Wednesday, 5th August 2020

ಸಂಕಷ್ಟಕ್ಕೆೆ ಸಿಲುಕಿದ್ದ ಆಟೋಚಾಲಕನ ನೆರವಿಗೆ ಬಂದ ಕಿಚ್ಚ ಸುದೀಪ್

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ನಟ ಕಿಚ್ಚ ಸುದೀಪ್ ಅವರು, ಲಾಕ್‌ಡೌನ್ ವೇಳೆ ಕಷ್ಟಕ್ಕೆೆ ಸಿಲಿಕಿದ್ದ ಆಟೋಚಾಲಕನ ನೆರವಿಗೆ ಬಂದಿದ್ದಾರೆ. ಆಟೋಚಾಲಕನಾಗಿ ಕೆಲಸ ಮಾಡುತ್ತಿದ್ದ ರಿಯಾಜ್ ಲಾಕ್‌ಡೌನ್‌ಗೂ ಮುನ್ನ ತಂಗಿಯ ಮದುವೆ ಫಿಕ್‌ಸ್‌ ಮಾಡಿದ್ದರು. ನಂತರದ ದಿನದಲ್ಲಿ ದುಡಿದು ಹಣವನ್ನು ಹೊಂದಿಸಿಕೊಂಡು ತಂಗಿಯ ಮದುವೆ ಮಾಡಲು ಬಯಸಿದ್ದರು. ಆದರೆ ಲಾಕ್‌ಡೌನ್ ಆದ ನಂತರ ಕೆಲಸವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲಿಕಿದ್ದರು.

ಲಾಕ್‌ಡೌನ್‌ನಿಂದ ಮದುವೆಯ ಖರ್ಚಿಗೆ ಹಣ ಹೊಂದಿಸುವಲ್ಲಿ ವಿಫಲರಾಗಿದ್ದ ರಿಯಾಜ್, ದಿಕ್ಕು ತೋಚದಂತಾಗಿ ಸುದೀಪ್ ಚಾರಿಟೇಬಲ್ ಟ್ರಸ್‌ಟ್‌ ಮೊರೆ ಹೋಗಿದ್ದರು. ವಿಷಯ ಗೊತ್ತಾಾಗುತ್ತಿದ್ದಂತೆ ಮದುವೆಯ ಖರ್ಚನ್ನು ಭರಿಸಲು ಟ್ರ್ಟ್ ಸದಸ್ಯರಿಗೆ ಸುದೀಪ್ ಸೂಚನೆ ನೀಡಿದ್ದು, ಸುದೀಪ್ ಅವರ ಸೂಚನೆಯ ಮೇರೆಗೆ ಶುಕ್ರವಾರದಂದು ಈ ಬಡ ಕುಟುಂಬಕ್ಕೆ ಸುದೀಪ್ ಚಾರಿಟೇಬಲ್ ಟ್ರ್ಟ್ ಸದ್ಯಸರು 20 ಸಾವಿರ ರು. ಹಣವನ್ನು ನೀಡಿದ್ದಾರೆ.
ಆರ್ಥಿಕ ಸಹಾಯ ಮಾಡಿ ಮದುವೆಗೆ ನೆರವಾಗಿ ಎಂದು ಕೇಳಿಕೊಂಡ ಒಂದೇ ದಿನದಲ್ಲಿ ಸುದೀಪ್ ಅವರು ಬಡಕುಟುಂಬಕ್ಕೆ ನೆರವಾಗಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಮಾತನಾಡಿ ಲಾಕ್‌ಡೌನ್ ವೇಳೆ ಧನಸಹಾಯ ಮಾಡಿ ನಮ್ಮ ನೆರವಿಗೆ ಬಂದ ಸುದೀಪ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಜತೆಗೆ ತನ್ನ ಮದುವೆಗೆ ನೆರವಾದ ಸುದೀಪ್ ಅವರ ಸಹಾಯವನ್ನು ನೆನೆದು ಆಟೋಚಾಲಕನ ತಂಗಿ ನಸ್ರಿಿನ್ ಭಾವುಕರಾಗಿದ್ದಾರೆ. ಜತೆಗೆ ಸುದೀಪ್‌ರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಈ ಹಿಂದೆಯೂ ಕೂಡ ಸುದೀಪ್ ಚಾರಿಟೇಬಲ್ ಟ್ರ್ಟ್ ಕಡೆಯಿಂದ ಈ ರೀತಿಯ ಸಾಮಾಜಿಕ ಕಾರ್ಯಗಳು ನಡೆದಿವೆ.ಕರೋನಾ ಲಾಕ್‌ಡೌನ್ ವೇಳೆ ಸಂಕಷ್ಟಕ್ಕೆೆ ಸಿಲುಕಿದ್ದ ಬಡ ಜನರಿಗೆ ಸುದೀಪ್ ಟ್ರಸ್‌ಟ್‌ ಸಹಾಯ ಹಸ್ತ ಚಾಚಿತ್ತು. ಪೊಲೀಸರ ಸಹಯೋಗದಿಂದ ಟ್ರ್ಟ್ ಮೂಲಕ ಅಭಿಮಾನಿಗಳು ಪ್ಯಾಾಕೆಟ್‌ನಲ್ಲಿ ಆಹಾರವನ್ನು ತಂದು ಅಸಹಾಯಕರು, ವಿಕಲಚೇತನರು ಸೇರಿದಂತೆ ಅನೇಕರಿಗೆ ನೀಡಿದ್ದರು. ಜತೆಗೆ ರಸ್ತೆೆಯಲ್ಲಿರುವ ಶ್ವಾನಗಳಿಗೂ ಊಟ ಕೊಡುವ ಮೂಲಕ ಮಾನವೀಯತೆ ಮೆರೆದಿದ್ದರು.

ಲಾಕ್‌ಡೌನ್ ವೇಳೆ ಬೆಂಗಳೂರಿನ ಜೆ.ಜೆ ನಗರ, ಬ್ಯಾಟರಾಯನಪುರ, ಗೋರಿಪಾಳ್ಯ, ಬಂಗಾರಪ್ಪ ನಗರ ಮತ್ತು ಮೈಸೂರು
ರಸ್ತೆೆಯಲ್ಲಿರುವ ಅಸಹಾಯಕರ ಹಸಿವನ್ನು ಸುದೀಪ್ ಚಾರಿಟೇಬಲ್ ಟ್ರ್ಟ್ ಸದಸ್ಯರು ನೀಗಿಸಿದ್ದರು. ಜತೆಗೆ ಇತ್ತೀಚೆಗಷ್ಟೇ ಬೆಂಗಳೂರಿನ ಬಡ ಸರಕಾರಿ ಶಾಲೆ ಮಕ್ಕಳಿಗೆ ಸುದೀಪ್ ಅವರೇ ಹೋಗಿ ಶೂ ವಿತರಿಸಿದ್ದರು.

Leave a Reply

Your email address will not be published. Required fields are marked *