Wednesday, 21st October 2020

ಸಾಲಕಟ್ಟೆ ಅಂಚೆ ಶಾಖಾ ಕಚೇರಿ ಲೋಕಾರ್ಪಣೆ

ದಾವಣಗೆರೆ

ಹರಿಹರ ತಾಲ್ಲೂಕಿನ ಸಾಲಕಟ್ಟೆ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ನೂತನವಾಗಿ ಜೂನ್ 14 ರಂದು ಸಾಲಕಟ್ಟೆ ಅಂಚೆ ಶಾಖಾ ಕಚೇರಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಶ್ರೀದೇವಿ ಅವರು ಈ ಶಾಖಾ ಅಂಚೆ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮಸ್ಥರು ಅಂಚೆ ಕಚೇರಿಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೋಳ್ಳಬೇಕೆಂದು ತಿಳಿಸಿದರು.
ಚಿತ್ರದುರ್ಗ ಅಂಚೆ ಅಧೀಕ್ಷಕರಾದ ವಿರೂಪಾಕ್ಷಪ್ಪಮಾತನಾಡಿ, ಸಾಲಕಟ್ಟೆ ಗ್ರಾಮಸ್ಥರು ಮನೆಗೆ ಒಂದರಂತೆ ಉಳಿತಾಯ ಖಾತೆ, ಆರ್.ಡಿ ಖಾತೆ, ಸುಕನ್ಯ ಸಮೃದ್ದಿ ಖಾತೆ, ಗ್ರಾಮೀನ ಅಂಚೆ ಜೀವ ವಿಮೆ, ಇಂಡಿಯಾ ಪೊಸ್ಟ್ ಪೆಮೆಂಟ್ಸ್ ಬ್ಯಾಂಕ್‍ನ ಖಾತೆಗಳು, ಸಾಮಾಜಿಕ ಪಿಂಚಣಿ ಹಾಗೂ ಂಇPS ವವ್ಯಹಾರಗಳನ್ನು ಮತ್ತು ಇತರೆ ಸೌಲಭ್ಯಗಳನ್ನು ಪಡೆದುಕೊಂಡು ಉಳಿತಾಯವನ್ನು ಮಾಡಬೇಕು ಎಂದು ಗ್ರಾಮಸ್ಥರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಹತ್ತು ಉಳಿತಾಯ ಖಾತೆಗಳ ಪುಸ್ತಕಗಳನ್ನು ಖಾತೆಗಳ ಪಾಸ್ ಬುಕ್‍ಗಳನ್ನು ಖಾತೆದಾರರಿಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಹಾಯಕ ಅಂಚೆ ಅಧೀಕ್ಷಕರಾದ ಗುರುಪ್ರಸಾದ್, ಮಾರುಕಟ್ಟೆ ಅಧಿಕಾರಿ ಮಹೇಶ್ ಹಾಗೂ ಸಾಲಕಟ್ಟೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *