Tuesday, 11th August 2020

ಸಂಕಷ್ಟ ಪರಿಸ್ಥಿತಿಯಲ್ಲಿ ಮಾನವೀಯತೆ ಬಹುಮುಖ್ಯ

ಕೊಪ್ಪಳ :

ದೇಶ ಎದುರಿಸುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ , ಸಂಕಷ್ಟಕ್ಕೆ ಒಳಗಾಗಿರುವ ಜನತೆಗೆ ಸಹಾಯ ಮಾಡುವುದು ದೇಶ ಸೇವೆ ಮಾಡಿದಂತೆ, ಇಂತಹ ಸಂದಿಗ್ಧತೆಯಲ್ಲಿ ಮಾನವೀತೆ ಬಹುಮುಖ್ಯ ಎಂದು ಬಿಜೆಪಿ ಯುವ ಮುಖಂಡ ಅಮರೇಶ್ ಕರಡಿ ಹೇಳಿದರು.

ಬುಧವಾರ ಬಡವರು, ನಿರ್ಗತಿಕರು, ಅಲೆಮಾರಿಗಳಿಗೆ ಕಿರಾಣಿ ದಿನಸಿ ವಸ್ತುಗಳ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ಸಹಾಯ ಅಥವಾ‌ ದಾನವನ್ನು ಪ್ರಚಾರಕ್ಕಾಗಿ ಮಾಡದೆ, ತೊಂದರೆಗೆ ಒಳಗಾಗಿರುವ ಜನರಿಗೆ ಬೇಕಾದ ಅಗತ್ಯ ನೆರವು ಹಾಗೂ ಮಾನಸಿಕ ಧೈರ್ಯ ತುಂಬವ ಕೆಲಸ ನಡೆಯಬೇಕು ಎಂದರು.

ಕೋವಿಡ್-19 ವೈರಾಣು ಹರಡದಂತೆ ತಡೆಗಟ್ಟುವಲ್ಲಿ ಸರ್ಕಾರಗಳು ಹೋರಾಡುತ್ತಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಜನತೆ ತೋರಿದ ಸಹಕಾರದಿಂದ ವೈರಸ್ ತಡೆಗಟ್ಟುವಲ್ಲಿ ಸಾಧ್ಯವಾಗುತ್ತಿದೆ, ಕೇವಲ ಸರ್ಕಾರಗಳು ನೆರವು ನೀಡಿದರೆ ಸಾಲದು, ಪ್ರತಿಯೊಬ್ಬರ ಸಹಕಾರ ಬೇಕೆ ಬೇಕು, ಸರ್ಕಾರದೊಂದಿಗೆ ಜನತೆ ಮಾಡುತ್ತಿರುವ ಕೆಲಸವು ದೇಶ ಕಟ್ಟುವದಾಗಿದೆ ಎಂದರು.

ಜಿಲ್ಲಾಡಳಿತ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ವೈರಸ್ ತಡೆಗಟ್ಟುವಲ್ಲಿ ಕೈಗೊಂಡಿರುವ ಕಾರ್ಯ ಹಾಗೂ ಲಾಕ್ ಡೌನ್ ನಿಂದ ಉಂಟಾಗಿರುವ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಜಿಲ್ಲಾಧಿಕಾರಿಗಳು ಉತ್ತಮ ಕೆಲಸ ಮಾಡಿದ್ದು, ಬಡವರು, ನಿರ್ಗತಿಕರು, ನಿರಾಶ್ರಿತರು, ಕಾರ್ಮಿಕರಿಗೆ ತೊಂದರೆ ಉಂಟಾಗದಂತೆ ಹಲವಾರು ಕ್ರಮಗಳನ್ನು ನಡೆಸಿದೆ, ನಾವು ಕೈಜೋಡಿಸಿ ಸಾಧ್ಯವಿರುವ ಸಹಾಯ, ನೇರವನ್ನು ನೀಡಬೆಕೇಂದು ಹೇಳಿದರು.

ಸಂಸದ ಸಂಗಣ್ಣ ಕರಡಿ ಅವರು ಭಾಗ್ಯನಗರದಲ್ಲಿ ಸುಮಾರು ಒಂದು ಸಾವಿರ ಕಿರಾಣಿ ಕಿಟ್ ಗಳನ್ನು ಬಡವರಿಗೆ ವಿತರಣೆ ಮಾಡಿದ್ದು, ಕೊಪ್ಪಳ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ಬಡವರಿಗೂ ಕಿರಾಣಿ ದಿನಸಿ ಸಾಮಗ್ರಿ ವಿತರಣೆ ಮಾಡಲಿದ್ದಾರೆ.

ಸಂಸದರು ನೀಡುತ್ತಿರುವ
ಕಿರಾಣಿ ಕಿಟ್ ಗೆ ತಮ್ಮ ಹೆಸರು ಅಥವಾ ಭಾವಚಿತ್ರವಾಗಲಿ ಮತ್ತು ಪಕ್ಷದ ಯಾವುದೇ ಗುರುತುಗಳನ್ನು ಚೀಲಗಳಿಗೆ ಮುದ್ರಿಸದೇ ನೀಡುತ್ತಿರುವುದು ವಿಶೇಷ ಎಂದು ಯುವ ಮುಖಂಡ ಗವಿ ಜಂತಕಲ್ ಹೇಳಿದರು.

ಸಂಸದರು ವೈಯಕ್ತಿಕವಾಗಿ ಜನರಿಗೆ ಅಗತ್ಯ ಸಾಮಗ್ರಿಗಳ ಕಿಟ್ ನ್ನು ಎಲ್ಲ ಬಡವರಿಗೆ ವಿತರಣೆ ಮಾಡುತ್ತಿದ್ದು, ಇವತ್ತು ಭಾಗ್ಯನಗರದಲ್ಲಿನ ಜನರಿಗೆ ಹಂಚಿಕೆ ಮಾಡಿದೆ, ಇನ್ನು ಕಿಟ್ ತಯಾರಿಸುವ ಕೆಲಸ ನಡೆದಿದ್ದು, ಕೊಪ್ಪಳ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಯೂ ವಿತರಣೆ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ಸುನೀಲ್‌ಹೆಸರೂರು, ಹಿರಿಯ ಮುಖಂಡ ಅಂದಪ್ಪ ಅಗಡಿ, ರಾಘವೇಂದ್ರ ಪಾನಘಂಟಿ ವಕೀಲರು,
ಯುವ ಮುಖಂಡ
ಗವಿ ಜಂತಕಲ್, ರಾಕೇಶ್ ಪಾನಘಂಟಿ, ವಿಜಯಕುಮಾರ, ಲಕ್ಷ್ಮಣ್ ಚಳಮರದ, ಚಂದ್ರಕಾಂತ ನಾಯಕ,‌ ರವಿಚಂದ್ರ ಮಾಲಿಪಾಟೀಲ್, ಪುಟ್ಟುರಾಜ ಚಕ್ಕಿ, ಲೋಕೇಶ ಸ್ವಾಮಿ, ದೀಪಕ ಹಿರೇಮಠ, ಹಾತೀಕ್ ಹುಸೇನ, ವಸಂತ ನಾಯಕ‌, ಇತರರು ಇದ್ದರು.

ಕೋಟ್…

ಲಾಕ್ ಡೌನ್ ಘೋಷಣೆ ಆದಾಗಿನಿಂದಲೂ ಕೊಪ್ಪಳ ತಾಲೂಕು ಹಾಗೂ ಕ್ಷೇತ್ರದ ಜನರಿಗೆ ಈಗಾಗಲೇ ಸರ್ಕಾರದ ನೆರವಿನೊಂದಿಗೆ ಹಲವಾರು ಸಹಾಯದ ಕೆಲಸವನ್ನು ಮುಂದುವರೆಸಿಕೊಂಡು ಬಂದಿದ್ದು, ಸಂಕಷ್ಟದಲ್ಲಿರುವ ಜನರಿಗೆ ನೆರವು ಒದಗಿಸುತ್ತಿದೆ, ಕೋವಿಡ್ ವೈರಾಣು ವಿರುದ್ಧದ ಹೋರಾಟದಲ್ಲಿ ನಾವೇಲ್ಲರೂ ಭಾಗಿಗಳಾಗಿ ಸರ್ಕಾರದ ನಿರ್ದೇಶನಗಳನ್ನು ಪಾಲಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುಬೇಕು.

ಅಮರೇಶ ಕರಡಿ, ಬಿಜೆಪಿ ಮುಖಂಡ, ಕೊಪ್ಪಳ

Leave a Reply

Your email address will not be published. Required fields are marked *