Monday, 20th January 2020

ಸಂಸ್ಕೃತದ ಮಹತ್ವ ಸಾರಿದ ವಿವೇಕಾನಂದರು

*ಡಾ. ಗಣಪತಿ ಹೆಗಡೆ
‘ನೀವು ಸಂಸ್ಕೃತ ಓದಿದವರಾದರೆ ನಿಮ್ಮ ವಿರುದ್ಧ ಯಾರೂ ಏನನ್ನೂ ಹೇಳುವ ಧಾರ್ಷ್ಟ್ಯವನ್ನು ತೋರುವುದಿಲ್ಲ, ಅಂದರೆ ನಿಮ್ಮಲ್ಲಿ ಸಂಸ್ಕೃತದ ಜ್ಞಾಾನವಿದ್ದರೆ ಎಲ್ಲರೂ ನಿಮ್ಮ ವಿದ್ಯೆೆಗೆ ಹಾಗೂ ನಿಮ್ಮ ವ್ಯಕ್ತಿಿತ್ವಕ್ಕೆೆ ಬೆಲೆ ಕೊಡುತ್ತಾಾರೆ. ನಿಮ್ಮನ್ನು ಟೀಕಿಸುವ ಧೈರ್ಯ ಯಾರಿಗೂ ಇರುವುದಿಲ್ಲ. ಇದೇ ನೀವು ತಿಳಿಯಬೇಕಾದ ರಹಸ್ಯ. ಇದನ್ನೇ ಆಶ್ರಯಿಸಿ. ಸಂಸ್ಕೃತವೇ ಎಲ್ಲ ಭಾಷಾ ಸಮಸ್ಯೆೆಗಳಿಗೆ ಸರಿಯಾದ ಉತ್ತರ. ಈ ತರಹ ಎಲ್ಲ ಭಾಷೆಗಳು ಯಾವುದರ ಮಕ್ಕಳೋ ಅಂತಹ ಮಹೋನ್ನತ ಭಾಷೆಯನ್ನು ನಾವು ಸ್ವೀಕರಿಸಬೇಕು. ಅದು ಸಂಸ್ಕೃತವಲ್ಲದೆ ಮತ್ಯಾಾವುದಿದ್ದೀತು?’ ಇದು ಸಂಸ್ಕೃತ ಭಾಷೆಯ ಬಗ್ಗೆೆ ಸ್ವಾಾಮಿ ವಿವೇಕಾನಂದರ ನುಡಿಮುತ್ತು.

ಭಾರತದ ಅಮೂಲ್ಯವಾದ ಅನೇಕ ಸಂಪತ್ತುಗಳಲ್ಲಿ ಸಂಸ್ಕೃತಭಾಷೆಯು ಪ್ರಧಾನ ಸ್ಥಾಾನದಲ್ಲಿ ನಿಲ್ಲುತ್ತದೆ. ನಮ್ಮ ದೇಶದ ಸಂಸ್ಕೃತಿಯನ್ನು, ಅಮೂಲ್ಯವಾದ ಕೊಡುಗೆಗಳಾದ ಯೋಗ, ಆಯುರ್ವೇದ, ನೃತ್ಯ-ಸಂಗೀತಾವೇ ಮೊದಲಾದ ಕಲೆಗಳ ವೈಶಿಷ್ಟ್ಯವನ್ನು ಪ್ರಪಂಚಕ್ಕೆೆ ಸಾರುವ ಭಾಷೆ ಸಂಸ್ಕೃತ. ಆದ್ದರಿಂದ ನಮ್ಮ ದೇಶದ ಹೆಮ್ಮೆೆಯ ವಿಚಾರಗಳನ್ನು ಅರಿಯಬಯಸುವ ಪ್ರತಿಯೊಬ್ಬನೂ ಸಂಸ್ಕೃತಾಧ್ಯಯನವನ್ನು ಮಾಡಲೇಬೇಕು. ವಿಶ್ವದಾದ್ಯಂತ ಇಂದು ನಮ್ಮ ಸಂಸ್ಕೃತಿಗೆ ದೊರೆಯುತ್ತಿಿರುವ ಗೌರವವನ್ನು ಗಮನಿಸಿದಾಗ ನಮಗೆ ಹೆಮ್ಮೆೆಯೆನಿಸುತ್ತದೆ, ಅಭಿಮಾನದಿಂದ ಎದೆಯುಬ್ಬಿಿ ಬರುತ್ತದೆ. ಇದೇ ಗೌರವವನ್ನು ಮುಂದೆಯೂ ನಿರಂತರವಾಗಿ ಉಳಿಸಿಕೊಂಡು ಹೋಗಬೇಕಾದರೆ ಅದರ ಬಗ್ಗೆೆ ನಿರಂತರ ಅಧ್ಯಯನಗಳು ನಡೆಯಬೇಕು. ಹಾಗಾಗಲು ಸಂಸ್ಕೃತದ ಜ್ಞಾಾನ ನಮಗೆ ಅನಿವಾರ್ಯ ಎಂಬುದು ಸ್ವಾಾಮಿ ವಿವೇಕಾನಂದರ ಅಭಿಮತವಾಗಿತ್ತು.

ಭಾರತದ ಧಾರ್ಮಿಕ ಪರಂಪರೆಯನ್ನು, ಸನಾತನ ಸಂಸ್ಕೃತಿಯನ್ನು, ಆಧ್ಯಾಾತ್ಮಿಿಕ ಸಂಪತ್ತನ್ನು ವಿಶ್ವಸ್ತರದಲ್ಲಿ ಬೆಳಗಿಸಿದ ಕೀರ್ತಿ ಸ್ವಾಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ‘ಎಲ್ಲರಿಗೂ ಸಂಸ್ಕೃತ ವಿದ್ಯಾಾಭ್ಯಾಾಸವು ಆಗಬೇಕು. ಮಹೋನ್ನತವಾದ ಸಂಸ್ಕೃತಭಾಷೆಯ ಉಚ್ಚಾಾರಣೆಯೇ ಜನರಿಗೆ ಗೌರವ, ಶಕ್ತಿಿ ಹಾಗೂ ತೇಜಸ್ಸನ್ನು ನೀಡುತ್ತದೆ’ ಎಂಬುದಾಗಿ ಒಂದೆಡೆ ಉಲ್ಲೇಖಿಸುತ್ತಾಾರೆ, ಸ್ವಾಾಮಿ ವಿವೇಕಾನಂದರು.

ಅವರು ಮದ್ರಾಾಸ್‌ನಲ್ಲಿ ಒಂದು ದಿನ ಭಾಷಣ ಮಾಡುತ್ತಾಾ ಭಾರತೀಯರು ಸಂಸ್ಕೃತ ಶಬ್ದಗಳ ಉಚ್ಚಾಾರಣೆಯಷ್ಟೇ ಮಾಡಿದರೂ ಸಾಕು ಅವರಲ್ಲಿ ಒಂದು ಬಗೆಯ ಗೌರವದ ಭಾವ ಎಚ್ಚೆೆತ್ತುಕೊಳ್ಳುತ್ತದೆ ಎಂದಿದ್ದರು. ಅಂತಹ ಸಂಸ್ಕೃತಭಾಷೆಯ ಬಗ್ಗೆೆ ಸ್ವಾಾಮಿ ವಿವೇಕಾನಂದರ ಇನ್ನಷ್ಟು ವಿಚಾರಗಳನ್ನು ಇಲ್ಲಿ ನೋಡೋಣ. ಭಾರತದ ಪುನರುತ್ಥಾಾನವಾಗಬೇಕು ಅಂದರೆ ಅದು ಶಾಂತಿ ಪ್ರೇಮ, ದೈವಿಕವಾದ ತೇಜಸ್ಸಿಿನಿಂದಲೇ ಆಗಬೇಕು, ಆದರೆ ಆ ಪುನರುತ್ಥಾಾನದ ಮಾರ್ಗದಲ್ಲಿರುವ ದೊಡ್ಡ ತೊಂದರೆಯೆಂದರೆ ಅದು ಸಂಸ್ಕೃತದ ಬಗ್ಗೆೆ ಇರುವ ಅಜ್ಞಾಾನ. ಇದರಿಂದ ನಾವು ಪಾರಾಗಬೇಕಾದರೆ ನಾವೆಲ್ಲರೂ ಸಂಸ್ಕೃತದ ಪರಿಚಯ ಹೊಂದಬೇಕು
ಸಂಸ್ಕೃತವಿದ್ದಲ್ಲಿ ಗೌರವ
ಸಂಸ್ಕೃತವಿದ್ದಲ್ಲಿ ಗೌರವವು ಸಹಜವಾಗಿ ನೆಲೆಸುತ್ತದೆ ಎಂಬುದು ಅವರ ಅಭಿಪ್ರಾಾಯವಾಗಿತ್ತು. ‘ಭಾರತದಲ್ಲಿ ಸಂಸ್ಕೃತ ಭಾಷೆ ಹಾಗೂ ಗೌರವ ಇವೆರಡೂ ಕೂಡ ಸಮಾನಾರ್ಥ ಕೊಡುವ ಪದಗಳು. ಸಂಸ್ಕೃತವನ್ನು ಕಲಿತು ಪದಗಳನ್ನು ಉಚ್ಚರಿಸತೊಡಗಿದೊಡನೆ ಮಾನವನು ಗೌರವಾನ್ವಿಿತವೂ, ಶಕ್ತಿಿಪೂರ್ಣನೂ ಆಗಿಬಿಡುವನು’ ಎನ್ನುತ್ತಾಾರೆ.

ಅವರು ಸಂಸ್ಕೃತ ಕಲಿಕೆಯ ಬಗ್ಗೆೆ ತಮ್ಮ ಶಿಷ್ಯಂದಿರಲ್ಲಿ ಸದಾ ಉತ್ಸಾಾಹವನ್ನು ತುಂಬುತ್ತಿಿದ್ದರು ಎಂಬುದು ಅವರು ತಮ್ಮ ಶಿಷ್ಯ ಗೋವಿಂದ ಸಹಾಯ್‌ರಿಗೆ ಬರೆದ ಪತ್ರದಲ್ಲಿ ನಿನ್ನ ಸಂಸ್ಕೃತದ ಅಧ್ಯಯನ ಚೆನ್ನಾಾಗಿ ಸಾಗಿರಬಹುದಲ್ಲವೇ? ಮೊದಲಭಾಗ ಇಷ್ಟರಲ್ಲೇ ಮುಗಿದಿರಬಹುದಲ್ಲವೇ? ವಿಶೇಷ ಪರಿಶ್ರಮದಿಂದ ನೀನು ಸಂಸ್ಕೃತವನ್ನು ಕಲಿಯಬೇಕು ಎಂಬುದಾಗಿ ಬರೆಯುತ್ತಾಾರೆ. ಅಷ್ಟೇ ಅಲ್ಲದೇ ಅವರು ಮಹಾ ಸಮಾಧಿಯಾಗುವ ಕೆಲವೇ ಘಂಟೆಗಳ ಮೊದಲು ಮಠದ ಬ್ರಹ್ಮಚಾರಿಗಳಿಗೆ ಮೂರು ತಾಸು ನಿರಂತರವಾಗಿ ಸಂಸ್ಕೃತ ವ್ಯಾಾಕರಣದ ಪಾಠವನ್ನು ಮಾಡುತ್ತಾಾರೆ. ಅವರು ಶರಚ್ಚಂದ್ರ ಚಕ್ರವರ್ತಿ ಎಂಬುವವರಿಗೆ ಬರೆದ ಪತ್ರವು ಸಂಸ್ಕೃತದಲ್ಲಿಯೇ ಇತ್ತು. ಅದಲ್ಲದೇ ರಾಮಕೃಷ್ಣಪ್ರಣಾಮ ಮಂತ್ರವೇ ಮೊದಲಾದ ಅನೇಕ ಸ್ತೋೋತ್ರಗಳನ್ನು ಸಂಸ್ಕೃತದಲ್ಲಿಯೇ ರಚಿಸಿದ್ದಾಾರೆ ಮತ್ತು ತಮ್ಮ ಲೇಖನ ಹಾಗೂ ಭಾಷಣಗಳಲ್ಲಿ ಸಂಸ್ಕೃತದ ವಾಕ್ಯಗಳನ್ನು ಧಾರಾಳವಾಗಿ ಬಳಸುತ್ತಿಿದ್ದರು.

ಆದರೆ ಭಾರತೀಯರು ಸಂಸ್ಕೃತ ಕಲಿಕೆಯ ಬಗ್ಗೆೆ ಅಷ್ಟೊೊಂದು ಆಸ್ಥೆೆಯನ್ನು ತೋರಲಿಲ್ಲ. ಈ ವಿಷಯದ ಬಗ್ಗೆೆ ಸ್ವಾಾಮೀಜಿಗೆ ಬಹಳ ಬೇಸರವಿದ್ದಂತೆ ತೋರುತ್ತದೆ. ಅದಕ್ಕೆೆ ಅವರ ನುಡಿಗಳನ್ನೇ ಗಮನಿಸಿ ‘ಅಧ್ಯಾಾತ್ಮವಿದ್ಯೆೆ ಮತ್ತು ಸಂಸ್ಕೃತಜ್ಞಾಾನವನ್ನು ಮರೆಯುವುದಕ್ಕೆೆ ನಿಮಗೆ ಯಾರು ಹೇಳಿದ್ದು? ನೀವು ಯಾಕೆ ತಾತ್ಸಾಾರಭಾವದಿಂದ ಇದ್ದೀರಿ? ಹೋರಾಡುವುದು, ಜಗಳವಾಡುವುದು, ವಿರೋಧವಾಗಿ ಬರೆಯುದು, ವೃತ್ತಪತ್ರಿಿಕೆಗಳಲ್ಲಿ ಟೀಕಿಸುವುದು, ವಾದಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಇದರಿಂದ ವ್ಯರ್ಥ ಮನಸ್ತಾಾಪವಷ್ಟೇ ದೊರೆಯುವುದು. ಇದು ಪಾಪಕರ ಕೆಲಸ. ಇದನ್ನು ತ್ಯಜಿಸಿ, ಸಂಸ್ಕೃತಿಯನ್ನು ಗಳಿಸುವುದಕ್ಕೆೆ ಯತ್ನಿಿಸಿ, ಆಗ ಕಾರ್ಯಸಾಧನೆಯಾಗುವುದು. ನೀವೇಕೆ ಸಂಸ್ಕೃತವನ್ನು ಓದಿಲ್ಲ? ಎಲ್ಲ ವರ್ಣದವರಿಗೂ ಸಂಸ್ಕೃತ ಶಿಕ್ಷಣದ ಚಟುವಟಿಕೆಗಾಗಿ ಲಕ್ಷಗಟ್ಟಲೆ ಹಣವನ್ನು ನೀವೇಕೆ ಖರ್ಚುಮಾಡುತ್ತಿಿಲ್ಲ? ನೀವೇಕೆ ಸಂಸ್ಕೃತ ವಿದ್ವಾಾಂಸರಾಗಬಾರದು?’ ಎಂಬುದಾಗಿ ಸ್ವಾಾಮೀಜಿಯವರು ಪ್ರಶ್ನೆೆಗಳ ಸುರಿಮಳೆಗರೆಯುತ್ತಾಾರೆ.

ಎಲ್ಲರೂ ಮೇಲೆ ಬರಲು ಸಂಸ್ಕೃತದ ಏಣಿ
‘ಹಿಂದುಳಿದವರು ಮೇಲೆ ಬರಬೇಕಾದರೆ ಇರುವ ಮಾರ್ಗ ಒಂದೇ – ಅದು ಎಲ್ಲರೂ ಸಂಸ್ಕೃತವನ್ನು ಕಲಿಯುವುದು. ಸಾಮಾಜಿಕ ಅಸಮಾನತೆ ಹಾಗೂ ಶಕ್ತಿಿಶಾಲಿತ್ವವವನ್ನು ಪಡೆಯಬೇಕಾದರೆ ಸಂಸ್ಕೃತಿಯ ಮೂಲವಾದ ಸಂಸ್ಕೃತವನ್ನು ಸ್ವೀಕರಿಸಬೇಕು, ಹಾಗೆ ಮಾಡಿದಲ್ಲಿ ನಮ್ಮಲ್ಲಿ ಏಕತೆ ಸಮಾನತೆ ಮುಂತಾದ ಗುಣಗಳು ಕೈಗೂಡುತ್ತವೆ. ಕೆಳವರ್ಗದವರನ್ನು ಕುರಿತು ನಾನು ಹೇಳುವುದಿಷ್ಟೇ. ನಿಮ್ಮ ಸ್ತರವನ್ನು ಮೇಲೆತ್ತಲು ಸಂಸ್ಕೃತದ ಕಲಿಕೆಯೊಂದೇ ಉಪಾಯ’ ಎನ್ನುತ್ತಾಾರೆ ವಿವೇಕಾನಂದರು.
ಇನ್ನೂ ಮುಂದುವರಿದು ‘ಅನೇಕ ಮಹಾತ್ಮರು ಕೆಳವರ್ಗದವರನ್ನು ಮೇಲೆತ್ತಿಿ ಉದ್ದರಿಸಲು ಇನ್ನಿಿಲ್ಲದ ಪ್ರಯಾಸಪಟ್ಟಿಿದ್ದಾಾರೆ, ನಿಮ್ಮ ವರ್ಗದ ಜನರು ಸದಾಕಾಲಕ್ಕೂ ಮೇಲೆಯೇ ಇರಬೇಕೆಂಬುದು ಅವರ ಧ್ಯೇಯವಾಗಿತ್ತು. ಆದರೆ ಈ ಕಾರ್ಯಕ್ಕೆೆ ಅನಿವಾರ್ಯವಾದ ಸಂಸ್ಕೃತವನ್ನು ಜನಸಾಮಾನ್ಯರಿಗೆ ಕಲಿಸಬೇಕೆನ್ನುವ ಕಾರ್ಯವನ್ನು ಅವರು ಮಾಡಲೇ ಇಲ್ಲ, ಅಂದರೆ ಸಂಸ್ಕೃತವನ್ನು ಪ್ರಚಾರ ಮಾಡುವ ಕೆಲಸವನ್ನು ಅವರು ಮಾಡಲೇ ಇಲ್ಲ. ಸ್ವತಃ ಮಹಾತ್ಮಾಾ ಬುದ್ಧನೂ ಸಹ ಜನಸಾಮಾನ್ಯರಲ್ಲಿ ಸಂಸ್ಕೃತದ ಶಿಕ್ಷಣವನ್ನು ನಿಲ್ಲಿಸಿ ತಪ್ಪುು ಮಾಡಿದನು. ಸಂಸ್ಕೃತಭಾಷೆಯನ್ನು ಧರ್ಮದ ಜೊತೆಗೇ ಪ್ರಚುರ ಪಡಿಸಬೇಕಾಗಿತ್ತು’ ಎನ್ನುತ್ತಾಾರೆ ವಿವೇಕಾನಂದರು.

ಹೀಗೆ ಸ್ವಾಾಮಿ ವಿವೇಕಾನಂದರು ಸಂಸ್ಕೃತಭಾಷೆಯ ಬಗ್ಗೆೆ ತಮಗಿರುವ ಅಪಾರವಾದ ಪ್ರೀತಿಯನ್ನು ಕಾಳಜಿಯನ್ನು ತೋರಿಸಿದ್ದಾಾರೆ, ಈ ವಿಚಾರವನ್ನು ಅರ್ಥೈಸಿಕೊಂಡು ಸ್ವಾಾಮಿ ವಿವೇಕಾನಂದರನ್ನು ಗೌರವಿಸುವ ನಾವೆಲ್ಲರೂ ಕೂಡ ಸಂಸ್ಕೃತಭಾಷೆಯನ್ನೂ ಗೌರವಿಸಬೇಕು ಹಾಗೂ ಯಥಾ ಸಾಧ್ಯ ಸಂಸ್ಕೃತಭಾಷೆಯ ಅಧ್ಯಯನವನ್ನು ಮಾಡಬೇಕೆಂಬ ಸಂಕಲ್ಪವನ್ನು ಸ್ವೀಕರಿಸಬೇಕು. ಯಾಕೆಂದರೆ ಯಾವುದೇ ಸಂಸ್ಕೃತಿಯ ಆಚಾರ ವಿಚಾರಗಳನ್ನು, ಭಾಷೆಯ ಸೌಂದರ್ಯವನ್ನೂ ಆಯಾ ಮೂಲಭಾಷೆಗಳಲ್ಲಿ ತಿಳಿದಾಗಲೇ ಅದರ ಸೊಗಸು ಗೊತ್ತಾಾಗುತ್ತದೆ. ವೇದಗಳಿರಬಹುದು ರಾಮಾಯಣಾದಿ ಕಾವ್ಯಗ್ರಂಥಗಳಿರಬಹುದು, ಸಾಹಿತ್ಯಪ್ರಕಾರಗಳಿರಬಹುದು – ಇವೆಲ್ಲವೂ ಸಂಸ್ಕೃತಭಾಷೆಯಲ್ಲಿಯೇ ಇರುವುದರಿಂದ, ಪ್ರತಿಯೊಬ್ಬ ಭಾರತೀಯನಿಗೂ ಸಂಸ್ಕೃತದ ಸ್ವಲ್ಪ ಮಟ್ಟಿಿನ ಪರಿಜ್ಞಾಾನ ಅನಿವಾರ್ಯ. ಅನುವಾದಿತ ಸಾಹಿತ್ಯಗಳು ಇಂದು ಎಲ್ಲೆೆಡೆ ಲಭ್ಯವಾದರೂ ಮೂಲದ ಪರಿಚಯದಷ್ಟು ಉತ್ತಮವಲ್ಲ ಎಂಬುದು ಪ್ರಾಾಜ್ಞರ ಅಭಿಮತ. ಈ ಕಾರಣದಿಂದ ನಮ್ಮ ಭಾರತೀಯತೆಯ ಮೂಲ ಬೇರನ್ನರಿಯುವ ಅಭಿಲಾಷೆಯಿರುವ ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ಕಲ್ಪಿಿಸುವ ಕನಸು ಹೊತ್ತ ಪ್ರತಿಯೊಬ್ಬ ವ್ಯಕ್ತಿಿಯೂ ಇಂದು ಸಂಸ್ಕೃತಭಾಷಾ ಕಲಿಕೆಯ ಬಗ್ಗೆೆ ಹೆಚ್ಚು ಗಮನಹರಿಸಬೇಕಾಗಿದೆ. ನಾವೆಲ್ಲ ಈ ದಿವ್ಯವಾದ ಭಾಷೆಯನ್ನು ನಮ್ಮದಾಗಿಸಿಕೊಂಡು ಸ್ವಾಾಮಿ ವಿವೇಕಾನಂದರ ಆಶಯವನ್ನು ಪೂರ್ಣಗೊಳಿಸೋಣ. (ಶ್ರಾಾವಣಪೂರ್ಣಿಮೆಯ ಸಂಸ್ಕೃತೋತ್ಸವದ ವಿಶೇಷ ಲೇಖನ)
ಸಂಸ್ಕೃತವನ್ನೋೋದು ಅದರ ಜೊತೆಗೆ ಪಾಶ್ಚಾಾತ್ಯ ವಿಜ್ಞಾಾನದ ಬಗ್ಗೆೆಯೂ ಚರ್ಚಿಸು. ಎಲ್ಲ ವಿಷಯಗಳನ್ನು ಆಳವಾಗಿ ಹಾಗೂ ಸರಿಯಾಗಿ ತಿಳಿದು ಅದೇ ರೀತಿ ಬೇರೆಯವರಿಗೂ ಬೋಧನೆ ಮಾಡು. ಸಂಸ್ಕೃತವನ್ನು ಓದಿದ ಮತ್ತು ಓದದ ಎಲ್ಲ ಭಾರತೀಯರಿಗೂ ಶಾಸ್ತ್ರಗಳಲ್ಲಿ ಹೇಳಲ್ಪಟ್ಟ ಉದಾತ್ತ ತತ್ವಗಳು ಸಂಪತ್ತಾಾಗಿರಬೇಕೆಂಬುದೇ ನನ್ನ ಇಚ್ಚೆೆ. ಎಲ್ಲಿಯವರೆಗೆ ಇಡೀ ರಾಷ್ಟ್ರದ ಜನತೆ ಸಂಸ್ಕೃತದಲ್ಲಿ ಚೆನ್ನಾಾಗಿ ನಿಷ್ಣಾಾತವಾಗುವುದೋ ಅಲ್ಲಿಯವರೆಗೆ ಭಾವ ಪ್ರಚಾರಕ್ಕಿಿರುವ ಅಡಚಣೆ ದೂರವಾಗಲಾರದು. – ಸ್ವಾಾಮಿ ವಿವೇಕಾನಂದ

Leave a Reply

Your email address will not be published. Required fields are marked *