Saturday, 4th July 2020

ಸ್ವಂತ ಸ್ಥಳಗಳಿಗೆ ಮರಳಿದ ವಲಸೆ ಕಾರ್ಮಿಕರು

ಗದಗ:

ಕೊವಿಡ್-೧೯ ನಿಯಂತ್ರಣ ಪ್ರತಿಬಂಧಿತ ಸಂದರ್ಭದಲ್ಲಿ ಗದಗ ಜಿಲ್ಲೆಯಿಂದ ವಿಜಯಪುರ (೨೩) , ಬಳ್ಳಾರಿ (೩) ,  ಬಾಗಲಕೋಟಿ(೯) ಬೆಳಗಾವಿ, ಶಿವಮೊಗ್ಗ  , ಉಡುಪಿ, ಧಾರವಾಡ ಕಲಬುರ್ಗಿಯ ತಲಾ ಓರ್ವ  ಕಾರ್ಮಿಕರು, ಉತ್ತರ ಕನ್ನಡ,   ಧಾರವಾಡ , ಕೊಪ್ಪಳ   ತಲಾ ಇಬ್ಬರು, ಬೀದರನ ೧೦ ಹಾಗೂ ಗದಗ ಜಿಲ್ಲೆಯ ಹುಲಕೋಟಿ ,  ಮುಳಗುಂದದ ನಾಲ್ಕು ಕಾರ್ಮಿಕರು ಸೇರಿದಂತೆ   ಒಟ್ಟು ೧೩  ಜಿಲ್ಲೆಗಳ  ೬೦ ಜನ   ಕಾರ್ಮಿಕರಿಗೆ ಗದಗ ಜಿಲ್ಲಾಡಳಿತ ಜಿಲ್ಲಾ ಕಾರ್ಮಿಕ ಇಲಾಖೆ ಮೂಲಕ ವಸತಿ ಆಹಾರದ ಆಶ್ರಯ ಕಲ್ಪಿಸಿತ್ತು.

ಕೇಂದ್ರ ರಾಜ್ಯ ಸರಕಾರದ ನಿರ್ದೇಶನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರ ಸೂಚನೆಯಂತೆ ವಾಯವ್ಯ ಸಾರಿಗೆ ಸಂಸ್ಥೆಗಳ  ಆರು ಬಸ್‌ಗಳ ಮೂಲಕ ಎಪ್ರಿಲ್ ೨೯ ಹಾಗೂ ೩೦ ರಂದು ಈ ಕಾರ್ಮಿಕರನ್ನು ಅವರವರ ಸ್ಥಳಗಳಿಗೆ ಕಳುಹಿಸಲಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

Leave a Reply

Your email address will not be published. Required fields are marked *