Tuesday, 9th August 2022

11,739 ಹೊಸ ಕೋವಿಡ್ ಪ್ರಕರಣ ದೃಢ

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 11,739 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 25 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 4,33,89,973ಕ್ಕೆ ಏರಿಕೆಯಾಗಿದೆ.

ಆ ಪೈಕಿ 5,24,999 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 4,27,72,398 ಮಂದಿ ಗುಣ ಮುಖರಾಗಿದ್ದಾರೆ. ದೇಶದಲ್ಲಿ 92,576 ಸಕ್ರಿಯ ಪ್ರಕರಣಗಳಿವೆ.

ಮಹಾರಾಷ್ಟ್ರದಲ್ಲಿ 24,333, ಕೇರಳದಲ್ಲಿ 27,891, ತಮಿಳುನಾಡಿನಲ್ಲಿ 6,677, ಕರ್ನಾಟಕ ದಲ್ಲಿ 4,822, ದೆಹಲಿಯಲ್ಲಿ 4,717, ತೆಲಂಗಾಣದಲ್ಲಿ 3,613, ಉತ್ತರ ಪ್ರದೇಶದಲ್ಲಿ 3,607, ಹರಿಯಾಣದಲ್ಲಿ 3,125 ಸಕ್ರಿಯ ಪ್ರಕರಣಗಳಿವೆ.

ಶನಿವಾರಕ್ಕೆ ಹೋಲಿಸಿದರೆ ಹೊಸ ಪ್ರಕರಣಗಳ ಸಂಖ್ಯೆ ಕೊಂಚ ಕಡಿಮೆಯಾಗಿದೆ. ಶನಿವಾರ 15,940 ಪ್ರಕರಣಗಳು ವರದಿ ಯಾಗಿದ್ದವು. ದೇಶದಾದ್ಯಂತ ಒಟ್ಟು 197.08 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಣೆ ಮಾಡಲಾಗಿದೆ.