Tuesday, 15th October 2019

ಸಮಸ್ಯೆೆಯನ್ನು ರಾಜಕೀಯ ಲಾಭ ಮಾಡಿಕೊಳ್ಳುವುದೇ ಕಾಂಗ್ರೆೆಸ್ ನೀತಿ

ಕಾಂಗ್ರೆೆಸ್‌ನಲ್ಲಿರುವವರಿಗೆ ದೇಶದಲ್ಲಿನ ಸಮಸ್ಯೆೆ ಬಗೆಹರಿಸುವುದಕ್ಕಿಿಂತ ಅದನ್ನು ರಾಜಕೀಯಕ್ಕೆೆ ಬಳಸಿಕೊಂಡು ರಾಜಕೀಯ ಲಾಭ ಮಾಡಿಕೊಂಡು ಬರುವುದೇ ಅವರ ನೀತಿಯಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆೆಸ್‌ನವರು ತಮ್ಮ ಲಾಭಕ್ಕಾಾಗಿ ಮಹದಾಯಿ, ಕಳಸಾ ಬಂಡೂರಿ ಸೇರಿದಂತೆ ಇತರೆ ಸಮಸ್ಯೆೆಗಳನ್ನು ತಮ್ಮ ಲಾಭಕ್ಕಾಾಗಿ ಬಳಸಿಕೊಳ್ಳುತ್ತಿಿದ್ದಾರೆ. ಈ ಹಿಂದೆ ಪ್ರಮೋದ ಸಾವಂತ ಗೋವಾ ಸಿಎಂ ಆಗಿದ್ದಾಗ, ಮಾತುಕತೆ ಕರೆದಾಗ ನಿರಾಕರಿಸಿದ್ದರು. ಅಲ್ಲದೇ ಕಾಂಗ್ರೆೆಸ್ ತೀವ್ರವಾಗಿ ಪ್ರತಿಭಟನೆ ಮಾಡಿತ್ತು. ಅಂದು ಗೋವಾ ಮುಖ್ಯಮಂತ್ರಿಿ ಜತೆಗೆ ಮಹದಾಯಿ ವಿಚಾರವಾಗಿ ಮಾತನಾಡಿ ಎಂದರೆ ಮಾತನಾಡಲಿಲ್ಲ. ಮಹದಾಯಿ ವಿಚಾರದಲ್ಲಿ ರಾಜಕೀಯ ಮಾಡದೇ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದರು.

ಸಿದ್ದರಾಮಯ್ಯ ತಮ್ಮ ಈಗಿರುವ ಪರಿಸ್ಥಿಿತಿಯನ್ನು ಅರ್ಥ ಮಾಡಿಕೊಂಡು ಬಿಜೆಪಿ ಹೈಕಮಾಂಡ್ ಬಗ್ಗೆೆ ಮಾತನಾಡಬೇಕು. ಮೊನ್ನೆೆ ಸಿದ್ದರಾಮಯ್ಯ ದೆಹಲಿಗೆ ಹೋದಾಗ ಸೋನಿಯಾಗಾಂಧಿ ಭೇಟಿಗೆ ಅವಕಾಶ ನೀಡಲಿಲ್ಲ. ನಮ್ಮ ಹೈಕಮಾಂಡ್ ಬಲಿಷ್ಠವಾಗಿದೆ. ಆದರೆ ಕಾಂಗ್ರೆೆಸ್ ಹೈಕಮಾಂಡ್ ದುರ್ಬಲವಾಗಿದೆ. ಈ ಹೈಕಮಾಂಡ್ ಮುಂದೆ ಐದು ವರ್ಷ ಮುಖ್ಯಮಂತ್ರಿಿ ಆದವರಿಗೆ ಭೇಟಿಗೆ ಅವಕಾಶ ನೀಡಿಲ್ಲ. ಇದರಿಂದಲೇ ತಿಳಿಯುತ್ತದೇ ಸಿದ್ದರಾಮಯ್ಯ ಅವರ ಪರಿಸ್ಥಿಿತಿ. ಹೀಗಿರುವಾಗ ನಮ್ಮ ಪಕ್ಷದ ಹೈಕಮಾಂಡ್ ಬಗ್ಗೆೆ ಮಾತನಾಡುವುದನ್ನು ಬಿಡಬೇಕು ಎಂದು ಹರಿಹಾಯ್ದರು.

Leave a Reply

Your email address will not be published. Required fields are marked *