Wednesday, 26th February 2020

ಸಂಪತ್ತನ್ನು ಸೃಷ್ಟಿಸುವವರು ಕಾರ್ಮಿಕರು, ಉದ್ಯಮಿಗಳಲ್ಲ!

ಪ್ರಧಾನಿ ಮೋದಿ ಕೆಂಪುಕೋಟೆಯಿಂದ ಮಾಡಿದ 73ನೇ ಸ್ವಾಾತಂತ್ರ್ಯೋೋತ್ಸವದ ಭಾಷಣದಲ್ಲಿ ಉಳಿದೆರಡು ಸಂಗತಿಗಳ ಜೊತೆಗೆ, ‘ಸಂಪತ್ತನ್ನು ಸೃಷ್ಟಿಿಸುವವರನ್ನು ಗೌರವಿಸಬೇಕು’ ಎಂದು ಹೇಳಿದ್ದನ್ನು ಮಾಜಿ ಅರ್ಥಮಂತ್ರಿಿಗಳು ಮೆಚ್ಚಿಿಕೊಂಡರೆಂದು ವರದಿಯಾಗಿದೆ. ಇದರಲ್ಲಿರುವ ಎರಡು ಅಂಶಗಳನ್ನು ವಿಶೇಷವಾಗಿ ಗಮನಿಸಬೇಕೆಂದು ಹೇಳುವುದು ನನ್ನ ಈ ಪತ್ರದ ಉದ್ದೇಶ. ಮೊದಲನೆಯ ಅಂಶ; ಸಂಪತ್ತನ್ನು ಸೃಷ್ಟಿಿಸುವವರು ಕಾರ್ಮಿಕರೇ ಹೊರತು ಉದ್ಯಮಿಗಳಲ್ಲ. ಉದ್ಯಮಿಗಳು ಹೂಡುವ ಬಂಡವಾಳಕ್ಕೆೆ ಜೀವವಿಲ್ಲ. ಆದ್ದರಿಂದ ಅದನ್ನು ನಿರ್ಜೀವ ಅಥವಾ ಸಂಚಿತ ಶ್ರಮಶಕ್ತಿಿ ಎನ್ನುತ್ತಾಾರೆ. ಏಕೆಂದರೆ, ಉದ್ಯಮದಲ್ಲಿ ತೊಡಗಿಸುವ ಬಂಡವಾಳದ ಎಲ್ಲ ರೂಪಗಳೂ, ಅಂದರೆ ಕಚ್ಚಾಾವಸ್ತು, ಯಂತ್ರೋೋಪಕರಣ, ಕಟ್ಟಡ ಮತ್ತು ಹಣ ಎಲ್ಲವೂ ಕಾರ್ಮಿಕರ ಶ್ರಮಶಕ್ತಿಿಯಿಂದಲೇ ತಯಾರಾಗಿ ಉದ್ಯಮಿಗಳ ಒಡೆತನದಲ್ಲಿ ಇರುವಂಥವು. ಆಧುನಿಕ ಕಾಲದ ಜಾಯಿಂಟ್ ಸ್ಟಾಾಕ್ ಕಂಪನಿಗಳು ಜನರಿಂದ ಕಲೆಹಾಕುವ ಶೇರುಗಳೂ ಹಣರೂಪದ ಶ್ರಮಶಕ್ತಿಿಯೇ.

ಈ ನಿರ್ಜೀವ ಬಂಡವಾಳಕ್ಕೆೆ ಶ್ರಮಿಕರ ಶ್ರಮಶಕ್ತಿಿಯನ್ನು(ಅಂದರೆ ದೈಹಿಕ ಶ್ರಮ, ಕೌಶಲ, ಪರಿಣತಿ, ಅನುಭವ, ಪ್ರತಿಭೆ, ಆಲೋಚನೆಗಳನ್ನು) ಸೇರಿಸಿದಾಗ ಮಾತ್ರ ಹೆಚ್ಚಿಿನ ಮೌಲ್ಯವು ಉತ್ಪತ್ತಿಿಯಾಗುತ್ತದೆ. ಇಂಥ ಉತ್ಪಾಾದನೆಯಲ್ಲಿ ಉದ್ಯಮಿಗಳೂ ಸಹ ತಮ್ಮ ಪ್ರತಿಭೆ, ಯೋಚನೆ, ಅನುಭವ, ಪರಿಣತಿಗಳನ್ನು ಸೇರಿಸುತ್ತಾಾರೆ ಎಂಬುದು ನಿಜ. ಆದರೆ, ಉತ್ಪಾಾದನಾ ಪ್ರಕ್ರಿಿಯೆಯ ಉಸ್ತುವಾರಿ ಮತ್ತು ಸಂಯೋಜನೆಯ ಹೊಣೆಯನ್ನೂ ಅವರೇ ಹೊತ್ತರೂ ಅದರಲ್ಲಿ ಭೌತಿಕ ಶ್ರಮಿಕರ ಪಾಲೇ ಅಧಿಕ. ಇಷ್ಟಾಾದರೂ ಉತ್ಪಾಾದಿತ ಸಂಪತ್ತಿಿನ ಮೇಲೆ ಶ್ರಮಿಕರ ಯಾವ ಹಕ್ಕೂ ಇಲ್ಲದೆ, ತಾವೇ ಸೃಷ್ಟಿಿಸಿದ ಸಂಪತ್ತಿಿನ ಒಂದಂಶವನ್ನು ಮಾತ್ರ ವೇತನವೆಂದು-ಅದೂ ಅರೆಬರೆಯಾಗಿ- ಪಡೆಯುವ ಹಕ್ಕನ್ನು ಮಾತ್ರ ಶ್ರಮಿಕರು ಕಾನೂನುಬದ್ಧವಾಗಿ ಹೊಂದಿದ್ದಾರೆ. ಕಾನೂನು ಮತ್ತು ನ್ಯಾಾಯ ಎರಡೂ ಒಂದೇ ಅಲ್ಲ ಎಂಬುದು ಶ್ರಮಿಕ-ಉದ್ಯಮಿಗಳ ಹಕ್ಕುಗಳನ್ನು ಸಂವಿಧಾನವು ತಾರತಮ್ಯಯುಕ್ತವಾಗಿ ಮಾನ್ಯಮಾಡುವ ವಿಧಾನದಲ್ಲೇ ಸ್ಪಷ್ಟವಾಗುತ್ತದೆ. ಎಲ್ಲ ಬಗೆಯ ಶ್ರಮದಾಯಕ ಕೆಲಸಗಳಲ್ಲಿ ಇದು ಎದ್ದು ತೋರುತ್ತದೆ. ಉದಾಹರಣೆಗೆ, ಕಬ್ಬನ್ನು ಬೆಳೆಯುವವರು ರೈತರು. ಸಕ್ಕರೆ, ಕಾಕಂಬಿ ಮತ್ತು ಮದ್ಯೋೋದ್ಯಮಗಳ ಒಡೆತನ ಮಾಡುವವರು ಉದ್ಯಮಿಗಳು. ಪ್ರಾಾಣವನ್ನು ಪಣಕ್ಕಿಿಟ್ಟು ಅದಿರನ್ನು ತೆಗೆಯುವವರು ಗಣಿ ಕಾರ್ಮಿಕರು. ‘ಗಣಿಧಣಿ’ ಗಳಾಗಿ ಶ್ರೀಮಂತಿಕೆಯನ್ನು ಅನುಭವಿಸುವವರು ಉದ್ಯಮಿಗಳು ಮುಂತಾಗಿ.

ಎರಡನೆಯ ಅಂಶ: ಸಂಪತ್ತನ್ನು ಸೃಷ್ಟಿಿಸುವವರನ್ನು ಗೌರವಿಸಬೇಕೆಂದು ಖುದ್ದು ಪ್ರಧಾನಿಯೇ ಕೆಂಪುಕೋಟೆಯಿಂದ ಹೇಳಬೇಕಾದ ಪರಿಸ್ಥಿಿತಿ ಈಗ ಇದೆಯೆಂದು ಭಾವಿಸಿದರೆ, ಉದ್ಯಮಿಗಳಿಗೆ ಪ್ರಸ್ತುತ ಸಮಾಜದಲ್ಲಿ ಗೌರವವಿಲ್ಲವೆಂದು ಹೇಳಿದಂತಾಗುತ್ತದೆ. ಹಾಗಿದ್ದರೆ, ಭಾರತದಲ್ಲಿ ಶ್ರಮಿಕರಿಗೆ ಗೌರವವಿಲ್ಲವೆ? ಅಥವಾ ಅವರ ದೃಷ್ಟಿಿಯಲ್ಲಿ ಸಂಪತ್ತಿಿನ ಸೃಷ್ಟಿಿಕರ್ತರು ಉದ್ಯಮಿಗಳು ಎಂದಾಗಿದ್ದರೆ, ಉದ್ಯಮಿಗಳು ಈಗಿರುವಂತೆ ಜನರ ಗೌರವಕ್ಕೆೆ ಪಾತ್ರರಾಗಿಲ್ಲವೆ? ಕಾರ್ಮಿಕರನ್ನು ಸಂಪತ್ತಿಿನ ಸೃಷ್ಟಿಿಕರ್ತರಾಗಿ ಗೌರವಿಸಬೇಕೆಂಬ ಅರ್ಥದಲ್ಲಿ ಪ್ರಧಾನಿಗಳು ಹೇಳಿದ್ದಾರೆಂದರೆ, ಮಾಜಿ ಅರ್ಥಮಂತ್ರಿಿಗಳ ಮೆಚ್ಚುಗೆಗೆ ಯಾವ ಅರ್ಥವೂ ಇಲ್ಲ. ಮಹಾ ಮುತ್ಸದ್ದಿ ಅರ್ಥಮಂತ್ರಿಿಯೆಂದು ಹೆಸರಾಗಿರುವ ಅವರು, ಸಂಪತ್ತಿಿನ ಸೃಷ್ಟಿಿಯಲ್ಲಿ ಶ್ರಮಿಕರ ಪಾಲೆಷ್ಟು ಎಂಬುದರ ಬಗ್ಗೆೆ ಯಾವ ತಿಳಿವಳಿಕೆ ಇಲ್ಲದವರೇ ಎಂಬ ಪ್ರಶ್ನೆೆ ಮೂಡಿ ಸೋಜಿಗವೆನಿಸುತ್ತದೆ.
ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು

Leave a Reply

Your email address will not be published. Required fields are marked *