಂಶದ ಮೂಲಕ್ಕೆ ಕಾರಣವಾಗುತ್ತದೆ.

ಯದು ಮಹಾರಾಜರಿಂದ ಪ್ರಾರಂಭವಾದÀ ಯದುವಂಶದ ರಾಜಮನೆತನದ ಆಡಳಿತ ಮುಂದುವರೆದು ಯದುಮಹಾರಾಜರ ಮಕ್ಕಳಾದ ಸಾಹಸ್ರಜಿತ್, ಕ್ರೂಸ್ತಹ, ನಳ, ರಿಪು ರವರಿಂದ ಮುಂದುವರೆದು ನಂತರದ ರಾಜಮನೆತನ ಅವರ ತಲೆಮಾರಿನವರಾದ

9) ವ್ರಜಪೀತ ಮಹಾರಾಜ,
10) ಸ್ವಾಹಿ ಮಹಾರಾಜ, 11) ಉಷ್‍ನಕ್ ಮಹಾರಾಜ 12) ಚಿತ್ರರತ್ ಮಹಾರಾಜ 13) ಶಶಿಬಿಂದು ಮಹಾರಾಜ 14) ಭೋಜ್ ಮಹಾರಾಜ 15) ಪ್ರಿತುಶ್ರವ ಮಹಾರಾಜ 16) ಧಾಮ್ರ ಮಹಾರಾಜ 17) ಉಶ್ನ ಮಹಾರಾಜ 18) ರುಚಕ್ ಮಹಾರಾಜ 19) ಜ್ಯಾಮಾಗ್ ಮಹಾರಾಜ 20) ವಿಧರ್ಭ ಮಹಾರಾಜ
21) ಕ್ಷಾತ್ ಮಹಾರಾಜ 22) ಕುಂತೀ ಮಹಾರಾಜ 23) ದ್ರುಷ್ಟಿ ಮಹಾರಾಜ 24) ನಿವೃತಿ ಮಹಾರಾಜ
25) ದಕ್ಷ ಮಹಾರಾಜ 26) ವ್ಯೋಮ ಮಹಾರಾಜ 27) ಭೀಮ ಮಹಾರಾಜ 28) ಜಿಮುತ್ ಮಹಾರಾಜ 29) ವಿಕೃತ್ ಮಹಾರಾಜ 30) ಭೀಮ್‍ರತ್ ಮಹಾರಾಜ 31) ನವ್‍ರತ್ ಮಹಾರಾಜ
32) ದಶರತ್‍ಮಹಾರಾಜ 33) ಶಕುನಿ ಮಹಾರಾಜ 34) ಕರಿಬೀ ಮಹಾರಾಜ 35) ದೇವ್‍ರತ್ ಮಹಾರಾಜ 36) ದೇವ್‍ಸ್ತ್ರ ಮಹಾರಾಜ 37) ಮದು ಮಹಾರಾಜ 38) ಕುಮಾರವಂಶ ಮಹಾರಾಜ
39) ಅನು ಮಹಾರಾಜ 40) ಪುರೋತ್ರ ಮಹಾರಾಜ 41) ಸತ್‍ವತ್ತ ಮಹಾರಾಜ 42) ವ್ರಸ್‍ನಿ ಮಹಾರಾಜ 43) ದೇವಮುದ್ ಮಹಾರಾಜ 44) ಶೂರಸೇನ ಮಹಾರಾಜ ಹೀಗೆ ಯದು ಮಹಾರಾಜರಿಂದ ಪ್ರಾರಂಭಗೊಂಡ ಯದುವಂಶದ ರಾಜಮನೆತನವು 44 ತಲೆಮಾರಿನ ಆಡಳಿತದ ನಂತರ ಶೂರಸೇನ ಮಹಾರಾಜರಿಂದ ಮುಂದುವರಿದು ನಂತರದ ರಾಜಮನೆತನದ ಮಹಾರಾಜರಾದ ವಸುದೇವನಲ್ಲಿ ಅಂತ್ಯವಾಗುತ್ತದೆ. ಇಲ್ಲಿಂದ ಶ್ರೀಕೃಷ್ಣನ ಶಕೆ ಆರಂಭವಾಗುತ್ತದೆ.

ವಸುದೇವ ದೇವಕಿ ದಂಪತಿಗಳ ಸುಪುತ್ರನಾಗಿ ಜನ್ಮವೆತ್ತಿದವನೇ ಶ್ರೀ ಕೃಷ್ಣನು.

ಶ್ರೀ ಕೃಷ್ಣ ಪರಮಾತ್ಮನು 27ನೇ ಜೂಲೈ ಶುಕ್ರವಾರ ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರದಲ್ಲಿ ಕ್ರಿ.ಪೂ. 3112 ಬಿ.ಸಿ.ರಲ್ಲಿ ಮಥುರಾ ನಗರದ ಕಂಸನ ಅರಮನೆಯ ಬಂಧಿಖಾನೆಯಲ್ಲಿ ಜನಿಸಿದನು ಎಂದಿದ್ದಾರೆ ಕೆಲವು ಇತಿಹಾಸಜ್ಞರು. ಶ್ರೀ ಕೃಷ್ಣನ ಗೋತ್ರ ಅತ್ರಿ. ಶ್ರೀಕೃಷ್ಣನ ವ್ಯಕ್ತಿತ್ವದ ಅತಿರಂಜನೀಯ ಅಂಶವೇ ಸಂಗೀತ. ನೃತ್ಯದ ಮೇಲಿನ ಆತನ ಪ್ರಭುತ್ವ ದೇವತಾಂಶದೊಂದಿಗೆ ಪೆÇೀಣಿಸಲ್ಪಟ್ಟ ಕಲಾ ಶ್ರೀಮಂತಿಕೆ ಆತನ ವ್ಯಕ್ತಿತ್ವಕ್ಕೆ ವಿಶೇಷ ಮೆರುಗನ್ನು ನೀಡಿದೆ. ಗೀತಾಚಾರ್ಯನಾದ ಶ್ರೀಕೃಷ್ಣನು ವೇದಗಳಲ್ಲಿ ತಾನು ಸಂಗೀತ ಪ್ರಧಾನವಾದ ಸಾಮವೇದ ಎಂದಿರುತ್ತಾನೆ. ಕೃಷ್ಣನ ಕೊಳಲ ನಾದವು ಅತಿ ಮಧುರ ಅದಕ್ಕೆ ಮನ ಸೋಲದವರೇ ಇಲ್ಲ.

ಕೃಷ್ಣÀನೆಂದರೆ ಸೌಂದರ್ಯ, ಅವನೆಂದರೆ ಮೋಹ, ಅವನೆಂದರೆ ಪ್ರೀತಿ, ಅವನೆಂದರೆ ವಿರಹ, ಅವನೆಂದರೆ ಕ್ಲೇಶ ನಿವಾರಣೆ, ಅವನೆಂದರೆ ಎಲ್ಲವೂ. ಕೃಷ್ಣನ ವ್ಯಕ್ತಿತ್ವವೇ ಹಾಗೆ! ತುಂಬು ಲವಲವಿಕೆಯಿಂದ, ಜೀವಂತಿಕೆಯಿಂದ ಬಾಳಿದವನು. ಹಾಗೆ ನೋಡಿದರೇ ಮಹಾಭಾರತವೇ ಕೃಷ್ಣನ ಲೀಲಾವಿನೋದ, ವ್ಯಕ್ತಿಯೊಬ್ಬ ಹುಟ್ಟಿನಿಂದ ವೃದ್ಧಾಪ್ಯದವರೆಗೆ ಸ್ತ್ರೀಯರಿಗೆ ಏನೇನು ಆಗಿರಬಲ್ಲನೋ ಅದೆಲ್ಲವೂ ಅವನಾಗಿದ್ದ. ಇಂತಹ ಸದ್ಗುಣಗಳನ್ನು ಹೊಂದಿದ್ದ || ನ ಭೂತೋ ನಃ ಭವಿಷ್ಯತ್ || ಏಕೈಕ ವ್ಯಕ್ತಿಯೇ ಶ್ರೀ ಕೃಷ್ಣನು.

Leave a Reply

Your email address will not be published. Required fields are marked *