Monday, 13th July 2020

ಸಿಂಧು ಶುಭಾರಂಭ-ಸೈನಾಗೆ ಆಘಾತ

ಹಾಂಕಾಂಗ್:
ಇಲ್ಲಿ ನಡೆಯುತ್ತಿಿರುವ ಹಾಂಕಾಂಗ್ ಓಪನ್ ಬ್ಯಾಾಡ್ಮಿಿಂಟನ್ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಹಾಗೂ ಎಚ್.ಎಸ್ ಪ್ರಣಯ್ ಅವರು ಮೊದಲನೇ ಸುತ್ತಿಿನಲ್ಲಿ ಗೆದ್ದು ಶುಭಾರಂಭ ಮಾಡಿದ್ದಾರೆ. ಆದರೆ, ಸೈನಾ ನೆಹ್ವಾಾಲ್ ಹಾಗೂ ಸಮೀರ್ ವರ್ಮಾ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ.
ಬುಧವಾರ ನಡೆದ ಮಹಿಳೆಯರ ಸಿಂಗಲ್‌ಸ್‌ ಮೊದಲ ಸುತ್ತಿಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಐದನೇ ಶ್ರೇಯಾಂಕಿತೆ ಪಿ.ವಿ ಸಿಂಧು, 21-15, 21-16 ನೇರ ಸೆಟ್‌ಗಳಲ್ಲಿ 19ನೇ ಶ್ರೇಯಾಂಕಿತೆ ಕಿಮ್ ಗ ಯುನ್ ವಿರುದ್ಧ ಗೆದ್ದು ಎರಡನೇ ಸುತ್ತಿಿಗೆ ಲಗ್ಗೆೆ ಇಟ್ಟಿಿದ್ದಾರೆ. ಮುಂದಿನ ಸುತ್ತಿಿನಲ್ಲಿ ಥಾಯ್ಲೆೆಂಡ್ ನ ಬುಸನಾನ್ ವಿರುದ್ಧ ಸೆಣಸಲಿದ್ದಾರೆ.
ಪುರುಷರ ಸಿಂಗಲ್ಸ್ ಮೊದಲ ಸುತ್ತಿಿನ ಪಂದ್ಯದಲ್ಲಿ ಭಾರತದ ಎಚ್.ಎಸ್ ಪ್ರಣಯ್, 21-17, 21-17 ಅಂತರದಲ್ಲಿ ನೇರ ಸೆಟ್‌ಗಳಲ್ಲಿ ಚೀನಾದ ಹ್ಯೂಂಗ್ ಯು ಕ್ಸಿಿಯಾಂಗ್ ವಿರುದ್ಧ ಗೆಲುವು ಸಾಧಿಸಿದರು. ಆದರೆ, ಇದಕ್ಕೂ ಮುನ್ನ ನಡೆದಿದ್ದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಸೈನಾ ನಹ್ವಾಾಲ್ ಅವರು 13-21, 20-22 ಅಂತರದ ನೇರ ಸೆಟ್‌ಗಳಿಂದ ಚೀನಾದ ಚೈ ಯಾನ್ ಯಾನ್ ವಿರುದ್ಧ ಸೋಲು ಅನುಭವಿಸಿದರು. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಮೀರ್ ವರ್ಮಾ ಅವರು 11-21, 21-13, 8-21 ಅಂತರದಲ್ಲಿ ತೈವಾನ್‌ನ ವಾಂಗ್ ಟಿಜು ವೀ ವಿರುದ್ಧ ಸೋತು ಆಘಾತ ಅನುಭವಿಸಿದರು.

Leave a Reply

Your email address will not be published. Required fields are marked *