Tuesday, 5th July 2022

ದಕ್ಷಿಣ ಚೀನಾದಲ್ಲಿ ವಿಮಾನ ಪತನ: 132 ಪ್ರಯಾಣಿಕರ ಸಾವು

ಬೀಜಿಂಗ್​: ಚೀನಾದಲ್ಲಿ ದುರಂತ ಘಟನೆ ಸಂಭವಿಸಿದ್ದು, ಸಿಬ್ಬಂದಿ ಸೇರಿದಂತೆ 132 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ದಕ್ಷಿಣ ಚೀನಾದಲ್ಲಿ ಪತನಗೊಂಡಿದೆ.

ವಿಮಾನದಲ್ಲಿ ದೊರೆತ ಬ್ಲಾಕ್​ ಬಾಕ್ಸ್​ನಿಂದ ಸಂಗ್ರಹಿಸಲಾದ ಡೇಟಾ ಪ್ರಕಾರ, ಕಾಕ್​ಪಿಟ್​ನಲ್ಲಿ ಒಬ್ಬರು ಉದ್ದೇಶಪೂರ್ವಕ ವಾಗಿಯೇ ವಿಮಾನವನ್ನು ಪತನ ಮಾಡಿರುವುದು ಬೆಳಕಿಗೆ ಬಂದಿದೆ.

ವಿಮಾನವು 132 ಪ್ಯಾಸೇಂಜರ್​ನ ಹೊತ್ತುಕೊಂಡು ಕುನ್ಮಿಂಗ್‌ನಿಂದ ಗುವಾಂಗ್‌ ಝೌಗೆ ತೆರಳುತ್ತಿತ್ತು. ಫ್ಲೈಟ್​ರಾಡರ್​ ಡೇಟಾ ಪ್ರಕಾರ ಪತನಗೊಂಡ ಸಮಯ ದಲ್ಲಿ ವಿಮಾನವು ಗಂಟೆಗೆ 700 ಕಿ.ಮೀ ವೇಗದಲ್ಲಿ 29 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. ಗುವಾಂಗ್ಸಿ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಕೆಳಮುಖವಾಗಿ ಕುಸಿದು ಪತನಗೊಂಡಿತು.

28 ವರ್ಷದಲ್ಲಿ ಚೀನಾದಲ್ಲಿ ನಡೆದ ಅತ್ಯಂತ ಅಪಾಯಕಾರಿ ವಿಮಾನ ಪತನ ಇದಾಗಿದೆ.